HOME » NEWS » Tech » FAMILY MAN 2 CHELLAM SIR HAS FOR HAVING ALL THE ANSWERS THEN GOOGLE KVD

Family Man-2: ಗೂಗಲ್​​ನ ಅಲ್ಲ ಏನೇ ಬೇಕಿದ್ದರೂ ಚೆಲ್ಲಂ ಸರ್​​​ನ ಕೇಳಿ: ಮಿಮ್ಸ್, ಟ್ರೋಲ್​​​ಗಳ ನಗೆ ಬಾಂಬ್!

ಮಕ್ಕಳು ಇಂಫರ್ಮೇಷನ್​​ಗಾಗಿ ಗೂಗಲ್​ ಮಾಡ್ತಾರೆ ಲೆಜೆಂಟ್ಸ್​​​ ಚೆಲ್ಲಂ ಸರ್​ನ ಕಾಂಟ್ಯಾಕ್ಟ್​ ಮಾಡ್ತಾರೆ ಎಂಬ ಟ್ರೋಲ್​​ಗಳು, ಮಿಮ್ಸ್​ ಹರಿದಾಡುತ್ತಿವೆ.

Kavya V | news18-kannada
Updated:June 7, 2021, 6:18 PM IST
Family Man-2: ಗೂಗಲ್​​ನ ಅಲ್ಲ ಏನೇ ಬೇಕಿದ್ದರೂ ಚೆಲ್ಲಂ ಸರ್​​​ನ ಕೇಳಿ: ಮಿಮ್ಸ್, ಟ್ರೋಲ್​​​ಗಳ ನಗೆ ಬಾಂಬ್!
ಮಿಮ್ಸ್​
  • Share this:
ಜೂನ್​​ 4ರಂದು ಅಮೆಜಾನ್​​ ಪ್ರೈಂನಲ್ಲಿ ಬಿಡುಗಡೆಯಾಗಿರುವ ಫ್ಯಾಮಿಲಿ ಮ್ಯಾನ್​ ಸೀಸನ್​ ಟು ಎಲ್ಲರ ಗಮನ ಸೆಳೆದಿದೆ. ಮೊದಲ ಸೀರಿಸ್​​ಗಿಂತ 2ನೇ ಸೀರಿಸ್​ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಕಳೆದ ಬಾರಿ ಭಯೋತ್ಪಾನೆ ವಿಷಯವನ್ನು ಒಳಗೊಂಡಿದ್ದರೆ, ಈ ಬಾರಿ ಶ್ರೀಲಂಕಾ ತಮಿಳರ ಹೋರಾಟದ ಹಿನ್ನೆಲೆಯಲ್ಲಿ ಕಥೆ ಸಾಗಿದೆ.  ನಟಿ ಸಮಂತಾ ಸೇರಿದಂತೆ ತಮಿಳಿನ ಹಲವು ನಟನಟಿಯರು ನಟಿಸಿದ್ದು, ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿತ್ತು. ಶ್ರೀಲಂಕಾ ತಮಿಳರನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂದು ಸೀರಿಸ್​ ಬಿಡುಗಡೆಗೂ ಮುನ್ನ ವಿವಾದ ಸಹ ಭುಗಿಲೆದ್ದಿತ್ತು. ಸದ್ಯ 3 ದಿನಗಳ ಹಿಂದೆ ಬಿಡುಗಡೆಯಾಗಿರುವ ಫ್ಯಾಮಿಲಿ ಮ್ಯಾನ್​​​ ಟಾಕ್​ ಆಫ್​ ದಿ ಟೌನ್​ ಆಗಿದೆ.

ಸೀರಿಸ್​ನಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು, ಅವುಗಳ ಡೈಲಾಗ್​ಗಳು ಮಿಮ್ಸ್​, ಟ್ರೋಲ್​ಗಳಿಗೆ ಭರ್ಜರಿ ಆಹಾರವಾಗಿದೆ. ತರಹೇವಾರಿ ಟ್ರೋಲ್​ಗಳು ಬಿದ್ದು ಬಿದ್ದು ನಗುವಂತೆ ಮಾಡುತ್ತಿದೆ. ಅದರಲ್ಲಿ ಫೇಮಸ್​ ಆಗ್ತಿರುವುದು ಚೆಲ್ಲಂ ಸರ್​​. ಫ್ಯಾಮಿಲಿ ಮ್ಯಾನ್​​-2ನಲ್ಲಿ ಶ್ರೀಕಾಂತ್​ ತಿವಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮನೋಜ್​ ವಾಜಪೇಯಿ ಯಾವುದೇ ಮಾಹಿತಿ ಬೇಕಿದ್ದರೂ ಚೆಲ್ಲಂ ಸರ್​​ ಎಂಬುವರಿಗೆ ಕರೆ ಮಾಡುತ್ತಾರೆ. ಚೆಲ್ಲಂ ಸರ್​ ಆಗಿ ಅಭಿನಯಿಸಿರುವ ಉದಯ್​​ ಮಹೇಶ್​ ಅವರು ಸೀರಿಸ್​ ಉದ್ದಕ್ಕೂ  ಬೇಕಿರುವ ಮಾಹಿತಿಯನ್ನು ಬೇಕಾದ ಸಮಯದಲ್ಲಿ ಕೊಡುತ್ತಿರುತ್ತಾರೆ.
ನಿವೃತ್ತ NIA ಅಧಿಕಾರಿಯಾಗಿ ಕಾಣಿಸಿಕೊಳ್ಳುವ ಚೆಲ್ಲಂ ಅಗೋಚರವಾಗಿ, ನಿಗೂಢವಾಗಿ ಕಾಣಿಸಿಕೊಂಡು ಬೇಕಿರುವ ಮಾಹಿತಿಯನ್ನು ನೀಡುತ್ತಾರೆ. ಇವರ ಸಹಾಯದಿಂದಲೇ ಶ್ರೀಕಾಂತ್​ ತಿವಾರಿ ಅವರು ಪ್ರಧಾನಿ ಮೇಲೆ ನಡೆಸಲು ಯೋಜಿಸಿರುವ ಆತ್ಮಾಹುತಿ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅದ್ಭುತವಾಗಿ ಮೂಡಿ ಬಂದಿರುವ ಚೆಲ್ಲಂ ಸರ್​ ಪಾತ್ರ ನೆಟ್ಟಿಗರ ಫೇವರೆಟ್​ ಆಗಿದೆ.

ಫ್ಯಾಮಿಲಿ ಮ್ಯಾನ್​​-2 ಗುಂಗಲ್ಲೇ ಇರುವ ನೆಟ್ಟಿಗರು ಚೆಲ್ಲಂ ಸರ್​ ಕುರಿತು ಸಾಕಷ್ಟು ಮಿಮ್ಸ್​, ಟ್ರೋಲ್​ಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಮಾಹಿತಿ ನೀಡುವುದರಲ್ಲಿ ಚೆಲ್ಲಂ ಸರ್​ ಗೂಗಲ್​​ ಅನ್ನೂ ಹಿಂದಿಕ್ಕುತ್ತಾರೆ. ಚೆಲ್ಲಂ ಸರ್​ ಗೂಗಲ್​ ಪ್ರೋ ಅಂತೇಲ್ಲ ನಗೆ ಚಟಾಕಿ ಹರಿಸಿದ್ದಾರೆ. ಐಟಿ ರಿಟರ್ನ್ಸ್​​​ ಮಾಡೋದು ಗೊತ್ತಾಗ್ತಿಲ್ಲವೇ ಚೆಲ್ಲಂ ಸರ್​ಗೆ ಕರೆ ಮಾಡಿ ಎನ್ನುವುದರಿಂದ ಹಿಡಿದು ಮಕ್ಕಳು ಇಂಫರ್ಮೇಷನ್​​ಗಾಗಿ ಗೂಗಲ್​ ಮಾಡ್ತಾರೆ ಲೆಜೆಂಟ್ಸ್​​​ ಚೆಲ್ಲಂ ಸರ್​ನ ಕಾಂಟ್ಯಾಕ್ಟ್​ ಮಾಡ್ತಾರೆ ಎಂಬವಲ್ಲಿಯವರೆಗೂ ಟ್ರೋಲ್​​ಗಳು, ಮಿಮ್ಸ್​ ಹರಿದಾಡುತ್ತಿವೆ.ಶೋ ನೋಡಿದವರೆಲ್ಲಾ ಚೆಲ್ಲಂ ಸರ್​​ ಮಿಮ್ಸ್, ಟ್ರೋಲ್​ಗಳಿಗೆ ಫಿದಾ ಆಗಿದ್ದಾರೆ.
Published by: Kavya V
First published: June 7, 2021, 6:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories