Maruti Suzuki: ಹಬ್ಬಕ್ಕೆ ಮಾರುತಿ ಸುಜುಕಿ​ ಕಡೆಯಿಂದ ಬಂಪರ್​ ಆಫರ್​, ಪ್ರತೀ ಕಾರಿನ ಮೇಲೆ ಕನಿಷ್ಠ 48,000 ಡಿಸ್ಕೌಂಟ್!

Great Offers on Maruti Suzuki Cars: ಮಾರುತಿ ಸುಜುಕಿ ಬಂಪರ್​ ಆಫರ್​ ನೀಡಿ ಜನರನ್ನ ತನ್ನತ್ತ ಸೆಳೆಯುತ್ತಿದೆ. ಒಳ್ಳೆಯ ಆಫರ್​ ಪಡೆದು ನಿಮಗಿಷ್ಟವಾದ ಕಾರ್​ ಖರೀದಿಸಿ. ಯಾವ ಕಾರ್​ ಮೇಲೆ ಎಷ್ಟು ರಿಯಾಯಿತಿ ಎಂಬುದರ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ ನೋಡಿ...

ಮಾರುತಿ ಸುಜುಕಿ ಸ್ವಿಫ್ಟ್ ಕಾರ್

ಮಾರುತಿ ಸುಜುಕಿ ಸ್ವಿಫ್ಟ್ ಕಾರ್

  • Share this:
    Heavy discount on Maruti cars: ಹಬ್ಬದ ಸೀಸನ್​ ಬಂತು ಎಂದರೇ ಸಾಕು, ಏನಾದರೂ ಖರೀದಿಸಬೇಕೆಂದು ಕೊಂಡಿದ್ದವರಿಗೆ ಎಲ್ಲಿಲ್ಲದ ಜೋಶ್​ ಹುಟ್ಟಿಕೊಳ್ಳುತ್ತೆ. ಯಾಕಂದ್ರೆ ಸಾಲು ಸಾಲು ಹಬ್ಬಗಳು (Festival Season) ಬಂದರೆ ಎಲ್ಲ ಕಂಪನಿಯವರು ಡಿಸ್ಕೌಂಟ್​ (Discount) ನೀಡುತ್ತಾರೆ ಎಂದು. ಹೌದು, ಹಬ್ಬದ ಸೀಸನ್​ಗಾಗಿ ಗ್ರಾಹಕರಿಗೆ ಮಾರುತಿ ಸುಜುಕಿ ಬಂಪರ್​ ಆಫರ್​​ಗಳನ್ನ ಹೊತ್ತು ತಂದಿದೆ. ತಮ್ಮ ಕನಸಿನ ಕಾರು ಖರೀದಿ ಮಾಡಬೇಕು ಅಂದು ಕೊಂಡಿದ್ದವರಿಗೆ ಇಲ್ಲಿದೆ ಸದಾವಕಾಶ. ಹಲವು ದಿನಗಳಿಂದ ನೀವು ಕಾರು ಖರೀದಿಸಬೇಕು ಅಂದುಕೊಂಡು ಸುಮ್ಮನಾಗಿದ್ದರೆ, ಮಾರುತಿ ಸುಜುಕಿ (Maruti Suzuki) ನೀಡಿದ್ದಾರೆ ಸುವರ್ಣವಾಕಾಶ. ಕಳೆದ ಬಾರಿಯ ಹಬ್ಬಕ್ಕೆ ಕೊರೋನಾ ಕರಿನೆರಳು ಆವರಿಸಿಕೊಂಡಿತ್ತು. ಯಾವ ಹಬ್ಬವೂ ಮಾಡದಂತೆ ತನ್ನ ಅಟ್ಟಹಾಸ ಮೆರೆದಿತ್ತು. ಹೀಗಾಗಿ ಕಳೆದ ವರ್ಷದಿಂದ ಜನರು ಯಾವುದೇ ವಸ್ತುಗಳನ್ನ ಕೊಳ್ಳಲು ಮನಸ್ಸು ಮಾಡಿಲ್ಲ. ಇದೀಗ ಮಾರುತಿ ಸುಜುಕಿ ಬಂಪರ್​ ಆಫರ್​ (Bumper Offer) ನೀಡಿ ಜನರನ್ನ ತನ್ನತ್ತ ಸೆಳೆಯುತ್ತಿದೆ. ಒಳ್ಳೆಯ ಆಫರ್​ ಪಡೆದು ನಿಮಗಿಷ್ಟವಾದ ಕಾರ್​ ಖರೀದಿಸಿ. ಯಾವ ಕಾರ್​ ಮೇಲೆ ಎಷ್ಟು ರಿಯಾಯಿತಿ ಎಂಬುದರ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ ನೋಡಿ...

    01. ಮಾರುತಿ ಆಲ್ಟೋ (Maruti Alto)
    - ಆಲ್ಟೋ ಸ್ಟ್ಯಾಂಡರ್ಡ್ ವೇರಿಯಂಟ್ (Ato Std Variant) ಕಾರಿಗೆ ಒಟ್ಟು 38 ಸಾವಿರ ರೂಪಾಯಿಯ ರಿಯಾಯಿತಿ ಇದೆ
    - ಆಲ್ಟೋ ಎಲ್​ಎಕ್ಸ್​​ಐ(lxi), ವಿಎಕ್ಸ್​ಐ (Vxi) ಹಾಗೂ ವಿಎಕ್ಸ್​ಐ(Vxi) ಪ್ಲಸ್​ ವೇರಿಯಂಟ್​ ಕಾರ್​ಗಳಿಗೆ 43 ಸಾವಿರವರೆಗೂ ರಿಯಾಯಿತಿ ಸಿಗಲಿದೆ.
    - ಆಲ್ಟೋ ಸಿಎನ್​ಜಿ (Alto CNG) ಕಾರುಗಳಿಗೆ ಒಟ್ಟು 18 ಸಾವಿರವರೆಗೂ ರಿಯಾಯಿತಿ ಇದೆ

    02. ಮಾರುತಿ ಸುಜುಕಿ ಎಸ್-ಪ್ರೆಸ್ಸೊ( Maruti Suzuki S-Presso)

    - ಈ ಕಾರುಗಳ ಮೇಲೆ 48 ಸಾವಿರವರೆಗೂ ರಿಯಾಯಿತಿ ಸಿಗಲಿದೆ
    - ಎಸ್​-ಪ್ರೆಸ್ಸೋ ಸಿಎನ್​ಜಿ ಮಾಡೆಲ್​ ಕಾರಿಗೆ ಒಟ್ಟು 18 ಸಾವಿರವರೆಗೂ ರಿಯಾಯಿತಿ ಸಿಗಲಿದೆ.

    03. ಮಾರುತಿ ಸುಜುಕಿ ವ್ಯಾಗನ್ ಆರ್ ( Maruti Suzuki WagonR)

    - ಕಾರುಗಳ ಮೇಲೆ ಒಟ್ಟು 17, 500 ರೂಪಾಯಿಗಳಷ್ಟು ರಿಯಾಯಿತಿ ಸಿಗಲಿದೆ.
    - ವ್ಯಾಗನ್​ ಆರ್​ ಸಿಎನ್​ಜಿ ಮಾಡೆಲ್​ (WagonR CNG model) ಮೇಲೆ ನಿಮಗೆ ಒಟ್ಟು 12,500 ರೂಪಾಯಿಗಳವರೆಗೂ ರಿಯಾಯಿತಿ ಇದೆ

    04. ಮಾರುತಿ ಸುಜುಕಿ ಸ್ವಿಫ್ಟ್
    ಮಾರುತಿ ಸುಜಿಕಿಯ ಅತ್ಯಂತ್ಯ ಜನಪ್ರಿಯ ಮಾಡಲ್​ ಅಂದರೇ ಅದು ಸ್ವಿಫ್ಟ್​ ಮಾಡೆಲ್​. ಈ ಮಾಡೆಲ್​ಗಳ ಮೇಲೂ ನಿಮಗೆ 24, 500 ರೂಪಾಯಿ ರಿಯಾಯಿತಿ ಸಿಗಲಿದೆ

    05. ಮಾರುತಿ ಸುಜುಕಿ ಡಿಜೈರ್(Maruti Suzuki Dzire)

    ಈ ಕಾರುಗಳಿಗೆ ಒಟ್ಟು 19,500 ರೂಪಾಯಿಗಳಷ್ಟು ರಿಯಾಯಿತಿ ಸಿಗಲಿದೆ

    06. ಮಾರುತಿ ಸುಜುಕಿ ವಿಟಾರಾ ಬ್ರೇಜಾ ( Maruti Suzuki Vitara Brezza)

    ಕಾರುಗಳ ಮೇಲೆ 17, 500 ರೂಪಾಯಿಗಳಷ್ಟು ರಿಯಾಯಿತಿ ನೀಡಿದೆ

    ಎಲ್ಲಾ ಕಾರುಗಳ ಮೇಲೆ ಇಷ್ಟೆಲ್ಲಾ ಭಾರೀ ಆಫರ್ ಕೊಟ್ಟಿರೋದು ಮಧ್ಯಮವರ್ಗದವರ ಪಾಲಿಗಂತೂ ಇದು ನಿಜವಾದ ಹಬ್ಬ ಎನ್ನುವಂತೆ ಆಗಿದೆ. ಕೋವಿಡ್ ಬಂದ ನಂತರ ಜನ ಬದುಕು ನಡೆಸಲು ಪರದಾಡುವಂಥಾ ಪರಿಸ್ಥಿತಿ ಎದುರಾಗಿತ್ತು. ಆದ್ರೆ ಜೊತೆಗೇ ಕುಟುಂಬದ ರಕ್ಷಣೆ ಕೂಡಾ ದೊಡ್ಡ ಸವಾಲಾಗಿದ್ದರಿಂದ ಸ್ವಂತ ವಾಹನ ಹೊಂದುವ ಅನೇಕರ ಆಲೋಚನೆಗಳು ಗರಿಗೆದರಿದವು. ಸಾರ್ವಜನಿಕ ವಾಹನಗಳನ್ನು ಬಳಸಿದ್ರೆ ಆಗ ಸೋಂಕು ಬಹಳ ವೇಗವಾಗಿ ಹರಡುವ ಅಪಾಯ ಇದ್ದಿದ್ದರಿಂದ ಅನೇಕರು ಸ್ವಂತ ವಾಹನಗಳತ್ತ ಒಲವು ತೋರಿದರು.

    ಇದನ್ನೂ ಓದಿ: Maruti Suzuki: ಪೆಟ್ರೋಲ್-ಡೀಸೆಲ್ ಬೇಡ! ಚಾರ್ಜ್ ಮಾಡೋದು ಬೇಡಾ! ಮಾರುತಿ ಸುಜುಕಿ ತಯಾರಿಸುತ್ತಿದೆ ಹೈಬ್ರಿಡ್​ ಕಾರು

    ಆದ್ದರಿಂದ ಕಷ್ಟದ ಸಂದರ್ಭಗಳಲ್ಲೂ ಸೆಕೆಂಡ್ ಹ್ಯಾಂಡ್ ಆದರೂ ಸರಿ ಒಂದು ಕಾರ್ ಕೊಳ್ಳುವುದು ಒಳ್ಳೆಯದು ಎಂದೇ ಅನೇಖರು ಲೆಕ್ಕಾಚಾರ ಹಾಕಿದ್ದರು. ಈಗ ಹೊಸಾ ಕಾರ್ ಕೊಳ್ಳಲೇ ಇಷ್ಟೊಂದು ಒಳ್ಳೆಯ ಆಫರ್ ಬಂದಿರೋದ್ರಿಂದ ಅದನ್ನೇ ಆರಾಮಾಗಿ ಕೊಳ್ಳಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

    (ವರದಿ: ವಾಸುದೇವ್ ಎಂ)
    Published by:Soumya KN
    First published: