Viral Video: ನಡೆಯಲು ಸಾಧ್ಯವಾಗದ ಮಗನಿಗಾಗಿ ವಿಶೇಷ ಸಾಧನ ತಯಾರಿಸಿದ ತಂದೆ, 10 ವರ್ಷಗಳ ನಂತರ ಯಾರೂ ವೀಲ್​ಚೇರ್ ಬಳಸಬೇಕಿಲ್ಲ!

ಒಂದು ದಿನ ನನ್ನ ಮಗ ಆಸ್ಕರ್, ಅಪ್ಪಾ, ನೀವು ರೋಬೋಟ್ ಎಂಜಿನಿಯರ್, ನನಗೆ ನಡೆಯಲು ಅನುವು ಮಾಡಿಕೊಡುವ ರೋಬೋಟ್ ಏಕೆ ಮಾಡಬಾರದು? ಎಂದು ಕೇಳಿದರು. ಇದರ ಪ್ರತಿಫಲವೇ ಎಕ್ಸೋಸ್ಕೆಲಿಟನ್ ಎಂದು ತಮ್ಮ ಆವಿಷ್ಕಾರದ ಮೂಲ ಯಾವುದು ಎಂದು ವಿವರಿಸಿದರು. ಇವರ ಪ್ರಕಾರ ಮುಂದಿನ 10 ವರ್ಷಗಳಲ್ಲಿ ಯಾರು ಗಾಲಿ ಕುರ್ಚಿಯನ್ನು ಬಳಸದೆ ಭವಿಷ್ಯದಲ್ಲಿ ಎಲ್ಲರೂ ಎಕ್ಸೋಸ್ಕೆಲಿಟನ್ ಬಳಸುತ್ತಾರೆ ಎಂದು ಹೇಳುತ್ತಾರೆ.

ರೋಬೋಟ್ ಸಹಾಯದಿಂದ ನಡಿಗೆ

ರೋಬೋಟ್ ಸಹಾಯದಿಂದ ನಡಿಗೆ

 • Share this:

  ಪ್ರತಿ ಪೋಷಕರಿಗೂ ತನ್ನ ಮಗು ಎಡವಿ ಬೀಳದೆ ಆರಾಮವಾಗಿ ನಡೆಯಲಿ ಎಂಬ ಮನೋಭಾವ ಹೊಂದಿರುತ್ತಾರೆ. ಏಕೆಂದರೆ ಮಕ್ಕಳ ಮೂಳೆಗಳು ತುಂಬಾ ಮೃದುವಾಗಿರುವುದರಿಂದ ತೊಂದರೆಯಾಗುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಪೋಷಕರು ತುಸು ಹೆಚ್ಚೇ ಕಾಳಜಿ ವಹಿಸುತ್ತಾರೆ. ಹಾಗಾಗಿ ಮಕ್ಕಳು ಮೊದಮೊದಲು ನಡೆಯಲು ಅನುಕೂಲವಾಗಲೆಂದು ಮಾರುಕಟ್ಟೆಯಲ್ಲಿ ಸಿಗುವ ನಡೆಯಲು ಸುಲಭವಾಗುವ ಪರಿಕರಗಳನ್ನು ಕೊಂಡು ತರುತ್ತಾರೆ. ಆದರೆ ಇಲ್ಲೊಬ್ಬ ತಂದೆ ಇದಕ್ಕೆ ತದ್ವಿರುದ್ಧ. ಇವರು ತಮ್ಮ ಮಗು ನಡೆಯಲು ಅನುಕೂಲವಾಗಲೆಂದು ಸ್ವಯಂ ಎಂಡೋಸ್ಕೆಲಿಟನ್ ಎಂಬ ಸಾಧನವನ್ನೇ ತಯಾರು ಮಾಡಿದ್ದಾರೆ. ಇದು ತನ್ನ ಮಗುವಿಗೆ ಯಾವುದೇ ತೊಂದರೆಯಿಲ್ಲದೇ ನಡೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ.


  ಎಕ್ಸೋಸ್ಕೆಲಿಟನ್ ಎಂಬ ಸಾಧನ ತಯಾರಿಸಿದ ತಂದೆಯೇ ಜೀನ್-ಲೂಯಿಸ್ ಕಾನ್ಸ್ಟಾಂಜಾ. ಇವರ ಪುತ್ರ ಆಸ್ಕರ್ ಕಾನ್ಸ್ಟಾಂಜಾ ಅನುವಂಶಿಕ ನರ ದೌರ್ಬಲ್ಯದಿಂದ ಬಳಲುತ್ತಿದ್ದು, ನರಗಳು ಅವನ ಕಾಲುಗಳಿಗೆ ಸಾಕಷ್ಟು ಸಂಕೇತಗಳನ್ನು ಕಳುಹಿಸದ ಕಾರಣ ನಡೆಯುವುದು ಅಸಾಧ್ಯವಾಗುತ್ತಿದೆ. ಇದನ್ನರಿತ ಮಗುವಿನ ತಂದೆ, ಜೀನ್-ಲೂಯಿಸ್ ಕಾನ್ಸ್ಟಾಂಜಾ ತಮ್ಮ ಎಂಜಿನಿಯರಿಂಗ್ ಪರಿಣತಿ ಬಳಸಿ ಧರಿಸಬಹುದಾದ ಎಕ್ಸೋಸ್ಕೆಲಿಟನ್ ತಯಾರಿಸಿದರು. ಇದನ್ನು ಇತ್ತೀಚೆಗೆ ವಾಂಡರ್‌ಕ್ರಾಫ್ಟ್‌ ಕಂಪನಿ ಮಾರುಕಟ್ಟೆಗೆ ಪರಿಚಯಿಸಿತ್ತು.


  ಕಾನ್ಸ್ಟಾಂಜಾ ಹಾಗೂ ಅವರ ತಂಡದ ಗುರಿ ಸ್ಪಷ್ಟವಾಗಿತ್ತು. ಏನೆಂದರೆ ತಾನು ಪ್ಯಾರಾಸ್ಪ್ಲೆಜಿಕ್ಸ್‌ನಿಂದ ಬಳಲುವವರಿಗೆ ಅನುಕೂಲವಾಗುವ ಎಕ್ಸೋಸ್ಕೆಲಿಟನ್ ಸಾಧನ ಕಂಡು ಹಿಡಿಯುವ ಬಗ್ಗೆ ಯೋಚಿಸಿದ್ದರು. ಅಲ್ಲದೇ ವಾಂಡರ್‌ಕ್ರಾಫ್ಟ್‌ ತಂಡದ ಮೂವರು ಸಂಸ್ಥಾಪಕರ ಪ್ರೀತಿಪಾತ್ರರು ನಡೆಯಲು ವೀಲ್ ಚೇರ್‌ಗಳನ್ನು ಬಳಸುತ್ತಿದ್ದರು. ಇದರಿಂದ ಬೇಸತ್ತ ಇವರು ಎಕ್ಸೋಸ್ಕೆಲಿಟನ್ ಕಂಡುಹಿಡಿದಿದ್ದು, ಇದನ್ನು ಜೀನ್-ಲೂಯಿಸ್ ಕಾನ್ಸ್ಟಾಂಜಾ ಮಗ ನಡೆಯಲು ಬಳಸುತ್ತಿದ್ದಾನೆ. ಜೀನ್-ಲೂಯಿಸ್ ಕಾನ್ಸ್ಟಾಂಜಾ ಮಗ ಆಸ್ಕರ್ ಕಾನ್ಸ್ಟಾಂಜಾ ಇದನ್ನು ಬಳಸುತ್ತಿರುವ ವಿಡಿಯೋವನ್ನು ವಾಂಡರ್‌ಕ್ರಾಫ್ಟ್‌ ತನ್ನ ಅಧಿಕೃತ ಯೂಟ್ಯೂಬ್ ಚಾನಲ್‍ನಲ್ಲಿ ಹಂಚಿಕೊಂಡಿದೆ.


  ಈ ವಿಡಿಯೋದಲ್ಲಿ ಮಗ ಸಾಮಾನ್ಯ ಮನುಷ್ಯನ ರೀತಿಯಲ್ಲಿ ನಡೆಯುತ್ತಿದ್ದಾನೆ. ಜೊತೆಗೆ ಹಲವಾರು ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾನೆ. ಅಲ್ಲದೇ ಅವನು ಆರಾಮವಾಗಿ ಮುಂದಕ್ಕೆ ವಾಲುತ್ತಾನೆ ಮತ್ತು ಅಡಿಗೆ ಕೆಲಸವನ್ನು ಅತ್ಯಂತ ಸುಲಭವಾಗಿ ನಿರ್ವಹಿಸುತ್ತಾನೆ. ಮೊದಲು, ನನಗೆ ನಡೆಯಲು ಯಾರಾದರೂ ಸಹಾಯ ಮಾಡಬೇಕಾಗಿತ್ತು. ಆದರೆ ಈಗ ನಾನು ಇದರಿಂದ ಒಬ್ಬನೇ ನಡೆಯುತ್ತೇನೆ ಎಂದು ಆಸ್ಕರ್ ಆವಿಷ್ಕಾರದ ಬಗ್ಗೆ ಹೇಳಿದನು.

  ಇದನ್ನೂ ಓದಿ: Weight Loss Tips: ದಿನಾ ಬೆಳಗ್ಗೆ ಹೀಗೆ ಮಾಡಿದ್ರೆ ದೇಹ ತೂಕ ಇಳಿಯೋದು ಗ್ಯಾರಂಟಿ!

  ಒಂದು ದಿನ ನನ್ನ ಮಗ ಆಸ್ಕರ್, ಅಪ್ಪಾ, ನೀವು ರೋಬೋಟ್ ಎಂಜಿನಿಯರ್, ನನಗೆ ನಡೆಯಲು ಅನುವು ಮಾಡಿಕೊಡುವ ರೋಬೋಟ್ ಏಕೆ ಮಾಡಬಾರದು? ಎಂದು ಕೇಳಿದರು. ಇದರ ಪ್ರತಿಫಲವೇ ಎಕ್ಸೋಸ್ಕೆಲಿಟನ್ ಎಂದು ತಮ್ಮ ಆವಿಷ್ಕಾರದ ಮೂಲ ಯಾವುದು ಎಂದು ವಿವರಿಸಿದರು. ಇವರ ಪ್ರಕಾರ ಮುಂದಿನ 10 ವರ್ಷಗಳಲ್ಲಿ ಯಾರು ಗಾಲಿ ಕುರ್ಚಿಯನ್ನು ಬಳಸದೆ ಭವಿಷ್ಯದಲ್ಲಿ ಎಲ್ಲರೂ ಎಕ್ಸೋಸ್ಕೆಲಿಟನ್ ಬಳಸುತ್ತಾರೆ ಎಂದು ಹೇಳುತ್ತಾರೆ.


  ಈಗಾಗಲೇ ವಾಂಡರ್‌ಕ್ರಾಫ್ಟ್‌ ತಯಾರಿಸಿದ ಎಕ್ಸೋಸ್ಕೆಲಿಟನ್ ಸಾಧನವು ವಿಶ್ವಾದ್ಯಂತ ವಿವಿಧ ಆಸ್ಪತ್ರೆಗಳಿಗೆ ಮಾರಾಟ ಮಾಡಲಾಗಿದೆ. ಈ ಸಾಧನಕ್ಕೆ 56,55,882 ರೂ. ತಗುಲಲಿದೆ. ಈ ತಂತ್ರಜ್ಞಾನ ಇದೀಗ ಕೇವಲ ಆಸ್ಪತ್ರೆಗಳಲ್ಲಿ ಮಾತ್ರ ಬಳಕೆಯಾಗುತ್ತಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Soumya KN
  First published: