ಟೆಕ್ನಾಲಜಿ ಕಂಪೆನಿಗಳಲ್ಲಿ (Technology) ಭಾರೀ ಮುಂಚೂಣಿಯಲ್ಲಿರುವ ಕಂಪೆನಿಯೆಂದರೆ ಅದು ಮೊಬೈಲ್ ಕಂಪೆನಿ (Mobile Company). ಆದರೆ ಇತ್ತೀಚೆಗೆ ಹೊಸ ಹೊಸ ಮಾದರಿಗಳಲ್ಲಿ ಮೊಬೈಲ್ಗಳು ಬಿಡುಗಎಯಾಗುತ್ತಿದೆ. ಟೆಕ್ನಾಲಜಿ ಅಭಿವೃದ್ಧಿಯಾದಂತೆ ಕೆಲ ವಂಚನೆಗಳು ಸಹ ಹೆಚ್ಚಾಗುತ್ತಿದೆ. ಒಂದು ಕಡೆ ಹ್ಯಾಕರ್ಸ್ (Hackers)ಗಳು ಹೆಚ್ಚುತ್ತಿದ್ದರೆ, ಇದೀಗ ಕಂಪೆನಿಯ ಹೆಸರಲ್ಲಿ ಫೇಕ್ ಸ್ಮಾರ್ಟ್ಫೋನ್ (Fake Smartphones)ಗಳು ಮಾರಾಟವಾಗುತ್ತಿದೆ. ಈ ವಂಚನೆಗೆ ಈಗಾಗಲೇ ಹಲವಾರು ಜನರು ಬಲಿಯಾಗಿದ್ದು, ಈ ಬಗ್ಗೆ ಕಂಪೆನಿಗಳು ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡುತ್ತಿದೆ. ಇನ್ನು ಈ ವಂಚನೆ ಭಾರತದಲ್ಲೇ ಹೆಚ್ಚು ನಡೆಯುತ್ತಿದೆ ಎಂಬುದು ಆಘಾತಕಾರಿ ವಿಷಯವಾಗಿದೆ.
ಹೌದು, ಇತ್ತೀಚೆಗೆ ಮೊಬೈಲ್ ಮಾರುಕಟ್ಟೆಗೆ ನಕಲಿ ಸ್ಮಾರ್ಟ್ಫೋನ್ಗಳು ಸಹ ಎಂಟ್ರಿ ನೀಡಿದೆ. ಆ್ಯಪಲ್, ಸ್ಯಾಮ್ಸಂಗ್ನಂತಹ ಕಂಪೆನಿಗಳ ಹೆಸರಲ್ಲಿ ವಂಚಕರು ನಕಲೆ ಫೋನ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಾಗಿದ್ರೆ ನಿಮ್ಮ ಸ್ಮಾರ್ಟ್ಫೋನ್ ನಕಲಿಯೋ, ಸತ್ಯವೋ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
60 ಕ್ಕೂ ಹೆಚ್ಚು ಫೇಕ್ ಫೋನ್ಗಳು ವಶ
ಇನ್ನು ಇತ್ತೀಚೆಗಷ್ಟೇ ನೊಯಿಡಾದಲ್ಲಿ ಐಫೋನ್ 13 ಹೆಸರಲ್ಲಿ ಫೇಕ್ ಸ್ಮಾರ್ಟ್ಫೋನ್ ಅನ್ನು ಮಾರಾಟಮಾಡುತ್ತಿದ್ದ ಮೂರು ಜನರ ತಂಡವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 60 ಕ್ಕೂ ಹೆಚ್ಚು ನಕಲಿ ಐಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಇವರು ದೆಹಲಿಯಲ್ಲಿ ಚೀನಾದ ಶಾಪಿಂಗ್ ವೆಬ್ಸೈಟ್ನಿಂದ ಕೇವಲ 12,000 ರೂಪಾಯಿಗೆ ಫೋನನ್ನು ಖರೀದಿಸಿ, ಜೊತೆಗೆ ಐಫೋನ್ ರೀತಿಯ ಬಾಕ್ಸ್ ಅನ್ನು ಆರ್ಡರ್ ಮಾಡಿ ಅದಕ್ಕೆ ಆ್ಯಪಲ್ ಸ್ಟಿಕ್ಕರ್ ಅಂಟಿಸಿ ಸೇಲ್ ಮಾಡಲಾರಂಭಿಸಿದ್ದಾರೆ. ಈ ರೀತಿಯ ಇನ್ನೂ ಹಲವಾರು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿದ್ದು ಎಲ್ಲವನ್ನು ಪೊಲೀಸರು ಪತ್ತೆಹಚ್ಚಲು ಆರಂಭಿಸಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದೋ ಮುನ್ನ ಎಚ್ಚರ, ಈ ಆ್ಯಪ್ ಮೂಲಕ ಯಾರೂ ದೂರು ನೀಡ್ಬಹುದು!
ನಕಲಿ ಫೋನ್ಗಳನ್ನು ಪತ್ತೆಹಚ್ಚುವುದು ಹೇಗೆ?
ಐಎಮ್ಇಐ ನಂಬರ್ ಚೆಕ್ ಮಾಡಿ: ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್ಫೋನ್ಗಳಲ್ಲಿ ಈಎಮ್ಇಐ ನಂಬರ್ ಇದ್ದೇ ಇರುತ್ತದೆ. ಇನ್ನು ನಕಲೆ ಸ್ಮಾರ್ಟ್ಫೋನ್ಗಳಲ್ಲಿ ಈ ನಂಬರ್ಗಳಿರುವುದಿಲ್ಲ. ಇದ್ರೂ ಅದರ ಒರಿಜಿನಲ್ ಕಂಪೆನಿಯನ್ನು ತಿಳಿಯಬಹುದು. ಆದ್ದರಿಂದ ನಿಮ್ಮಲ್ಲಿರುವ ಸ್ಮಾರ್ಟ್ಫೋನ್ ನಕಲಿಯೋ, ಸತ್ಯವೋ ಎಂಬುದನ್ನು ತಿಳಿಯಬಹುದಾಗಿದೆ. ಈ ಈಎಮ್ಇಐ ನಂಬರ್ ಮೊಬೈಲ್ ಕಳುವಾದಾಗಲು ತುಂಬಾನೇ ಸಹಕಾರಿಯಾಗುತ್ತದೆ. ಇನ್ನು ಈ ಐಎಮ್ಇಐ ನಂಬರ್ ಅನ್ನುಮೊಬೈಲ್ ಬಾಕ್ಸ್ ನಲ್ಲಿ ಸಹ ನೀಡಿರುತ್ತಾರೆ ಅಥವಾ ಮೊಬೈಲ್ ಸೆಟ್ಟಿಂಗ್ಗಳಿಗೂ ಹೋಗಿ ತಿಳಿದುಕೊಳ್ಳಬಹುದಾಗಿದೆ.
IMEI ನಂಬರ್ ಎಲ್ಲಿರುತ್ತೆ?
ಇನ್ನು ನಿಮ್ಮ ಐಎಮ್ಇಐ ನಂಬರ್ ಅನ್ನು ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ಅಬೌಟ್ ಮೇಲೆ ಕ್ಲಿಕ್ ಮಾಡಿದ್ರೆ ಸಾಕು. ಅಲ್ಲಿ ನಿಮ್ಮ ಸ್ಮಾರ್ಟ್ಫೋನ್ನ ಐಎಮ್ಇಐ ನಂಬರ್ ಅನ್ನು ನೋಡಬಹುದು. ಒಂದು ವೇಳೆ ಆ ನಂಬರ್ ಇಲ್ಲದಿದ್ರೆ ನಿಮ್ಮ ಸ್ಮಾರ್ಟ್ಫೋನ್ ನಕಲಿ ಎಂದರ್ಥ.
ಮೊಬೈಲ್ ಸ್ಟೋರ್ಗೆ ಭೇಟಿ ನೀಡಿ
ಇನ್ನು ನಿಮ್ಮ ಮೊಬೈಲ್ ನಕಲಿ ಎಂಬ ಸಂಶಯ ನಿಮಗಾದ್ರೆ ತಕ್ಷಣ ಪಕ್ಕದ ಮೊಬೈಲ್ ಶಾಪ್ಗೆ ಹೋಗಿ ಅಲ್ಲಿ ಚೆಕ್ ಮಾಡಿಕೊಳ್ಳಿ. ಅವರು ನಿಮ್ಮ ಮೊಬೈಲ್ ನೋಡಿ ನಕಲಿಯೋ, ಸತ್ಯವೋ ಎಂದು ಹೇಳುತ್ತಾರೆ.
ಎಚ್ಚರಿಕೆ
ಯಾರೇ ಆಗಲಿ ಹೊಸ ಸ್ಮಾರ್ಟ್ಫೋನ್ ಖರೀದಿಸುವಾಗ ಸರಿಯಾಗಿ ಚೆಕ್ ಮಾಡಿಕೊಂಡು ಖರೀದಿಸ್ಬೇಕು. ಕೆಲವೊಮ್ಮೆ ದುಬಾರಿ ಬೆಲೆಯ ಸ್ಮಾರ್ಟ್ಫೋನ್ಗಳು ಕಡಿಮೆ ಬೆಲೆಗೆ ಸಿಗುತ್ತದೆ ಎಂದಾದರೆ ಅದನ್ನು ಸರಿಯಾಗಿ ಚೆಕ್ ಮಾಡಿಕೊಳ್ಬೇಕು. ಏಕೆಂದರೆ ಅದು ನಕಲೆ ಫೋನ್ಗಳಾಗಿರಬಹುದು.
ಫೇಕ್ ಫೋನ್ಗಳ ಹೆಸರು ಈ ರೀತಿಯಲ್ಲಿರುತ್ತದೆ
iPhone = iPone or iPhoon, Xiaomi = Xaiomi or Xioami, Samsung = Sammsung or Samsang or Samsong, Huawei= Hauwei or Huawai,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ