HOME » NEWS » Tech » FESTIVAL OFFER HERO SPLENDOR PLUS BLACK AND ACCENT LAUNCHED WITH CUSTOMISATION OPTIONS HG

ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲಾಕ್ ಎಡಿಶನ್ ಬಿಡುಗಡೆ; ಬೆಲೆ?

Hero Splendor Plus Black: ನೂತನ ಸ್ಪ್ಲೆಂಡರ್ ಪ್ಲಸ್​ ಬೈಕ್ 97.2 ಸಿಸಿ ಏರ್​ಕೂಲ್ಡ್​ ಎಂಜಿನ್​ ಹೊಂದಿದೆ. 4 ಸ್ಪೀಡ್​​ ಗೇರ್​ ಬಾಕ್ಸ್​, 7.9ಹೆಚ್​ಪಿ ಪವರ್​ ಹಾಗೂ 8.05ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ.

news18-kannada
Updated:October 19, 2020, 7:10 PM IST
ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲಾಕ್ ಎಡಿಶನ್ ಬಿಡುಗಡೆ; ಬೆಲೆ?
ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲಾಕ್
  • Share this:
ಹಬ್ಬದ ಪ್ರಯಕ್ತ ವಾಹನ ಉತ್ಪಾದಕ ಸಂಸ್ಥೆಗಳು ನೂತನ ವಾಹನಗಳನ್ನು ಪರಿಚಯಿಸುತ್ತಿದೆ. ಅದರಂತೆ ಹೀರೋ ಸಂಸ್ಥೆ ಸ್ಪ್ಲೆಂಡರ್ ಪ್ಲಸ್​​​ ಕಪ್ಪು ಬಣ್ಣದ ಬೈಕ್​ ಅನ್ನು ಬಿಡುಗಡೆ ಮಾಡಿದೆ. ನೂತನ ಬೈಕ್​ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ.

ಈ ಬಾರಿ ಕೊಂಚ ಆಕರ್ಷಕವಾಗಿ ಕಾಣಲು ಬಣ್ಣವನ್ನು ಬದಲಾಯಿಸಿದೆ. ಬ್ಲಾಕ್​ ಎಡಿಷನ್​ನಲ್ಲಿ ಬಿಡುಗಡೆ ಮಾಡಿದೆ. ಹೆಚ್ಚುವರಿ ಗ್ರಾಫಿಕ್​ ಥೀಮ್​ ಮತ್ತು 3ಡಿ ಲೋಗೋಗಾಗಿ ಬೆಲೆ ಕೊಂಚ ಜಾಸ್ತಿ ಇದೆ. ಆದರೆ 3ಡಿ ಲೋಗೋವನ್ನು ಗ್ರಾಹಕರಿಗೆ ಆಯ್ಕೆಯಾಗಿ ನೀಡಲಾಗಿದೆ. ಬೇಕಾದವರು ಲೋಗೋವನ್ನು ಹೆಚ್ಚುವರಿ ಹಣ ನೀಡಿ ಹಾಕಿಸಿಕೊಳ್ಳಬಹುದಾಗಿದೆ.

ನೂತನ ಸ್ಪ್ಲೆಂಡರ್ ಪ್ಲಸ್​ ಬೈಕ್ 97.2 ಸಿಸಿ ಏರ್​ಕೂಲ್ಡ್​ ಎಂಜಿನ್​ ಹೊಂದಿದೆ. 4 ಸ್ಪೀಡ್​​ ಗೇರ್​ ಬಾಕ್ಸ್​, 7.9ಹೆಚ್​ಪಿ ಪವರ್​ ಹಾಗೂ 8.05ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ಟ್ಯೂಬ್​ಲೆಸ್​​ ಟಯರ್​ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ. ಅಲಾಯ್​ ವೀಲ್​ ಹೊಂದಿದೆ.ಬೆಲೆ:

ಕಿಕ್ ಸ್ಟಾರ್ಟ್ ಸ್ಲ್ಪಂಡರ್​ ಬೈಕ್​ ಬೆಲೆ 60,960 ರೂ.

ಸೆಲ್ಫ್ ಸ್ಟಾರ್ಟ್ ಬೈಕ್​ ಬೆಲೆ 63,260 ರೂ.ಸೆಲ್ಫ್ ಸ್ಟಾರ್ಟ್ i3s ಬೆಲೆ 64,470 ರೂ

ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ನಿರ್ದೇಶಕರು ಅದೇ ತಿಂಗಳು ರಿಲೀಸ್ ಮಾಡುತ್ತಿರೋದು ಯಾಕೆ?
Published by: Harshith AS
First published: October 19, 2020, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories