ಫೇಸ್​ಬುಕ್ ಬಳಕೆದಾರರಿಗೆ ಸಿಹಿ ಸುದ್ದಿ: ವಾಟ್ಸಪ್​​ನಂತೆ FBನಲ್ಲೂ ಮೆಸೇಜ್ ಡಿಲೀಟ್ ಮಾಡಬಹುದು

ವಾಟ್ಸಪ್ ಮತ್ತು ಇನ್​ಸ್ಟಾಗ್ರಾಂನಲ್ಲಿರುವ ಈ ಫೀಚರ್ಸ್ ಈಗ ಫೇಸ್​ಬುಕ್​ನಲ್ಲೂ ಲಭ್ಯ..​

zahir | news18
Updated:November 8, 2018, 4:09 PM IST
ಫೇಸ್​ಬುಕ್ ಬಳಕೆದಾರರಿಗೆ ಸಿಹಿ ಸುದ್ದಿ: ವಾಟ್ಸಪ್​​ನಂತೆ FBನಲ್ಲೂ ಮೆಸೇಜ್ ಡಿಲೀಟ್ ಮಾಡಬಹುದು
ವಾಟ್ಸಪ್ ಮತ್ತು ಇನ್​ಸ್ಟಾಗ್ರಾಂನಲ್ಲಿರುವ ಈ ಫೀಚರ್ಸ್ ಈಗ ಫೇಸ್​ಬುಕ್​ನಲ್ಲೂ ಲಭ್ಯ..​
zahir | news18
Updated: November 8, 2018, 4:09 PM IST
-ನ್ಯೂಸ್ 18 ಕನ್ನಡ

ಫೇಸ್​ಬುಕ್​ನಲ್ಲಿ ವಿವಿಧ ಭಾವನೆಗಳಿಂದ ಅಥವಾ ಸಿಟ್ಟಿನಿಂದ ಮೆಸೇಜ್ ಕಳುಹಿಸಿದ ಬಳಿಕ ಅದನ್ನು ಕಳುಹಿಸಬಾರದಿತ್ತು ಎಂದು ಅಂದುಕೊಳ್ಳುತ್ತೇವೆ. ಆದರೆ ಮೆಸೇಜ್ ಡಿಲೀಟ್ ಮಾಡಿದರೂ, ಒಮ್ಮೆ ಕಳುಹಿಸಿದ ಮೆಸೇಜ್​ನ್ನು ಹಿಂಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಕೊನೆಗೂ ಫೇಸ್​ಬುಕ್ ಪರಿಹಾರ ಕಂಡುಕೊಂಡಿದೆ.  ಚಾಟಿಂಗ್​ಗೆ ಅನುಕೂಲವಾಗುವಂತೆ ಈ ಹೊಸ ಫೀಚರ್​ನ್ನು ಪರಿಚಯಿಸಲು ಫೇಸ್​ಬುಕ್ ಮುಂದಾಗಿದೆ. ಈ ಆಯ್ಕೆಯಲ್ಲಿ ನೀವು ಕಳಿಸಿದ ಮೆಸೇಜ್​ಗಳನ್ನು 10 ನಿಮಿಷಗಳ ಒಳಗಾಗಿ  ಅಳಿಸಿಹಾಕಬಹುದು. ಈ ಹೊಸ ಆಯ್ಕೆಯನ್ನು iOS ಮೊಬೈಲ್​ಗಳ ಫೇಸ್​ಬುಕ್  ಹೊಸ ವರ್ಷನ್​ನಲ್ಲಿ ಪರಿಚಯಿಸಲಾಗುತ್ತದೆ.

ಈ ಹಿಂದೆಯೇ ಇಂತಹದೊಂದು ಡಿಲೀಟ್​ ಆಯ್ಕೆ ಮೆಸೆಂಜರ್​ನಲ್ಲಿ ಇತ್ತಲ್ಲವೇ? ಎಂದು ಯೋಚಿಸುತ್ತಿದ್ದರೆ, ಈ ಬಾರಿ ಅದನ್ನು ಮತ್ತಷ್ಟು ಅಪ್​ಡೇಟ್​ಗೊಳಿಸಲಾಗಿದೆ. ಈ ಹಿಂದೆಯಿದ್ದ ಡಿಲೀಟ್ ಆಯ್ಕೆಯಿಂದ ಕೇವಲ ನಿಮ್ಮ ಮೆಸೆಂಜರ್​ನಲ್ಲಿ ಅಳಿಸಹಾಕಬಹುದಾಗಿತ್ತು. ಆದರೆ ಇದೀಗ ನೀಡಲಾಗಿರುವ ಹೊಸ ಫೀಚರ್​ನಲ್ಲಿ ನೀವು ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡಿದರೆ, ಅದನ್ನು ಸ್ವೀಕರಿಸಿದ ಬಳಕೆದಾರನ ಖಾತೆಯಿಂದಲೂ ಅಳಿಸಿ ಹೋಗುತ್ತದೆ. ಇಲ್ಲಿ ಬರೀ ಮೆಸೇಜ್ ಅಲ್ಲದೆ ಫೋಟೋಗಳನ್ನು ಕೂಡ ಡಿಲೀಟ್ ಮಾಡಬಹುದು ಎಂದು ಫೇಸ್​ಬುಕ್ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: D 53: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಹೊಸ ಚಿತ್ರಕ್ಕೆ 3 ಟೈಟಲ್ ಫಿಕ್ಸ್

ವಾಟ್ಸಪ್ ಮತ್ತು ಇನ್​ಸ್ಟಾಗ್ರಾಂನಲ್ಲಿವೆ ಈ ಫೀಚರ್ಸ್
ಒಂದು ಬಾರಿ ಸಂದೇಶ ಕಳುಹಿಸಿದ ಮೇಲೆ ಅದನ್ನು ಡಿಲೀಟ್ ಮಾಡುವ ಆಯ್ಕೆಯನ್ನು ವಾಟ್ಸಪ್ ಮತ್ತು ಇನ್​ಸ್ಟಾಗ್ರಾಂ ಆ್ಯಪ್​ನಲ್ಲಿ ಈ ಹಿಂದೆಯೇ ನೀಡಲಾಗಿದೆ. ಇದರಿಂದ ಆಕಸ್ಮಿಕವಾಗಿ ಕಳುಹಿಸಲ್ಪಡುವ ಸಂದೇಶಗಳಿಂದ ಮುಜುಗರಕ್ಕೊಳಗಾಗುವುದು ತಪ್ಪುತ್ತದೆ. ವಾಟ್ಸಪ್​ನಲ್ಲಿ ನೀಡಲಾಗಿರುವ ಈ ಆಪ್ಶನ್​ಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ವಿಶೇಷ ಎಂದರೆ ವಾಟ್ಸಪ್​ನಲ್ಲಿ ನೀವು ಸಂದೇಶಗಳನ್ನು ಅಳಿಸಿ ಹಾಕಲು 13 ಗಂಟೆಗಳ ಕಾಲವಕಾಶ ನೀಡಲಾಗಿದೆ. ಆದರೆ ಫೇಸ್​ಬುಕ್​ನಲ್ಲಿ ಪರಿಚಯಿಸಲಾಗುವ ಡಿಲೀಟ್ ಆಯ್ಕೆಗೆ ಕೇವಲ 10 ನಿಮಿಷ ನೀಡಲಾಗಿದೆ. ಅಂದರೆ ನೀವು ಸಂದೇಶ ಕಳಿಸಿ 10 ನಿಮಿಷದೊಳಗೆ ಆ ಮೆಸೇಜ್​ನ್ನು ಡಿಲೀಟ್ ಮಾಡಿಕೊಳ್ಳಬೇಕು.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626