Instagram ಹದಿಹರೆಯದ ಹುಡುಗಿಯರಿಗೆ ಮಾರಕ ಅಂತ Facebookಗೆ ಗೊತ್ತಂತೆ!

Indtagram: ಫೇಸ್​ಬುಕ್​ "ಸಾಮಾಜಿಕ ಜಾಲತಾಣವನ್ನು ಹೋಲಿಕೆ ಮಾಡಿದಾಗ ಇನ್‌ಸ್ಟಾಗ್ರಾಮ್‌ ಕೆಟ್ಟದಾಗಿದೆ" ಎಂದು  ಹೇಳಿದೆ. 

Photo: Google

Photo: Google

 • Share this:
  ಒಂದು ಕಾಲದಲಲಿ ಫೇಸ್​ಬುಕ್​ ಬಹಳಷ್ಟು ಜನರ ನೆಚ್ಚಿನ ತಾಣವಾಗಿತ್ತು. ಅದರಲ್ಲಿ ಖಾತೆ ತೆರೆಯುವುದೇ ಒಂದು ಕುತೂಹಲವಾಗಿತ್ತು. ಆದರೆ ಇನ್​ಸ್ಟಾಗ್ರಾಂ ಪರಿಚಯವಾದ ನಂತರ ಫೇಸ್​ಬುಕ್​ ತನ್ನ ಸ್ಥಾನ ಕಾಪಾಡಿಕೊಳ್ಳಲು ಎಡವಿತು. ಆದರೂ ರೀಲ್ಸ್, ರೂಮ್ಸ್​  ಮುಂತಾದ ಆಯ್ಕೆಯನ್ನು ನೀಡುವ ಮೂಲಕ ಬಳಕೆದಾರರನ್ನು ಇಂದಿಗೂ ಫೇಸ್​ಬುಕ್​ ಉಳಿಸಿಕೊಂಡು ಬಂದಿದೆ ಎಂಬದು ಅಚ್ಚರಿಯ ಸಂಗತಿಯಾಗಿದೆ.

  ಫೇಸ್​ಬುಕ್​ ಒಡೆತನದ ಇನ್​ಸ್ಟಾಗ್ರಾಂ ಬಹುತೇಕರ ಇಷ್ಟದ ತಾಣವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಹುಡುಗಿಯರು ದಿನದ 24 ಗಂಟೆಯೂ ಇದರಲ್ಲಿ ಕಾಲ ಕಳೆಯುವವರಿದ್ದಾರೆ. ಅಷ್ಟರ ಮಟ್ಟಿಗೆ ಇನ್​​ಸ್ಟಾಗ್ರಾಂ ಪ್ರಭಾವ ಬೀರಿದೆ. ಮತ್ತೊಂದು ವಿಚಾರವೆಂದರೆ ಇದರಲ್ಲಿರುವ ವೈಶಿಷ್ಟ್ಯತೆ ತನ್ನ ಬಳಕೆದಾರರನ್ನು ಹಿಡಿದಿಟ್ಟುಕೊಂಡಿದೆ. ರೀಲ್ಸ್​, ಫೋಟೋ, ಐಜಿಟಿವಿ ಹೀಗೆ ಇನ್​ಸ್ಟಾಗ್ರಾಂ ಬಳಕೆದಾರರ ಇನ್​ಸೈಡ್​ ಸ್ಟೋರಿಗಳನ್ನು ಸ್ವಾಗತಿಸುತ್ತಾ ಬಂದಿದೆ. ಹಾಗಾಗಿ ಜಗತ್ತಿನ ಬಹುಪಾಲು ಜನರಿಗೆ ಇನ್​​ಸ್ಟಾಗ್ರಾಂ ಎಂದರೆ ಫೇವರೆಟ್​.

  ಅತಿಯಾದರೆ ಅಮೃತವು ವಿಷ ಎಂಬ ಮಾತಿದೆ. ಸಾಮಾಜಿಕ ಜಾಲತಾಣ ಬಳಕೆ ಹೆಚ್ಚಾದಂತೆ ಪರಿಣಾಮವು ವ್ಯತಿರಿಕ್ತವಾಗುತ್ತಾ ಬರುತ್ತದೆ. ಅದರಲ್ಲೂ ಯವ ಪೀಳಿಗೆಯವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಇನ್​​ಸ್ಟಾಗ್ರಾಂ ನೋಡುತ್ತಾ ಸಮಯ ವ್ಯರ್ಥ ಮಾಡುವರೇ ಜಾಸ್ತಿ. ಆದರೀಗ ಇನ್​​ಸ್ಟಾಂ ಕುರಿತಾಗಿ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

  ಇನ್​ಸ್ಟಾಗ್ರಾಂ ಕುರಿತಾಗಿ ಮಾಹಿತಿಯೊಂದು ದಾಖಲೆಯಲ್ಲಿ ಮುದ್ರಿತವಾಗಿದೆ. ಅದೇನೆಂದರೆ ಹದಿಹರೆಯದ ಹುಡುಗಿಯರಿಗೆ ಇನ್​ಸ್ಟಾಗ್ರಾ ಮಾರಕವಾಗಲಿದೆ ಎಂಬುದು ಫೇಸ್​ಬುಕ್​ಕೆ ತಿಳಿದಿದೆಯಂತೆ.

  Read Also⇒ Marriage: ನವೆಂಬರ್ ತಿಂಗಳಲ್ಲಿ ಜನ ಯಾಕೆ ಮದ್ವೆ ಆಗಲ್ಲ? ಇದೇ ಕಾರಣ!

  ಬಹುತೇಕ ಹುಡುಗಿಯರು ಆಹಾರ ಸೇವಿಸುವಾಗ ಇನ್​ಸ್ಟಾಗ್ರಾಂ ಬಳಸುತ್ತಿರುತ್ತಾರೆ. ವಾಲ್​ಸ್ಟ್ರೀಟ್​ ಜರ್ನಲ್​ ವಿಮರ್ಶಿಸಿದಂತೆ, ಶೇ.32ರಷ್ಟು ಹದಿಹರೆಯದ ಹುಡುಗಿಯರು ತಮ್ಮ ದೇಹದ ಬಗ್ಗೆ ಕೆಟ್ಟದಾಗಿ ಭಾವಿಸಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಿಂದಾಗಿ ತಮ್ಮ ಭಾವನೆ ಬದಲಾಯಿಸಿಕೊಂಡಿದ್ದಾರೆ ಎಂದು 2020ರ ಸ್ಲೈಡ್​ ಪ್ರಸ್ತುತಿ ಫೇಸ್​ಬುಕ್​ ಆಂತರಿಕ ಸಂದೇಶ ಮಂಡಳಿಗೆ ಪೋಸ್ಟ್​ ಮಾಡಿದೆ.

  ಸಂಶೋಧಕರು  ಕಳೆದ ಮೂರು ವರ್ಷ ಫೇಸ್‌ಬುಕ್  ಒಡೆತನದ ಇನ್​ಸ್ಟಾಗ್ರಾಂ ಆ್ಯಪ್​ ತನ್ನ ಲಕ್ಷಾಂತರ ಯುವ ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಅಧ್ಯಯನಗಳನ್ನು ನಡೆಸುತ್ತಿದೆ. ಪದೇ ಪದೇ, ಕಂಪನಿಯ ಸಂಶೋಧಕರು ಇನ್‌ಸ್ಟಾಗ್ರಾಮ್ ಗಮನಾರ್ಹವಾದ ಶೇಕಡಾವಾರು ಮತ್ತು ವಿಶೇಷವಾಗಿ ಹದಿಹರೆಯದ ಹುಡುಗಿಯರಿಗೆ ಹಾನಿಕಾರಕ ಎಂದು ಕಂಡುಕೊಳ್ಳುತ್ತಾ ಬಂದಿದ್ದಾರೆ.

  ಹದಿಹರೆಯದವರು ಆತಂಕ ಮತ್ತು ಖಿನ್ನತೆಯ ಪ್ರಮಾಣದಲ್ಲಿ ಹೆಚ್ಚಳಕ್ಕೆ Instagram ಕಾರಣವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

  ಆತ್ಮಹತ್ಯಾ ಆಲೋಚನೆಗಳ ಕುರಿತು ಸಂಶೋಧನೆ ಮಾಡಿದ್ದು, ಹದಿಹರೆಯದವರಲ್ಲಿ, 13% ಬ್ರಿಟಿಷ್ ಬಳಕೆದಾರರು ಮತ್ತು 6% ಅಮೆರಿಕನ್ ಬಳಕೆದಾರರು Instagram ಮೂಲಕ ಇಂತಹ ಆಲೋಚನೆ ಮಾಡುತ್ತಾರೆ ಎಂದು ಪತ್ತೆಹಚ್ಚಿದ್ದಾರೆ.

  ಅಮೆರಿಕದಲ್ಲಿ ಪ್ರತಿದಿನ 22 ವರ್ಷ ವಯಸ್ಸಿನ ಸುಮಾರು 40% ಕ್ಕಿಂತ ಹೆಚ್ಚು ಬಳಕೆದಾರರು ಇನ್​ಸ್ಟಾಗ್ರಾಂ ಲಾಗ್​ ಇನ್​ ಆಗುತ್ತಾರೆ. ಸುಮಾರು 22 ಮಿಲಿಯನ್ ಹದಿಹರೆಯದವರು ಪ್ರತಿ ದಿನ  ಇನ್‌ಸ್ಟಾಗ್ರಾಮ್‌ಗೆ ಬಳಸುತ್ತಾರೆ, ಐದು ದಶಲಕ್ಷ ಹದಿಹರೆಯದವರು ಫೇಸ್‌ಬುಕ್‌ಗೆ ಲಾಗ್ ಇನ್​​ ಆಗುತ್ತಿದ್ದಾರೆ,

  ಫೇಸ್​ಬುಕ್​ಗೆ ಈ ವಿಚಾರ ತಿಳಿದಿಲ್ಲವೇ?

  ಫೇಸ್​ಬುಕ್​ ಒಡೆತನದಲ್ಲಿರುವ ಇನ್​ಸ್ಟಾಗ್ರಾಂನಿಂದಾಗಿ ಇಷ್ಟೆಲ್ಲಾ ಸಮಸ್ಯೆಗಳು ಕಂಡುಬಂದರು ಈ ವಿಚಾರ ಫೇಸ್​ಬುಕ್​ಗೆ ತಿಳಿದಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಆದರೆ ಫೇಸ್​ಬುಕ್​ ಯುವ ಜನರ ಮೇಲೆ ಬೀರುವ ಪ್ರಭಾವವನ್ನು ತಡೆಯಲು ಕನಿಷ್ಠ ಪ್ರಯತ್ನವನ್ನು ಮಾಡುತ್ತಿದೆ. ಅದರ ಕುರಿತಾಗಿ ದಾಖಲೆಯನ್ನು ತೋರಿಸಿದೆ.

  ಇನ್‌ಸ್ಟಾಗ್ರಾಮ್‌ನಲ್ಲಿ ಕಂಪನಿಯ ಸಂಶೋಧನೆ, ಹದಿಹರೆಯದವರ ಮೇಲೆ ಅದರ ಪ್ರಭಾವ ಮತ್ತು ಅವರ ಮಾನಸಿಕ ಯೋಗಕ್ಷೇಮದ ಬಗ್ಗೆ ಟೆಕ್ ದೈತ್ಯರಿಗೆ ತಿಳಿದಿರುವ ಆಳವಾದ ನೋಟವು ಫೇಸ್‌ಬುಕ್‌ನ ತನ್ನ ತಿಳುವಳಿಕೆ ಮತ್ತು ಅದರ ಸಾರ್ವಜನಿಕ ಸ್ಥಾನದ ನಡುವಿನ ಸ್ಪಷ್ಟವಾದ ಅಂತರವನ್ನು ಪ್ರತಿನಿಧಿಸುತ್ತದೆ.  ಸಂಶೋಧಕರು ಡೇಟಾ ವಿಜ್ಞಾನ, ಮಾರ್ಕೆಟಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ಸೇರಿದಂತೆ ಫೇಸ್‌ಬುಕ್ ಉದ್ಯೋಗಿಳು ಮತ್ತು ಬಳಕೆದಾರರೊಂದಿಗೆ ಹೇಗೆ ಸಂವಹನ ನಡೆಸುತ್ತಿದೆ ಎಂಬ ಕುರಿತಾಗಿ ಸಂಶೋಧನೆ ನಡಸುತ್ತಾ ಬಂದಿದ್ದಾರೆ. ಕಂಪ್ಯೂಟರ್ ವಿಜ್ಞಾನ, ಮನೋವಿಜ್ಞಾನ ಮತ್ತು ಪರಿಮಾಣಾತ್ಮಕ ಮತ್ತು ಗುಣಾತ್ಮಕ ವಿಶ್ಲೇಷಣೆಯನ್ನು ಮಾಡುತ್ತಿದ್ದಾರೆ.

  ಫೇಸ್​ಬುಕ್​ "ಸಾಮಾಜಿಕ ಜಾಲತಾಣವನ್ನು ಹೋಲಿಕೆ ಮಾಡಿದಾಗ ಇನ್‌ಸ್ಟಾಗ್ರಾಮ್‌ ಕೆಟ್ಟದಾಗಿದೆ" ಎಂದು  ಹೇಳಿದೆ.

  Read Also⇒ Garmin Birthday Sale: ಗಾರ್ಮಿನ್​ ವಾಚ್​ಗಳ​ ಮೇಲೆ 14 ಸಾವಿರದಷ್ಟು ಡಿಸ್ಕೌಂಟ್! ಗಿಫ್ಟ್​ ಕೊಡುವವರಿಗೆ ಇದೊಂದು ಒಳ್ಳೆಯ ಅವಕಾಶ!

  ಇನ್ನು ಇನ್​ಸ್ಟಾಗ್ರಾಂ ದೇಹ ಮತ್ತು ಲೈಫ್​ಸ್ಟೈಲ್​ ಬಗ್ಗೆ ಒತ್ತುನೀಡುತ್ತಿದೆ.  ಟಿಕ್‌ಟಾಕ್ ಕಿರು-ವೀಡಿಯೋ ಆ್ಯಪ್​ ಆಳವಾಗಿ ಬಳಕೆದಾರರನ್ನು ಸೆಳೆಯುತ್ತಿದೆ. ಇನ್ನು ಕೆಲವು ಆ್ಯಪ್​ ಅಂದರೆ ಸ್ನಾಪ್​ಚಾಟ್​ ಮುಂತಾದವು ಮುಖದ ಮೇಲೆ ಗಮನ ಹರಿಸುತ್ತದೆ ಎಂದು ತಿಳಿದುಬಂದಿದೆ.
  Published by:Harshith AS
  First published: