ಫೇಸ್​ಬುಕ್​ನಲ್ಲಿ ಮರೆಯಾಗಲಿದೆ ಲೈಕ್ಸ್​-ಕಮೆಂಟ್ಸ್​: ಬರಲಿದೆ ಹೊಸ ಆಯ್ಕೆ..!

Facebook: ಈ ಹಿಂದೆಯೇ ಇನ್​ಸ್ಟಾಗ್ರಾಂ ಖಾತೆಯಲ್ಲಿ ಲೈಕ್ಸ್​-ಕಮೆಂಟ್ಸ್​ ಮರೆ ಮಾಡುವ ಆಯ್ಕೆಯನ್ನು ನೀಡಲಾಗಿದೆ. Instagram ನ ಮೂಲ ಮಾದರಿಯ ವಿನ್ಯಾಸವು ಬಳಕೆದಾರರ ಪೋಸ್ಟ್‌ಗಳಿಂದ ಲೈಕ್ಸ್​ ಸಂಖ್ಯೆಯನ್ನು ಮರೆಮಾಡುತ್ತದೆ.

facebook

facebook

  • Share this:
ಸಾಮಾಜಿಕ ಜಾಲತಾಣದ ದೈತ್ಯ ಕಂಪೆನಿ ಫೇಸ್​ಬುಕ್​ನಲ್ಲಿ ಹಾಕುವ ಪೋಸ್ಟ್​-ಫೋಟೋಗಳಿಗೆ ಹೆಚ್ಚು ಲೈಕ್ಸ್​ ಬರಬೇಕು, ಹೆಚ್ಚೆಚ್ಚು ಕಮೆಂಟ್ಸ್​ ಸುರಿಮಳೆಯಾಗಬೇಕೆಂದು ಕೆಲವರು ಬಯಸುತ್ತಿರುತ್ತಾರೆ. ಹೀಗಾಗಿ ಪ್ರತಿದಿನ ಅಪ್ಲೋಡ್​ ಮಾಡುವ ಪೋಸ್ಟ್​ಗಳ ಕಮೆಂಟ್​, ಲೈಕ್ಸ್​ ಬಾಕ್ಸ್​ ಪರೀಕ್ಷಿಸಿರುತ್ತಾರೆ. ಅದೇ ರೀತಿ ನಿಮ್ಮ ಫೇಸ್​ಬುಕ್ ಗೆಳೆಯ-ಗೆಳೆತಿಯರು ಕೂಡ ನಿಮ್ಮ ಖಾತೆಯಲ್ಲಿನ ಲೈಕ್ಸ್ ಮತ್ತು ಕಮೆಂಟ್​ಗಳನ್ನು ವೀಕ್ಷಿಸುತ್ತಿರುತ್ತಾರೆ. ಆದರೆ, ಇದಕ್ಕೆ ಕಡಿವಾಣ ಹಾಕಲು ಫೇಸ್​ಬುಕ್​ ಸಂಸ್ಥೆ ಮುಂದಾಗಿದೆ.

ಅಂದರೆ ನಿಮ್ಮ ಪೋಸ್ಟ್​ಗಳಿಗೆ ಸಿಗುವ ಲೈಕ್ಸ್-ಕಮೆಂಟ್ಸ್​ಗಳನ್ನು ಮರೆಮಾಚುವ ಹೊಸ ಆಯ್ಕೆಯನ್ನು ಫೆಸ್​ಬುಕ್ ಪರಿಚಯಿಸಲಿದೆ. ಇದರ ಪ್ರಯೋಗಿಕ ಪರೀಕ್ಷೆಯ ಆಯ್ಕೆಯನ್ನು ಸೆಪ್ಟೆಂಬರ್ 27 ರಿಂದ ಆಸ್ಟ್ರೇಲಿಯಾದ ಫೇಸ್​ಬುಕ್ ಬಳಕೆದಾರರಿಗೆ ನೀಡಲಾಗಿದೆ.

ಈ ಹೊಸ ಆಯ್ಕೆಯಿಂದ ಮುಂದಿನ ದಿನಗಳಲ್ಲಿ ನಿಮ್ಮ ಪೋಸ್ಟ್​ ಅಥವಾ ಫೋಟೋಗೆ ಸಿಗುವ ಲೈಕ್ಸ್​ ಮತ್ತು ಕಮೆಂಟ್​ಗಳನ್ನು ನೀವು ಮಾತ್ರ ನೋಡಬಹುದಾಗಿದೆ. ಇಂತಹದೊಂದು ಗೌಪ್ಯತೆಯ ಆಯ್ಕೆ ಜೇನ್ ಮಂಚುಂಗ್ ವಾಂಗ್ ಎಂಬವರು ಕಂಡು ಹಿಡಿದಿದ್ದು, ಇದನ್ನು ಈಗ ಕಾಂಗರೂ ನಾಡಿನ ಬಳಕೆದಾರರಿಗೆ ಮಾತ್ರ ನೀಡಲಾಗಿದೆ. ಇದು ಯಶಸ್ವಿಯಾದರೆ ಶೀಘ್ರದಲ್ಲೇ ಎಲ್ಲ ಖಾತೆಗಳಿಗೂ ಲೈಕ್ ಬಟನ್, ಕಮೆಂಟ್ ಗೌಪ್ಯತೆ ಆಯ್ಕೆ ನೀಡಲಾಗುತ್ತದೆ ಎಂದು ಫೇಸ್​ಬುಕ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ನೀಲಿ ಚಿತ್ರತಾರೆ..!

Instagram ಯಶಸ್ವಿ ಪರೀಕ್ಷೆ:
ಈ ಹಿಂದೆಯೇ ಇನ್​ಸ್ಟಾಗ್ರಾಂ ಖಾತೆಯಲ್ಲಿ ಲೈಕ್ಸ್​-ಕಮೆಂಟ್ಸ್​ ಮರೆ ಮಾಡುವ ಆಯ್ಕೆಯನ್ನು ನೀಡಲಾಗಿದೆ. Instagram ನ ಮೂಲ ಮಾದರಿಯ ವಿನ್ಯಾಸವು ಬಳಕೆದಾರರ ಪೋಸ್ಟ್‌ಗಳಿಂದ ಲೈಕ್ಸ್​ ಸಂಖ್ಯೆಯನ್ನು ಮರೆಮಾಡುತ್ತದೆ. ಈ ಆಯ್ಕೆಯನ್ನು ಆರಂಭದಲ್ಲಿ ಕೆನಡಾದಲ್ಲಿ ಮಾತ್ರ ನೀಡಲಾಗಿತ್ತು. ಇದೀಗ 6 ದೇಶಗಳಿಗೆ ವಿಸ್ತರಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ದೇಶಗಳ ಇನ್​​ಸ್ಟಾ ಬಳಕೆದಾರರಿಗೆ ಈ ಗೌಪ್ಯತೆ ಆಯ್ಕೆ ಸಿಗಲಿದೆ.

ಇದನ್ನೂ ಓದಿ: ಕೀನ್ಯಾ ಕಾಡಿನಲ್ಲಿ ಕರಿಯ: ಅಭಿಮಾನಿಗಳ ದಾಸನ ಫೋಟೋ ವೈರಲ್..!

ಅದರಂತೆ ಆಸ್ಟ್ರೇಲಿಯಾದ ಫೇಸ್​ಬುಕ್ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಲೈಕ್ಸ್-ಕಮೆಂಟ್ಸ್​ ಗೌಪ್ಯತೆಯ ಆಯ್ಕೆ ಶೀಘ್ರ ಭಾರತ ಸೇರಿದಂತೆ ವಿಶ್ವದ ಬಳಕೆದಾರರಿಗೆ ಪರಿಚಯಿಸುವುದಾಗಿ ಫೇಸ್​ಬುಕ್ ಇಂಕ್ ಕಂಪೆನಿ ಹೇಳಿಕೊಂಡಿದೆ.

 
First published: