HOME » NEWS » Tech » FACEBOOK TO OFFER MORE SECURITY FEATURES IN 2021 HG

Facebook: ಮುಂದಿನ ವರ್ಷ ಹೆಚ್ಚಿನ ಭದ್ರತಾ ವೈಶಿಷ್ಟ್ಯಪರಿಚಯಿಸಲಿರುವ ಫೇಸ್​ಬುಕ್​!

ಬಳಕೆದಾರ ಲಾಗ್​-ಇನ್​ ಮಾಡುವ ಮೊದಲು ಮತ್ತು ಡೆಸ್ಕ್​​ಟಾಪ್​​ ಕಂಪ್ಯೂಟರ್​ಗೆ ಸಂಪರ್ಕ ಸಾಧಿಸುವ ಮೊದಲು ಹಾರ್ಡ್​ ಸೆಕ್ಯುರಿಟಿ ಕೀಯನ್ನು ಬಳಸುವಂತೆ ಅಭಿವೃದ್ಧಿಪಡಿಸುತ್ತಿದೆ.

news18-kannada
Updated:December 25, 2020, 6:43 PM IST
Facebook: ಮುಂದಿನ ವರ್ಷ ಹೆಚ್ಚಿನ ಭದ್ರತಾ ವೈಶಿಷ್ಟ್ಯಪರಿಚಯಿಸಲಿರುವ ಫೇಸ್​ಬುಕ್​!
ಫೇಸ್​ಬುಕ್​
  • Share this:
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಮತ್ತೊಂದೆಡೆ 2020ನೇ ವರ್ಷಾಂತ್ಯದಲ್ಲಿದ್ದೇವೆ. ಹೀಗಿರುವಾಗ ನೂತನ ವರ್ಷದ ವಿಶೇಷವಾಗಿ ಹಲವಾರು ಕಂಪನಿಗಳು ಹೊಸ ಉತ್ಪನ್ನಗಳನ್ನ, ಫೀಚರ್ಸ್​ಗಳನ್ನ ಮಾರುಕಟ್ಟೆಗೆ ತರಲು ಯೋಜನೆ ಹಾಕಿಕೊಂಡಿದೆ. ಅದರಂತೆ ಫೇಸ್​ಬುಕ್​ ಕೂಡ ಗ್ರಾಹಕರಿಗೆ ಹೆಚ್ಚಿನ ಸೆಕ್ಯುರಿಟಿ ಒದಗಿಸಸಲು ಮುಂದಾಗಿದೆ.

ಬಳಕೆದಾರ ಲಾಗ್​-ಇನ್​ ಮಾಡುವ ಮೊದಲು ಮತ್ತು ಡೆಸ್ಕ್​​ಟಾಪ್​​ ಕಂಪ್ಯೂಟರ್​ಗೆ ಸಂಪರ್ಕ ಸಾಧಿಸುವ ಮೊದಲು ಹಾರ್ಡ್​ ಸೆಕ್ಯುರಿಟಿ ಕೀಯನ್ನು ಬಳಸುವಂತೆ ಅಭಿವೃದ್ಧಿಪಡಿಸುತ್ತಿದೆ.

ಫೇಸ್​ಬುಕ್​ ಸೆಕ್ಯುರಿಟಿ ಪಾಲಿಯ ಮುಖ್ಯಸ್ಥ ನಥಾನಿಯಲ್​ ಗ್ಲೀಚೆರ್ ಈ ಬಗ್ಗೆ ಮಾತನಾಡಿದ್ದು,​ ಮೊಬೈಲ್​ ಅಪ್ಲಿಕೇಶನ್​ಗಳ ಮೂಲಕ ಫೇಸ್​ಬುಕ್ ಲಾಗಿನ್​ ಮಾಡುವ ಬಳಕೆದಾರನು ಮೊದಲು ತನ್ನ ಗುರುತನ್ನು ದೃಢಿಕರಿಸಿ ನಂತರ ಫೇಸ್​ಬುಕ್​ ಬಳಸುವಂತೆ ಅಭಿವೃದ್ಧಿ ಪಡಿಸುತ್ತಿದೆ. ಬಳಕೆದಾರರ ಸುರಕ್ಷತಾ ದೃಷ್ಟಿಯಿಂದ ಈ ರೀತಿಯ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ನಂತರ ಮಾತು ಮುಂದುವರಿಸಿದ ಅವರು, ನಮ್ಮ ಮುಖ್ಯ ಧ್ಯೇಯವೆಂದರೆ ಬಳಕೆದಾರರ ಖಾತೆಯನ್ನು ರಕ್ಷಿಸುವುದಾಗಿದೆ. ಆತನ ಖಾತೆಗೆ ಯಾವುದೇ ಹಾನಿಯಾಗದಂತೆ ತಡೆಯುವುದಾಗಿದೆ ಎಂದು ಹೇಳಿದ್ದಾರೆ.
Youtube Video

ಮಾರ್ಕ್​ ಜುಕರ್​ಬರ್ಗ್​ ಒಡೆತನದ ಫೇಸ್​ಬುಕ್​ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಅದರಲ್ಲೂ ಸ್ಟಾರ್​ನಟರು, ಸೆಲೆಬ್ರಿಟಗಳು ಇದರಲ್ಲಿ ಖಾತೆ ತೆರೆದಿದ್ದಾರೆ. ಕಳೆದ ಕೆಲವು ವರ್ಷಗಳನ್ನು ಗಮನಿಸಿದಾಗ ಸೆಲೆಬ್ರಿಟಿಗಳ ಖಾತೆಗಳು ಹ್ಯಾಕ್​ ಆಗುತ್ತಿವೆ. ಇವೆಲ್ಲವನ್ನು ಗಮನಿಸಿದ ಫೇಸ್​ಬುಕ್​ ಮಂಡಳಿ ಮುಂದಿನ ವರ್ಷ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಮುಂದಾಗಿದೆ.
Published by: Harshith AS
First published: December 25, 2020, 6:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories