ಡೇಟಾ ಸೋರಿಕೆ: ಥರ್ಡ್ ಪಾರ್ಟಿ ಲಾಗಿನ್ ತೆಗೆದು ಹಾಕಿದ ಫೇಸ್​ಬುಕ್​

news18
Updated:April 21, 2018, 6:01 PM IST
ಡೇಟಾ ಸೋರಿಕೆ: ಥರ್ಡ್ ಪಾರ್ಟಿ ಲಾಗಿನ್ ತೆಗೆದು ಹಾಕಿದ ಫೇಸ್​ಬುಕ್​
news18
Updated: April 21, 2018, 6:01 PM IST
ನ್ಯೂಸ್​ 18 ಕನ್ನಡ

ಫೇಸ್​ಬುಕ್ ಬಳಕೆದಾರರ ವೈಯುಕ್ತಿಕ ಮಾಹಿತಿಗಳನ್ನು ಕದಿಯಲು ಥರ್ಡ್ ಪಾರ್ಟಿ ಲಾಗಿನ್ ಫೀಚರ್​ ಅನ್ನು ಬಳಸಲಾಗುತ್ತಿದೆ ಎಂದು ಫೇಸ್​ಬುಕ್​ ಕೇಳಿಕೊಂಡಿದೆ. ಕೆಲ ವೆಬ್​ಸೈಟ್​​ಗಳಿಂದಾಗಿ​ ಬಳಕೆದಾರರ ಡೇಟಾ(ದತ್ತಾಂಶ) ಸೋರಿಕೆಯಾಗಿರುವುದು ಪತ್ತೆಯಾಗಿದೆ. ವೆಬ್​ಸೈಟ್​​ಗಳ ಮೂಲಕ ಲಾಗಿನ್​ ಆದ ಬಳಕೆದಾರರ ಇ-ಮೇಲ್, ಹೆಸರು, ವಿಳಾಸ ಮತ್ತು ಫೋಟೊಗಳನ್ನು ಸಂಗ್ರಹಿಸಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ತಿಳಿಸಿದೆ. ಇದೀಗ ಫೇಸ್​ಬುಕ್​ 'ಥರ್ಡ್ ಪಾರ್ಟಿ' ಲಾಗಿನ್​ ಆಯ್ಕೆಯನ್ನು ತೆಗೆದು ಹಾಕಲು ನಿರ್ಧರಿಸಿದೆ.

ಏಳು ಥರ್ಡ್ ಪಾರ್ಟಿ ವೆಬ್​ಸೈಟ್​​ಗಳು ಫೇಸ್​ಬುಕ್​ ಬಳಕೆದಾರರ ಡೇಟಾವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿಯನ್ನು ಪ್ರಿನ್​ಸ್ಟನ್​ ಸೆಂಟರ್ ಫಾರ್ ಇನ್ಫಮೇಷನ್ ಟೆಕ್ನಾಲಜಿ ಪಾಲಿಸಿ ಸಂಶೋಧನೆಯಿಂದ ಬಹಿರಂಗವಾಗಿದೆ. ಇದು ಫೇಸ್​ಬುಕ್​ ನೀತಿಗಳ ಉಲ್ಲಂಘನೆಯಾಗಿದ್ದು, ಈ ಕುರಿತು ತನಿಖೆ ನಡೆಸುವುದಾಗಿ ಫೇಸ್​ಬುಕ್​ ನ್ಯೂಸ್18ಗೆ ತಿಳಿಸಿದೆ.

ಥರ್ಡ್ ಪಾರ್ಟಿ ಮತ್ತು ಫೇಸ್​ಬುಕ್​

ನೀವು ಹಲವು ಬಾರಿ ಬೇರೆ ವೆಬ್​ಸೈಟ್​​​ಗಳಲ್ಲಿ ಲಾಗಿನ್ ಐಡಿಯನ್ನು ಬಳಸಿದಾಗ, ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕದ ಹೊರತಾಗಿ ಹೆಚ್ಚುವರಿ ಮಾಹಿತಿಗಳನ್ನು ಕೇಳಲಾಗುತ್ತದೆ. ಈ ಸಂದರ್ಭದಲ್ಲಿ ನೀವು ಮಾಹಿತಿಗಳನ್ನು ಹಂಚಿಕೊಳ್ಳಲು ಅಥವಾ ಫೇಸ್​ಬುಕ್​ ಐಡಿಯೊಂದಿಗೆ ಲಾಗಿನ್ ಆಗಲು ಎರಡು ಆಯ್ಕೆಗಳನ್ನು ನೀಡಿರುತ್ತಾರೆ. ಸಾಮಾನ್ಯವಾಗಿ ಸಮಯವನ್ನು ಉಳಿಸುವ ಸಲುವಾಗಿ ಬಳಕೆದಾರರು ಫೇಸ್​ಬುಕ್ ಮೂಲಕ ಲಾಗಿನ್ ಆಗುತ್ತಾರೆ. ಆದರೆ ಈಗ ಬಳಕೆದಾರರ ಮಾಹಿತಿ ಸೋರಿಕೆಯನ್ನು ತಡೆಯಲು ಫೇಸ್​ಬುಕ್ ಈ ಫೀಚರನ್ನು ತೆಗೆದು ಹಾಕಿದೆ.

ಏನಿದು ಫೇಸ್ಬುಕ್ ವಿವಾದ ?
5ಕೋಟಿ ಫೇಸ್​ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅನುಮತಿಯಿಲ್ಲದೆ ಕೇಂಬ್ರಿಡ್ಜ್‌ ಅನಾಲಿಟಿಕಾ​ ಸಂಸ್ಥೆ ಬಳಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದರಿಂದ ಈ ವಿವಾದವು ಪ್ರಾರಂಭವಾಯಿತು. ಕೇಂಬ್ರಿಜ್ಡ್ ಅನಾಲಿಟಿಕಾ ಸಂಸ್ಥೆ 500 ಶತಕೋಟಿ ಕಂಪನಿಯಾಗಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ರವರ ಚುನಾವಣಾ ಪ್ರಚಾರದ ಹೊಣೆಯನ್ನು ಈ ಸಂಸ್ಥೆ ವಹಿಸಿಕೊಂಡಿತ್ತು. ಇದಾದ ಬಳಿಕ ಫೇಸ್​ಬುಕ್ ಕೇಂಬಿಡ್ಜ್ ಅನಾಲಿಟಿಕಾ ಸಂಸ್ಥೆಯನ್ನು ದೂರವಿರಿಸಿತ್ತು. ಮಾಹಿತಿ ಸೋರಿಕೆಯ ವಿಚಾರವಾಗಿ ಕೆಲ ದಿನಗಳ ಹಿಂದೆ ಫೇಸ್​ಬುಕ್ ವಿರುದ್ಧ ವಿಶ್ವದಾದ್ಯಂತ ಭಾರೀ ಚರ್ಚೆ ನಡೆದಿತ್ತು.
First published:April 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...