ಫೇಸ್​ಬುಕ್​ನಲ್ಲಿ ಕಡಿಮೆ ಲೈಕ್ಸ್​ಗಾಗಿ​ ಚಿಂತೆ ಮಾಡ್ಬೇಡಿ..! ಲೈಕ್​ ಕೌಂಟ್ ಬಚ್ಚಿಡಿ

ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ​ ಬಳಕೆದಾರರು ಅಪ್ಲೋಡ್​ ಮಾಡಿದ ಫೋಟೋಗಳಿಗೆ ಕಮೆಂಟ್ ಅಥವಾ ಲೈಕ್ಸ್​​ ಅನ್ನು ಹೈಡ್​ ಮಾಡುವ ಆಯ್ಕೆಯೊಂದನ್ನು ಪರಿಚಯಿಸಿದೆ.

news18-kannada
Updated:September 5, 2019, 10:56 AM IST
ಫೇಸ್​ಬುಕ್​ನಲ್ಲಿ ಕಡಿಮೆ ಲೈಕ್ಸ್​ಗಾಗಿ​ ಚಿಂತೆ ಮಾಡ್ಬೇಡಿ..! ಲೈಕ್​ ಕೌಂಟ್ ಬಚ್ಚಿಡಿ
ಫೇಸ್​ಬುಕ್​, ಇನ್​ಸ್ಟಾಗ್ರಾಂ
  • Share this:
ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ​ ಅಕೌಂಟ್​ ಹೊಂದಿದವರು ತಮ್ಮ ಫೋಟೋಗೆ ಹೆಚ್ಚು ಲೈಕ್ಸ್​ ಬರಬೇಕು, ಹೆಚ್ಚು ಕಮೆಂಟ್ಸ್​ ಬರಬೇಕೆಂಬ ಬಹುದೊಡ್ಡ ಆಸೆಯನ್ನಿಟ್ಟುಕೊಂಡಿರುತ್ತಾರೆ. ದಿನಂಪ್ರತಿ ಅದಕ್ಕಾಗಿ ಫೋಟೋಗಳನ್ನು ಅಪ್ಲೋಡ್​ ಮಾಡುತ್ತಾ.. ಕಂಮೆಂಟ್​, ಲೈಕ್ಸ್​ ಬಾಕ್ಸ್​ ಅನ್ನು ತೆರೆದು ನೋಡುತ್ತಿರುತ್ತಾರೆ. ಇನ್ನು ಕೆಲವರು ಫೋಟೋಗೆ ಹೆಚ್ಚು ಲೈಕ್ಸ್​​ ಬಂದಿಲ್ಲ ಎಂದು ಗೊಣಗುತ್ತಿರುತ್ತಾರೆ. ಆದರೆ, ಇದಕ್ಕೆಲ್ಲಾ ಕಡಿವಾಣ ಹಾಕಲು ಫೇಸ್​ಬುಕ್​ ಸಂಸ್ಥೆ ಹೊಸ ಆಯ್ಕೆಯೊಂದನ್ನು ಜಾರಿಗೆ ತಂದಿದೆ.

ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ​ ಬಳಕೆದಾರರು ಅಪ್ಲೋಡ್​ ಮಾಡಿದ ಫೋಟೋಗಳಿಗೆ ಕಮೆಂಟ್ ಅಥವಾ ಲೈಕ್ಸ್​​ ಅನ್ನು ಹೈಡ್​ ಮಾಡುವ ಆಯ್ಕೆಯೊಂದನ್ನು ಪರಿಚಯಿಸಿದೆ. ಈ ಮೂಲಕ ನಿಮ್ಮ ಫೋಟೋಗೆ ಬಂದಿರುವ ಲೈಕ್ಸ್​ ಅನ್ನು ಹೈಡ್​ ಮಾಡಬಹುದಾಗಿದೆ.

ಫೇಸ್​ಬುಕ್ ಆ್ಯಪ್​​ ಡೆವಲಪರ್ ಜೇನ್​ ಮಂಚುನ್​ ವಾಂಗ್​ ಈ ಹೊಸ ಫೀಚರ್​ಅನ್ನು ಕಂಡುಹಿಡಿದಿದ್ದಾರೆ. ಈ ಫೀಚರ್​ ಅನ್ನು ಮೊದಲಿಗೆ ಇನ್​​ಸ್ಟಾಗ್ರಾಂನಲ್ಲಿ ಪರಿಚಯಿಸಲಾಗಿದೆ. ಕೆನಡಾ ದೇಶವು ಈ ಫೀಚರ್​ ಅನ್ನು ಮೇ ತಿಂಗಳಿನಲ್ಲಿ ಅಳವಡಿಸಿಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಆರು ದೇಶದಲ್ಲಿ  ಹೈಡ್​ ಫೀಚರ್​​ ಅನ್ನು ಫೇಸ್​​ಬುಕ್​ ಮತ್ತು ಇನ್​ಸ್ಟಾಗ್ರಾಂದಲ್ಲಿ ವಿಸ್ತರಿಸಲಿದೆ. ಇಟಲಿ, ಜಪಾನ್​, ಬ್ರೆಜಿಲ್​​, ಆಸ್ಟೇಲಿಯಾ, ನ್ಯೂಜಿಲೆಂಡ್​​ ದೇಶದಲ್ಲಿ ಕಾಣಿಸಿಕೊಳ್ಳಲಿದೆ.
First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ