ಪ್ರತಿದಿನ 10 ಲಕ್ಷಕ್ಕೂ ಅಧಿಕ ಫೇಸ್​ಬುಕ್ ಖಾತೆಗಳು ಡಿಲೀಟ್​: ಈ ತಪ್ಪು ಮಾಡಿದ್ರೆ ನಿಮ್ಮ ಖಾತೆ ಖತಂ

ಮತದಾನದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಫೇಸ್​ಬುಕ್ ಸಂಸ್ಥೆಯು ಶೇರ್ ಯು ವೋಟೆಡ್​ ಫೀಚರ್ ಪರಿಚಯಿಸಿದೆ.

zahir | news18
Updated:April 9, 2019, 5:42 PM IST
ಪ್ರತಿದಿನ 10 ಲಕ್ಷಕ್ಕೂ ಅಧಿಕ ಫೇಸ್​ಬುಕ್ ಖಾತೆಗಳು ಡಿಲೀಟ್​: ಈ ತಪ್ಪು ಮಾಡಿದ್ರೆ ನಿಮ್ಮ ಖಾತೆ ಖತಂ
ಸಾಂದರ್ಭಿಕ ಚಿತ್ರ
zahir | news18
Updated: April 9, 2019, 5:42 PM IST
ಸಾಮಾಜಿಕ ಜಾಲತಾಣದ ದೈತ್ಯ ಫೇಸ್​ಬುಕ್​ ತನ್ನ ಬಳಕೆದಾರರ ನಿಯಂತ್ರಣಕ್ಕೆ ಮುಂದಾಗಿದೆ. ಇದಕ್ಕಾಗಿ ಪ್ರತಿದಿನ 10 ಲಕ್ಷಕ್ಕೂ ಅಧಿಕ ಖಾತೆಗಳನ್ನು ಡಿಲೀಟ್ ಅಥವಾ ನಿರ್ಬಂಧಿಸಲಾಗುತ್ತಿದೆ ಎಂದು ಫೇಸ್​ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಫೇಸ್​ಬುಕ್ ನಕಲಿ ಖಾತೆಗಳು ವ್ಯಾಪಕವಾಗಿ ಹೆಚ್ಚುತ್ತಿದ್ದು, ಈ ಖಾತೆಗಳನ್ನು ಗುರುತಿಸಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಟಿಫಿಶಿಯಲ್(AI) ಮತ್ತು ಮೆಶಿನ್ ಲರ್ನಿಂಗ್ ಸಹಾಯದಿಂದ ಇಂತಹ ನಕಲಿ ಖಾತೆಗಳನ್ನು ಫೇಸ್​ಬುಕ್ ಪತ್ತೆ ಹಚ್ಚುತ್ತಿದೆ ಎಂದು ತಿಳಿಸಲಾಗಿದೆ.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ 18 ತಿಂಗಳ ಮೊದಲೇ ಫೇಸ್​ಬುಕ್ ತನ್ನ ಜಾಲತಾಣವನ್ನು ನಿಯಂತ್ರಿಸಲು ಮುಂದಾಗಿತ್ತು. ಇದೀಗ ಮತ್ತಷ್ಟು ಭದ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ದೇಶದಲ್ಲಿ ಚುನಾವಣೆಯು ನ್ಯಾಯೋಚಿತವಾಗಿ ಹಾಗೂ ಪಾರದರ್ಶಕತೆಯಿಂದ ನಡೆಯುವಂತೆ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ.

ಇದಕ್ಕಾಗಿ ಈಗಾಗಲೇ ಸಿಂಗಾಪುರ ಹಾಗೂ ಡಬ್ಲಿನ್​ನಲ್ಲಿ ರಿಜಿನಲ್ ಆಪರೇಶನ್ ಸೆಂಟರ್​ಗಳನ್ನು ಫೇಸ್​ಬುಕ್ ಆರಂಭಿಸಿದ್ದು, ಇಲ್ಲಿ AI ಹಾಗೂ ML ತಂಡಗಳ ಸಹಾಯದೊಂದಿಗೆ ನಕಲಿ ಸುದ್ದಿ ಹಾಗೂ ಸುಳ್ಳು ಸುದ್ದಿಗಳ, ದ್ವೇಷ ಪೂರಿತ ವಿಡಿಯೋಗಳ ಹರಡುವಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಜಿತ್ ಮೋಹನ್ ಹೇಳಿದ್ದಾರೆ. ಹೀಗಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ನಿಮ್ಮ ಖಾತೆಯನ್ನು ಡಿಲೀಟ್ ಮಾಡಬಹುದು. ಅಥವಾ ಕೆಲ ಕಾಲದವರೆಗೆ ನಿರ್ಬಂಧಿಸಬಹುದು ಎಂದು ತಿಳಿಸಲಾಗಿದೆ.

ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಶೇರ್ ಯು ವೋಟೆಡ್ ಮತ್ತು ಕ್ಯಾಂಡಿಡೇಟ್ ಕನೆಕ್ಟ್ ಎಂಬ ಎರಡು ಹೊಸ ಫೀಚರ್​ಗಳನ್ನು ಫೇಸ್​ಬುಕ್ ಪರಿಚಯಿಸಿದೆ.

ಕ್ಯಾಂಡಿಡೇಟ್ ಕನೆಕ್ಟ್ ಫೀಚರ್​ನ ವಿಶೇಷತೆಯೇನು?
Loading...

ಈ ಆಯ್ಕೆಯನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಫೇಸ್​ಬುಕ್ ಪರಿಚಯಿಸಿದೆ. ಇದಕ್ಕಾಗಿ ನಿಮ್ಮ ಸೆಟ್ಟಿಂಗ್ಸ್​ನಲ್ಲಿ ಬುಕ್​ಮಾರ್ಕ್​ ಅಥವಾ ನ್ಯೂಸ್​ ಫೀಡ್​ನಲ್ಲಿ ಒಂದು ಮೆಸೇಜ್​ ಅಕ್ಸೆಸ್ ನೀಡಿದ್ದು ಅದರ ಮೂಲಕ ಕ್ಯಾಂಡಿಡೇಟ್​ ಕನೆಕ್ಟ್​ ಅನ್ನು ವೀಕ್ಷಿಸಬಹುದು. ಇಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯು 20 ಸೆಕೆಂಡುಗಳ ವಿಡಿಯೋ ಮೂಲಕ ಮತದಾರರಿಗೆ ತಮ್ಮ ಪರಿಚಯ ಮಾಡಿಕೊಳ್ಳಲಿದ್ದಾರೆ. ಅಲ್ಲದೆ ತಮ್ಮ ಕ್ಷೇತ್ರದಲ್ಲಿ ಮಾಡಲಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಮೂಲಕ ಅಭ್ಯರ್ಥಿ ಹಾಗೂ ಮತದಾರರನ್ನು ಕನೆಕ್ಟ್​ ಮಾಡುವ ಫೀಚರ್​ ಅನ್ನು ಫೇಸ್​ಬುಕ್ ನೀಡಿದೆ.

ಶೇರ್ ಯು ವೋಟೆಡ್​ ಫೀಚರ್:
ಮತದಾನದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಫೇಸ್​ಬುಕ್ ಸಂಸ್ಥೆಯು ಶೇರ್ ಯು ವೋಟೆಡ್​ ಫೀಚರ್ ಪರಿಚಯಿಸಿದೆ. ಈ ಆಯ್ಕೆ ಮೂಲಕ ನೀವು ಮತಚಲಾಯಿಸಿರುವ ಫೋಟೋವನ್ನು ಶೇರ್​ ಮಾಡಿಕೊಳ್ಳಬಹುದು. ಇದರ ಹೊರತಾಗಿ ವೋಟ್​ ಮಾಡಿದ ಫ್ರೆಂಡ್ಸ್​ಗಳ ಫೋಟೋಗಳನ್ನು ಕೊಲಾಜ್​ ಮೂಲಕ ಹಂಚಿಕೊಳ್ಳಬಹುದು. ಬಳಿಕ ಇದನ್ನು ವಿಡಿಯೋ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಈ ಆಯ್ಕೆಯು ಭಾರತದಲ್ಲಿ 12 ಭಾಷೆಗಳಲ್ಲಿ ಲಭ್ಯವಿರಲಿದ್ದು, ಈ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಯುವ ಸಮೂಹವನ್ನು ಪ್ರೇರೆಪಿಸಲು ಫೇಸ್​ಬುಕ್ ಯೋಜನೆ ಹಾಕಿಕೊಂಡಿದೆ.

First published:April 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626