ಆಧಾರ್ ಕಾರ್ಡ್ (Aadhar Card) ಎಂಬುದು ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಅಗತ್ಯ ಡಾಕ್ಯುಮೆಂಟ್ ಆಗಿಬಿಟ್ಟಿದೆ. ಅದ್ರಲ್ಲೂ ಇತ್ತೀಚೆಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ನೊಂದಿಗೆ ಲಿಂಕ್ (Aadhar Card- Pan Card Link) ಮಾಡುವ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಇನ್ನು ಈ ಆಧಾರ್ ಕಾರ್ಡ್ ಬ್ಯಾಂಕ್, ಪಾಸ್ಪೋರ್ಟ್, ಕಾಲೇಜ್, ಸಿಮ್ ಹೀಗೆ ಯಾವುದೇ ಕೆಲಸವಾಗ್ಬೇಕಾದ್ರು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಆದರೆ ಇತ್ತೀಚೆಗೆ ಆಧಾರ್ ಕಾರ್ಡ್ ಸಹ ದುರ್ಬಳಕೆಯಾಗುತ್ತಿದೆ ಎಂಬ ಸುದ್ದಿ ಬಹಳ ಕಡೆ ಹರಡಿದೆ. ನಕಲಿ ಆಧಾರ್ ಕಾರ್ಡ್ಗಳನ್ನು (Fake Aadhar Card) ಕ್ರಿಯೇಟ್ ಮಾಡಿಕೊಂಡು ಅಮಾಯಕರ ಹೆಸರಲ್ಲಿ ಬೇರೆ ಬೇರೆ ನಂಬರ್ಗಳಲ್ಲಿ ಸಿಮ್ (Sim) ಖರೀದಿಸಿ ವಂಚನೆ ಮಾಡುತ್ತಿದ್ದಾರೆ.
ಹೌದು, ಅಗತ್ಯ ಡಾಕ್ಯುಮೆಂಟ್ ಗುರುತಿಸಿಕೊಂಡಿರುವ ಆಧಾರ್ ಕಾರ್ಡ್ ಅನ್ನು ಕೆಲ ವಂಚಕರು ದುರ್ಬಳಕೆ ಮಾಡುತ್ತಿದ್ದಾರೆ. ಅಮಾಯಕರ ಫೇಕ್ ಆಧಾರ್ ಕಾರ್ಡ್ ಅನ್ನು ರಚಿಸಿ, ಸಿಮ್ಗಳನ್ನು ಖರೀದಿ ಮಾಡುತ್ತಿದ್ದಾರೆ. ಹಾಗಿದ್ರೆ ನಿಮ್ಮ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಖರೀದಿಸಿದ್ದಾರೆಯೇ? ಇಲ್ಲವೋ ಎಂದು ಈ ಲೇಖನದಲ್ಲಿದೆ ಓದಿ.
ವೆಬ್ ಸೈಟ್ ಮೂಲಕ ಚೆಕ್ ಮಾಡ್ಕೊಳ್ಳಿ
ನಿಮ್ಮ ಆಧಾರ್ ದುರ್ಬಳಕೆ ಆಗಿದ್ಯಾ ಎಂದು ತಿಳಿಯಲು ಅದಕ್ಕಮತನೇ ಒಮದು ವೆಬ್‌ಸೈಟ್ ಕ್ರಿಯೇಟ್ ಆಗಿದೆ. ಈ ಮೂಲಕ ಯಾರೇ ಆಗಲಿ ಆ ವೆಬ್‌ಸೈಟ್ ಓಪನ್ ಮಾಡಿಕೊಂಡು ತಮ್ಮ ಆಧಾರ್ ಕಾರ್ಡ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಅದಕ್ಕಾಗಿ ನೀವು ಗೂಗಲ್ ಕ್ರೋಮ್ಗೆ ಹೋಗಿ ಟಾಪ್-ಕಾಫ್ ಎಂಬ ವೆಬ್‌ಸೈಟ್ ಅನ್ನು ಓಪನ್ ಮಾಡ್ಬೇಕು.
ಇದನ್ನೂ ಓದಿ: ಭಾರತೀಯರು ಈ ಸ್ಮಾರ್ಟ್ಫೋನ್ಗಳನ್ನು ಹೆಚ್ಚು ಖರೀದಿಸ್ತಾರಂತೆ! ಬಹಿರಂಗವಾಯ್ತು ವರದಿ
ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಮೂಲಕ ಎಷ್ಟು ಸಿಮ್ ಆ್ಯಕ್ಟಿವ್ ಆಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ. ಆದರೆ ಸದ್ಯ ಈ ಸೌಲಭ್ಯ ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಮೆಘಾಲಯ, ನಾಗಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ತ್ರಿಪುರ ನಾಗರಿಕರಿಗೆ ಮಾತ್ರ ಲಭ್ಯವಿದೆ.
ಈ ವೆಬ್ಸೈಟ್ನಲ್ಲಿ ಚೆಕ್ ಮಾಡೋದು ಹೇಗೆ?
ಪ್ಯಾನ್ ಕಾರ್ಡ್ ಮಹತ್ವದ ದಾಖಲೆ
ಶಾಶ್ವತ ಖಾತೆ ಸಂಖ್ಯೆ ಅಥವಾ ಸರಳವಾಗಿ ಹೇಳಬೇಕೆಂದರೆ ಪ್ಯಾನ್ ಕಾರ್ಡ್ ಎಂಬುದು ಬಲು ಮಹತ್ವದ ದಾಖಲೆಯಾಗಿದೆ. ಪ್ರತಿಯೊಬ್ಬರ ಬ್ಯಾಂಕಿಂಗ್ ವ್ಯವಹಾರಗಳಿಗೆ ಹಾಗೂ ತೆರಿಗೆ ವಿಧಿ ವಿಧಾನಗಳಿಗೆ ಕಡ್ಡಾಯವಾಗಿ ಬಳಸಲಾಗುವ ದಾಖಲೆಯಾಗಿದೆ. ಹಾಗಾಗಿ ಈಗಾಗಲೇ ನೀಡಿರುವ ಗಡುವು ಮೀರುವುದರೊಳಗೆ ಲಿಂಕ್ ಮಾಡಿಕೊಂಡಲ್ಲಿ ನಿಮಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಅನಾನುಕೂಲತೆಗಳನ್ನು ತಪ್ಪಿಸಿಕೊಳ್ಳಬಹುದು.
ಈ ಹಿಂದೆ ಫೈನಾನ್ಶಿಯಲ್ ಎಕ್ಸ್ ಪ್ರೆಸ್ ಮಾಧ್ಯಮವು ಹಿರಿಯ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಇನ್ನು ಮುಂದೆ ಪ್ಯಾನ್-ಆಧಾರ್ ಜೋಡಣೆ ದಿನಾಂಕವನ್ನು ಇನ್ನೊಮ್ಮೆ ವಿಸ್ತರಿಸಲಾಗದು ಎಂದು ವರದಿ ಮಾಡಿತ್ತು. ಆದಾಗ್ಯೂ ಸಮಯ ಸಂದರ್ಭ ನೋಡಿಕೊಂಡು ಕಡೆ ಘಳಿಗೆಯಲ್ಲಿ ಆಗಬಹುದಾದ ಬದಲಾವಣೆಯನ್ನು ಹಿರಿಯ ಅಧಿಕಾರಿ ತಳ್ಳಿ ಹಾಕಿರಲಿಲ್ಲ ಎಂದು ವೆಬ್‌ಸೈಟ್ ವರದಿ ಮಾಡಿತ್ತು.
ಪಾನ್-ಆಧಾರ್ ಜೋಡಣೆ ಏಕೆ ಮಹತ್ವವಾಗಿದೆ?
ಈಗಾಗಲೇ ನಿಮಗೆ ಗೊತ್ತಿರುವಂತೆ ಇಂದಿನ ದಿನಮಾನಗಳಲ್ಲಿ ಯಾವುದೇ ರೀತಿಯ ಬ್ಯಾಂಕಿಂಗ್ ಹಣಕಾಸಿನ ವ್ಯವಹಾರ ಬಂದಾಗ ಕೆವೈಸಿ ಎಂಬುದು ಮಹತ್ವವಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ನೋ ಯುವರ್ ಕಸ್ಟಮರ್ (ಕೆವೈಸಿ) ಬಗ್ಗೆ ತಿಳಿದೇ ಇದೆ. ಪ್ಯಾನ್ ಜೋಡಣೆಯೂ ಸಹ ಈಗ ಕೆವೈಸಿಯ ಭಾಗವಾಗಿರುವುದರಿಂದ ಇದು ಬಲು ಮಹತ್ವದ್ದಾಗಿದೆ.
ಅಲ್ಲದೆ, ಪ್ಯಾನ್ ದಾಖಲೆಗಳ ನಕಲಿ ಹಾವಳಿಯನ್ನು ತಡೆಯಲೂ ಸಹ ಈ ಜೋಡಣೆ ಪ್ರಕ್ರಿಯೆ ಮುಖ್ಯವಾಗಿದೆ. ಈ ಹಿಂದೆ ಒಬ್ಬ ವ್ಯಕ್ತಿಗೆ ಬಹು ಪ್ಯಾನ್ ಸಂಖ್ಯೆಗಳನ್ನು ನೀಡಿರುವ ಉದಾಹರಣೆಗಳಿವೆ. ಹಾಗಾಗಿ ಇದನ್ನು ತಡೆಯಲೂ ಸಹ ಪ್ಯಾನ್-ಆಧಾರ್ ಜೋಡಣೆ ಮಹತ್ವದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ