Meta: ವಾಟ್ಸ್​​ಆ್ಯಪ್​ನಲ್ಲಿ ಹೀಗೊಂದು ಬದಲಾವಣೆ, ಅದಕ್ಕೆ ಕಾರಣ ಫೇಸ್​ಬುಕ್​!

Whatsapp: ಪ್ರಸ್ತುತ, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್​ಆ್ಯಪ್​ ಹೇಗೆ ಬಳಸುತ್ತೇವೆ ಎಂಬುದರ ವಿಷಯದಲ್ಲಿ ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ, ಆದರೆ ವಾಟ್ಸ್​ಆ್ಯಪ್​ ತೆರೆಯುವ ಸಮಯದಲ್ಲಿ ಸಣ್ಣದೊಂದು ಬದಲಾವಣೆಯನ್ನು ಕಾಣಬಹುದಾಗಿದೆ.

WhatsApp

WhatsApp

 • Share this:
  ಫೇಸ್‌ಬುಕ್ (Facebook) ಇತ್ತೀಚೆಗೆ ತನ್ನ ಹೆಸರನ್ನು ಮೆಟಾ (Meta) ಎಂದು ಬದಲಾಯಿಸಿಕೊಂಡಿದೆ. ಹೆಸರಿನ ಬದಲಾವಣೆಯೊಂದಿಗೆ, WhatsApp ಮತ್ತು Instagram ನಂತಹ ಇತರ ಮೆಟಾ ಸೇವೆಗಳ ಬಳಕೆದಾರರು ಈ ಬದಲಾವಣೆಯ ಅರ್ಥವೇನು ಎಂದು ಆಶ್ಚರ್ಯ ಪಡುತ್ತಿದ್ದಾರೆ. ಪ್ರಸ್ತುತ, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್​ಆ್ಯಪ್​ ಹೇಗೆ ಬಳಸುತ್ತೇವೆ ಎಂಬುದರ ವಿಷಯದಲ್ಲಿ ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ, ಆದರೆ ವಾಟ್ಸ್​ಆ್ಯಪ್​ ತೆರೆಯುವ ಸಮಯದಲ್ಲಿ ಸಣ್ಣದೊಂದು ಬದಲಾವಣೆಯನ್ನು ಕಾಣಬಹುದಾಗಿದೆ.

  WhatsApp ಟ್ರ್ಯಾಕರ್ WABetaInfo ವರದಿಯಂತೆ, WhatsApp ನ ಬೀಟಾ ಆವೃತ್ತಿಯು ಅಪ್ಲಿಕೇಶನ್ ತೆರೆಯುವ ಮೊದಲು ಸ್ಪ್ಲಾಶ್ ಪರದೆಯಲ್ಲಿ "WhatsApp by Facebook" ಬದಲಿಗೆ "WhatsApp by Meta" ಎಂದು ತೋರಿಸುತ್ತದೆ.

  ವಾಟ್ಸ್​ಆ್ಯಪ್​ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಹೊಸ ಬದಲಾವಣೆ ಕಂಡುಬಂದಿದೆ ಎಂದು ವರದಿ ಹೇಳುತ್ತದೆ. ಅಪ್ಲಿಕೇಶನ್‌ನ ಸ್ಥಿರ ಆವೃತ್ತಿಯಲ್ಲಿ ಇದನ್ನು ಶೀಘ್ರದಲ್ಲೇ ಪರಿಚಯಿಸುವ ನಿರೀಕ್ಷೆಯಿದೆ. WABetaInfo ವರದಿಯು ಆ್ಯಪ್‌ನ ಸೆಟ್ಟಿಂಗ್‌ಗಳ ಪುಟದ ಅಡಿಟಿಪ್ಪಣಿಯಲ್ಲಿ ಗೋಚರಿಸುವ ಅಪ್ಲಿಕೇಶನ್‌ನಲ್ಲಿ WhatsApp by Facebook ಲೇಬಲ್ ಸಹ ಬೀಟಾ ಆವೃತ್ತಿಯಿಂದ ಕಾಣೆಯಾಗಿದೆ ಎಂದು ಹೇಳುತ್ತದೆ. ಪ್ರಸ್ತುತ, WhatsApp ಮಾತ್ರ ಹೊಸತನಕ್ಕೆ ಬದಲಾಯಿಸಿಕೊಂಡಿದೆ.

  WABetaInfo ವರದಿಯು ಕೆಲವು iOS ಬೀಟಾ ಸ್ಪ್ಲಾಶ್ ಪರದೆಯು ಗೋಚರಿಸದ ಸಮಸ್ಯೆಯನ್ನು ಅನುಭವಿಸಬಹುದು ಎಂದು ಹೇಳಿದೆ. ಮುಂದಿನ ಬೀಟಾ ನಿರ್ಮಾಣದಲ್ಲಿ ಈ ಸಮಸ್ಯೆಯನ್ನು ಸರಿಪಡಿಸಬಹುದು ಎಂದು ವರದಿ ಹೇಳಿದೆ. ಈ ಬದಲಾವಣೆಯ ಮೂಲಕ ಮುಂಬರುವ ವಾರಗಳಲ್ಲಿ WhatsAppನಲ್ಲಿ ಮೆಟಾ ಎಂದು ಕಾಣಿಸಿಕೊಳ್ಳಲಿದೆ.

  ಇದನ್ನು ಓದಿ: Made In India: ಈ Smart TV ಬೆಲೆ ಬರೀ ₹8,000, ಏನೆಲ್ಲಾ ಫೀಚರ್ಸ್ ಇದೆ ನೋಡಿ

  ಹೀಬ್ರೂ ಭಾಷೆಯಲ್ಲಿ ಅಪಹಾಸ್ಯ!

  ಫೇಸ್‌ಬುಕ್ (Facebook) ತನ್ನ ಹೆಸರನ್ನು ಮೆಟಾ ‘Meta’ ಎಂದು ಬದಲಾಯಿಸುತ್ತಿರುವುದಾಗಿ ಪ್ರಕಟಣೆ ಹೊರಡಿಸಿರುವುದು ಇಸ್ರೇಲ್‌ನಲ್ಲಿ ಸಾಕಷ್ಟು ಕೋಲಾಹಲ ಉಂಟುಮಾಡಿದೆ. ಯಾಕೆಂದರೆ, ಹೀಬ್ರೂ ಬಾಷೆಯಲ್ಲಿ ಮೆಟಾ ಎಂಬ ಪದಕ್ಕೆ "ಮೃತ ಪಟ್ಟ" ಎಂಬ ಪದದಂತೆ ಧ್ವನಿಸುತ್ತದೆ ಎಂದು ತಿಳಿದುಬಂದಿದೆ. ನಿಖರವಾಗಿ ಹೇಳಬೇಕೆಂದರೆ, ಹೀಬ್ರೂ ಪದದ ಸ್ತ್ರೀಲಿಂಗ ರೂಪದಂತೆ ಮೆಟಾವನ್ನು ಉಚ್ಚರಿಸಲಾಗುತ್ತದೆ ಎಂದೂ ಹೇಳಲಾಗಿದೆ. ಈ ಹಿನ್ನೆಲೆ #FacebookDead ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಹಲವಾರು ಜನರು ಫೇಸ್‌ಬುಕ್‌ಗೆ ಮೆಟಾ ಎಂಬ ಹೆಸರು ಇಡುವ ಬಗ್ಗೆ ಜನರು ಹಾಗೂ ನೆಟ್ಟಿಗರು ಈ ರೀತಿ ಸಾಮಾಜಿಕ ಜಾಲತಾಣ, ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ ನಾನಾ ರೀತಿಯಲ್ಲಿ ಕಾಮೆಂಟ್‌ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

  ತುರ್ತು ರಕ್ಷಣಾ ಸ್ವಯಂಸೇವಕರಾದ Zakaಕೂಡ "ಚಿಂತಿಸಬೇಡಿ, ನಾವಿದ್ದೇವೆ" ಎಂದು ಟ್ವಿಟ್ಟರ್‌ನಲ್ಲಿ ತನ್ನ ಅನುಯಾಯಿಗಳಿಗೆ ಟ್ವೀಟ್‌ ಮೂಲಕ ಹೇಳಿದ್ದಾರೆ.

  ನಿರಿಟ್‌ ವೇಯ್ಸ್‌ - ಬ್ಲಾಟ್‌ ಎಂಬ ಪಿ.ಎಚ್‌ಡಿ ಅಧ್ಯಯನ ಮಾಡಿದ ಮಹಿಳೆ ಹಾಗೂ ಲೇಖಕಿ,ಹೀಬ್ರೂ ಭಾಷೆಯಲ್ಲಿ ಮೆಟಾ ಅಂದರೆ ‘’ಸತ್ತಿದ್ದಾರೆ’’ ಎಂದು. ಯಹೂದಿ ಸಮುದಾಯವು ಮುಂಬರುವ ವರ್ಷಗಳಲ್ಲಿ ಈ ಹೆಸರನ್ನು ಅಪಹಾಸ್ಯ ಮಾಡುತ್ತದೆ ಎಂದು ಆಕೆ ಫೇಸ್‌ಬುಕ್‌ ನ್ಯೂಸ್‌ರೂಂ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಇದೇ ರೀತಿ,ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು "ಎಲ್ಲಾ ಹೀಬ್ರೂ ಮಾತನಾಡುವವರಿಗೆ ನಗಲು ಉತ್ತಮ ಕಾರಣವನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳಿದ್ದಾರೆ.

  ಇನ್ನು, ಫೇಸ್‌ಬುಕ್ ತನ್ನ ಬ್ರ್ಯಾಂಡಿಂಗ್‌ನ ಅನುವಾದಗಳ ಬಗ್ಗೆ ಅಪಹಾಸ್ಯಕ್ಕೊಳಗಾಗುವ ಏಕೈಕ ಕಂಪನಿಯಾಗಿಲ್ಲ. ಈ ಹಿಂದೆಯೂ. ಅನುವಾದದ ವಿಷಯಕ್ಕೆ ಸಾಕಷ್ಟು ಕಂಪನಿಗಳು ಮುಜುಗರ, ಟೀಕೆಗೊಳಗಾಗಿವೆ. ಈ ಬಗ್ಗೆ ಕೆಲವು ಉದಾಹರಣೆಗಳು ಇಲ್ಲಿವೆ..

  ಇದನ್ನು ಓದಿ: Smartphones: ನವೆಂಬರ್ ತಿಂಗಳಿ​ನಲ್ಲಿ ಮಾರುಕಟ್ಟೆಗೆ ಧಾವಿಸಲಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ

  'ನಿಮ್ಮ ಬೆರಳುಗಳನ್ನು ತಿನ್ನಿರಿ' (Eat your fingers off)

  80ರ ದಶಕದಲ್ಲಿ KFC ಚೀನಾಕ್ಕೆ ಆಗಮಿಸಿದಾಗ, ಅದರ ಧ್ಯೇಯವಾಕ್ಯ "ಫಿಂಗರ್ ಲಿಕಿನ್' ಗುಡ್" (finger lickin’ good) ಸ್ಥಳೀಯರಿಗೆ ಸರಿ ಎನಿಸಿರಲಿಲ್ಲ.

  ಮ್ಯಾಂಡರಿನ್‌ ಭಾಷೆಯ ಪ್ರಕಾರ KFC ಧ್ಯೇಯವಾಕ್ಯದ ಅನುವಾದವು "ನಿಮ್ಮ ಬೆರಳುಗಳನ್ನು ತಿನ್ನಿರಿ" ಎಂದಾಗಿತ್ತು. ಆದರೆ ಇದು ಕಂಪನಿಗೆ ಹೆಚ್ಚು ಹಾನಿ ಮಾಡಲಿಲ್ಲ. KFC ದೇಶದ ಅತಿ ದೊಡ್ಡ ಫಾಸ್ಟ್ ಫುಡ್ ಚೈನ್‌ಗಳಲ್ಲಿ ಒಂದಾಗಿದೆ.
  Published by:Harshith AS
  First published: