ಫೇಸ್ಬುಕ್​​ನಲ್ಲಿ ಖಾಸಗಿ ಮೆಸೇಜ್ ಕಳಿಸುವ ಮೊದಲು ಹುಷಾರ್​​..!

ನಾವು ಎಷ್ಟೇ ಎಚ್ಚರ ವಹಿಸಿದರೂ ಫೇಸ್ಬುಕ್​​​ ಬಳಕೆದಾರರ ಡಾಟಾ ಕಳವು, ಖಾತೆಗಳನ್ನು ಹ್ಯಾಕ್ ಮಾಡೋದು ನಿಲ್ಲುತ್ತಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ 50 ಮಿಲಿಯನ್​ಗೂ ಹೆಚ್ಚು ಖಾತೆಗಳಿಗೆ ಸೇಫ್​​ ಇಲ್ಲದೆ ಹ್ಯಾಕ್​​ ಆಗಿವೆ ಎಂದು​ ಫೇಸ್ಬುಕ್​​ ಸಂಸ್ಥೆಯೇ ಅಧಿಕೃತ ಮಾಹಿತಿ ನೀಡಿತ್ತು.

Ganesh Nachikethu | news18
Updated:April 8, 2019, 11:24 PM IST
ಫೇಸ್ಬುಕ್​​ನಲ್ಲಿ ಖಾಸಗಿ ಮೆಸೇಜ್ ಕಳಿಸುವ ಮೊದಲು ಹುಷಾರ್​​..!
ಫೇಸ್​ಬುಕ್ ಸಾಂದರ್ಭಿಕ ಚಿತ್ರ
Ganesh Nachikethu | news18
Updated: April 8, 2019, 11:24 PM IST
ನವದೆಹಲಿ(ಏ.06): ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೈಬರ್​​ ಕ್ರೈಮ್​​ ಹೆಚ್ಚುತ್ತಿದೆ. ಇದರಿಂದ ಫೇಸ್ಬುಕ್​ ಖಾತೆ ಹ್ಯಾಕ್​ ಆಗಲಿದೆ, ಹೀಗಾಗಿ ಎಚ್ಚರವಹಸಿಬೇಕೆಂದು ಹೇಳಲಾಗುತ್ತಿತ್ತು. ಪ್ರಮುಖವಾಗಿ ಹ್ಯಾಕಿಂಗ್​​ ವೇಳೆ ನಮ್ಮ ಡೇಟಾ, ಖಾಸಗಿ ಮೆಸೇಜುಗಳು ಎಲ್ಲವೂ ಕಳವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಫೇಸ್ಬುಕ್​​ ಬಳಕೆದಾರರಿಗೆ ಮತ್ತೊಂದು ಆಂತಕಕಾರಿ ಸುದ್ದಿಯೊಂದು ಕಾದಿದೆ. ಹಣಕ್ಕಾಗಿ ಫೇಸ್ಬುಕ್​​ ಸಂಸ್ಥೆಯೇ ಬಳಕೆದಾರರ ಡೇಟಾ ಮಾರಟ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಖಾಸಗಿ ಮೆಸೇಜ್​ಕಳಿಸುವ ಮುನ್ನ ನಾವು ಎಚ್ಚರಿಕೆಯಿಂದ ಇರಬೇಕಿದೆ.

ನ್ಯೂಯಾರ್ಕ್​​ ಮೂಲದ ಪತ್ರಿಕೆಯೊಂದು ಫೇಸ್ಬುಕ್​​ ಬಳಕೆದಾರರ ಡೇಟಾ, ಖಾಸಗಿ ಸಂದೇಶಗಳು, ಸಂಪರ್ಕ ಸಮೇತ ಕೆಲವು ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಪ್ರಪಂಚದಲ್ಲಿಯೇ ಅತೀ ದೊಡ್ಡ ಕಂಪನಿಗಳಾದ ಮೈಕ್ರೋಸಾಫ್ಟ್​​, ಅಮೇಜಾನ್​​ ರೀತಿಯ ಸಂಸ್ಥೆಗಳಿಗೆ ನಿಮ್ಮ ಡೇಟಾ ನೀಡಲಾಗುತ್ತಿದೆ. ನಮ್ಮ ಖಾತೆಯಲ್ಲಿ ನಾವು ಇನ್ನೊಬ್ಬರಿಗೆ ಕಳಿಸುವ ಮೆಸೇಜ್​​, ಹಾಗೂ ಸಂಪರ್ಕ ಪಡೆಯಲು ಕಂಪನಿಗಳಿಗೆ ಅನುಮತಿ ನೀಡಿದೆ ಎಂದು ಫೇಸ್ಬುಕ್​​ ಸಂಸ್ಥೆಯ ಆಂತರಿಕ ಮೂಲಗಳು ತಿಳಿಸಿವೆ ಎಂದು ವರದಿ ಮಾಡಲಾಗಿದೆ.

ಈ ಹಿಂದೆ ನಾವು ಎಷ್ಟೇ ಎಚ್ಚರ ವಹಿಸಿದರೂ ಫೇಸ್ಬುಕ್​​​ ಬಳಕೆದಾರರ ಡಾಟಾ ಕಳವು, ಖಾತೆಗಳನ್ನು ಹ್ಯಾಕ್ ಮಾಡೋದು ನಿಲ್ಲುತ್ತಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ 50 ಮಿಲಿಯನ್​ಗೂ ಹೆಚ್ಚು ಖಾತೆಗಳಿಗೆ ಸೇಫ್​​ ಇಲ್ಲದೆ ಹ್ಯಾಕ್​​ ಆಗಿವೆ ಎಂದು​ ಫೇಸ್ಬುಕ್​​ ಸಂಸ್ಥೆಯೇ ಅಧಿಕೃತ ಮಾಹಿತಿ ನೀಡಿತ್ತು. ಅಲ್ಲದೇ ಫೇಸ್ಬುಕ್ಕಿನಲ್ಲಿ ‘ವೀವ್​​ ಆ್ಯಸ್’(View As)​​ ಎಂಬ ಆಪ್ಷನ್​ ಇದೆ. ಈ ಆಪ್ಷನ್​​ ಬಳಸಿ ಟೋಕನ್​​ ನಂಬರ್​​ ಕದಿಯುವ ಮೂಲಕ ಖಾತೆಗಳನ್ನು ಹ್ಯಾಕ್​​ ಮಾಡಬಹುದು. ವೀವ್​​ ಆ್ಯಸ್​ ಎಂಬ ಆಪ್ಷನ್​ ಬಳಕೆದಾರರ ಉಪಯೋಗಕ್ಕಾಗಿ ಇರುವಂತದ್ದು. ಆದರೆ, ಇಲ್ಲಿ ಈ ಆಪ್ಷನ್​​ನಿಂದ ಉಪಯೋಗಕ್ಕಿಂತ ಫೇಸ್ಬುಕ್​​​ ಬಳಕೆದಾರರ ಖಾತೆಗಳು ಹ್ಯಾಕ್​​ ಆಗುತ್ತಿವೆ. ಅಲ್ಲದೇ ಹ್ಯಾಕರ್ಸ್​ಗೆ​ ಡೇಟಾ ಕದಿಯಲು ಸಹಾಯವಾಗುತ್ತಿದೆ ಎಂದು ಸಂಸ್ಥೆಯೇ ತಿಳಿಸಿತ್ತು.

ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್​​ ಬಡತನ ನಿರ್ಮೂಲನೆ ಬಗ್ಗೆ ಮಾತಾಡುತ್ತದೆ; ಮೋದಿ ವ್ಯಂಗ್ಯ

ಹೀಗಾಗಿ ನಾವು ಫೇಸ್ಬುಕ್​​ ಖಾತೆಯನ್ನು ಯಾರು ಹ್ಯಾಕ್​​ ಮಾಡುತ್ತಿದ್ಧಾರೆ ಎಂದು ಶೋಧಿಸುತ್ತಿದ್ದೇವೆ. 90 ಮಿಲಿಯನ್​ಗೂ ಹೆಚ್ಚು ಮಂದಿ ವೀವ್​​ ಆ್ಯಸ್​​ ಎಂಬ ಆಪ್ಷನ್​ ಬಳಸುತ್ತಿದ್ದಾರೆ. ಇದರಲ್ಲಿ ಸುಮಾರು 50 ಮಿಲಿಯನ್​​ ಖಾತೆಗಳು ಹ್ಯಾಕಿಂಗ್​ ಸಮಸ್ಯೆಗೆ ಒಳಗಾಗಿವೆ. ನಾವು ಸದ್ಯದಲ್ಲೇ ಸಮಸ್ಯೆಗೆ ಪರಿಹಾರ ಕಂಡುಹಿಡಿಯುತ್ತೇವೆ ಎಂದು ಸಂಸ್ಥೆ ಭರವಸೆ ನೀಡಿತ್ತು. ಆದರೀಗ ಭರವಸೆ ನೀಡಿದ್ದ ಫೇಸ್ಬುಕ್​​ ಸಂಸ್ಥೆಯೇ ಡಾಟ ಮಾರಾಟ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಏನೇ ಆಗಲೀ, ನೀವು ಯಾವುದೇ ಖಾಸಗಿ ಸಂದೇಶಗಳನ್ನು ಕಳಿಸುವ ಮುನ್ನ ಎಚ್ಚರವಹಸಿ ಎಂಬುದಷ್ಟೇ ನಮ್ಮ ಆಶಯ.
------------------
Loading...

First published:April 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626