ಫೇಸ್​ಬುಕ್​ಗೆ ಅಡಿಕ್ಟ್​ ಆಗಿದ್ದೀರಾ?: ಮೊಬೈಲ್​ನಲ್ಲೇ ತಿಳಿಯಲಿದೆ ಸಂಪೂರ್ಣ ವಿವರ

news18
Updated:June 24, 2018, 11:40 AM IST
ಫೇಸ್​ಬುಕ್​ಗೆ ಅಡಿಕ್ಟ್​ ಆಗಿದ್ದೀರಾ?: ಮೊಬೈಲ್​ನಲ್ಲೇ ತಿಳಿಯಲಿದೆ ಸಂಪೂರ್ಣ ವಿವರ
news18
Updated: June 24, 2018, 11:40 AM IST
ನ್ಯೂಸ್​ 18 ಕನ್ನಡ
ಸಾಮಾಜಿಕ ಜಾಲತಾಣ ಪ್ರಿಯರ ಫೇವರಿಟ್​ ಆಗಿರುವ ಫೇಸ್ಬುಕ್​ನಲ್ಲಿ ದಿನಕ್ಕೊಂದು ಅಪ್​ಡೇಟ್​ ಇದ್ದೇ ಇರುತ್ತದೆ. ಇದೀಗ 'ಫೇಸ್​ಬುಕ್​ನಲ್ಲಿ ನಿಮ್ಮ ಸಮಯ' ಎಂಬ ಫೀಚರ್​ ಅನ್ನು ಪರಿಚಯಿಸಲಿದ್ದು, ನೀವು ಒಂದು ವಾರದಲ್ಲಿ ದಿನದ ಎಷ್ಟು ಸಮಯವನ್ನು ಫೇಸ್​ಬುಕ್​ನೊಂದಿಗೆ ಕಳೆದಿದ್ದೀರಿ ಎಂಬ ಮಾಹಿತಿಯನ್ನು ಸರಾಸರಿ ಅಂಕಿ-ಅಂಶದೊಂದಿಗೆ ಇದು ನೀಡುತ್ತದೆ.
ಈ ಹೊಸ ಫೀಚರ್​ನಲ್ಲಿ ಫೇಸ್​ಬುಕ್​ ಬಳಕೆದಾರರು ತಮಗೆ ಬೇಕಾದಷ್ಟು ಕಾಲಾವಧಿಯನ್ನು ನಿಗದಿಮಾಡಿಕೊಳ್ಳಬಹುದು ಎಂದು ಟೆಕ್​ ಕ್ರಂಚ್​ ವರದಿಯಲ್ಲಿ ತಿಳಿಸಿದೆ. ನಾವು ಪ್ರತಿಬಾರಿಯೂ ನಾವು ಜನರಿಗೆ ಅನುಕೂಲವಾಗುವ ಹಾಗೂ ಫೇಸ್​ಬುಕ್​ನೊಂದಿಗೆ ಕಳೆದ ಸಮಯವನ್ನು ನೆನಪುಳಿಯುವಂತೆ ಮಾಡುವ ಬಗ್ಗೆಯೇ ಯೋಚಿಸುತ್ತೇವೆ. ಆ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದೇವೆ ಎಂದು ಫೇಸ್​ಬುಕ್​ನ ವಕ್ತಾರರು ತಿಳಿಸಿದ್ದಾರೆ.
ಫೇಸ್​ಬುಕ್ ಬಳಕೆದಾರರ ಸ್ವಯಂ ನಿಯಂತ್ರಣಕ್ಕೆ ಈ ಫೀಚರ್​ ಬಹಳ ಮುಖ್ಯವಾಗಿದೆ. ಇದರಿಂದಾಗಿ ನೀವು ಫೇಸ್​ಬುಕ್​ಗೆ ಎಷ್ಟು ಅಡಿಕ್ಟ್​ ಅಗಿದ್ದೀರಿ ಎಂಬುದರ ವಿವರ ನಿಮ್ಮ ಮೊಬೈಲ್​ನಲ್ಲೇ ಸಿಗಲಿದೆ. ಸದ್ಯಕ್ಕೆ ಈ ಫೀಚರ್​ ಅನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದ್ದು, ಬಿಡುಗಡೆಯಾಗುವ ದಿನಾಂಕ ಇನ್ನೂ ಖಚಿತವಾಗಿಲ್ಲ.
First published:June 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...