HOME » NEWS » Tech » FAU G LAUNCHING IN INDIA ON JANUARY 26 HERE WHAT YOU NEED TO KNOW HG

ನಾಳೆ ದೇಶಿಯ ಆ್ಯಕ್ಷನ್​ FAU-G ಗೇಮಿಂಗ್ ಆ್ಯಪ್ ಬಿಡುಗಡೆ!

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪಬ್​ಜಿ ಗೇಮ್​ಗೆ ಪರ್ಯಾಯವಾಗಿ ದೇಶಿಯ ಫಿಯರ್​ಲೆಸ್​​​ ಆ್ಯಂಡ್​​ ಯುನೈಟೆಡ್​​ ಗಾರ್ಡ್ಸ್​​​​ (FAU-G) ಗೇಮ್​ ಅನ್ನು ಪರಿಚಯಿಸುವುದಾಗಿ ತಿಳಿಸಿದ್ದರು. ಇದೀಗ ಡೆವಲಪರ್ಸ್​​ FAU-G  ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.

news18-kannada
Updated:January 25, 2021, 5:54 PM IST
ನಾಳೆ ದೇಶಿಯ ಆ್ಯಕ್ಷನ್​ FAU-G ಗೇಮಿಂಗ್ ಆ್ಯಪ್ ಬಿಡುಗಡೆ!
FAU-G
  • Share this:
ಕಳೆದ ವರ್ಷ ಕೇಂದ್ರ ಸರ್ಕಾರ ಚೀನಾ ಮೂಲದ ಸಾಕಷ್ಟು ಆ್ಯಪ್​ಗಳು ಬ್ಯಾನ್​ ಮಾಡಿತು. ಅದರಲ್ಲಿ ಚೀನಾದೊಂದಿಗೆ ಷೇರುಹೊಂದಿದ್ದ ದಕ್ಷಿಣ ಕೊರಿಯಾ ಮೂಲದ ಪಬ್​ಜಿ ಕೂಡ ಇತ್ತು. ಈ ವಿಚಾರ ಅನೇಕ ಗೇಮಿಂಗ್ ಪ್ರಿಯರಿಗೆ ಬೇಸರ ತರಿಸಿತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪಬ್​ಜಿ ಬ್ಯಾನ್​ ಆಗಿದ್ದಕ್ಕೆ ಬೇಸರ ಹೊರಹಾಕಿದ್ದರು. ಆ ಬೆನ್ನಲ್ಲೇ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪಬ್​ಜಿ ಗೇಮ್​ಗೆ ಪರ್ಯಾಯವಾಗಿ ದೇಶಿಯ ಫಿಯರ್​ಲೆಸ್​​​ ಆ್ಯಂಡ್​​ ಯುನೈಟೆಡ್​​ ಗಾರ್ಡ್ಸ್​​​​ (FAU-G) ಗೇಮ್​ ಅನ್ನು ಪರಿಚಯಿಸುವುದಾಗಿ ತಿಳಿಸಿದ್ದರು. ಇದೀಗ ಡೆವಲಪರ್ಸ್​​ FAU-G  ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.

ಜನವರಿ 26ರಂದು  FAU-G ಗೇಮ್​ ಪರಿಚಯಿಸುವುದಾಗಿ ತಿಳಿಸಿದ್ದಾರೆ. ಈ ವಿಚಾರ ಗೇಮಿಂಗ್​ ಪ್ರಿಯರಿಗೆ ಸಂತಸ ನೀಡಿದೆ. ಅಂದಹಾಗೆಯೇ ಜನವರಿ 26 ಗಣರಾಜ್ಯೋತ್ಸವ ದಿನವಾಗಿದ್ದು, ದೇಶಿಯ ಆ್ಯಕ್ಷನ್​​​ ಗೇಮ್​ ಅನ್ನು ಡೆವಲಪರ್ಸ್​ ಪರಿಚಯಿಸಲಿದ್ದಾರೆ.

FAU-G ಆ್ಯಕ್ಷನ್​ ಗೇಮ್​ ಆಗಿದೆ. ಈ ಮೊದಲು ಕಳೆದ ನವೆಂಬರ್​ ತಿಂಗಳನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.  ವಿಜಯದಶಮಿ ಮತ್ತು ದೀಪಾವಳಿ ಹಬ್ಬದ ಸಲುವಾಗಿ FAU-G ಗೇಮ್​ ಟೀಸರ್​ ಬಿಡುಗಡೆ ಮಾಡಿದ್ದರು. ಮಾತ್ರವಲ್ಲದೆ, ಟ್ವಿಟ್ಟರ್​ನಲ್ಲೂ ಟ್ವೀಟ್​ ಮಾಡಿದ್ದರು. ಆದರೀಗ ಜನವರಿ 26ರಂದು ಬಿಡುಗಡೆಗೊಳ್ಳಲಿದೆ ಎಂದು ಡೆವಲಪರ್ಸ್​ ತಿಳಿಸಿದ್ದಾರೆ.
Youtube Video


ಇನ್ನು ಭಾರತೀಯ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ FAU-G ಗೇಮ್​ ಅಭಿವೃದ್ಧಿಪಡಿಸಲಾಗುತ್ತದೆ. ಈ ಗೇಮ್​ ಒಟ್ಟಾರೆ ಲಾಭದಲ್ಲಿ ಶೇ.20 ರಷ್ಟು ಭಾರತ್​ ಕೇ ವೀರ್​ ಟ್ರಸ್ಟ್​ಗೆ ಹೋಗುತ್ತದೆ.

Published by: Harshith AS
First published: January 25, 2021, 5:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories