ಬೆಚ್ಚಿ ಬೀಳಿಸಿದೆ ಹೊಸ ವರದಿ: ಫೇಸ್​ಬುಕ್​ ರಿಕ್ವೆಸ್ಟ್​ ಸ್ವೀಕರಿಸುವ ಮುನ್ನ ಇದನ್ನೊಮ್ಮೆ ಓದಿ

2018 ರಲ್ಲಿ ವಿಶ್ವಾದ್ಯಂತ ದೈನಂದಿನ ಸಕ್ರಿಯ ಬಳಕೆದಾರರ ಸರಾಸರಿ ಸಂಖ್ಯೆ ಶೇ.9 ರಷ್ಟು ಏರಿಕೆಯಾಗಿ 1.52 ಬಿಲಿಯನ್ ಅಕ್ಟೀವ್ ಯೂಸರ್ಸ್​ ಅನ್ನು ಹೊಂದಿದೆ.

zahir | news18
Updated:February 5, 2019, 11:55 AM IST
ಬೆಚ್ಚಿ ಬೀಳಿಸಿದೆ ಹೊಸ ವರದಿ: ಫೇಸ್​ಬುಕ್​ ರಿಕ್ವೆಸ್ಟ್​ ಸ್ವೀಕರಿಸುವ ಮುನ್ನ ಇದನ್ನೊಮ್ಮೆ ಓದಿ
ಸಾಂದರ್ಭಿಕ ಚಿತ್ರ
zahir | news18
Updated: February 5, 2019, 11:55 AM IST
ವಿಶ್ವದ ಅತ್ಯಂತ ನೆಚ್ಚಿನ ಸೋಷಿಯಲ್ ನೆಟ್​ವರ್ಕ್​ ಫೇಸ್​ಬುಕ್​ ಬಳಕೆದಾರರು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಈಗಾಗಲೇ 230 ಕೋಟಿ  ಖಾತೆದಾರರನ್ನು ಹೊಂದಿರುವ ಫೇಸ್​ಬುಕ್​​ನಲ್ಲಿ ನಕಲಿ ಖಾತೆಗಳ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ ಎಂಬ ಅಚ್ಚರಿ ಸುದ್ದಿಯೊಂದು ಹೊರಬಿದ್ದಿದೆ. ಕಂಪೆನಿಯು ಅದರ ಮಾಸಿಕ ಸಕ್ರಿಯ ಬಳಕೆದಾರರ (MAU) ಅಂಕಿ-ಅಂಶಗಳನ್ನು ಹೊರತಂದಿದ್ದು, ಇದರಲ್ಲಿ ಫೇಸ್​ಬುಕ್​ನಲ್ಲಿ 25 ಕೋಟಿಗಳಷ್ಟು ನಕಲಿ ಖಾತೆಗಳಿರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

2015 ರಲ್ಲಿ ಶೇ. 5 ರಷ್ಟಿದ್ದ ಫೇಕ್​ ಅಕೌಂಟ್​ಗಳು, 2018ರ ವಾರ್ಷಿಕ ವರದಿಯಲ್ಲಿ ಶೇ.11 ರಷ್ಟು ಏರಿಕೆಯಾಗಿದೆ ಎಂದು ಕಂಪೆನಿ ಹೇಳಿದೆ.  2015 ರಲ್ಲಿ ಡಿಸೆಂಬರ್​ನಲ್ಲಿ ಫೇಸ್​ಬುಕ್ MAU ಸಂಖ್ಯೆಯು 1.59 ಶತಕೋಟಿಯಾಗಿತ್ತು. ಇದು 2018 ರ ಹೊತ್ತಿಗೆ 2.32 ಶತಕೋಟಿಗಳಿಗೆ ಏರಿಕೆ ಕಂಡಿದೆ. ಕಂಪೆನಿಯ ವರದಿಯ ಪ್ರಕಾರ, ಈ ಅಂಕಿ ಅಂಶಗಳಿಗಾಗಿ ತಿಂಗಳಲ್ಲಿ ಲಾಗಿನ್ ಆದ ಖಾತೆಗಳ ರಿಂಟರ್ನಲ್​ ರಿವ್ಯೂಗಳನ್ನು ಗುರುತಿಸಲಾಗುತ್ತದೆ. ಈ ವೇಳೆ ನಕಲಿ ಖಾತೆಗಳು ಹೆಚ್ಚು ಸಕ್ರಿಯವಾಗಿರುವುದು ಕಂಡು ಬಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದರಲ್ಲಿ ತಪ್ಪಾಗಿ ಕ್ರಿಯೇಟ್​ ಮಾಡಿದ ಖಾತೆ, ಬಿಸಿನೆಸ್ ಖಾತೆಗಳೂ ಸೇರಿದಂತೆ ಹಲವು ಫೇಕ್​ ಅಕೌಂಟ್​ಗಳು ಸೇರಿದೆ.

ಇದರಲ್ಲಿ ಫೇಸ್​ಬುಕ್​ ಪೇಜ್​ಗಾಗಿ ಸೃಷ್ಟಿಸಲಾಗಿರುವ ಹಲವಾರು ಖಾತೆಗಳೂ ಕೂಡ ಇದ್ದು, ಇವುಗಳನ್ನೂ ಕೂಡ ಫೇಕ್​ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಫೇಸ್​ಬುಕ್​ ಸೇವೆಯ ನಿಮಯ ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಈ ರೀತಿಯಾಗಿ ಫೇಕ್​ ಅಕೌಂಟ್​ಗಳನ್ನು ಒಪನ್​ ಮಾಡುವುದು ತಪ್ಪು ಎಂದು ಫೇಸ್​ಬುಕ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ನೌಕರಿ: ONGC ಸಂಸ್ಥೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

2018 ರಲ್ಲಿ ವಿಶ್ವಾದ್ಯಂತ ದೈನಂದಿನ ಸಕ್ರಿಯ ಬಳಕೆದಾರರ ಸರಾಸರಿ ಸಂಖ್ಯೆ ಶೇ.9 ರಷ್ಟು ಏರಿಕೆಯಾಗಿ 1.52 ಬಿಲಿಯನ್ ಆ್ಯಕ್ಟೀವ್ ಯೂಸರ್ಸ್​ ಅನ್ನು ಹೊಂದಿದೆ. 2017 ರಲ್ಲಿ ಡೈಲಿ ಆ್ಯಕ್ಟೀವ್ ಯೂಸರ್ಸ್​ 1.40 ಬಿಲಿಯನ್​ ಆಗಿತ್ತು. ಕಂಪೆನಿಯ ಸಕ್ರಿಯ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಭಾರತ, ಇಂಡೋನೇಷ್ಯಾ ಮತ್ತು ಫಿಲಿಫೈನ್ಸ್ ದೇಶಗಳ ಬಳಕೆದಾರರು ಬಹು ಮುಖ್ಯ ಪಾತ್ರವಹಿಸಿದ್ದಾರೆ ಎಂದು ಕಂಪೆನಿ ಫೇಸ್​ಬುಕ್​ ಹೇಳಿಕೊಂಡಿದೆ.

ಇದನ್ನೂ ಓದಿ: VIDEO: ಸುಮಲತಾ ಮಂಡ್ಯದ ಗೌಡ್ತಿ ಅಲ್ಲ: ಹಾಗಿದ್ರೆ ಸಿಎಂ ಕುಮಾರಸ್ವಾಮಿ ಅವರ ಪತ್ನಿ? ಅಂಬಿ ಅಭಿಮಾನಿಗಳ ಪಶ್ನೆ

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ