ಇದು ಟೆಕ್ನಾಲಜಿ (Technology) ಯುಗ. ದಿನ ಕಳೆದಂತೆ ಹೊಸ ಹೊಸ ಟೆಕ್ನಾಲಜಿಗಳು ಮಾರುಕಟ್ಟೆಗೆ ಕಂಪೆನಿಗಳು ಪರಿಚಯಿಸುತ್ತಲೇ ಇರುತ್ತದೆ. ಇನ್ನು ಕೆಲವೊಂದು ಕಂಪೆನಿಗಳು ದೇಶವನ್ನೇ ಡಿಜಿಟಲೈಸ್ ಮಾಡಲು ಮುಂದಾಗಿದೆ. ಇತ್ತೀಚೆಗೆ ಜನಪ್ರಿಯ ಹಣಕಾಸು ವಹಿವಾಟು ಕಂಪೆನಿಯಾಗಿರುವ ಆರ್ಬಿಐ ಇತ್ತೀಚೆಗೆ ಕ್ರಿಪ್ಟೋಕರೆನ್ಸಿ (Crypto Currency) ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಆರ್ಬಿಐ ಡಿಜಿಟಲ್ ರೂಪಾಯಿ ಕರೆನ್ಸಿಯನ್ನು (CBDC- Central Bank Digital Currency) ಬಿಡುಗಡೆ ಮಾಡಿದೆ. ಇನ್ನು ಇ-ರುಪೀ (E-Rupee) ಟೆಕ್ನಾಲಜಿಯು ಇದುವರೆಗೆ ಕೆಲ ಬ್ಯಾಂಕ್ ಮತ್ತು ದೊಡ್ಡ ದೊಡ್ಡ ಮಾರುಕಟ್ಟೆ ವಲಯಗಳಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು, ಆದರೆ ಈಗ ಎಲ್ಲಾ ಕಡೆಯಲ್ಲು ಲಭ್ಯವಿದೆ. ಆದರೆ ಬಳಕೆದಾರರಿಗೆ ಇದರ ಬಗ್ಗೆ ಗೊಂದಲ ಶುರುವಾಗಿದೆ.
ಆರ್ಬಿಐ ಇತ್ತೀಚೆಗೆ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಿದೆ. ಆದರೆ ಇದು ಸದ್ಯ ಸಾರ್ವಜನಿಕ ವಲಯದಲ್ಲೂ ಎಂಟ್ರಿ ನೀಡಿದ್ದು ಬಳಕೆದಾರರಿಗೆ ಡಿಜಿಟಲ್ ಕರನ್ಸಿ ಇ-ರುಪೀ ಬಗ್ಗೆ ಗೊಂದಲ ಶುರುವಾಗಿದೆ. ಆದರೆ ಈ ಗೊಂದಲಕ್ಕೆ ಇದೀಗ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪೆನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರ ಅವರು ಸ್ವತಃ ತಾವೇ ಪೇಮೆಂಟ್ ಮಾಡುವ ವಿಡಿಯೋವನ್ನು ಮಾಡಿ ಶೇರ್ ಮಾಡಿಕೊಂಡು ಪರಿಹಾರವನ್ನು ನೀಡಿದ್ದಾರೆ.
ಹಣ್ಣು ವ್ಯಾಪಾರಿಗೆ ಇ-ರುಪೀ ಪೇಮೆಂಟ್ ಮಾಡಿದ ಆನಂದ್ ಮಹೀಂದ್ರ
ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರ ಅವರು ತಳ್ಳೋ ಗಾಡಿಯಿಂದ ಹಣ್ಣು ವ್ಯಾಪಾರ ಮಾಡುತ್ತಿದ್ದ, ಬಚ್ಚೇ ಲಾಲ್ ಸಹಾನಿಯಿಂದ ದಾಳಿಂಬೆ ಖರೀದಿಸಿದ್ದಾರೆ. ಹಣ್ಣು ಅಂಗಡಿಯಲ್ಲಿ ಬೇರೆ ಪೇಟಿಎಂ, ಫೋನ್ಪೇ ಇತ್ಯಾದಿ ಯುಪಿಐ ಕ್ಯೂಆರ್ ಕೋಡ್ ಹಾಕಲಾಗುವಂತೆ ಇ–ರುಪಾಯಿಗೂ ಕ್ಯೂಆರ್ ಬೋರ್ಡ್ ಅನ್ನು ಇಲ್ಲಿ ಇಡಲಾಗಿತ್ತು.
ಇದನ್ನೂ ಓದಿ: ಕ್ಯೂಆರ್ ಕೋಡ್ ಅಂದ್ರೆ ಏನು ಗೊತ್ತಾ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ
ಇದುವರೆಗೆ ಯುಪಿಐ ಪೇಮೆಂಟ್ ಹೇಗೆ ಮಾಡುತ್ತಿದ್ದೆವೋ, ಅದೇ ರೀತಿ ಇದನ್ನೂ ಕೂಡ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಆನಂದ್ ಮಹೀಂದ್ರ ಕೂಡ ಇದೇ ಪ್ರಕ್ರಿಯೆ ಅನುಸರಿಸಿ ಇ–ರುಪಾಯಿಯಲ್ಲಿ ಪಾವತಿಸುವುದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇ-ರುಪಾಯಿ ಎಂದರೇನು?
ಇ-ರುಪಾಯಿ ಎಂದು ಕ್ರಿಪ್ಟೋಕರೆನ್ಸಿಗಳಂತೆಯೇ ಇರುವಂತಹ ಒಂದು ರೀತಿಯ ಡಿಜಿಟಲ್ ರೂಪದಲ್ಲಿರುವ ಕರೆನ್ಸಿ. ಇನ್ನು ಸಾಮಾನ್ಯ ಕರೆನ್ಸಿಯಷ್ಟೇ ಬೆಲೆಗಳು ಇದಕ್ಕೂ ಇದೆ. ಆದರೆ ಸಾಮಾನ್ಯ ಕರೆನ್ಸಿಗೂ, ಡಿಜಿಟಲ್ ಕರೆನ್ಸಿಗೆ ಇರುವಂತಹ ವ್ಯತ್ಯಾಸ ಏನೆಂದರೆ ಸಾಮಾನ್ಯ ಕರೆನ್ಸಿ ನೋಟುಗಳಾಗಿರುತ್ತದೆ. ಆದರೆ ಇ-ರುಪಾಯಿಯನ್ನು ನಾವು ಡಿಜಿಟಲ್ ರೂಪದಲ್ಲಿ ಪಾವತಿ ಮಾಡುತ್ತೇವೆ.
ಇನ್ನು ಇದುವರೆಗೆ ಯುಪಿಐ ಪಾವತಿಗೆ ಕ್ಯೂಆರ್ ಕೋಡ್ಗಳನ್ನು ಆ್ಯಡ್ ಮಾಡಲಾಗಿತ್ತು. ಇನ್ಮುಂದೆ ಇ-ರುಪಾಯಿಗೂ ಅದರದೇ ಆದ ಒಂದು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಟೆಕ್ನಾಲಜಿ ಬರಲಿದೆ. ಪೇಟಿಯಂ, ಫೋನ್ಪೇ, ಗೂಗಲ್ ಪೇನಂತಹ ಆ್ಯಪ್ಗಳನ್ನು ಬಳಸಿ ಕ್ಯೂಆರ್ ಕೋಡ್ ಅಥವಾ ಫೋನ್ ನಂಬರ್ಗಳನ್ನು ಆ್ಯಡ್ ಮಾಡಿ- ಯುಪಿಐ ಹಣವನ್ನು ಪೇಮೆಂಟ್ ಮಾಡಬಹುದು.
At the Reserve Bank’s board meeting today I learned about the @RBI digital currency-the e-rupee. Right after the meeting I visited Bachche Lal Sahani, a nearby fruit vendor who is one of the first merchants to accept it. #DigitalIndia in action! (Got great pomegranates as well!) pic.twitter.com/OxFRWgI0ZJ
— anand mahindra (@anandmahindra) January 25, 2023
ಯುಪಿಐ ಎಂಬುದು ಹಲವು ಬ್ಯಾಂಕ್ಗಳಲ್ಲಿರುವ ಹಣವನ್ನು ಯಾರಿಗೂ ಬೇಕಾದರು ಶೇರ್ ಮಾಡಬಹುದಾದ ಒಂದು ಮಾಧ್ಯಮವಾಗಿದೆ. ಇಲ್ಲಿ ಬಳಕೆದಾರರ ವ್ಯವಹಾರಗಳನ್ನು ನೋಡಿಕೊಳ್ಳಲೆಂದೇ ಬ್ಯಾಂಕ್ಗಳು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತದೆ. ಆದರೆ ಇ-ರುಪಾಯಿಗಳು ಹಾಗಲ್ಲ. ಇದೊಂಥರ ಸೀಕ್ರೆಟ್ ಹಣ ಇದ್ದಂತೆ ಅಂತ ಹೇಳ್ಬಹುದು.
ಏಕೆಂದರೆ ಇಲ್ಲಿ ಒಬ್ಬ ವ್ಯಕ್ತಿಯ ಪರ್ಸನಲ್ ವ್ಯಾಲೆಟ್ನಿಂದ ಹಣ ಪಾವತಿ ಮಾಡಲಾಗುತ್ತದೆ. ಆದರೆ ಈ ಪೇಮೆಂಟ್ ವಿಧಾನ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರ ಅಕೌಂಟ್ನ ಮಧ್ಯೆ ಮಾತ್ರ ಇರುತ್ತದೆ. ಬೇರೆ ಯಾರಿಗೂ ತಿಳಿಯುವುದಿಲ್ಲ. ಒಂದು ರೀತಿಯಲ್ಲಿ ನಗದು ರೂಪದಂತೆಯೇ ಹೇಳಬಹುದು. ಆದರೆ ಅದನ್ನು ಕೈಯಿಂದ ಇನ್ನೊಬ್ಬರಿಗೆ ನೀಡುತ್ತೇವೆ. ಆದರೆ ಇದನ್ನು ಡಿಜಿಟಲೀಕರಣದ ಮೂಲಕ ಪೇಮೆಂಟ್ ಮಾಡುತ್ತೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ