ಟೆಕ್ನಾಲಜಿಯ (Technology) ಪ್ರಗತಿ ಪ್ರತಿಯೊಂದು ಟೆಕ್ ಕಂಪನಿಗಳ ಬೆಳವಣಿಗೆಗೆ ಕಾರಣ ಅಂತಾನೇ ಹೇಳ್ಬಹುದು. ದಿನ ಹೋದಂತೆ ಮಾರುಕಟ್ಟೆಗೆ ಹೊಸಹೊಸ ಸಾಧನಗಳು ಬಿಡುಗಡೆಯಾಗುತ್ತಿದೆ. ಅದ್ರಲ್ಲೂ ಸ್ಮಾರ್ಟ್ಫೋನ್ಗಳಲ್ಲಿ (Smartphones) ಹೇಳುವುದೇ ಬೇಡ. ಇದರಲ್ಲಿ ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಉತ್ತಮ ಫೀಚರ್ಸ್ ಅನ್ನು ಒಳಗೊಂಡ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿದೆ. ಇದೀಗ ಸ್ಮಾರ್ಟ್ಫೋನ್ಗಳ ವಿನ್ಯಾಸದಿಂದ ಹಿಡಿದು ಬ್ಯಾಟರಿಯವರೆಗೆ ಬಹಳಷ್ಟು ಬದಲಾವಣೆಯಾಗುತ್ತಿದೆ. ಸ್ಮಾರ್ಟ್ಫೋನ್ಗಳು ಮಾನವನ ದೈನಂದಿನ ಕೆಲಸದ ಬಹಳ ಅಗತ್ಯವಾದ ಸಾಧನವಾಗಿದೆ. ಹೀಗಿರುವಾಗ ಸ್ಮಾರ್ಟ್ಫೋನ್ಗಳಲ್ಲಿ ಬ್ಯಾಟರಿ (Battery) ಬಾಳಿಕೆ ಬಹಳಷ್ಟು ಕಡಿಮೆ ಎಂಬ ದೂರುಗಳನ್ನು ಕೇಳಿಬರುತ್ತಿದೆ. ಆದ್ದರಿಂದ ಇದೀಗ ಮೊಬೈಲ್ ಕಂಪನಿಯೊಂದು ಹೊಸ ದಾಖಲೆ ಸೃಷ್ಟಿಸಲು ರೆಡಿಯಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಇತ್ತೀಚೆಗೆ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಮೊಬೈಲ್ಗಳಿಗೆ ಹೆಚ್ಚು ಬೇಡಿಕೆಯಿದೆ. ಈ ವಿಷಯವನ್ನು ಕಂಪನಿಗಳು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಸ್ಮಾರ್ಟ್ಫೋನ್ ಅನ್ನು ಪರಿಚಯಿಸುತ್ತಿದೆ. ಇದೀಗ 240W ವೇಗದ ಚಾರ್ಜಿಂಗ್ ಸಾಮರ್ಥ್ಯವುಳ್ಳ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬರುತ್ತಿದೆ.
ರಿಯಲ್ಮಿ ಕಂಪನಿಯ ಸ್ಮಾರ್ಟ್ಫೋನ್
ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದ ಸ್ಮಾರ್ಟ್ಫೋನ್ಗಳಿಗೆ ಹೆಚ್ಚು ಬೇಡಿಕೆಯಿದೆ. ಇದನ್ನು ಗಮನಿಸಿದ ರಿಯಲ್ಮಿ ಕಂಪನಿ ಹೊಸ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗಿದೆ. ಇದು ಅತ್ಯಂತ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಇದು ರಿಯಲ್ಮಿ ಜಿಟಿ ನಿಯೋ 5 ಎಂಬುದಾಗಿದೆ. ರಿಯಲ್ಮಿ ಪರಿಚಯಿಸಿರುವ ಈ ಸ್ಮಾರ್ಟ್ಫೋನ್ ವಿಶ್ವದಲ್ಲೇ ಅತ್ಯಂತ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಮೊದಲ ಫೋನ್ ಆಗಲಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಕಂಪನಿಯ ಹೊಸ ಲ್ಯಾಪ್ಟಾಪ್ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್?
ಚಾರ್ಜಿಂಗ್ ವೇಗ ಎಷ್ಟಿದೆ?
ಇದೀಗ ರಿಯಲ್ಮಿ ವಿಶ್ವದಲ್ಲೇ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಹಾಗಿದ್ರೆ ಇದರ ಚಾರ್ಜಿಂಗ್ ವೇಗ ಎಷ್ಟಿರಬಹುದು ಎಂಬುದು ಎಲ್ಲರಿಗೂ ಪ್ರಶ್ನೆ ಮೂಡಬಹುದು. ರಿಯಲ್ಮಿ ಕಂಪನಿಯ ಈ ಸ್ಮಾರ್ಟ್ಫೋನ್ 240W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಮಾಡುವುದಂತೂ ಖಚಿತವಾಗಿದೆ.
ಇದು ಒಮ್ಮೆ ಫುಲ್ ಚಾರ್ಜ್ ಆಗಲು ಕೆಲವೇ ನಿಮಿಷಗಳು ಸಾಕು. ಅದರೆ ಈಗಾಗಲೆ ಬಿಡುಗಡೆಯಾಗಿರುವ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡಲು 1 ಗಂಟೆಗಳ ಸಮಯವಾದರೂ ಬೇಕಾಗುತ್ತದೆ. ಆದರೆ ಇನ್ನುಮುಂದೆ ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವಂತಹ ಸ್ಮಾರ್ಟ್ಫೋನ್ಗಳು ಬರಲಿದೆ.
ಈ ಹಿಂದಿನ ಚಾರ್ಜಿಂಗ್ ಸಾಮರ್ಥ್ಯ
ಈಗಾಗಲೇ ಹಲವು ವರ್ಷಗಳಿಂದ, ಒನ್ಪ್ಲಸ್ ಕಂಪನಿ ತನ್ನ ಫೋನ್ಗಳಲ್ಲಿ ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನು ಬಿಡುಗಡೆ ಮಾಡಿದೆ. ಜೊತೆಗೆ ಶಿಯೋಮಿ ಕಂಪನಿ ಕೂಡ 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಒಪ್ಪೋ ಕಂಪನಿ ಕೂಡ ಸೂಪರ್ವೂಕ್ ಫ್ಲ್ಯಾಷ್ ಚಾರ್ಜಿಂಗ್ ಅನ್ನು ಈ ಹಿಂದೆ ಪರಿಚಯಿಸಿದೆ. ಇದು ಕೇವಲ ಒಂಬತ್ತು ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವಂತಹ ಸಾಮರ್ಥ್ಯವನ್ನು ಹೊಂದಿರಲಿದೆ ಎಂದೂ ಹೇಳಲಾಗಿದೆ. ಇದೀಗ ರಿಯಲ್ಮಿ ಫೋನ್ ಇನ್ನಷ್ಟು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ
ಸದ್ಯ VCKCJACH ಮಾದರಿ ಸಂಖ್ಯೆಯನ್ನು ಹೊಂದಿರುವ ಸ್ಮಾರ್ಟ್ಫೋನ್ 240W ಸೂಪರ್ವೂಕ್ ಅಡಾಪ್ಟರುಗಳನ್ನು ಹೊಂದಿದೆ ಎಂದು ಚೀನೀ ವೆಬ್ಸೈಟ್ ಮೈಡ್ರೈವರ್ಸ್ ಸಂಸ್ಥೆ ವರದಿ ಮಾಡಿದೆ. ಒಪ್ಪೋ ಮತ್ತು ರಿಯಲ್ಮಿ R&D ಸಂಪನ್ಮೂಲಗಳನ್ನು ಹಂಚಿಕೊಳ್ಳುವುದನ್ನು ಪರಿಗಣಿಸಿದರೆ ಈ ಹೊಸ ವೇಗದ ಚಾಜಿಂಗ್ ತಂತ್ರಜ್ಞಾನವು ರಿಯಲ್ಮಿ ಜಿಟಿ ನಿಯೋ 5 ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ರಿಯಲ್ಮಿ ಜಿಟಿ ನಿಯೋ 5 ಡ್ಯುಯಲ್ ಸೆಲ್ ಬ್ಯಾಟರಿ ಹೊಂದಿರಬಹುದು ಎನ್ನುವ ನಿರೀಕ್ಷೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ