• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • FAU-G ಗೇಮಿಂಗ್ ಆ್ಯಪ್ ಬಿಡುಗಡೆ ದಿನಾಂಕ ಬಹಿರಂಗ; ಇದೇ ತಿಂಗಳು ಪ್ಲೇ ಸ್ಟೋರ್​ ಸೇರಲಿದೆ ದೇಶಿಯ ಆ್ಯಕ್ಷನ್ ಗೇಮ್

FAU-G ಗೇಮಿಂಗ್ ಆ್ಯಪ್ ಬಿಡುಗಡೆ ದಿನಾಂಕ ಬಹಿರಂಗ; ಇದೇ ತಿಂಗಳು ಪ್ಲೇ ಸ್ಟೋರ್​ ಸೇರಲಿದೆ ದೇಶಿಯ ಆ್ಯಕ್ಷನ್ ಗೇಮ್

FAU-G

FAU-G

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪಬ್​ಜಿ ಗೇಮ್​ಗೆ ಪರ್ಯಾಯವಾಗಿ ದೇಶಿಯ ಫಿಯರ್​ಲೆಸ್​​​ ಆ್ಯಂಡ್​​ ಯುನೈಟೆಡ್​​ ಗಾರ್ಡ್ಸ್​​​​ (FAU-G) ಗೇಮ್​ ಅನ್ನು ಪರಿಚಯಿಸುವುದಾಗಿ ತಿಳಿಸಿದ್ದರು. ಇದೀಗ ಡೆವಲಪರ್ಸ್​​ FAU-G  ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.

  • Share this:

    ಕಳೆದ ವರ್ಷ ಕೇಂದ್ರ ಸರ್ಕಾರ ಚೀನಾ ಮೂಲದ ಸಾಕಷ್ಟು ಆ್ಯಪ್​ಗಳು ಬ್ಯಾನ್​ ಮಾಡಿತು. ಅದರಲ್ಲಿ ಚೀನಾದೊಂದಿಗೆ ಷೇರುಹೊಂದಿದ್ದ ದಕ್ಷಿಣ ಕೊರಿಯಾ ಮೂಲದ ಪಬ್​ಜಿ ಕೂಡ ಇತ್ತು. ಈ ವಿಚಾರ ಅನೇಕ ಗೇಮಿಂಗ್ ಪ್ರಿಯರಿಗೆ ಬೇಸರ ತರಿಸಿತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪಬ್​ಜಿ ಬ್ಯಾನ್​ ಆಗಿದ್ದಕ್ಕೆ ಬೇಸರ ಹೊರಹಾಕಿದ್ದರು. ಆ ಬೆನ್ನಲ್ಲೇ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪಬ್​ಜಿ ಗೇಮ್​ಗೆ ಪರ್ಯಾಯವಾಗಿ ದೇಶಿಯ ಫಿಯರ್​ಲೆಸ್​​​ ಆ್ಯಂಡ್​​ ಯುನೈಟೆಡ್​​ ಗಾರ್ಡ್ಸ್​​​​ (FAU-G) ಗೇಮ್​ ಅನ್ನು ಪರಿಚಯಿಸುವುದಾಗಿ ತಿಳಿಸಿದ್ದರು. ಇದೀಗ ಡೆವಲಪರ್ಸ್​​ FAU-G  ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.


    ಜನವರಿ 26ರಂದು FAU-G ಗೇಮ್​ ಪರಿಚಯಿಸುವುದಾಗಿ ತಿಳಿಸಿದ್ದಾರೆ. ಈ ವಿಚಾರ ಗೇಮಿಂಗ್​ ಪ್ರಿಯರಿಗೆ ಸಂತಸ ನೀಡಿದೆ. ಅಂದಹಾಗೆಯೇ ಜನವರಿ 26 ಗಣರಾಜೋತ್ಸವ ದಿನವಾಗಿದ್ದು, ದೇಶಿಯ ಆಯಕ್ಷನ್​​​ ಗೇಮ್​ ಅನ್ನು ಡೆವಲಪರ್ಸ್​ ಪರಿಚಯಿಸಲಿದ್ದಾರೆ.


    FAU-G ಆ್ಯಕ್ಷನ್​ ಗೇಮ್​ ಆಗಿದೆ. ಈ ಮೊದಲು ಕಳೆದ ನವೆಂಬರ್​ ತಿಂಗಳನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.  ವಿಜಯದಶಮಿ ಮತ್ತು ದೀಪಾವಳಿ ಹಬ್ಬದ ಸಲುವಾಗಿ FAU-G ಗೇಮ್​ ಟೀಸರ್​ ಬಿಡುಗಡೆ ಮಾಡಿದ್ದರು. ಮಾತ್ರವಲ್ಲದೆ, ಟ್ವಿಟ್ಟರ್​ನಲ್ಲೂ ಟ್ವೀಟ್​ ಮಾಡಿದ್ದರು. ಆದರೀಗ ಜನವರಿ 26ರಂದು ಬಿಡುಗಡೆಗೊಳ್ಳಲಿದೆ ಎಂದು ಡೆವಲಪರ್ಸ್​ ತಿಳಿಸಿದ್ದಾರೆ.


    ಇನ್ನು ಭಾರತೀಯ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ FAU-G ಗೇಮ್​ ಅಭಿವೃದ್ಧಿಪಡಿಸಲಾಗುತ್ತದೆ. ಈ ಗೇಮ್​ ಒಟ್ಟಾರೆ ಲಾಭದಲ್ಲಿ ಶೇ 20 ರಷ್ಟು ಭಾರತ್​ ಕೇ ವೀರ್​ ಟ್ರಸ್ಟ್​ಗೆ ಹೋಗುತ್ತದೆ.

    Published by:Harshith AS
    First published: