ಜನಪ್ರಿಯ ಡೇಟಿಂಗ್ ಆ್ಯಪ್ ಟಿಂಡರ್ ‘ವಿಡಿಯೋ ಚಾಟ್’ ಫೀಚರ್ ಅನ್ನು ಪರಿಚಯಿಸಲು ಮುಂದಾಗಿದೆ. ವಿಶ್ವದಾದ್ಯಂತ ಟಿಂಡರ್ ಆ್ಯಪ್ ಬಳಕೆದಾರರಿಗೆ ನೂತನ ಫೀಚರ್ ಸಿಗಲಿದ್ದು. ಸದ್ಯ ಕೆಲವು ದೇಶಗಳಲ್ಲಿ ಟೆಸ್ಟಿಂಗ್ ನಡೆಸುತ್ತಿದೆ.
ಟಿಂಡರ್ ಆ್ಯಪ್ ಪರಿಚಯಿಸುತ್ತಿರುವ ‘ಫೇಸ್- ಟು- ಫೇಸ್’ ಫೀಚರ್ ಮೂಲಕ ಬಳಕೆದಾರರು ವಿಡಿಯೋ ಕರೆ ಮಾಡಬಹುದಾಗಿದೆ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಬಳಸದೆ ಮತ್ತು ಬಳಕೆದಾರರ ಮಾಹಿತಿ ಶೇರ್ ಆಗದಂತೆ ಈ ವಿಡಿಯೋ ಕರೆ ಸೇವೆಯನ್ನು ಹೊರತರುತ್ತಿದೆ.
ಟಿಂಡರ್ ಈ ವರ್ಷ ಘೋಷಿಸಿದಂತೆ, ಫೇಸ್- ಟು- ಫೇಸ್ ವೈಶಿಷ್ಟ್ಯವು ಐಒಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದೆ ಎಂದು ಹೇಳಿತ್ತು. ಆದರರೀಗ ಎಲ್ಲಾ ಬಳಕೆದಾರರಿಗೆ ಸಿಗುವಂತೆ ಪರಿಚಯಿಸುತ್ತಿದೆ. ಸದ್ಯ ಅಮೆರಿಕ, ಯುಕೆ, ಬ್ರೆಜಿಲ್, ಆಸ್ಟ್ರೇಲಿಯ, ಸ್ಪೈನ್, ಇಟಲಿ, ಫ್ರಾನ್ಸ್, ವಿಯೆಟ್ನಾಂ, ಇಂಡೋನೇಷ್ಯಾ, ಕೊರಿಯಾ, ತೈವಾನ್, ಥೈಲ್ಯಾಂಡ್, ಪೆರು ಮತ್ತು ಚಿಲಿ ನಗರಗಳಲ್ಲಿ ಟೆಸ್ಟಿಂಗ್ ನಡೆಸುತ್ತಿದೆ.
ಸದ್ಯ ಡೇಟಿಂಗ್ ಮೂಲಕ ಅಪಾಯವನ್ನು ತಪ್ಪಿಸುವ ಸಲುವಾಗಿ ವಿಡಿಯೋ ಚಾಟಿಂಗ್ ಫೀಚರ್ ಅನ್ನು ಟಿಂಡರ್ ಹೊರತರುತ್ತಿದೆ. ಇದರಿಂದ ಅನೇಕರಿಗೆ ಉಪಯೋಗವಾಗಲಿದೆ. ಮಾತ್ರವಲ್ಲದೆ. ಪರಿಚಯಸ್ಥರೊಂದಿಗೆ ನೇರವಾಗಿ ಮಾತನಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ