• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Fake Websites: ಡಿಮಾರ್ಟ್, ಬಿಗ್ ಬಾಸ್ಕೆಟ್, ಬಿಗ್ ಬಜಾರ್‌ನ ಫೇಕ್​ ವೆಬ್‌ಸೈಟ್‌! ವಂಚಿಸೋ ಅಕೌಂಟ್​​ಗಳ ಬಗ್ಗೆ ತಿಳಿದುಕೊಳ್ಳೋದು ಹೇಗೆ?

Fake Websites: ಡಿಮಾರ್ಟ್, ಬಿಗ್ ಬಾಸ್ಕೆಟ್, ಬಿಗ್ ಬಜಾರ್‌ನ ಫೇಕ್​ ವೆಬ್‌ಸೈಟ್‌! ವಂಚಿಸೋ ಅಕೌಂಟ್​​ಗಳ ಬಗ್ಗೆ ತಿಳಿದುಕೊಳ್ಳೋದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಡಿಮಾರ್ಟ್, ಬಿಗ್ ಬಾಸ್ಕೆಟ್, ಬಿಗ್ ಬಜಾರ್‌ನ ನಕಲಿ ವೆಬ್​​ಸೈಟ್​ಗಳನ್ನು ಹ್ಯಾಕರ್ಸ್​ಗಳು ಕ್ರಿಯೇಟ್​ ಮಾಡಿ ಬಳಕೆದಾರರನ್ನು ವಂಚನೆ ಮಾಡುತ್ತಿದ್ದಾರೆ. ಹಾಗಿದ್ರೆ ಈ ಫೇಕ್​ ವೆಬ್​ಸೈಟ್​ಗಳನ್ನು ಪತ್ತೆ ಹಚ್ಚೋದು ಹೇಗೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

  • Share this:

ಚಿಲ್ಲರೆ ವ್ಯಾಪಾರಿಗಳ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿದ್ದ ಗ್ಯಾಂಗ್ ಒಂದನ್ನು ನೋಯ್ಡಾ ಪೊಲೀಸರು ಕಂಡುಹಿಡಿದಿದ್ದಾರೆ. ಡಿ-ಮಾರ್ಟ್, ಬಿಗ್ ಬಾಸ್ಕೆಟ್ ಮತ್ತು ಬಿಗ್ ಬಜಾರ್‌ನ (Big Bazar) ನಕಲಿ ವೆಬ್‌ಸೈಟ್‌ಗಳನ್ನು (Fake Website) ಸೃಷ್ಟಿಸಿದ್ದ ಈ ಗ್ಯಾಂಗ್ ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿತ್ತು. ಅಂದಹಾಗೆ ಈ ಸೈಬರ್ ಕ್ರಿಮಿನಲ್‌ಗಳು ನಕಲಿ ವೆಬ್‌ಸೈಟ್‌ಗಳಲ್ಲಿ ಭಾರೀ ರಿಯಾಯಿತಿಗಳನ್ನು ನೀಡಿದ್ದರು. ಖರೀದಿದಾರರನ್ನು ಆಕರ್ಷಿಸುವ ಸಲುವಾಗಿ ರಿಯಾಯಿತಿ ಅಥವಾ ಅಗ್ಗದ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ನಂತರ ಪೇಮೆಂಟ್ ಮಾಡುವ ಸಮಯದಲ್ಲಿ ಅವರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ (Credit Card) ಬಗ್ಗೆ ಮಾಹಿತಿಯನ್ನು ಪಡೆದು ಆ ವಿವರಗಳನ್ನು ಅವರ ಬ್ಯಾಂಕ್‌ ಖಾತೆಗಳಿಂದ ಹಣವನ್ನು ವಿತ್‌ ಡ್ರಾ (With Draw) ಮಾಡಿಕೊಳ್ಳಲು ಬಳಸುತ್ತಿದ್ದರು ಎಂಬುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇಂದಿನ ಕಾಲದಲ್ಲಿ ಇಂಥ ನಕಲಿ ವೆಬ್‌ಸೈಟ್‌ಗಳಲ್ಲಿ ಬಹಳಷ್ಟು ಜನರು ಮೋಸ ಹೋಗುತ್ತಾರೆ. ತಂತ್ರಜ್ಞಾನ ಹೆಚ್ಚಾಗಿ ಬಳಸಲು ಗೊತ್ತಿಲ್ಲದವರಂತು ಇಂತಹ ಮೋಸಕ್ಕೆ ಸುಲಭವಾಗಿ ಮರಳಾಗುತ್ತಾರೆ. ಹಾಗಿದ್ದರೆ ಇಂತಹ ನಕಲಿ ವೆಬ್‌ಸೈಟ್‌ಗಳನ್ನು ಪತ್ತೆ ಹಚ್ಚುವುದು ಹೇಗೆ ? ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


ನಕಲಿ ವೆಬ್‌ಸೈಟ್‌ಗಳನ್ನು ಮತ್ತೆ ಹಚ್ಚುವುದು ಹೇಗೆ ?


1. ಅಡ್ರೆಸ್‌ ಬಾರ್‌ ಚೆಕ್‌ ಮಾಡಿಕೊಳ್ಳಿ:


ಮೊದಲಿಗೆ ನೀವು ವೆಬ್‌ಸೈಟ್‌ನಲ್ಲಿ ಹುಡುಕಬೇಕಾದ ಮೊದಲ ವಿಷಯವೆಂದರೆ ವಿಳಾಸದ ಆರಂಭದಲ್ಲಿ https://. ಇದೆಯೇ ಎಂಬುದು. https:// ನಲ್ಲಿನ 'S' ಎಂದರೆ ಸೆಕ್ಯೂರ್ ಮತ್ತು ಡೇಟಾವನ್ನು ವರ್ಗಾಯಿಸಲು ವೆಬ್‌ಸೈಟ್ ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ ಎಂದು ಸೂಚಿಸುತ್ತದೆ.


ಇದನ್ನೂ ಓದಿ: ಪ್ರೀತಿಯ ಹೆಸರಲ್ಲಿ ಸೈಬರ್​ ವಂಚನೆ, ಈ ಆ್ಯಪ್​ನಿಂದ ಕಳೆದುಕೊಂಡ ಹಣವೆಷ್ಟು ಗೊತ್ತಾ?


ಆದಾಗ್ಯೂ, http:// ಅನ್ನು ಬಳಸುವ ಮತ್ತು ಯಾವುದೇ 'S' ಅನ್ನು ಹೊಂದಿರದ ವೆಬ್‌ಸೈಟ್ ಅದು ಯಾವಾಗಲೂ ಸ್ಕ್ಯಾಮ್ ವೆಬ್‌ಸೈಟ್ ಎಂದು ಅರ್ಥವಲ್ಲ. ಆದರೆ http:// ನಿಂದ ಪ್ರಾರಂಭವಾಗುವ ಸೈಟ್‌ನಲ್ಲಿ ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು.


2. ಪ್ಯಾಡ್‌ಲಾಕ್ ಖಚಿತಪಡಿಸಿಕೊಳ್ಳಿ:


ವೆಬ್‌ಸೈಟ್ ಪ್ಯಾಡ್‌ಲಾಕ್ ಅನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ವೆಬ್‌ಸೈಟ್‌ನಲ್ಲಿ ಪ್ಯಾಡ್‌ಲಾಕ್ ಎಂದರೆ ಬಳಕೆದಾರರ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ TLS/SSL ಪ್ರಮಾಣಪತ್ರದಿಂದ ಸೈಟ್ ಅನ್ನು ಸುರಕ್ಷಿತಗೊಳಿಸಲಾಗಿದೆ ಎಂದರ್ಥ.


ಬಳಕೆದಾರರು ವಿಳಾಸ ಪಟ್ಟಿಯ ಮೇಲಿನ ಎಡಭಾಗದಲ್ಲಿ ಲಾಕ್ ಅನ್ನು ನೋಡಬಹುದು. ಮೂರು ವಿಧದ TLS ಪ್ರಮಾಣಪತ್ರಗಳಿವೆ. ಅವುಗಳೆಂದರೆ ಡೊಮೇನ್ ಮೌಲ್ಯೀಕರಣ, ಸಂಸ್ಥೆಯ ಮೌಲ್ಯೀಕರಣ ಮತ್ತು ವಿಸ್ತೃತ ಮೌಲ್ಯೀಕರಣ. ಇವೆಲ್ಲವೂ ಲಾಕ್ ಅನ್ನು ಪ್ರದರ್ಶಿಸುತ್ತದೆ.


3. ದೊಡ್ಡ ರಿಯಾಯಿತಿಗಳು:


ಸಾಮಾನ್ಯವಾಗಿ ಸ್ಕ್ಯಾಮರ್‌ಗಳು ದೊಡ್ಡ ಮಟ್ಟದಲ್ಲಿ ರಿಯಾಯಿತಿಗಳನ್ನು ನೀಡುವ ನಕಲಿ ಆನ್‌ಲೈನ್ ಸ್ಟೋರ್‌ಗಳನ್ನು ರಚಿಸುತ್ತಾರೆ.


ಸಾಂಕೇತಿಕ ಚಿತ್ರ


ಈ ಹಲವು ಡೀಲ್‌ಗಳನ್ನು ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಪ್ರಚಾರ ಮಾಡಲಾಗುತ್ತದೆ. ಈ ಸೈಟ್‌ಗಳು ನಿಮ್ಮ ಪಾವತಿ ಮಾಹಿತಿಯನ್ನು ಕದಿಯುತ್ತವೆ ಅಥವಾ ಉತ್ಪನ್ನಗಳನ್ನು ಖರೀದಿಸುವಂತೆ ಬಳಕೆದಾರರನ್ನು ಮೋಸಗೊಳಿಸುತ್ತವೆ.


4.URL ಅನ್ನು ತಪ್ಪಾಗಿ ಬರೆಯಲಾಗಿದೆಯೇ ಎಂದು ಪರಿಶೀಲಿಸಿ:


ನಕಲಿ ಸೈಟ್‌ನ ದೊಡ್ಡ ಸಂಕೇತವೆಂದರೆ ತಪ್ಪಾಗಿ ಬರೆಯಲಾದ URLಗಳು. ಉದಾಹರಣೆಗೆ amaz0n.com, T@nishq ಹೀಗೆ ವಂಚಕರು URL ಹೆಸರನ್ನು ಸ್ವಲ್ಪಮಟ್ಟಿಗೆ ಬದಲಾಯಿಸಬಹುದು.


ಇದರಿಂದ ಗ್ರಾಹಕರು ಸುಲಭವಾಗಿ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಮತ್ತೊಂದು ಸಾಮಾನ್ಯ ತಂತ್ರವೆಂದರೆ ಡೊಮೇನ್ ವಿಸ್ತರಣೆಯನ್ನು ಬದಲಾಯಿಸುವುದು, ಉದಾಹರಣೆಗೆ amazon.com ಬದಲಿಗೆ amazon.org. ಎಂದು ಬರೆದಿರುವುದು.


5. ಫೋನ್ ಸಂಖ್ಯೆ ಮತ್ತು ವಿಳಾಸದಂತಹ ಸಂಪರ್ಕ ಮಾಹಿತಿ:


ವೆಬ್‌ಸೈಟ್‌ನಲ್ಲಿ ಸಂಪರ್ಕ ಮಾಹಿತಿ ಇದೆಯಾ ಎಂದು ಪರಿಶೀಲಿಸಿ. ಇದು ಫೋನ್, ಇಮೇಲ್, ಲೈವ್ ಚಾಟ್ ಮತ್ತು ವಿಳಾಸವನ್ನು ಒಳಗೊಂಡಿರುತ್ತದೆ.


ನಿಮಗೆ ಯಾವುದೇ ಸಂದೇಹ ಅಥವಾ ಅನುಮಾನವಿದ್ದರೆ ಇವುಗಳನ್ನು ಪ್ರಯತ್ನಿಸಿ. ಯಾರು ಕಾಲ್‌ಗೆ ಉತ್ತರಿಸುತ್ತಾರೆ? ವ್ಯಕ್ತಿಯು ಸತ್ಯವನ್ನು ಹೇಳುತ್ತಾನೆಂದು ಅನಿಸುತ್ತದೆಯಾ? ಎಂದು ಪರಿಶೀಲಿಸಿ.
6. ಆನ್‌ಲೈನ್ ರಿವೀವ್​ಗಳು:


ಗೂಗಲ್‌ನಲ್ಲಿ ವೆಬ್‌ಸೈಟ್ ಕುರಿತು ಆನ್‌ಲೈನ್ ವಿಮರ್ಶೆಗಳನ್ನು ನೋಡಿ. ಆನ್‌ಲೈನ್ ಪ್ರತಿಕ್ರಿಯೆಯನ್ನು ಹುಡುಕಲು ನೀವು ವೆಬ್‌ಸೈಟ್‌ ಹೆಸರನ್ನು ಹಾಕಿ ರಿವ್ಯೂ ಎಂದು ಟೈಪ್‌ ಮಾಡಿ ಹುಡುಕಬಹುದಾಗಿದೆ. ಒಟ್ಟಾರೆ, ತಂತ್ರಜ್ಞಾನದ ವಿಷಯದಲ್ಲಿ ಅದರಲ್ಲೂ ಆನ್‌ಲೈನ್‌ ವ್ಯವಹಾರದಲ್ಲಿ ಯಾವಾಗಲೂ ಹೆಚ್ಚು ಜಾಗೃತವಾಗಿರಿ.

top videos
    First published: