ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳದ್ದೇ ಕಾರು ಬಾರು, ಈಗಾಗಲೇ ಭಾರತದ ಅನೇಕ ವಾಹನ ಉತ್ಪಾದನ ಸಂಸ್ಥೆಗಳು ವಿನೂತನ ಶೈಲಿಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಮಾತ್ರವಲ್ಲದೆ, ಸೇಲ್ ಕೂಡ ಆರಂಭಿಸಿದೆ. ಇದೀಗ ಅದರಂತೆ ಒನ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ಸ್ ಸಂಸ್ಥೆ ಕ್ರಿಡ್ನ್ ಎಂಬ ಬೈಕ್ ಅನ್ನು ಅಭಿವೃದ್ಧಿ ಪಡಿಸಿದೆ. ಮಾತ್ರವಲ್ಲದೆ, ರಸ್ತೆ ಟ್ರಯಲ್ ಕೂಡ ನಡೆಸಿದೆ ಯಶಸ್ವಿಯಾಗಿದೆ. ಮುಂದಿನ ತಿಂಗಳು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ.
ನೂತನ ಬೈಕ್ ಆಕರ್ಷಕ ಲುಕ್ ಹೊಂದಿದ್ದು, ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಇದೇ ಕಾರಣಕ್ಕೆ ಫ್ರೀ ಬುಕ್ಕಿಂಗ್ ಪ್ರಾರಂಭಿಸಿದೆ. ಜೊತೆಗೆ ಯಾವುದೇ ಶುಲ್ಕವಿಲ್ಲದೆ ಬುಕ್ಕಿಂಗ್ ಮಾಡಬಹುದಾದ ಅವಕಾಶವನ್ನು ನೀಡಿದೆ. ಹಾಗಾಗಿ ದ್ವೀಚಕ್ರ ಪ್ರಿಯರು ಹೊಸ ಬೈಕ್ ಅನ್ನು ಬುಕ್ಕಿಂಗ್ ಮಾಡುತ್ತಿದ್ದಾರೆ.
ಕ್ರಿಡ್ನ್ ಬೈಕ್ ಗಂಟೆಗೆ 95 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸುತ್ತದೆ. ದಿನಕ್ಕೆ ನೂರು ಮೀಟರ್ ಒಳಗಡೆ ಪ್ರಯಾಣಿಸುವವರಿಗೆ ಈ ಬೈಕ್ ಹೇಳಿ ಮಾಡಿಸಿದಂತಿದೆ.
ಇನ್ನು ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್ಗಳಲ್ಲಿ ಬುಕ್ಕಿಂಗ್ ಪ್ರಾರಂಭಿಸಿದೆ. ಕ್ರಿಡ್ನ್ ಬೈಕಿನ ಬೆಲೆಯನ್ನು ಕಂಪನ ಇನ್ನು ಬಹಿರಂಗ ಪಡಿಸಿಲ್ಲ. ಆದರೆ ಮಾಹಿತಿಗಳ ಮೇಲೆ 1 ಲಕ್ಷ ರೂ ಇರಲಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ