ಫೇಸ್​ಬುಕ್​ನಿಂದ ಡೇಟಿಂಗ್​ ಆ್ಯಪ್​ಗೆ ಸಿದ್ಧತೆ


Updated:May 2, 2018, 1:51 PM IST
ಫೇಸ್​ಬುಕ್​ನಿಂದ ಡೇಟಿಂಗ್​ ಆ್ಯಪ್​ಗೆ ಸಿದ್ಧತೆ
image : AP

Updated: May 2, 2018, 1:51 PM IST
ಸಾನ್​ ಜೋಸ್​​: ಡೇಟಿಂಗ್​ ಮಾಡಲು ಟಿಂಡರ್​ ಅಥವಾ ಇನ್ನಾವುದೋ ಅಪ್ಲಿಕೇಶನ್​ ಬಳಸಿ ಸುಸ್ತಾಗಿರುವವಿರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಹೊಸ ಸುದ್ದಿ ನೀಡಿದ್ದು ಶೀಘ್ರದಲ್ಲೇ ತಾವೂ ಕೂಡಾ ಡೇಟಿಂಗ್​ ಆ್ಯಪ್​ ಹೊರತರುವುದಾಗಿ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಮಾರ್ಕ್​, 20 ಕೋಟಿಗೂ ಅಧಿಕ ಫೇಸ್​ಬುಕ್​ ಬಳಕೇದಾರರು ಸಿಂಗಲ್​ ಎಂದು ದಾಖಲಿಸಿಕೊಂಡಿದ್ದಾರೆ. ಹೀಗಾಗಿ ನಾವು ಕೂಡಾ ಡೇಟಿಂಗ್ ಆ್ಯಫ್​ನನ್ನು ಸಿದ್ಧ ಪಡಿಸಬೇಕಿದೆ ಎಂದು ಹೇಳಿದ್ದಾರೆ. ಸುಮಾರು ಒಂದು ದಶಕದ ಹಿಂದೆಯೇ ಡೇಟಿಂಗ್​ ಅಪ್ಲಿಕೇಶನ್​ ಕುರಿತಾದ ಆಲೋಚನೆ ಹೊಂದಿದ್ದರೂ, ಫೇಸ್​ಬುಕ್​ ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಈ ಅಪ್ಲಿಕೇಶನ್​ ಲಾಂಚ್​ ಮಾಡುವುದಾಗಿ ಹೇಳಿದೆ.

2004ರಲ್ಲಿ ಫೇಸ್​ಬುಕ್​ ತಮ್ಮ ಬಳಕೇದಾರರಿಗೆ ತಮ್ಮ ವೈವಾಹಿಕ ಮಾಹಿತಿ ಕುರಿತು ಹಂಚಿಕೊಳ್ಳಲು ಆಯ್ಕೆಯೊಂದನ್ನು ನಿರ್ಮಿಸಿತ್ತು. ಈ ದಾಖಲೆಗಳನ್ನು ಪರಿಶೀಲಿಸಿರುವ ಫೇಸ್​ಬುಕ್, ವಿಶ್ವದಲ್ಲಿ ಕನಿಷ್ಟ 20 ಕೋಟಿ ಜನ ಸಿಂಗಲ್​ (ಅವಿವಾಹಿತ) ಎಂದು ದಾಖಲಿಸಿಕೊಂಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಹಲವಾರು ಕಂಪನಿಗಳು ಡೇಟಿಂಗ್​ ಅಪ್ಲಿಕೇಶ್​ಗಳನ್ನು ಪರಿಚಯ ಮಾಡಿದ್ದವು. ಇದರಲ್ಲಿ ಟಿಂಡರ್​, ಒಕ್ಯುಪೈಡ್​ ಸೇರಿದಂತೆ ಕೆಲವು ಅಪ್ಲಿಕೇಶನ್​ಗಳು ಹೆಚ್ಚು ವೈರಲ್​ ಆಗಿತ್ತು. ಆದರೆ ಇದೀಗ ಇವರೆಲ್ಲರಿಗೂ ಸೆಡ್ಡು ಹೊಡೆಯಲು ಫೇಸ್​ಬುಕ್​ ಸ್ವತಃ ಡೇಟಿಂಗ್​ ಅಪ್ಲಿಕೇಶನ್​ ಲಾಂಚ್​ ಮಾಡುವುದಾಗಿ ಘೋಷಿಸಿದೆ.

ಇದೇ ಜನವರಿಯಲ್ಲಿ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದ ಫೇಸ್​ಬುಕ್​ 2017ರ ಅಂತ್ಯದಲ್ಲಿ ಸುಮಾರು 5 ಕೋಟಿ ಜನ ಫೇಸ್​ಬುಕ್​ನ್ನು ತ್ಯಜಿಸಿರುವುದನ್ನು ಉಲ್ಲೇಖಿಸಿತ್ತು. ಇದು ಸಂಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದರಿಂದ ಹೊರ ಬರಲು ಪ್ಲಾನ್​ ನಡೆಸಿರುವ ಫೇಸ್​ಬುಕ್​ ಇದೀಗ ಡೇಟಿಂಗ್​ ಎಂಬ ಹೊಸ ಅಸ್ತ್ರಕ್ಕೆ ಕೈಹಾಕಿದೆ.

ಹೇಗೆ ಕೆಲಸ ಮಾಡುತ್ತೆ ಈ ಆ್ಯಪ್​ ?
ಎಫ್​8 ಸಮ್ಮೇಳನವೊಂದರಲ್ಲಿ ಫೇಸ್​ಬುಕ್​ ತಮ್ಮ ಡೇಟಿಂಗ್​ ಅಪ್ಲಿಕೇಶನ್​ ಕುರಿತಾದ ಮಾದರಿಯನ್ನು ಪರಿಚಯಿಸಿದ್ದು, ಈ ಮಾದರಿಯ ಪ್ರಕಾರ ಫೇಸ್​ಬುಕ್​ ಆ್ಯಪ್​ನಲ್ಲಿ ಹಾರ್ಟ್​ ಚಿತ್ರಣದ ಎಮೊಜಿಯನ್ನು ಅಳವಡಿಸಲಾಗುತ್ತದೆ. ಖಾತೇದಾರರು ಈ ಹಾರ್ಟ್​ ಸಿಂಬಲ್​ಗೆ ಕ್ಲಿಕ್​ ಮಾಡಿದಲ್ಲಿ ಅವರಿಗೆ ಸೂಕ್ತವಾದ ಮ್ಯಾಚಿಂಗ್​ ಹುಡುಕುತ್ತದೆ.

ಫೇಸ್​ಬುಕ್​ ಬಳಕೇದಾರರ ಆದ್ಯತೆಗಳು, ಇಬ್ಬರ ನಡುವಿನ ಸಾಮ್ಯತೆ ಸೇರಿದಂತೆ ಹಲವಾರು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮ್ಯಾಚಿಂಗ್​ ಹುಡುಕಲಾಗುತ್ತದೆ.
First published:May 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ