ಫೇಸ್​ಬುಕ್​ನಲ್ಲಿ ಕಾಣಿಸಿಕೊಳ್ಳಲಿದೆ ಡಿಸ್​ಲೈಕ್​ ಬಟನ್​!

news18
Updated:April 30, 2018, 6:45 PM IST
ಫೇಸ್​ಬುಕ್​ನಲ್ಲಿ ಕಾಣಿಸಿಕೊಳ್ಳಲಿದೆ ಡಿಸ್​ಲೈಕ್​ ಬಟನ್​!
news18
Updated: April 30, 2018, 6:45 PM IST
ನ್ಯೂಸ್​ 18 ಕನ್ನಡ

ನ್ಯೂಯಾರ್ಕ್​: ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಬರುವ ಪೋಸ್ಟ್​ಗಳಲ್ಲಿ ನಮಗೆ ಇಷ್ಟವಾದ ಪೋಸ್ಟ್​ಗಳನ್ನು ಲೈಕ್​ ಮಾಡಲು ಲೈಕ್​ ಬಟನ್​ ಇರುವಂತೆ ಇಷ್ಟವಾಗದ ಪೋಸ್ಟ್​ನ ಕಮೆಂಟ್​ಗೆ ಡಿಸ್​ ಲೈಕ್​ ಬಟನ್​ ಮಾತ್ರಾ ಕಾಣಿಸುತ್ತಿರಲಿಲ್ಲ. ಹೀಗಾಗಿ ಫೇಸ್​ಬುಕ್​ ನೂತನವಾಗಿ ಡಿಸ್​ಲೈಕ್​ ಬಟನ್​ಅನ್ನು ಪರಿಚಯ ಮಾಡಲು ಮುಂದಾಗಿದೆ.

ಫೆಬ್ರವರಿಯಿಂದಲೇ ಡೌನ್​ವೋಟ್​ ಅಥವಾ ಡಿಸ್​ಲೈಕ್​ ಬಟನ್​ನನ್ನು ಟೆಸ್ಟಿಂಗ್​ ಮೋಡ್​ನಲ್ಲಿ ಅಳವಡಿಸಿದ್ದು ಕೆಲ ಬಳಕೇದಾರರಿಗೆ ಈ ಆಪ್ಷನ್​ ಕಾಣಿಸಿಕೊಂಡಿದೆ ಎಂದು ಸ್ವತಃ ಫೇಸ್​ಬುಕ್​ ಹೇಳಿದೆ. 'ರೆಡ್​ಇಟ್​ ಮಾದರಿಯಲ್ಲೇ ಹೆಚ್ಚಿನ ಸಂಖ್ಯೆಯ ಫೇಸ್​ಬುಕ್​ ಬಳಕೇದಾರರಿಗೆ ಡೌನ್​ವೋಟ್​ ಬಟನ್​ ಕಾಣಿಸಿಕೊಳ್ಳುತ್ತಿದೆ ಎಂದು ನೆಕ್ಸ್ಟ್​ವೆಬ್​ ಹೇಳಿದೆ. 2009ರಿಂದಲೇ ಫೇಸ್​ಬುಕ್​ ಬಳಕೇದಾರರು ಡೌನ್​ವೋಟ್​ ಬಟನ್​ನ್ನು ಪರಿಚಯಿಸುವಂತೆ ಆಗ್ರಹಿಸುತ್ತಾ ಬಂದಿದ್ದರು.

ಹೆಚ್ಚಿನ ಸಂದರ್ಭದಲ್ಲಿ ಫೇಸ್​ಬುಕ್​ನಲ್ಲಿ ಪ್ರಕಟಗೊಳ್ಳುವ ಸ್ಟೋರಿಗಳು, ಅಥವಾ ಕಾಮೆಂಟ್ಸ್​ಗಳು ಸತ್ಯವೇ ಎಂದು ತಿಳಿಯಲು ಈ ಡೌನ್​ ಬಟನ್​ ಸಹಕಾರಿಯಾಗಲಿದೆ. ಒಂದು ವೇಳೆ ಕಾಮೆಂಟ್ಸ್​​ಗಳು ದಾರಿ ತಪ್ಪುವ, ಸುಳ್ಳು ಅಥವಾ ಇನ್ಯಾವುದೇ ತಪ್ಪು ಸಂದೇಶ ಸಾರುವ ಅರ್ಥಗಳನ್ನು ಒಳಗೊಂಡಿದ್ದರೆ ಫೇಸ್​ಬುಕ್​ ಇಂತಹ ಕಾಮೆಂಟ್​ಗಳ ಮೇಲೆ ನಿಗಾ ಇಡುತ್ತದೆ.

ನಮ್ಮ ಸ್ನೇಹಿತರ ಅಥವಾ ಇನ್ನಾವುದೋ ಪೋಸ್ಟ್​ಗಳನ್ನು ಓದುತ್ತೇವೋ ಬಿಡುತ್ತೇವೋ ಗೊತ್ತಿಲ್ಲ. ಆದರೆ ನನ್ನದೊಂದು ಲೈಕ್ ಇರಲಿ ಎಂದು ಬಟನ್ ಒತ್ತಿ ಅವರಿಗೆ ನಮ್ಮ ಮೇಲಿರುವ ಭಾವನೆಯನ್ನು ಇಮ್ಮಡಿಗೊಳಿಸಲು ಪ್ರಯತ್ನಿಸುತ್ತಿದ್ದೆವು. ಒಂದು ವೇಳೆ ಆ ಸ್ಟೇಟಸ್ ಬಗ್ಗೆ ಇಷ್ಟವಿಲ್ಲದಿದ್ದರೆ ಏನೂ ಮಾಡಲಾಗದೆ ಸುಮ್ಮನಿರುತ್ತಿದ್ದೆವು. ಆದರೆ ಈಗ ನಮಗೆ ಇಷ್ಟ ಇಲ್ಲದೇ ಇರುವ ಪೋಸ್ಟ್​ಗಳಿಗೆ ಡೌನ್​ ಬಟನ್​ ಆಯ್ಕೆ ಮಾಡಿದರೆ ಆ ಪೋಸ್ಟ್​ ಮೇಲೆ ಫೇಸ್​ಬುಕ್​ ಕಣ್ಣಿಡುತ್ತದೆ. ಈ ಮೂಲಕ ಸುಳ್ಳುಸುದ್ದಿಗಳಿಗೆ ಕಡಿವಾಣ ಹಾಕಲು ಫೇಸ್​ಬುಕ್​ ಸಿದ್ಧವಾಗಿದೆ.
First published:April 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ