ಸುದ್ಧಿ ತಜ್ಞರ ನೇಮಕಕ್ಕೆ ಮುಂದಾದ ಫೇಸ್​ಬುಕ್​

news18
Updated:June 9, 2018, 2:35 PM IST
ಸುದ್ಧಿ ತಜ್ಞರ ನೇಮಕಕ್ಕೆ ಮುಂದಾದ ಫೇಸ್​ಬುಕ್​
news18
Updated: June 9, 2018, 2:35 PM IST
ನ್ಯೂಯಾರ್ಕ್​: ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​ ತನ್ನ ನ್ಯೂಸ್​ ಫೀಡ್​ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಹತ್ತಿಕ್ಕಲು ಸಾಕಷ್ಟು ಕಷ್ಟ ಪಡುತ್ತಿದ್ದರೂ ಒಂದಲ್ಲಾ ಒಂದು ರೀತಿಯಲ್ಲಿ ನಕಲಿ ಸಿದ್ದಿಗಳು ಸಾಕಷ್ಟು ವೈರಲ್​ ಆಗುತ್ತಲೇ ಇರುತ್ತದೆ. ಇದೀಗ ಹೊಸ ಪ್ಲಾನ್​ ಮಾಡಿರುವ ಫೇಸ್​ಬುಕ್​, ನಕಲು ಸುದ್ದಿಗಳನ್ನು ಗುರುತಿಸಲು ತಜ್ಞರನ್ನೇ ನೇಮಿಸಿಕೊಳ್ಳಲು ಮುಂದಾಗಿದೆ.

ಸ್ಪಾನಿಷ್​ ಭಾಷೆಯಲ್ಲಿ ಹೆಚ್ಚು ಹಿಡಿತ ಹೊಂದಿರುವ ಇಬ್ಬರು ತಜ್ಞರನ್ನು ಫೇಸ್​ಬುಕ್​ ನೇಮಿಸಿಕೊಳ್ಳುತ್ತಿದೆ ಎಂದು ಫಾರ್ಚೂನ್​ ಡಾಟ್​ ಕಾಂ ಹೇಳಿಕೊಂಡಿದೆ. ಇದಕ್ಕೂ ಮುನ್ನ ಬುಸಿನೆಸ್​ ಇನ್​ಸೈಡರ್​ ಈ ಕುರಿತಂತೆ ಸುದ್ದಿ ಮಾಡಿತ್ತು. ಇನ್ನು ಈ ಕುರಿತಂತೆ ಲಿಂಕ್​ಡ್​ ಇನ್​ನಲ್ಲೂ ಕೂಡಾ ಪೋಸ್ಟ್​​ ಬಂದಿತ್ತು.

ಮೆನ್ಲೋ ಪಾರ್ಕ್​ ಕಂಪನಿಯ ಮೂಲಕ ಅತಿ ದೊಡ್ಡ ಸಾಮಾಜಿಕ ಜಾಲತಾಣ ಕಂಪನಿಯಲ್ಲಿ ಕೆಲಸವಿದೆ ಎಂದು ಲಿಂಕ್​ಡ್​ ಇನ್​ನಲ್ಲಿ ಪೋಸ್ಟ್​​ ಮಾಡಲಾಗಿದೆ. ನೇಮಕಗೊಳ್ಳುವ ವ್ಯಕ್ತಿಗೆ ವಿಶ್ವಾಸಾರ್ಹ ಸುದ್ದಿ ಆಯ್ಕೆ ಕುರಿತು ಸೂಕ್ತ ತರಬೇತಿ ನೀಡುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಕೇಂಬ್ರಿಡ್ಜ್​ ಅನಾಲೆಟಿಕಾ ಹಗರಣ ಸೇರಿದಂತೆ ಹಲವಾರು ಸುಳ್ಳು ಸುದ್ದಿಗಳನ್ನು ಅಂತರ್ಜಾಲದಲ್ಲಿ ಹಬ್ಬಿಸುತ್ತಿರುವ ಕುರಿತು ಸಾಮಾಜಿಕ ಜಾಲತಾಣ ಬಳಕೇದಾರರು ಕಿಡಿಕಾರುತ್ತಿದ್ದರು. ಹೀಗಾಗಿ ಇಂತಹ ಆರೋಪಗಳಿಂದ ಪಾರಾಗಲು ಫೇಸ್​ಬುಕ್​ ಕಡಕ್​ ಪಾಲಿಸಿ ಸೇರಿದಂತೆ ಹಲವಾರು ಮಾರ್ಪಾಡನ್ನು ಕಳೆದ ಒಂದು ತಿಂಗಳಿನಿಂದ ಮಾಡತ್ತಾ ಬಂದಿದೆ.
First published:June 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ