ಜನವರಿ 26 ಗಣರಾಜ್ಯೋತ್ಸವ ದಿನದಂದು ದೇಶಿಯ ಡೆವಲಪರ್ಸ್ ಫಿಯರ್ಲೆಸ್ ಆ್ಯಂಡ್ ಯುನೈಟೆಡ್ ಗಾರ್ಡ್ಸ್ (FAU-G) ಗೇಮ್ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಜನರು ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಬಳಸುತ್ತಿದ್ದಾರೆ. ಮಾತ್ರವಲ್ಲದೆ, ದಿನ ಹೋದಂತೆ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದೆ. ಅಂದಹಾಗೆಯೇ ಸುಮಾರು 5 ಮಿಲಿಯನ್ ಜನರು FAU-G ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಬಳಸುತ್ತಿದ್ದಾರೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ FAU-G ಆ್ಯಕ್ಷನ್ ಗೇಮಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಮಾತ್ರವಲ್ಲದೆ, 3.4 ರೇಟಿಂಗ್ ಕೂಡ ಪಡೆದಿದೆ. 460MBಗಾತ್ರವನ್ನು ಹೊಂದಿರುವ ಈ ಆ್ಯಪ್ ಸದ್ಯ ಜನಪ್ರಿಯತೆ ಪಡೆಯುತ್ತಿದೆ.
FAU-G ಆ್ಯಕ್ಷನ್ ಗೇಮ್ ಆಗಿದೆ. ಈ ಮೊದಲು ಕಳೆದ ನವೆಂಬರ್ ತಿಂಗಳನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ವಿಜಯದಶಮಿ ಮತ್ತು ದೀಪಾವಳಿ ಹಬ್ಬದ ಸಲುವಾಗಿ FAU-G ಗೇಮ್ ಟೀಸರ್ ಬಿಡುಗಡೆ ಮಾಡಿದ್ದರು. ಮಾತ್ರವಲ್ಲದೆ, ಟ್ವಿಟ್ಟರ್ನಲ್ಲೂ ಟ್ವೀಟ್ ಮಾಡಿದ್ದರು. ಆದರೆ ಜನವರಿ 26ರಂದು ಗಣರಾಜ್ಯೋತ್ಸವದಂದು ಬಿಡುಗಡೆ ಮಾಡಿದ್ದಾರೆ.
ಇನ್ನು ಭಾರತೀಯ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ FAU-G ಗೇಮ್ ಅಭಿವೃದ್ಧಿಪಡಿಸಲಾಗಿದೆ. ಈ ಗೇಮ್ ಒಟ್ಟಾರೆ ಲಾಭದಲ್ಲಿ ಶೇ.20 ರಷ್ಟು ಭಾರತ್ ಕೇ ವೀರ್ ಟ್ರಸ್ಟ್ಗೆ ಹೋಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ