HOME » NEWS » Tech » FAKE NEWS HOW TO CONTROL FAKE NEWS IN SOCIAL MEDIA WHAT IS THE LAW CHECK HERE STG SCT

Fake News: ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ನ್ಯೂಸ್‌ ತಡೆಯುವುದು ಹೇಗೆ?

ಸಾರ್ವಜನಿಕರಿಗೆ ಭಯವನ್ನುಂಟುಮಾಡುವ ಯಾವುದೇ ಹೇಳಿಕೆ, ವದಂತಿ ಅಥವಾ ವರದಿಯನ್ನು ಮಾಡುವ, ಪ್ರಕಟಿಸುವ ಅಥವಾ ಪ್ರಸಾರ ಮಾಡಿದರೆ ಐಪಿಸಿಯ ಸೆಕ್ಷನ್ 505 (1) ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ.

news18india
Updated:March 9, 2021, 1:42 PM IST
Fake News: ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ನ್ಯೂಸ್‌ ತಡೆಯುವುದು ಹೇಗೆ?
ಸೋಷಿಯಲ್ ಮೀಡಿಯಾ
  • Share this:
ನಕಲಿ ಸುದ್ದಿ ಎಂದರೇನು?
"ನಕಲಿ ಸುದ್ದಿ" ಅನ್ನು ಸುಳ್ಳು, ಕಟ್ಟುಕಥೆ, ಪರಿಶೀಲಿಸಬಹುದಾದ ಸಂಗತಿಗಳು, ಮೂಲಗಳು ಅಥವಾ ಉಲ್ಲೇಖಗಳಿಲ್ಲದ ಸುದ್ದಿಗಳೆಂದು ಕರೆಯಲಾಗುತ್ತದೆ.

ನಕಲಿ ಸುದ್ದಿ ಅಥವಾ ಫೇಕ್‌ ನ್ಯೂಸ್‌ಗಳ ಪ್ರಕಾರಗಳು?
- ವಿಡಂಬನೆ ಅಥವಾ ಪರೋಡಿ - ಇತರರಿಗೆ ಹಾನಿ ಮಾಡುವ ಉದ್ದೇಶವಿಲ್ಲ,
- ದಾರಿತಪ್ಪಿಸುವ ವಿಷಯ
- ಇಂಪೋಸ್ಟರ್ ಕಂಟೆಂಟ್‌
- ಫ್ಯಾಬ್ರಿಕೇಟೆಡ್ ಕಂಟೆಂಟ್‌- ತಪ್ಪು ಕನೆಕ್ಷನ್‌
- ತಪ್ಪು ಅಥವಾ ಮ್ಯಾನಿಪುಲೇಟೆಡ್‌ ಕಂಟೆಂಟ್‌

ನಕಲಿ ಸುದ್ದಿಗಳ ಪರಿಣಾಮವನ್ನು ನಿಯಂತ್ರಿಸುವ ಕಾನೂನುಗಳು:
- ಮಾಹಿತಿ ತಂತ್ರಜ್ಞಾನ ಕಾಯ್ದೆ, 2008ರ ಸೆಕ್ಷನ್ 66 ಡಿ
- ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 54
-1860 ರ ಭಾರತೀಯ ದಂಡ ಸಂಹಿತೆಯ 153, 499 ಮತ್ತು 500, 505 (1) ಸೆಕ್ಷನ್‌ಗಳು

1. ಅಪರಾಧವು ಎಲೆಕ್ಟ್ರಾನಿಕ್ ಸಂವಹನಕ್ಕೆ ಸಂಬಂಧಪಟ್ಟಿದ್ದರೆ..
ಈ ಸನ್ನಿವೇಶದಲ್ಲಿ, ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಸಂಪನ್ಮೂಲಗಳ ಮೂಲಕ ವ್ಯಕ್ತಿಗತಗೊಳಿಸಿ ಮೋಸ ಮಾಡುವವರಿಗೆ ಐಟಿ ಕಾಯ್ದೆಯ ಸೆಕ್ಷನ್ 66 ಡಿ ಅಡಿಯಲ್ಲಿ ಶಿಕ್ಷೆಯಾಗುತ್ತದೆ.

2. ವಿಪತ್ತಿಗೆ ಸಂಬಂಧಿಸಿದ ನಕಲಿ ಸುದ್ದಿ
ವಿಪತ್ತು ಅಥವಾ ಅದರ ತೀವ್ರತೆ ಅಥವಾ ಪರಿಮಾಣದ ಬಗ್ಗೆ ಸುಳ್ಳು ಎಚ್ಚರಿಕೆ ನೀಡುವವರು, ಭಯಕ್ಕೆ ಕಾರಣವಾಗುವವರಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 54 ರ ಅಡಿಯಲ್ಲಿ ಶಿಕ್ಷೆಯಾಗುತ್ತದೆ.

3. ನಕಲಿ ಸುದ್ದಿ ಸಾರ್ವಜನಿಕವಾಗಿ ತಪ್ಪು ಎಚ್ಚರಿಕೆ ಸೃಷ್ಟಿಸಿದರೆ..
ಸಾರ್ವಜನಿಕರಿಗೆ ಭಯವನ್ನುಂಟುಮಾಡುವ ಯಾವುದೇ ಹೇಳಿಕೆ, ವದಂತಿ ಅಥವಾ ವರದಿಯನ್ನು ಮಾಡುವ, ಪ್ರಕಟಿಸುವ ಅಥವಾ ಪ್ರಸಾರ ಮಾಡಿದರೆ ಐಪಿಸಿಯ ಸೆಕ್ಷನ್ 505 (1) ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ.

4. ಗಲಭೆಗಳನ್ನು ಸೃಷ್ಟಿಸುವ ನಕಲಿ ಸುದ್ದಿ
ಕಾನೂನುಬಾಹಿರವಾಗಿ ಏನನ್ನಾದರೂ ಮಾಡುವ ಮೂಲಕ ದುರುದ್ದೇಶಪೂರಿತವಾಗಿ ಅಥವಾ ಅಪೇಕ್ಷೆಯಿಂದ, ಯಾವುದೇ ವ್ಯಕ್ತಿಗೆ ಪ್ರಚೋದನೆಯನ್ನು ನೀಡಿದರೆ ಅಥವಾ ಅಂತಹ ಪ್ರಚೋದನೆಯು ಗಲಭೆಗೆ ಕಾರಣವಾದರೆ ಐಪಿಸಿಯ ಸೆಕ್ಷನ್ 153 ರ ಅಡಿಯಲ್ಲಿ ನಕಲಿ ಸುದ್ದಿ ಸೃಷ್ಟಿಸಿದವರೇ ಅಪರಾಧಕ್ಕೆ ಹೊಣೆಗಾರನಾಗಿರುತ್ತಾರೆ.

5. ಮಾನಹಾನಿಗೆ ಕಾರಣವಾಗುವ ಮಾಹಿತಿ
ಮಾತನಾಡುವ ಅಥವಾ ಓದಲು ಉದ್ದೇಶಿಸಿರುವ, ಅಥವಾ ಚಿಹ್ನೆಗಳಿಂದ ಅಥವಾ ಕಣ್ಣಿಗೆ ಗೋಚರವಾಗುವ ಪ್ರಾತಿನಿಧ್ಯದ ಮೂಲಕ ಯಾರಾದರೂ ಹಾನಿ ಮಾಡಲು ಉದ್ದೇಶಿಸಿರುವ ಯಾವುದೇ ವ್ಯಕ್ತಿಗೆ ಸಂಬಂಧಿಸಿದಂತೆ ಯಾವುದೇ ಆಪಾದನೆ ಮಾಡಿದರೆ ಅಥವಾ ಪ್ರಕಟಿಸಿದರೆ, ಅಥವಾ ಅಂತಹ ಆರೋಪವು ಹಾನಿಯಾಗುತ್ತದೆ ಎಂದು ತಿಳಿದುಕೊಳ್ಳಲು ಅಥವಾ ನಂಬಲು ಕಾರಣವಿದ್ದರೆ, ಅಂತಹ ವ್ಯಕ್ತಿಯನ್ನು ಮಾನಹಾನಿಗೆ ಗುರಿಯಾಗಿಸಲಾಗುತ್ತದೆ. ಅಲ್ಲದೆ, ಇದು ಐಪಿಸಿಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ.

(ಲೇಖನ: ಪ್ರಾಚಿ ಮಿಶ್ರಾ)
Published by: Sushma Chakre
First published: March 9, 2021, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories