ಕರ್ನಾಟಕ ಚುನಾವಣೆ: ಸುಳ್ಳುಸುದ್ಧಿ ವಿರುದ್ಧ ತೊಡೆತಟ್ಟಿದ ಫೇಸ್​ಬುಕ್​


Updated:April 19, 2018, 10:19 PM IST
ಕರ್ನಾಟಕ ಚುನಾವಣೆ: ಸುಳ್ಳುಸುದ್ಧಿ ವಿರುದ್ಧ ತೊಡೆತಟ್ಟಿದ ಫೇಸ್​ಬುಕ್​

Updated: April 19, 2018, 10:19 PM IST
ನ್ಯೂಯಾರ್ಕ್​: ಕೇಂಬ್ರಿಜ್​ ಅನಾಲಿಟಿಕಾ ಸಂಸ್ಥೆಯೊಂದಿಗೆ ಮಾಹಿತಿ ಸೋರಿಕೆ ಆರೋಪಹೊತ್ತಿರುವ ಫೇಸ್​ಬುಕ್​ ಕರ್ನಾಟಕ ಚುನಾವಣೆ  ಸಂದರ್ಭದಲ್ಲಿ ಹರಡುವ ಸುಳ್ಳು ಸುದ್ಧಿಯನ್ನು ಕಂಡುಹಿಡಿಯಲು ಥರ್ಡ್​ ಪಾರ್ಟಿ ಫ್ಯಾಕ್ಟ್​ ಚೆಕ್ಕಿಂಗ್​ ನಡೆಸಲು ಮುಂದಾಗಿದೆ.

ಕಳೆದ ಚುನಾವಣೆ ಸಂದರ್ಭದಲ್ಲಿ ಮಾಹಿತಿ ಸೋರಿಕೆ ಪ್ರಕರಣದಿಂದ ಸಾಕಷ್ಟು ಪೆಟ್ಟು ತಿಂದಿರುವ ಫೇಸ್​ಬುಕ್ ನಕಲಿ ಸುದ್ದಿಜಾಲಗಳನ್ನು ಕಂಡು ಹಿಡಿಯುವ ಸಲುವಾಗಿ ಬೂಮ್​ ಎಂಬ ಸ್ವತಂತ್ರ ಡಿಜಿಟಲ್‌ ಪತ್ರಿಕೋದ್ಯಮ ಸಂಸ್ಥೆ ಫೇಸ್‌ಬುಕ್‌ ಜೊತೆ ಕೈಜೋಡಿಸಿದೆ.

ಫ್ಲೋರಿಡಾದ ಪಾಯಿಂಟರ್​ ಸ್ಕೂಲ್​ನಿಂದ ಗುರುತಿಸಲ್ಪಟ್ಟಿರುವ ಬೂಮ್​ ಆದಾಯ ರಹಿತ ಸಂಸ್ಥೆಯಾಗಿದ್ದು ಇದು ಫೇಸ್​ಬುಕ್​ನಲ್ಲಿ ಆಂಗ್ಲ ಭಾಷೆಯಲ್ಲಿರುವ ಸುದ್ಧಿಗಳ ಸತ್ಯಾಸತ್ಯತೆಗಳನ್ನು ಕಲೆಹಾಕುತ್ತದೆ. ಒಂದು ವೇಳೆ ಫೇಸ್​ಬುಕ್​ನಲ್ಲಿ ಹರಿಬಿಟ್ಟ ಸುದ್ಧಿ ಅಥವಾ ಮಾಹಿತಿ ಸುಳ್ಳು ಎಂದು ಬೂಮ್​​ ಹೇಳಿದರೆ ಇದಕ್ಕೆ ಸಂಬಂಧಿಸಿದ ನೈಜ ಸಂದೇಶ ಹೊಂದಿದ ಸುದ್ಧಿಗಳನ್ನು ಅದೇ ಲಿಂಕ್​ನ ಕೆಳಗಡೆ ನಮೂದಿಸಲಾಗುತ್ತದೆ ಎಂದು ಫೇಸ್​ಬುಕ್​ ಹೇಳಿಕೊಂಡಿದೆ.

ಯಾವುದೇ ಪೇಜ್​ ಸುಳ್ಳು ಸುದ್ದಿಗಳನ್ನು ಹಾಕುತ್ತಿದ್ದರೆ ಆ ಪೇಜ್​ನ ನಿರ್ವಾಹಕರಿಗೆ ಹಾಕಿರುವ ಸುದ್ಧಿಗಳು ಸುಳ್ಳು ಎಂಬ ವಾರ್ನಿಂಗ್​ ಮೆಸೇಜ್​ನ್ನು ಕಳುಹಿಸುತ್ತೇವೆ. ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ಸುದ್ದಿಗಳು ಹರಡುವುದು ಹೆಚ್ಚಾಗುತ್ತಿದೆ. ಹಾಗಾಗಿ ಈ ರಾಜ್ಯವನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಫೇಸ್​ಬುಕ್​ ನ್ಯೂಸ್​ಫೀಡ್​ನಲ್ಲಿ ತಿಳಿಸಲಾಗಿದೆ.

ರಾಜಕೀಯ ಸಲಹೆಗಾರ ಸಂಸ್ಥೆ ಕೇಂಬ್ರಿಜ್​ ಅನಾಲಿಟಿಕಾ ಸಂಸ್ಥೆಗೆ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ದುರ್ಬಳಕೆ ಮಾಡಿಕೊಳ್ಳಲು ಅನುವು ಮಾಡಿದ ಆರೋಪದಡಿ ಫೇಸ್​ಬುಕ್​ ಮಾಲಿಕ ಮಾರ್ಕ್​ ಜುಕರ್​ಬರ್ಗ್​ ವಿಚಾರಣೆ ನಡೆಯುತ್ತಲಿದೆ. ಈ ಮಧ್ಯ ತನ್ನ ನ್ಯೂನ್ಯತೆಗೆ ಸೂಕ್ತ ಪರಹಾರ ಕಂಡುಕೊಳ್ಳಲು ನಿರ್ಧರಿಸಿರುವ ಫೇಸ್​ಬುಕ್​ ಥರ್ಡ್​ ಪಾರ್ಟಿ ಫ್ಯಾಕ್ಟ್​ ಚೆಕ್ಕಿಂಗ್​ ಮೊರೆ ಹೋಗಿದೆ.
First published:April 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...