HOME » NEWS » Tech » FACEBOOK HOW TO TEMPORARILY DEACTIVATE FACEBOOK ACCOUNT HERE THE DETAILS STG HG

Facebook: ನಿಮ್ಮ ಫೇಸ್‍ಬುಕ್ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

Facebook Deactivation: ನಿಮ್ಮ ಫೇಸ್‍ಬುಕ್ ಖಾತೆಯನ್ನು ನೀವು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು ಮತ್ತು ನಮಗೆ ಬೇಕಾದಾಗ ಉಪಯೋಗಿಸುವಂತೆಯೂ ಮಾಡಿಕೊಳ್ಳಬಹುದು. ಫೇಸ್‍ಬುಕ್ ಬಳಕೆದಾರರು ತಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ತಿಳಿದುಕೊಳ್ಳಬೇಕಾದ ಕೆಲವು ಹಂತಗಳು ಇಲ್ಲಿವೆ.

news18-kannada
Updated:June 23, 2021, 1:46 PM IST
Facebook: ನಿಮ್ಮ ಫೇಸ್‍ಬುಕ್ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವುದು ಹೇಗೆ? ಇಲ್ಲಿದೆ ಮಾಹಿತಿ
Facebook
  • Share this:

ಫೇಸ್‍ಬುಕ್ ಹೆಚ್ಚು ಪ್ರಚಲಿತದಲ್ಲಿರುವ ಸಾಮಾಜಿಕ ಜಾಲತಾಣದ ಒಂದು ವೇದಿಕೆ. ಮಿಲಿಯನ್‍ಗಟ್ಟಲೇ ಬಳಕೆದಾರರನ್ನು ಹೊಂದಿರುವ ಫೇಸ್‍ಬುಕ್ ಅನ್ನು ಎಳೆಯರಿಂದ ಹಿಡಿದು ವೃದ್ಧರವರೆಗೂ ಬಳಸುತ್ತಿದ್ದಾರೆ. ಕಾಲ ಕಳೆಯಲು, ಮಾಹಿತಿ ಪಡೆಯಲು, ಸ್ನೇಹಿತರನ್ನು ಪಡೆಯಲು, ಸಂದೇಶ ರವಾನೆ ಹೀಗೆ ನಾನಾ ರೀತಿಯಲ್ಲಿ ಫೇಸ್‍ಬುಕ್ ಜನರಿಂದ ಜನರಿಗೆ ಸಂಪರ್ಕ ಕಲ್ಪಿಸುತ್ತಿರುವ ವಿಶ್ವವ್ಯಾಪಕ ಮಾಧ್ಯಮ. ಇದೀಗ 300 ಮಿಲಿಯನ್‍ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ.


ಬಳಕೆದಾರರು ಫೇಸ್​ಬುಕ್​ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು. ಅವರು ನಿಷ್ಕ್ರಿಯಗೊಳಿಸಿದ ಖಾತೆಯನ್ನು ಬೇರೆ ಯಾರು ನೋಡಲು ಸಾಧ್ಯವಿಲ್ಲ. ಅವರ ಸ್ನೇಹಿತರು ಹಾಗೂ ಸ್ನೇಹಿತರ ಪಟ್ಟಿಯಲ್ಲಿರುವವರು ಮಾತ್ರ ನೋಡಬಹುದು ಅಷ್ಟೇ. ಇನ್ನು ಗುಂಪಿನ ನಿರ್ವಾಹಕರಿಗೆ ಮಾತ್ರ ಆ ವ್ಯಕ್ತಿಯ ಪೋಸ್ಟ್, ಕಮೆಂಟ್ ನೋಡಲು ಸಿಗುತ್ತದೆ.



ನಿಮ್ಮ ಫೇಸ್‍ಬುಕ್ ಖಾತೆಯನ್ನು ನೀವು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು ಮತ್ತು ನಮಗೆ ಬೇಕಾದಾಗ ಉಪಯೋಗಿಸುವಂತೆಯೂ ಮಾಡಿಕೊಳ್ಳಬಹುದು. ಫೇಸ್‍ಬುಕ್ ಬಳಕೆದಾರರು ತಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ತಿಳಿದುಕೊಳ್ಳಬೇಕಾದ ಕೆಲವು ಹಂತಗಳು ಇಲ್ಲಿವೆ.


ಹಂತ 1: ಮೊದಲು ನಿಮ್ಮ ಫೇಸ್‍ಬುಕ್ ಖಾತೆಯ ಬಲಭಾಗದ ಮೇಲೆ ಬರುವ ಮೂರು ಗೆರೆಯ ಐಕಾನ್ ಅನ್ನು ಕ್ಲಿಕ್ ಮಾಡಿ


ಹಂತ 2: ನಂತರ ನಿಧಾನಕ್ಕೆ ಕೆಳಗೆ ಸ್ಕ್ರಾಲ್ ಮಾಡುತ್ತಾ ಸೆಟ್ಟಿಂಗ್ ಎಂಬ ಆಯ್ಕೆಗೆ ಬರಬೇಕು.


ಹಂತ 3: ಅಲ್ಲಿ ಬರುವ ಅಕೌಂಟ್ ಓನರ್‌ಶಿಪ್‌ ಆ್ಯಂಡ್ ಕಂಟ್ರೋಲ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.


ಹಂತ 4: ಇದಾದ ಬಳಿಕ ನಮಗೆ ಅಲ್ಲಿ ಡಿಆ್ಯಕ್ಟಿವೇಶನ್ ಮತ್ತು ಡಿಲೀಶನ್ ಎಂಬ ಆಯ್ಕೆ ಕಾಣುತ್ತದೆ.

ಹಂತ 5: ನಂತರ ಡಿಆ್ಯಕ್ಟಿವೇಶನ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ಅಕೌಂಟ್ ನಿಷ್ಕ್ರಿಯಗೊಳಿಸುವ ಕ್ರಮವನ್ನು ಮುಂದುವರೆಸಬೇಕು.


ಹಂತ 6: ಕೊನೆಗೆ ಸೂಚನೆಗಳನ್ನು ಅನುಸರಿಸಿ ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.


ಈ ಎಲ್ಲಾ ಹಂತಗಳನ್ನು ಫಾಲೋ ಮಾಡಿ ಖಾತೆಯನ್ನು ಸುಲಭವಾಗಿ ನಿಷ್ಕ್ರಿಯಗೊಳಿಸಿಕೊಳ್ಳಬಹುದು.


ಈ ಅಂಶ ನೆನಪಿನಲ್ಲಿಟ್ಟುಕೊಳ್ಳಿ:


ನಿಮ್ಮ ಫೇಸ್‍ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸುವಾಗ, ನೀವು ಮೆಸೆಂಜರ್ ಅನ್ನು ಸಕ್ರಿಯವಾಗಿಡಲು ಆರಿಸಿದರೆ ಅಥವಾ ಮೆಸೆಂಜರ್​ಗೆ‌ ಲಾಗ್ ಇನ್ ಆಗಿದ್ದರೆ, ಮೆಸೆಂಜರ್ ಸಕ್ರಿಯವಾಗಿಯೇ ಇರುತ್ತದೆ ಮತ್ತು ಮೆಸೆಂಜರ್‌ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡಬಹುದು. ಅಲ್ಲದೇ ನಿಮ್ಮ ಸ್ನೇಹಿತರು ನಿಮಗೆ ಸಂದೇಶ ಕಳುಹಿಸಲು ನಿಮ್ಮ ಖಾತೆಯನ್ನು ಹುಡುಕಲು ಅವಕಾಶ ಇರುತ್ತದೆ.


ಹೀಗೆ ಅಕೌಂಟ್‍ ಅನ್ನು ನಿಷ್ಕ್ರಿಯಗೊಳಿಸಿದರೆ ನಿಮ್ಮ ಟೈಮ್‍ಲೈನ್, ಸ್ಟೇಟಸ್ ಅಪ್‍ಡೇಟ್ ಮತ್ತು ಫೋಟೋಗಳು ಹೀಗೆ ಯಾವುದೇ ಮಾಹಿತಿಯನ್ನು ಕಲೆಹಾಕಲು ಸಾಧ್ಯವಾಗದು.


ಪುನಃ ಹೇಗೆ ಹಿಂದಿರುಗುವುದು?

1. ಫೇಸ್‍ಬುಕ್ ಅನ್ನು ಪುನಃ ಬಳಸಲು ಬಯಸಿದರೆ ವೆಬ್ ಬ್ರೌಸರ್‌ನಲ್ಲಿ ಫೇಸ್‍ಬುಕ್.ಕಾಂ ತೆರೆಯಿರಿ.

2. ನೀವು ಫೇಸ್‍ಬುಕ್ ಅನ್ನು ನಿಷ್ಕ್ರಿಯಗೊಳಿಸುವ ಮೊದಲು ಬಳಸುತ್ತಿದ್ದ ಅದೇ ಇಮೇಲ್ ವಿಳಾಸ ಮತ್ತು ಫೋನ್ ನಂಬರ್, ಪಾಸ್‍ವರ್ಡ್ ಬಳಸಿ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.

3. ನಿಷ್ಕ್ರಿಯಗೊಳಿಸುವ ಮೊದಲು ನಿಮ್ಮ ಫೇಸ್‍ಬುಕ್ ಖಾತೆಯನ್ನು ನೀವು ಬಳಸಿದ ರೀತಿಯಲ್ಲಿಯೇ ಬಳಸಿ.

4. ನಿಮ್ಮ ಫೇಸ್‍ಬುಕ್ ಖಾತೆ ಸೆಟ್ಟಿಂಗ್‍ಗಳಲ್ಲಿ ಯಾವುದೇ ಅಗತ್ಯ ಬದಲಾವಣೆಗಳನ್ನು ಮಾಡಿ.
First published: June 23, 2021, 1:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories