HOME » NEWS » Tech » FAU G SET TO RELEASE IN NOVEMBER AS AN INDIAN ALTERNATIVE TO PUBG HG

FAU-G: ಫೌಜಿ ಗೇಮಿಂಗ್ ಆ್ಯಪ್ ಟೀಸರ್​ ಬಿಡುಗಡೆ; ನವೆಂಬರ್​ನಲ್ಲಿ ಬಿಡುಗಡೆಯಾಗುತ್ತಿದೆ ದೇಶಿಯ ಆ್ಯಕ್ಷನ್​ ಗೇಮ್​

FAU-G ಆ್ಯಕ್ಷನ್​ ಗೇಮ್​ ಆಗಿದ್ದು, ನವೆಂಬರ್​ನಲ್ಲಿ ಗೂಗಲ್​ ಪ್ಲೇ ಸ್ಟೋರ್​ ಮತ್ತು ಆ್ಯಪಲ್​ ಸ್ಟೋರ್​ನಲ್ಲಿ ಬಿಡುಗಡೆ ಮಾಡುವ ಮುನ್ಸೂಚನೆ ಸಿಕ್ಕಿದೆ.

news18-kannada
Updated:October 27, 2020, 11:42 AM IST
FAU-G: ಫೌಜಿ ಗೇಮಿಂಗ್ ಆ್ಯಪ್ ಟೀಸರ್​ ಬಿಡುಗಡೆ; ನವೆಂಬರ್​ನಲ್ಲಿ ಬಿಡುಗಡೆಯಾಗುತ್ತಿದೆ ದೇಶಿಯ ಆ್ಯಕ್ಷನ್​ ಗೇಮ್​
FAU-G
  • Share this:
ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ ಸಾಕಷ್ಟು ಆ್ಯಪ್​ಗಳು ಬ್ಯಾನ್​ ಮಾಡಿತು. ಅದರಲ್ಲಿ ಚೀನಾದೊಂದಿಗೆ ಷೇರುಹೊಂದಿದ್ದ ದಕ್ಷಿಣ ಕೊರಿಯಾ ಮೂಲದ ಪಬ್​ಜಿ ಕೂಡ ಇತ್ತು. ಈ ವಿಚಾರ ಅನೇಕ ಗೇಮಿಂಗ್ ಪ್ರಿಯರಿಗೆ ಬೇಸರ ತರಿಸಿತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪಬ್​ಜಿ ಬ್ಯಾನ್​ ಆಗಿದ್ದಕ್ಕೆ ಬೇಸರ ಹೊರಹಾಕಿದ್ದರು. ಆ ಬೆನ್ನಲ್ಲೇ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪಬ್​ಜಿ ಗೇಮ್​ಗೆ ಪರ್ಯಾಯವಾಗಿ ದೇಶಿಯ ಫಿಯರ್​ಲೆಸ್​​​ ಆ್ಯಂಡ್​​ ಯುನೈಟೆಡ್​​ ಗಾರ್ಡ್ಸ್​​​​ (FAU-G) ಗೇಮ್​ ಅನ್ನು ಪರಿಚಯಿಸುವುದಾಗಿ ತಿಳಸಿದ್ದರು. ಇದೀಗ FAU-G ನವೆಂಬರ್​ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರ ಬಾಹ್ಯ ಮತ್ತು ಆಂತರಿಕ ದೃಷ್ಠಿಕೋನವನ್ನು ಇಟ್ಟುಕೊಂಡು ಚೀನಾ ಮೂಲಕ ಕೆಲವು ಆ್ಯಪ್​ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿದೆ. ಬಳಕೆದಾರರಿಗೆ ಸುರಕ್ಷತೆ ಒದಗಿಸಿದೆ. ಸದ್ಯ ದೇಶಿಯ ಆ್ಯಪ್​ ಅಭಿವೃದ್ಧಿಯತ್ತ ಚಿತ್ತ ಹರಿಸಿದ್ದು, ಬಳಕೆದಾರರ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ಡಾಟಾ ಸೋರಿಕೆಯಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಿಯ ಆ್ಯಪ್​ ಅಭಿವೃದ್ಧಿ ಮಾಡುತ್ತಿದೆ. ಅದರಂತೆ ಗೇಮಿಂಗ್​ನಲ್ಲೂ ಅದೇ ರೀತಿಯ ಚಿಂತನೆಮಾಡಿದೆ.

ಅಂದಹಾಗೆಯೇ, FAU-G ಆ್ಯಕ್ಷನ್​ ಗೇಮ್​ ಆಗಿದ್ದು, ನವೆಂಬರ್​ನಲ್ಲಿ ಗೂಗಲ್​ ಪ್ಲೇ ಸ್ಟೋರ್​ ಮತ್ತು ಆ್ಯಪಲ್​ ಸ್ಟೋರ್​ನಲ್ಲಿ ಬಿಡುಗಡೆ ಮಾಡುವ ಮುನ್ಸೂಚನೆ ಸಿಕ್ಕಿದೆ. ಆ್ಯಂಡ್ರಾಯ್ಡ್​ ಮತ್ತು ಐಫೋನ್​ ಬಳಕೆದಾರರು ಡೌನ್​ಲೋಡ್​ ಮಾಡಿಕೊಂಡು ಬಳಸಬಹುದಾಗಿದೆ.

ಅಕ್ಷಯ್​ ಕುಮಾರ್​ ವಿಜಯದಶಮಿ ಮತ್ತು ದೀಪಾವಳಿ ಹಬ್ಬದ ಸಲುವಾಗಿ FAU-G ಗೇಮ್​ ಟೀಸರ್​ ಬಿಡುಗಡೆ ಮಾಡಿದ್ದಾರೆ. ಟ್ವಿಟ್ಟರ್​ನಲ್ಲೂ ಟ್ವೀಟ್​ ಮಾಡಿದ್ದಾರೆ. ಆದರೆ ನವೆಂಬರ್​ನಲ್ಲಿ ಯಾವ ದಿನಾಂಕದಂದು ಬಿಡುಗಡೆ ಮಾಡಲಿದ್ದಾರೆ ಎಂಬ ಬಗ್ಗೆ ಹೇಳಿಕೊಂಡಿಲ್ಲ.

ಭಾರತೀಯ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ FAU-G ಗೇಮ್​ ಅಭಿವೃದ್ಧಿಪಡಿಸಲಾಗುತ್ತದೆ. ಈ ಗೇಮ್​ ಒಟ್ಟಾರೆ ಲಾಭದಲ್ಲಿ ಶೇ 20 ರಷ್ಟು ಭಾರತ್​ ಕೇ ವೀರ್​ ಟ್ರಸ್ಟ್​ಗೆ ಹೋಗುತ್ತದೆ.
Youtube Video

Maruti Suzuki: ಸರ್ವೀಸ್​ ಫೆಸ್ಟಿವಲ್​ ಪ್ರಾರಂಭ; ಕಡಿಮೆ ಬೆಲೆಗೆ ಕಾರಿನ ಬಿಡಿಭಾಗ ಮಾರಾಟ
Published by: Harshith AS
First published: October 27, 2020, 11:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories