ಸ್ನಾಪ್​​ಚಾಟ್​ಗೆ ಸೆಡ್ಡು ಹೊಡೆಯಲು ಫೇಸ್​ಬುಕ್​ನಿಂದ ಹೊಸ ಆ್ಯಪ್​; ಹೇಗಿರಲಿದೆ ಗೊತ್ತಾ?

ನೂತನ ಥ್ರೆಡ್ಸ್​​ ಆ್ಯಪ್​ನಲ್ಲಿ ಲೊಕೆಷನ್​ ಶೇರ್​, ಸ್ಟೇಟಸ್​​ ಮತ್ತು ಮೊಬೈಲ್​ ಬ್ಯಾಟರಿ ಫೀಚರ್ಸ್​ಗಳನ್ನು ಶೇರ್​ ಮಾಡುವಂತಹ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ  ​ಫೋಟೋ, ವಿಡಿಯೋ ಹಾಗೂ ಸಂದೇಶವನ್ನು ಕಳುಹಿಸುವ ಫೀಚರ್ಸ್​ಗಳನ್ನು ನೀಡಲಾಗಿದೆ.

news18
Updated:August 31, 2019, 12:44 PM IST
ಸ್ನಾಪ್​​ಚಾಟ್​ಗೆ ಸೆಡ್ಡು ಹೊಡೆಯಲು ಫೇಸ್​ಬುಕ್​ನಿಂದ ಹೊಸ ಆ್ಯಪ್​; ಹೇಗಿರಲಿದೆ ಗೊತ್ತಾ?
ಫೇಸ್​ಬುಕ್​
  • News18
  • Last Updated: August 31, 2019, 12:44 PM IST
  • Share this:
ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್​ ಹೊಸ ಆ್ಯಪ್​ವೊಂದನ್ನು ಪರಿಚಯಿಸಲು ಮುಂದಾಗಿದೆ. ಸ್ನಾಪ್​ಚಾಟ್​​ಗೆ ಸೆಡ್ಡು ಹೊಡೆಯಲು ಈ ಆ್ಯಪ್​ ಅನ್ನು ತಯಾರಿಸಲಾಗಿದ್ದು, ಇನ್​​ಸ್ಟಾಗ್ರಾಂನಂತೆ ಕಾರ್ಯನಿರ್ವಹಿಸಲಿದೆ.

ಫೇಸ್​ಬುಕ್ ಸಂಸ್ಥೆ​ ಪರಿಚಯಿಸಲು ಹೊರಟಿರುವ ನೂತನ ಆ್ಯಪ್​ಗೆ ‘ಥ್ರೆಡ್ಸ್‘ ಎಂದು ಹೆಸರಿಡಲಾಗಿದೆ. ಸ್ನಾಪ್​ಚಾಟ್​ ಬಳಕೆದಾರರನ್ನು ತನ್ನತ್ತ ಸೆಳೆದುಕೊಳ್ಳಲು ಸಲುವಾಗಿ ಫೇಸ್ಬುಕ್​ ಈ ಆ್ಯಪ್​ ಅನ್ನು ತಯಾರಿಸಿದೆ.

ನೂತನ ಥ್ರೆಡ್ಸ್​​ ಆ್ಯಪ್​ನಲ್ಲಿ ಲೊಕೆಷನ್​ ಶೇರ್​, ಸ್ಟೇಟಸ್​​ ಮತ್ತು ಮೊಬೈಲ್​ ಬ್ಯಾಟರಿ ಫೀಚರ್ಸ್​ಗಳನ್ನು ಶೇರ್​ ಮಾಡುವಂತಹ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ  ​ಫೋಟೋ, ವಿಡಿಯೋ ಹಾಗೂ ಸಂದೇಶವನ್ನು ಕಳುಹಿಸುವ ಫೀಚರ್ಸ್​ಗಳನ್ನು ನೀಡಲಾಗಿದೆ. ಈ ಎಲ್ಲಾ ಫೀಚರ್ಸ್​ಗಳು ಸ್ನಾಪ್​ಚಾಟ್​ನಲ್ಲೂ ಲಭ್ಯವಿದ್ದು, ಸ್ನಾಪ್​ಚಾಟ್​ಗೆ ಸೆಡ್ಡ್​ ಹೊಡೆಯುವ ಸಲುವಾಗಿ ​​ ಈ ಅಪ್ಲಿಕೇಷನ್​ ಅನ್ನು ಸಿಧ್ಧಪಡಿಸಿದೆ.

ಇದನ್ನೂ ಓದಿ: ಹಾಲು ಉತ್ಪಾದಕರಿಗೆ ಬಮೂಲ್ ಬಂಪರ್ ಕೊಡುಗೆ; ನಾಳೆಯಿಂದ ಒಂದು ಲೀಟರ್‌ಗೆ 1 ರೂ ಹೆಚ್ಚುವರಿ ಲಾಭ

ಅಮೆರಿಕದ ವಿದ್ಯಾರ್ಥಿಗಳಿಬ್ಬರು ಸ್ನಾಪ್​ಚಾಟ್​ ಅನ್ನು ಕಂಡು ಹಿಡಿದಿದ್ದು, ಯುವ ಸಮುದಾಯದ ಮನಗೆದ್ದಿದೆ. ವಿಶ್ವದಾದ್ಯಂತ ಶೇರ್​ಚಾಟ್​ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು ಫೇಸ್​ಬುಕ್​ಗೆ ಪೈಪೋಟಿ ನೀಡುತ್ತಿದೆ. ವರದಿಯೊಂದರ ಪ್ರಕಾರ ಶೇ. 95ರಷ್ಟು ಮಂದಿ ಸ್ನಾಪ್​​​ಚಾಟ್​ ಆ್ಯಪ್​ ಅನ್ನು ಬಳಕೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಫೇಸ್​ಬುಕ್​ ಪರ್ಯಾಯ ಆ್ಯಪ್ ‘ಥ್ರೆಡ್ಸ್‘​ ಅನ್ನು ತಯಾರಿಸಿದ್ದು ಸ್ನಾಪ್​ಚಾಟ್​ಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ.

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading