ವಾಟ್ಸ್​ಆ್ಯಪ್​​ ಮತ್ತು ಫೇಸ್​​ಬುಕ್​ನಲ್ಲಿ ಮತ್ತೆ ಕಾಣಿಸಿಕೊಂಡ ಸಮಸ್ಯೆ​; ಬಳಕೆದಾರರ ಆಕ್ರೋಶ

ಈ ಮಧ್ಯೆ ಇನ್​ಸ್ಟಾಗ್ರಾಮ್​​ ಕೂಡ ಸರಿಯಾಗಿ ಕೆಲಸ ಮಾಡುಗತ್ತಿಲ್ಲ ಎಂದು ಹೇಳಲಾಗುತ್ತಿದೆ. ಜಾಗತಿಕವಾಗಿ ಒಂದೇ ಬಾರಿಗೆ ಇಷ್ಟು ಆ್ಯಪ್​​ಗಳು ಕಾರ್ಯನಿರ್ವಹಿಸದೆ ಇರುವುದು ಬಳಕೆದಾರರಲ್ಲಿ ಅಸಮಾಧಾನ ಹುಟ್ಟಿಹಾಕಿದೆ.


Updated:July 3, 2019, 10:10 PM IST
ವಾಟ್ಸ್​ಆ್ಯಪ್​​ ಮತ್ತು ಫೇಸ್​​ಬುಕ್​ನಲ್ಲಿ ಮತ್ತೆ ಕಾಣಿಸಿಕೊಂಡ ಸಮಸ್ಯೆ​; ಬಳಕೆದಾರರ ಆಕ್ರೋಶ
ವಾಟ್ಸ್​ಆ್ಯಪ್ ಮತ್ತು ಫೇಸ್​ಬುಕ್​
  • Share this:
ಬೆಂಗಳೂರು(ಜುಲೈ.03): ವಾಟ್ಸ್​ಆ್ಯಪ್​​ ಮತ್ತು ಫೇಸ್​ಬುಕ್​​ ಆ್ಯಪ್​ಗಳಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ. ಆ್ಯಪ್​​ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ರಿಪೋರ್ಟ್​​ ಮಾಡುತ್ತಿದ್ದಾರೆ. ಪೋಸ್ಟ್​​ ಮಾಡಿದ ಫೋಟೊಗಳು ಕಾಣುತ್ತಿಲ್ಲ, ಪೇಜ್​​ ಸರಿಯಾಗಿ ಲೋಡ್​ ಆಗುತ್ತಿಲ್ಲ ಎಂದು ದೂರುತ್ತಿದ್ದಾರೆ.

ಇಡೀ ಪ್ರಪಂಚದಾದ್ಯಂತ ಬಳಕೆದಾರರು ರಿಪೋರ್ಟ್​ ಮಾಡುವ ಮುಖೇನ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ಯೂರೋಪ್​​, ಯುಎಸ್​​, ದಕ್ಷಿಣ ಅಮೆರಿಕಾ ಮತ್ತು ಜಪಾನ್​​​ ಬಳಕೆದಾರು ಫೇಸ್​ಬುಕ್​​ನಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸುತ್ತಿವೆ.

ಫೇಸ್​​ಬುಕ್​​ ಬಳಕೆದಾರರು ಹೇಗೆ ಸಮಸ್ಯೆ ಎದುರಿಸುತ್ತಿದ್ದಾರೋ, ಅದೇ ಮಾದರಿ ಸಮಸ್ಯೆ ವಾಟ್ಸ್​ಆ್ಯಪ್​​ ಬಳಕೆದಾರರಿಗೂ ಎದುರಾಗಿದೆ. ಇನ್ನೊಬ್ಬರಿಗೆ ಸಂದೇಶ, ಫೋಟೊಸ್​ ಮತ್ತು ಯಾವುದಾದರೂ ಕಡತಗಳನ್ನು ಡೌನ್​​ಲೋಡ್​​ ಮಾಡಲು ತೊಂದರೆಯಾಗುತ್ತಿದೆ ಎಂದು ಸಂಸ್ಥೆ ಮೊರೆ ಹೋಗಿದ್ದಾರೆ.

ಈ ಮಧ್ಯೆ ಇನ್​ಸ್ಟಾಗ್ರಾಮ್​​ ಕೂಡ ಸರಿಯಾಗಿ ಕೆಲಸ ಮಾಡುಗತ್ತಿಲ್ಲ ಎಂದು ಹೇಳಲಾಗುತ್ತಿದೆ. ಜಾಗತಿಕವಾಗಿ ಒಂದೇ ಬಾರಿಗೆ ಇಷ್ಟು ಆ್ಯಪ್​​ಗಳು ಕಾರ್ಯನಿರ್ವಹಿಸದೆ ಇರುವುದು ಬಳಕೆದಾರರಲ್ಲಿ ಅಸಮಾಧಾನ ಹುಟ್ಟಿಹಾಕಿದೆ.

ಇದನ್ನೂ ಓದಿ: ಆ್ಯಂಬಿಡೆಂಟ್​​ ಪ್ರಕರಣ: ಆಸ್ತಿ ವಾಪಸ್​​ ಮಾಡದಿದ್ರೆ ಇಡಿ ವಿರುದ್ಧ ನಿಂದನೆ ದಾವೆ ಹೂಡುತ್ತೇನೆ ಎಂದ ರೆಡ್ಡಿ

ಇತ್ತೀಚೆಗಷ್ಟೇ ಫೇಸ್​ಬುಕ್ ಒಡೆತನದ ವಾಟ್ಸ್​ಆ್ಯಪ್​​ ​ ಸಂಸ್ಥೆ ದೇಶದ ಡಿಜಿಟಲ್ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದೆ. ಆದರೆ, ಅಶ್ಲೀಲ ಚಿತ್ರ ಮತ್ತು ವಿಡಿಯೊ ಪ್ರಸಾರಕ್ಕೆ ವಾಟ್ಸಪ್​ ವೇದಿಯಾಗಿ ಗುಂಪು ಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಈ ರೀತಿ ಪ್ರತೀಕಾರ ತೀರಿಸಿಕೊಳ್ಳುವುದು ದೇಶದ ಕಾನೂನಿಗೆ ವಿರುದ್ಧ. ಹೀಗಾಗಿ ಕೆಟ್ಟ ಬೆಳವಣಿಗೆಗೆ ವೇದಿಕೆ ಒದಗಿಸದಂತೆ ಸಂಸ್ಥೆ ನೋಡಿಕೊಳ್ಳಬೇಕು ಎಂಬ ಆರೋಪ ಕೇಳಿ ಬಂದಿತ್ತು.

'ಸುಳ್ಳು ಸಂದೇಶಗಳ ಕಡಿವಾಣಕ್ಕೆ ಕ್ರಮ ತೆಗೆದುಕೊಳ್ಳದಿದ್ದರೆ, ಕೇಂದ್ರ ಸರ್ಕಾರ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದ್ಧಾರೆ . ಈ ಸಮಸ್ಯೆಗೆ ವಾಟ್ಸಪ್​ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ರಿಸ್‌ ಡೇನಿಯಲ್‌ ಕೂಡ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಈ ಬೆನ್ನಲ್ಲೇ ಮತ್ತೊಂದು ಸಮಸ್ಯೆ ಎದುರಾಗಿದ್ದು, ಬಳಕೆದಾರರನ್ನು ಕೆರಳಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.-------------
First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ