ಫೇಸ್​ಬುಕ್​ ಕೀವರ್ಡ್​ ಸ್ನೂಜ್​ ಬಗ್ಗೆ ನಿಮಗೆಷ್ಟು ಗೊತ್ತು?


Updated:June 28, 2018, 2:07 PM IST
ಫೇಸ್​ಬುಕ್​ ಕೀವರ್ಡ್​ ಸ್ನೂಜ್​ ಬಗ್ಗೆ ನಿಮಗೆಷ್ಟು ಗೊತ್ತು?

Updated: June 28, 2018, 2:07 PM IST
ಸುಳ್ಳು ಸುದ್ದಿಯನ್ನು ಓದಿ ಬೇಸತ್ತಿರುವ ಫೇಸ್​ಬುಕ್​ ಬಳಕೇದಾರರಿಗೆ ಹೊಸ ಆಯ್ಕೆ ನೀಡಲು ಸಂಸ್ಥೆ ಮುಂದಾಗಿದ್ದು, ನಿಮಗೆ ಇಷ್ಟವಿಲ್ಲದ ಪೇಸ್​ ಅಥವಾ ಸುದ್ಧಿಯನ್ನು ಸ್ನೂಜ್​ ಮಾಡಲು ಅವಕಾಶ ನೀಡಿದ್ದ ಸಂಸ್ಥೆ ಇದೀಗ ಕೀವರ್ಡ್​ ಸ್ನೂಜ್​ ಎಂಬ ಮಾರ್ಪಾಡು ಹೊಂದಿದ ಆಯ್ಕೆಯನ್ನು ನೀಡಿದೆ.

ಈ ಹಿಂದೆ ಫೇಸ್ಬುಕ್ ಸ್ನೇಹಿತರನ್ನು, ಪೇಜ್​ಗಳನ್ನು ಅಥವಾ ಗುಂಪುಗಳನ್ನು ತಾತ್ಕಾಲಿಕವಾಗಿ 'ಮ್ಯೂಟ್' ಮಾಡಬಹುದಾದ ಆಯ್ಕೆಯನ್ನು ನೀಡಿತ್ತು. ಈ ರೀತಿ ಸ್ನೂಜ್ ಮಾಡಿರುವುದು ನಿಮ್ಮ ಫೇಸ್ಬುಕ್ ಸ್ನೇಹಿತರಿಗೆ ಅಥವಾ ಪೇಜ್​ ಅಡ್ಮಿನ್​ಗೆ ತಿಳಿಯುವುದಿಲ್ಲ. ಇದೀಗ ಈ ಫೀಚರ್​ನ್ನು ಮಾರ್ಪಾಡು ಮಾಡಿದ್ದು ಕೀವರ್ಡ್​ ಸ್ನೂಜ್​ ಆಯ್ಕೆಯನ್ನು ನೀಡಲಾಗಿದೆ.

ಈ ಆಯ್ಕೆಯನ್ನು ಬಳಸಿಕೊಂಡರೆ ಒಂದು ನಿರ್ಧಿಷ್ಟ ಪದ ಅಥವಾ ಕೀವರ್ಡ್​ ಜತೆ ಅದಕ್ಕೆ ಸಂಬಂಧಿಸಿದ ಪೋಸ್ಟ್​ ಅಥವಾ ಅದಕ್ಕೆ ಸಂಬಂದಿಸಿದ ಸುದ್ದಿ ವಿಡಿಯೋ, ವ್ಯಕ್ತಿ ಯಾವುದನ್ನೂ ಫೇಸ್​ಬುಕ್​ ತೋರಿಸುವುದಿಲ್ಲ.

ಸ್ನೂಜ್​ನ ಅವಧಿಯನ್ನು 30 ದಿನಕ್ಕೆ ಸೀಮತಗೊಳಸಿಲಾಗಿದ್ದು, ಈ ಅವಧಿ ಮುಗಿದ ನಂತರ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಮರಳುವುದು. ಈ ರೀತಿ ಮಾಡುವುದರಿಂದ ನ್ಯೂಸ್​ ಫೀಡ್​ನಲ್ಲಿ ಏನೆಲ್ಲಾ ಇರಬೇಕೆಂಬುದನ್ನು ನೀವು ನಿಯಂತ್ರಿಸಬಹುದು!

ನಿಮ್ಮ ಪ್ರೊಫೈಲ್​ನ ಮೇಲ್ಬಾಗದ ಬಲ ಬದಿಯಲ್ಲಿ ಮೂರು ಚುಕ್ಕೆಯಲ್ಲಿ ಈ ಆಯ್ಕೆಯನ್ನು ನೀವು ಗಮನಿಸಬಹುದು. ಈಗಾಗಲೇ ಸೀ ಫಸ್ಟ್​, ಅನ್​ಫಾಲೋ, ಸ್ನೂಜ್​ ಎಂಬ ಆಯ್ಕೆಯನ್ನು ನೀಡಲಾಗಿತ್ತು. ಇದೀಗ ನಿರ್ದಿಷ್ಟ ಕೀವರ್ಡ್​ಗೆ ಸಂಬಂದಿಸಿದಂತೆ ಸ್ಟೋರಿಯ ಕೀವರ್ಡ್​ ಫ್ರೀಜ್​ ಮಾಡಬಹುದು ಎಂದು ನ್ಯೂಸ್ ಫೀಡ್ ಪ್ರೊಡಕ್ಟ್ ಮ್ಯಾನೇಜರ್ ಶೃತಿ ಮುರಳಿಧರನ್ ಹೇಳಿದ್ದಾರೆ.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ