Facebook: ಭಾರತೀಯ ಮಹಿಳೆಯರಿಗೆ ಖುಷಿಯೋ ಖುಷಿ… ಮಹಿಳಾ ಸುರಕ್ಷತೆಗಾಗಿ Meta ಏನು ಮಾಡಿದೆ ಗೊತ್ತಾ?

Meta: ಬಹುತೇಕ ಮಹಿಳೆಯರು ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಇದೀಗ ಮೆಟಾ ಈ ವೇದಿಕೆಗಳ ಮೂಲಕ ಭಾರತದ ಮಹಿಳೆಯರ ಸುರಕ್ಷತೆಯನ್ನು ನೋಡಿಕೊಳ್ಳಲು ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಉಪಕ್ರಮದಲ್ಲಿ, ಕಂಪನಿಯು ಹೊಸ ಪ್ಲಾಟ್​ಫಾರ್ಮ್ ಸೇರಿದಂತೆ ಮೂರು ಉಪಕ್ರಮಗಳನ್ನು ತೆಗೆದುಕೊಂಡಿದೆ.

Meta / ಮೆಟಾ

Meta / ಮೆಟಾ

  • Share this:
    ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್​ಬುಕ್ (Facebook) ತನ್ನ ಮೂಲ ಹೆಸರನ್ನು ಮೆಟಾ (Meta) ಎಂದು ಬದಲಾಯಿಸಿಕೊಂಡಿದೆ. ಆದರೂ ತನ್ನ ಕಾರ್ಯವನ್ನು ಹಿಂದಿನಂತೆಯೇ ಮಾಡುತ್ತಾ ಬಂದಿದೆ. ಇದೀಗ ಭಾರತದ ಮಹಿಳೆಯರ ಸುರಕ್ಷತೆಯನ್ನು (safety of women) ಗಮನದಲ್ಲಿಟ್ಟುಕೊಂಡು ಮೆಟಾ ಮೂರು ಹೊಸ ಉಪಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರ ಭಾವ ಚಿತ್ರಗಳಿಗೆ ರಕ್ಷಣೆ ಒದಗಿಸುವ ವಿಶೇಷ ವೇದಿಕೆಯನ್ನು ಸೇರಿಸಿದೆ. ಮೆಟಾದ ಈ ಪ್ರಯತ್ನಗಳು ಹೆಚ್ಚುತ್ತಿರುವ ಸೈಬರ್ ಕ್ರೈಮ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ನೋಡಿಕೊಳ್ಳುವುದರ ಸಲುವಾಗಿ ಈ ರೀತಿಯ ಕ್ರಮಕ್ಕೆ ಮುಂದಾಗಿದೆ. 

    ಮಹಿಳೆಯ ಸುರಕ್ಷತೆಗಾಗಿ ಮುಂದಾದ META 

    ಬಹುತೇಕ ಮಹಿಳೆಯರು ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಇದೀಗ ಮೆಟಾ ಈ ವೇದಿಕೆಗಳ ಮೂಲಕ ಭಾರತದ ಮಹಿಳೆಯರ ಸುರಕ್ಷತೆಯನ್ನು ನೋಡಿಕೊಳ್ಳಲು ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಉಪಕ್ರಮದಲ್ಲಿ, ಕಂಪನಿಯು ಹೊಸ ಪ್ಲಾಟ್​ಫಾರ್ಮ್ ಸೇರಿದಂತೆ ಮೂರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಮಹಿಳಾ ಸುರಕ್ಷತಾ ಹಬ್ ಅನ್ನು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುತ್ತದೆ ಮತ್ತು ಕಂಪನಿಯ ಜಾಗತಿಕ ಮಹಿಳಾ ಸುರಕ್ಷತೆ ತಜ್ಞರ ಸಲಹೆಗಾರರಿಗೆ ಭಾರತೀಯ ಸದಸ್ಯರನ್ನು ಸೇರಿಸುತ್ತದೆ. .

    ಮೆಟಾ ಹೊಸ ವೇದಿಕೆಯನ್ನು ಪ್ರಾರಂಭಿಸಿದೆ

    ಹೊಸ ಪ್ಲಾರ್ಟ್​ಫಾರ್ಮ್, ಯಾರಿಗೂ ತಿಳಿಯದೇ ಇರುವ ಚಿತ್ರಗಳ (NCII) ಹಂಚಿಕೆಯನ್ನು ಪರಿಶೀಲಿಸುತ್ತದೆ ಮತ್ತು ಮಿತಿಗೊಳಿಸುತ್ತದೆ. ಇದನ್ನು StopNCII.org ಎಂದು ಕರೆಯಲಾಗುತ್ತದೆ ಮತ್ತು ಭಾರತದಲ್ಲಿ ಇದು ಸೋಶಿಯಲ್ ಮೀಡಿಯಾ ಮ್ಯಾಟರ್ಸ್, ರೆಡ್ ಡಾಟ್ ಫೌಂಡೇಶನ್ ಮತ್ತು ಸೆಂಟರ್ ಫಾರ್ ಸೋಶಿಯಲ್ ರಿಸರ್ಚ್​​ನಂತಹ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಪ್ಲಾಟ್​​ಫಾರ್ಮ್​ ಸಹಾಯದಿಂದ, ಮಹಿಳೆಯರು ತಮ್ಮ ದೂರುಗಳನ್ನು ಈ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬಹುದು, ಅವರ ನಿಕಟ ಚಿತ್ರಗಳನ್ನು ಫೇಸ್​ಬುಕ್, ಲಿಂಕ್ಡ್ಇನ್, ಬಂಬಲ್ ಮತ್ತು ಡಿಸ್ಕಾರ್ಡ್​ನಂತಹ ಪ್ಲಾಟ್​ಫಾರ್ಮ್​ಗಳಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೇದಿಕೆಯು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಪರಿಶೀಲಿಸುತ್ತದೆ ಮತ್ತು ಸಾಧ್ಯವಾದಷ್ಟು ಬೇಗ ಮಹಿಳೆಯರ ಚಿತ್ರಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ. ಮಹಿಳೆಯರು ಬಯಸಿದರೆ ಈ ವೇದಿಕೆಯಲ್ಲಿ ತಮ್ಮ ಪ್ರಕರಣದ ಸ್ಥಿತಿಯನ್ನು ಸಹ ಪರಿಶೀಲಿಸಬಹುದು.

    ಭಾರತೀಯ ಭಾಷೆಗಳಲ್ಲಿ ಮಹಿಳಾ ಸುರಕ್ಷತಾ ಕೇಂದ್ರ

    ಮಹಿಳಾ ಸುರಕ್ಷತಾ ಕೇಂದ್ರವು ಮಹಿಳಾ ನಾಯಕರು, ಪತ್ರಕರ್ತರು ಮತ್ತು ಶೋಷಣೆಯನ್ನು ಎದುರಿಸಿದ ಮಹಿಳೆಯರಿಗೆ ಅನೇಕ ವಿಶೇಷ ಸಂಪನ್ಮೂಲಗಳನ್ನು ಹೊಂದಿರುವ ವೇದಿಕೆಯಾಗಿದೆ. ಈ ಸೈಟ್ಗೆ ಭೇಟಿ ನೀಡುವವರು ಲೈವ್ ಸುರಕ್ಷತಾ ತರಬೇತಿಗಾಗಿ ನೋಂದಾಯಿಸಲು ಅವಕಾಶವನ್ನು ಪಡೆಯುತ್ತಾರೆ. ವೀಡಿಯೊ-ಆನ್-ಡಿಮಾಂಡ್ ಸುರಕ್ಷತಾ ತರಬೇತಿಯ ಆಯ್ಕೆಯೂ ಇದೆ. ಈಗ ವಿಶೇಷವಾಗಿ ಭಾರತೀಯ ಮಹಿಳೆಯರಿಗಾಗಿ, ಈ ವೇದಿಕೆಯನ್ನು ಹಿಂದಿ, ಮರಾಠಿ, ಪಂಜಾಬಿ, ಗುಜರಾತಿ, ತಮಿಳು, ತೆಲುಗು, ಉರ್ದು, ಬೆಂಗಾಲಿ, ಒರಿಯಾ, ಅಸ್ಸಾಮಿ, ಕನ್ನಡ ಮತ್ತು ಮಲಯಾಳಂ, ಈ ಎಲ್ಲಾ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

    ಇದನ್ನು ಓದಿ: Emoji: ಎಲ್ಲರಿಗೂ ಇಷ್ಟ ಈ ಎಮೋಜಿ! 2021 ರಲ್ಲಿ ಅತಿ ಹೆಚ್ಚು ಬಳಸಿದ ಎಮೋಜಿಗಳಾವುದು ಗೊತ್ತಾ?

    ಜಾಗತಿಕ ಮಹಿಳಾ ಸುರಕ್ಷತೆ ತಜ್ಞರ ಸಲಹೆಗಾರರಲ್ಲಿ ಭಾರತೀಯರು

    META's Global Women's Safety Expert Advisors ಎಂಬುದು 12 ಸದಸ್ಯರನ್ನು ಒಳಗೊಂಡಿರುವ ಒಂದು ಗುಂಪಾಗಿದ್ದು, ಕಂಪನಿಯು ತಮ್ಮ ಅಪ್ಲಿಕೇಶನ್​ಗಳೊಂದಿಗೆ ಸಂಯೋಜಿತವಾಗಿರುವ ಮಹಿಳೆಯರಿಗೆ ಉತ್ತಮ ಅಭಿವೃದ್ಧಿ ಯೋಜನೆಗಳು, ಉತ್ಪನ್ನಗಳು ಮತ್ತು ಯೋಜನೆಗಳನ್ನು ಶಿಫಾರಸು ಮಾಡುತ್ತಾರೆ. ಇಲ್ಲಿಯವರೆಗೆ ಈ ಗುಂಪಿನಲ್ಲಿ ಯಾವುದೇ ಭಾರತೀಯ ಸದಸ್ಯ ಇರಲಿಲ್ಲ. ಈ ಬಾರಿ META ಈ ಪ್ಯಾನೆಲ್ನಲ್ಲಿ ಪಾಯಿಂಟ್ ಆಫ್ ವ್ಯೂನ ಕಾರ್ಯನಿರ್ವಾಹಕ ಸಂಪಾದಕ ಬಿಶಾಖಾ ದತ್ತಾ ಮತ್ತು ಸೆಂಟರ್ ಫಾರ್ ಸೋಶಿಯಲ್ ರಿಸರ್ಚ್ನ ಮೀಡಿಯಾ ಕಮ್ಯುನಿಕೇಷನ್ಸ್ ಮುಖ್ಯಸ್ಥ ಜ್ಯೋತಿ ವಡೆಹ್ರಾ ಅವರನ್ನು ಸೇರಿಸಿದೆ. ಇವರಿಬ್ಬರೂ ಈ ಸಮಿತಿಯ ಭಾಗವಾದ ಮೊದಲ ಭಾರತೀಯರಾಗಿದ್ದಾರೆ.

    ಇದನ್ನು ಓದಿ: Jio ಕಡೆಯಿಂದ ಭರ್ಜರಿ ಆಫರ್​; ಪ್ರಿಪೇಯ್ಡ್​ ಪ್ಲಾನ್​ಗಳ ಮೇಲೆ ಶೇ.20 ರಷ್ಟು ಕ್ಯಾಶ್​​ಬ್ಯಾಕ್​

    ಭಾರತದ ಮಹಿಳೆಯರಿಗೆ ಆನ್ಲೈನ್ ಪ್ಲಾಟ್​​ಫಾರ್ಮ್​ಗಳನ್ನು ಸುರಕ್ಷಿತ ಮತ್ತು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಉಪಕ್ರಮವು META ದ ಪ್ರಯತ್ನವಾಗಿದೆ ಮತ್ತು ಕಂಪನಿಯು ಈ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತಿದೆ.
    Published by:Harshith AS
    First published: