HOME » NEWS » Tech » FACEBOOK SMARTWATCH INCOMING REPORT SOCIAL MEDIA GIANT WORKING ON WEARABLE WITH 2 CAMERAS HG

2 ಕ್ಯಾಮರಾಗಳುಳ್ಳ ಸ್ಮಾರ್ಟ್‌ವಾಚ್ ತಯಾರು ಮಾಡುತ್ತಿದೆ Facebook? ಇದರ ವೈಶಿಷ್ಟ್ಯಗಳು ಹೀಗಿವೆ!

Facebook: ಫೇಸ್‌ಬುಕ್‌ ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇಯೊಂದಿಗೆ ಎರಡು ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದೂ ದಿ ವರ್ಜ್‌ನ ವರದಿ ಹೇಳುತ್ತದೆ. ಅಲ್ಲದೆ, ಈ ಎರಡು ಕ್ಯಾಮೆರಾಗಳನ್ನು ಫೋಟೋ, ವಿಡಿಯೋ ತೆಗೆಯಲು ಬೇರ್ಪಡಿಸಬಹುದು. ಒಂದು ಕ್ಯಾಮರಾ ವಾಚ್‌ ಡಿಸ್‌ಪ್ಲೇಯ ಮುಂಭಾಗದಲ್ಲಿ ಇದ್ದರೆ, ವಾಚ್‌ನ ಹಿಂಭಾಗದಲ್ಲಿ ಮತ್ತೊಂದು ಕ್ಯಾಮರಾ ಇರುತ್ತದೆ ಎಂದೂ ವರದಿ ಹೇಳಿದೆ.

news18-kannada
Updated:June 10, 2021, 2:23 PM IST
2 ಕ್ಯಾಮರಾಗಳುಳ್ಳ ಸ್ಮಾರ್ಟ್‌ವಾಚ್ ತಯಾರು ಮಾಡುತ್ತಿದೆ Facebook? ಇದರ ವೈಶಿಷ್ಟ್ಯಗಳು ಹೀಗಿವೆ!
Facebook
  • Share this:

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ತನ್ನ ಕಂಫರ್ಟ್ ವಲಯವಾದ ಸೋಷಿಯಲ್‌ ಮೀಡಿಯಾ ಒಂದಕ್ಕೇ ಸೀಮಿತವಾಗಿಲ್ಲ ಎಂದು ಹೇಳಲಾಗುತ್ತಿದೆ. ಅಂದರೆ, ಫೇಸ್‌ಬುಕ್‌ ಕಂಪನಿ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡುವತ್ತ ಹೆಜ್ಜೆ ಇಟ್ಟಿದ್ದು, ಈ ಬಗ್ಗೆ ಕಾರ್ಯನಿರತವಾಗಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಆದರೆ, ಈ ಬಗ್ಗೆ ಫೇಸ್‌ಬುಕ್‌ ಸಾರ್ವಜನಿಕವಾಗಿ ದೃಢೀಕರಿಸಿಲ್ಲ. ದಿ ವರ್ಜ್‌ನ ವರದಿ ಪ್ರಕಾರ, ಫೇಸ್‌ಬುಕ್‌ ಸ್ಮಾರ್ಟ್‌ವಾಚ್‌ ಅನೇಕ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ. ಅಂದ ಹಾಗೆಯೇ, ಮುಂದಿನ ವರ್ಷದ ಬೇಸಿಗೆ ವೇಳೆಗೆ ಅಂದರೆ 2022ರಲ್ಲಿ ಈ ಸ್ಮಾರ್ಟ್​ವಾಚ್‌ ಬಿಡುಗಡೆಯೂ ಆಗಲಿದೆ ಎಂದೂ ವರದಿ ಹೇಳುತ್ತಿದೆ. ನಿಮಗೂ ಈ ಫೇಸ್‌ಬುಕ್‌ ಸ್ಮಾರ್ಟ್​ವಾಚ್​‌ ಬಗ್ಗೆ ಕುತೂಹಲ ಉಂಟಾಯ್ತಾ? ಹಾಗಾದ್ರೆ  ಇದರ ವೈಶಿಷ್ಟ್ಯಗಳತ್ತ ಕಣ್ಣಾಡಿಸೋಣ..


ಫೇಸ್‌ಬುಕ್‌ ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇಯೊಂದಿಗೆ ಎರಡು ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದೂ ದಿ ವರ್ಜ್‌ನ ವರದಿ ಹೇಳುತ್ತದೆ. ಅಲ್ಲದೆ, ಈ ಎರಡು ಕ್ಯಾಮೆರಾಗಳನ್ನು ಫೋಟೋ, ವಿಡಿಯೋ ತೆಗೆಯಲು ಬೇರ್ಪಡಿಸಬಹುದು. ಒಂದು ಕ್ಯಾಮರಾ ವಾಚ್‌ ಡಿಸ್‌ಪ್ಲೇಯ ಮುಂಭಾಗದಲ್ಲಿ ಇದ್ದರೆ, ವಾಚ್‌ನ ಹಿಂಭಾಗದಲ್ಲಿ ಮತ್ತೊಂದು ಕ್ಯಾಮರಾ ಇರುತ್ತದೆ ಎಂದೂ ವರದಿ ಹೇಳಿದೆ.



ವಾಚ್‌ನ ಮುಂಭಾಗದಲ್ಲಿರುವ ಕ್ಯಾಮೆರಾ ಮುಖ್ಯವಾಗಿ ವಿಡಿಯೋ ಕಾಲ್‌ಗಳಿಗೆ ಆದರೆ, ವಾಚ್‌ನ ಹಿಂಬದಿಯ ಕ್ಯಾಮರಾವನ್ನು ಬೇರ್ಪಡಿಸಿದಾಗ ಫೂಟೇಜ್‌ ಸೆರೆಹಿಡಿಯಲು 1080p ಆಟೋ-ಫೋಕಸ್ ಕ್ಯಾಮೆರಾ ಬಳಸಬಹುದು. ಈ ವಾಚ್‌ ಸ್ಟೇನ್‌ಲೆಸ್‌ ಫ್ರೇಮ್‌ ಹೊಂದಿರುತ್ತದೆ ಎಂದೂ ದಿ ವರ್ಜ್‌ ವರದಿಯಲ್ಲಿ ಹೇಳುತ್ತದೆ.


ಬ್ಯಾಕ್‌ಪ್ಯಾಕ್‌ಗಳಂತಹ ವಸ್ತುಗಳಿಗೆ ಕ್ಯಾಮೆರಾ ಹಬ್ ಅನ್ನು ಜೋಡಿಸಲು ಬಿಡಿಭಾಗಗಳನ್ನು ರಚಿಸಲು ಫೇಸ್‌ಬುಕ್ ಇತರ ಕಂಪನಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ದಿ ವರ್ಜ್‌ ವರದಿ ಮಾಡಿದ್ದು, ಈ ಯೋಜನೆಯ ಬಗ್ಗೆ ತಿಳಿದುಕೊಂಡಿರುವ ಇಬ್ಬರು ವ್ಯಕ್ತಿಗಳನ್ನು ಉಲ್ಲೇಖಿಸಿದೆ. ವಾಚ್‌ ಅನ್ನು ಹೊಂದಿರುವವರು ಅದನ್ನು ಸ್ಮಾರ್ಟ್‌ಫೋನ್‌ ರೀತಿ ಬಳಸಲು ಪ್ರೋತ್ಸಾಹಿಸುವುದು ಫೇಸ್‌ಬುಕ್‌ನ ಐಡಿಯಾ ಎಂದೂ ವರದಿ ಹೇಳುತ್ತದೆ. ಅಲ್ಲದೆ, ಆ್ಯಪಲ್‌ ಮತ್ತು ಗೂಗಲ್‌ ನಡುವೆ ಒಂದು ಮಾರ್ಗವನ್ನು ಕಂಡುಕೊಳ್ಳುವ ಹೆಚ್ಚಿನ ಗ್ರಾಹಕ ಸಾಧನಗಳನ್ನು ನಿರ್ಮಿಸುವ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಯೋಜನೆಯ ಭಾಗವಾಗಿಯೂ ಬರುತ್ತದೆ ಎಂದು ತಿಳಿದುಬಂದಿದೆ.


ಹಾಗೆ, ವಾಚ್‌ನಲ್ಲಿ ಎಲ್‌ಟಿಇ ಸಂಪರ್ಕವನ್ನು ಬೆಂಬಲಿಸಲು ಫೇಸ್‌ಬುಕ್ ಯುಎಸ್‌ನ ಉನ್ನತ ವೈರ್‌ಲೆಸ್ ವಾಹಕಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಇದರಿಂದ ಆ ಸ್ಮಾರ್ಟ್‌ವಾಚ್‌ ಕೆಲಸ ಮಾಡಲು ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಬೇಕಾಗಿಲ್ಲ. ಬಿಳಿ, ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಬರಲಿರುವ ವಾಚ್‌ನ ಭವಿಷ್ಯದ ವರ್ಷನ್‌ಗಳಲ್ಲಿ ತನ್ನ ಯೋಜಿತ ಎಆರ್ ಕನ್ನಡಕಗಳಿಗೆ ಪ್ರಮುಖ ಇನ್‌ಪುಟ್ ಸಾಧನವಾಗಿ ಕಾರ್ಯನಿರ್ವಹಿಸಲು ಫೇಸ್‌ಬುಕ್‌ ಯೋಜಿಸುತ್ತಿದೆ ಎಂದು ದಿ ವರ್ಜ್ ವರದಿ ಮಾಡಿದೆ.


ಮಣಿಕಟ್ಟಿನ ಚಲನೆಗಳ ಮೂಲಕ ಕಂಪ್ಯೂಟರ್ ಅನ್ನು ನಿಯಂತ್ರಿಸಲು ಆರ್ಮ್‌ಬ್ಯಾಂಡ್‌ಗಳು ಸಮರ್ಥವಾಗಿವೆ ಎಂಬುದನ್ನು CTRL ಸ್ಟಾರ್ಟ್​ಅಪ್‌ ಕಂಪನಿ ತೋರಿಸಿಕೊಟ್ಟಿತ್ತು. ಈ CTRL ಲ್ಯಾಬ್‌ಗಳಿಂದ ಸ್ವಾಧೀನಪಡಿಸಿಕೊಂಡ ತಂತ್ರಜ್ಞಾನವನ್ನು ಬಳಸಲು ಫೇಸ್‌ಬುಕ್ ಯೋಜಿಸಿದೆ ಎನ್ನಲಾಗುತ್ತಿದೆ.


2022ರ ಬೇಸಿಗೆಯ ವೇಳೆಗೆ ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸುವ ಉದ್ದೇಶವನ್ನು ಫೇಸ್‌ಬುಕ್ ಹೊಂದಿದೆ. ಕಂಪನಿಯು ಈಗಾಗಲೇ ಈ ಸ್ಮಾರ್ಟ್‌ವಾಚಿನ 2ನೇ ಮತ್ತು 3ನೇ ತಲೆಮಾರಿನ ಆವೃತ್ತಿಗಳನ್ನು ನಂತರದ ವರ್ಷಗಳಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್‌ ಮಾಡಿದ್ದು, ಸದ್ಯಕ್ಕೆ ಈ ಫೇಸ್‌ಬುಕ್‌ ಸ್ಮಾರ್ಟ್‌ವಾಚ್‌ ಬೆಲೆ 400 ಡಾಲರ್‌ ಅಂದರೆ ಸುಮಾರು 29,000 ರೂ. ಎಂದು ವರದಿ ಹೇಳಿದೆ.

Youtube Video


ಸ್ಮಾರ್ಟ್‌ವಾಚ್‌ ತಯಾರಿಸಲು ಫೇಸ್‌ಬುಕ್‌ ಇದ್ದಕ್ಕಿದ್ದಂತೆ ಒಲವು ತೋರಿದ್ಯಾಕೆ ಅನ್ನೋ ಡೌಟ್‌ ನಿಮ್ಮ ತಲೆಗೆ ಹೊಳೆದಿದ್ಯಾ.? ಇದು ಹೊಸ ಯೋಜನೆ ಏನೂ ಅಲ್ಲ. ಕೆಲವು ವರ್ಷಗಳಿಂದಲೂ ಫೇಸ್‌ಬುಕ್‌ ಸ್ಮಾರ್ಟ್‌ವಾಚ್‌ ತಯಾರಿಸಲು ಆಸಕ್ತಿ ತೋರಿಸಿದೆ. ಇದರಲ್ಲಿ ಆರೋಗ್ಯ ಮತ್ತು ಮೆಸೇಜಿಂಗ್ ವೈಶಿಷ್ಟ್ಯಗಳು ಇರಲಿವೆ ಎಂಬ ಮಾಹಿತಿಯೂ ಇದೆ.


First published: June 10, 2021, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories