ನಿಮ್ಮ Facebookನಿಂದ ಒಳ್ಳೊಳ್ಳೆ ಫೋಟೋ ಕದಿಯದಂತೆ ಮಾಡಲು ಈ ರೀತಿ ಮಾಡಿ

ಬಳಕೆದಾರರು ತಮ್ಮ ಡಾಟಾ ಶೇರಿಂಗ್ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಈ ಟೂಲ್‍ನ ಹೆಸರು ‘ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ’.

ಬಳಕೆದಾರರು ತಮ್ಮ ಡಾಟಾ ಶೇರಿಂಗ್ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಈ ಟೂಲ್‍ನ ಹೆಸರು ‘ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ’.

ಬಳಕೆದಾರರು ತಮ್ಮ ಡಾಟಾ ಶೇರಿಂಗ್ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಈ ಟೂಲ್‍ನ ಹೆಸರು ‘ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ’.

  • Share this:

ಕಳೆದ ವರ್ಷ ಫೇಸ್‍ಬುಕ್ (facebook) ತನ್ನ ಬಳಕೆದಾರಿಗೆ ಹೊಸ ಟೂಲ್ ಒಂದನ್ನು ಪರಿಚಯಿಸಿದೆ. ಫೇಸ್‍ಬುಕ್‍ ನಲ್ಲಿರುವ ತಮ್ಮ ಯಾವ ಮಾಹಿತಿಗಳನ್ನು , ಬೇರೆ ಆ್ಯಪ್ ಮತ್ತು ವೆಬ್‍ಸೈಟ್‍ಗಳು ಪಡೆಯುತ್ತಿವೆ ಎಂಬುದನ್ನು ಬಳಕೆದಾರರು ನೋಡಲು ಈ ಟೂಲ್ ಅನುವು ಮಾಡಿ ಕೊಡುತ್ತದೆ. ಬಳಕೆದಾರರು ತಮ್ಮ ಡಾಟಾ ಶೇರಿಂಗ್ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಈ ಟೂಲ್‍ನ ಹೆಸರು ‘ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ’. ಈ ‘ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ’ (off Facebook Activity) ಟೂಲ್ ಅನ್ನು ಹೇಗೆ ಬಳಸಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ಹಂತ ಹಂತವಾಗಿ ನೀಡಲಾಗಿದೆ.


ಫೇಸ್‍ಬುಕ್ ಬಳಕೆದಾರರು ತಮ್ಮ ಡಾಟಾ ಶೇರಿಂಗ್ ಸೆಟ್ಟಿಂಗ್ಸ್​ ನಿಯಂತ್ರಿಸಲು ಸಹಾಯ ಮಾಡುವ ಈ ಟೂಲ್‍ನ ಹೆಸರು ‘ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ’. ಈ ‘ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ’ ಟೂಲ್ ಅನ್ನು ಹೇಗೆ ಬಳಸಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ಹಂತ ಹಂತವಾಗಿ ನೀಡಲಾಗಿದೆ.


ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ ಬಳಸುವುದು ಹೇಗೆ?
1. ಫೇಸ್‍ಬುಕ್ ತೆರೆಯಿರಿ ಮತ್ತು ಲಾಗಿನ್ ಆಗಿ.
2. ಈಗ, ಮೇಲ್ಗಡೆ ಬಲಭಾಗದಲ್ಲಿರುವ ಡ್ರೋಪ್ ಡೌನ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತು ಸೆಕ್ಯೂರಿಟಿ ಹಾಗೂ ಪ್ರೈವೆಸಿ ಆಯ್ಕೆಯನ್ನು ಒತ್ತಿರಿ.
3. ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಫೇಸ್‍ಬುಕ್ ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳಿ.
4. ಬಳಿಕ, ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ ಆಯ್ಕೆಯನ್ನು ಒತ್ತಿರಿ.


ಇದನ್ನು ಓದಿ: ಮುಂದಿನ ವರ್ಷದಿಂದ ಉದ್ಯೋಗಿಗಳಿಗೆ ದುಪ್ಪಟ್ಟು ಸಂಬಳ; ಯಾವ್ಯಾವ ಕಂಪನಿಗಳಲ್ಲಿ ಗೊತ್ತಾ!

ಫೇಸ್ಬುಕ್‍ನ ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ ಮೂಲಕ, ನಮ್ಮ ಮಾಹಿತಿಯನ್ನು ತೆಗೆಯುತ್ತಿರುವ ಎಲ್ಲಾ ಅನ್ಯ ಆ್ಯಪ್‍ಗಳು ಮತ್ತು ವೆಬ್‍ಸೈಟ್‍ಗಳನ್ನು ನೋಡುವುದು ಹೇಗೆ?


1. ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ ಪುಟದಲ್ಲಿ, ಮ್ಯಾನೇಜ್ ಯುವರ್ ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ವೆರಿಫಿಕೇಶನ್‍ಗಾಗಿ ನಿಮ್ಮ ಪಾಸ್‍ವರ್ಡ್ ಅನ್ನು ನಮೂದಿಸಿ. ಅಲ್ಲಿ ನಿಮ್ಮ ಫೇಸ್‍ಬುಕ್ ಖಾತೆಯ ಜೊತೆ ಲಿಂಕ್ ಆಗಿರುವ ಎಲ್ಲಾ ಆ್ಯಪ್‍ಗಳು ಮತ್ತು ವೆಬ್‍ಸೈಟ್‍ಗಳನ್ನು ನೋಡಬಹುದು.


ಇದನ್ನು ಓದಿ: Wipro Careers: ಸಾಫ್ಟ್​ವೇರ್​ ಕೆಲಸ​ ಹುಡುಕುತ್ತಿರುವವರಿಗೆ ಸುವರ್ಣಾವಕಾಶ; ವರ್ಷಕ್ಕೆ 10 ಲಕ್ಷ ರೂ ಪ್ಯಾಕೇಜ್​​

ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿಯನ್ನು ಆ್ಯಪ್‍ಗಳು ಮತ್ತು ವೆಬ್‍ಸೈಟ್‍ಗಳಿಗೆ ನಿಷ್ಕ್ರೀಯಗೊಳಿಸುವುದು ಹೇಗೆ?


1. ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ಮತ್ತು ಆ ಬಳಿಕ ನೀವು ಯಾವ ಆ್ಯಪ್ ಅಥವಾ ವೆಬ್‍ಸೈಟ್ ಅನ್ನು ಫೇಸ್‍ಬುಕ್ ಆ್ಯಕ್ಟಿವಿಟಿಯಿಂದ ನಿಷ್ಕ್ರಿಯಗೊಳಿಸಲು ಬಯಸುತ್ತಿರೋ, ಅದನ್ನು ಆಯ್ಕೆ ಮಾಡಿಕೊಳ್ಳಿ.
2. ಅಂತಹ ಆ್ಯಪ್ ಅಥವಾ ವೆಬ್‍ಸೈಟ್ ಮೇಲೆ ಕ್ಲಿಕ್ ಮಾಡಿ, ಹಾಗೂ ‘ಟರ್ನ್ ಆಫ್ ಫ್ಯೂಚರ್ ಆ್ಯಕ್ಟಿವಿಟಿ ಫ್ರಾಮ್ ಟ್ರೂಕಾಲರ್: ಐಡಿ ಅಂಡ್ ಸ್ಪಾಮ್ ಬ್ಲಾಕ್’ ಆಯ್ಕೆಯನ್ನು ಹುಡುಕಲು ಸ್ಕ್ರೋಲ್ ಡೌನ್ ಮಾಡಿ. ಆ ನಿರ್ದಿಷ್ಟ ಆ್ಯಪ್ ಅಥವಾ ವೆಬ್‍ಸೈಟ್‍ಗೆ ಆಫ್ ಫೇಸ್‍ಬುಕ್ ಆ್ಯಕ್ಟಿವಿಟಿ ನಿಷ್ಕ್ರಿಯಗೊಳಿಸಲು, ಅದರ ಮೇಲೆ ಕ್ಲಿಕ್ ಮಾಡಿ.


ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿಯನ್ನು ಆ್ಯಪ್‍ಗಳು ಮತ್ತು ವೆಬ್‍ಸೈಟ್‍ಗಳಿಗೆ ಒಂದೇ ಬಾರಿಗೆ ನಿಷ್ಕ್ರಿಯಗೊಳಿಸುವುದು ಹೇಗೆ?
1. ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ ಪುಟದಲ್ಲಿ ಮ್ಯಾನೇಜ್ ಫ್ಯೂಚರ್ ಆ್ಯಕ್ಟಿವಿಟೀಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2. ಆ ನಂತರ, ಮತ್ತೆ ಪಾಪ್‍ಅಪ್‍ನಲ್ಲಿ ಮತ್ತೆ ಮ್ಯಾನೇಜ್ ಫ್ಯೂಚರ್ ಆ್ಯಕ್ಟಿವಿಟಿಸ್ ಅನ್ನು ಒತ್ತಿರಿ.
3. ಮುಂದಿನ ಪುಟದಲ್ಲಿ, ಎಲ್ಲಾ ಫ್ಯೂಚರ್ ಆಫ್ ಫೇಸ್‍ಬುಕ್ ಆ್ಯಕ್ಟಿವಿಟಿಗಳನ್ನು ನಿಷ್ಕ್ರಿಯಗೊಳಿಸಲು, ಫ್ಯೂಚರ್ ಆಫ್ ಫೇಸ್‍ಬುಕ್ ಆ್ಯಕ್ಟಿವಿಟಿ ಟೋಗಲ್ ಅನ್ನು ಟರ್ನ್ ಆಫ್ ಮಾಡಿ.


ಆಫ್ ಫೇಸ್‍ಬುಕ್ ಆ್ಯಕ್ಟಿವಿಟಿ ಹಿಸ್ಟ್ರಿಯನ್ನಹ ಅಳಿಸಿ ಹಾಕುವುದು ಹೇಗೆ?
1. ಅದನ್ನು ಮಾಡಲು, ಆಫ್-ಫೇಸ್‍ಬುಕ್ ಆ್ಯಕ್ಟಿವಿಟಿ ಪುಟದಲ್ಲಿ, ಕ್ಲಿಯರ್ ಹಿಸ್ಟರಿ ಬಟನ್ ಮೇಲೆ ಕ್ಲಿಕ್ ಮಾಡಿ. ಪಾಪ್ ಅಪ್‍ನಲ್ಲಿ ಕ್ಲಿಯರ್ ಹಿಸ್ಟ್ರಿ ಬಟನ್ ಮೇಲೆ ಕ್ಲಿಕ್ ಮಾಡಿ ಅದನ್ನು ಖಚಿತ ಪಡಿಸಿ.


First published: