ಚೀನಾ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೆಯನ್ನು ಖಾತ್ರಿ ಪಡಿಸಿದ ಫೇಸ್​ಬುಕ್​


Updated:June 6, 2018, 1:50 PM IST
ಚೀನಾ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೆಯನ್ನು ಖಾತ್ರಿ ಪಡಿಸಿದ ಫೇಸ್​ಬುಕ್​
image : AP

Updated: June 6, 2018, 1:50 PM IST
ವಾಷಿಂಗ್ಟನ್​: ಸಾಮಾಜಿಕ ಜಾಲತಾಣ ಫೇಸ್​ಬುಕ್​ ಕಳೆದ ಅಮೆರಿಕ ಚುನಾವಣೆ ಸಂದರ್ಭದಲ್ಲಿ ಲಂಡನ್​ ಮೂಲದ ಕೇಂಬ್ರಿಜ್​ ಅನಾಲಿಟಿಕಾ ಕಂಪನಿ 8.7 ಕೋಟಿ ಜನರ ದತ್ತಾಂಶ ದುರ್ಬಳಕೆ ಮಾಡಿಕೊಂಡ ಹಗರಣ ಆರೋಪ ಕೇಳಿಬಂದ ಬೆನ್ನಲ್ಲೇ ಇದೀಗ ಮತ್ತೊಂದು ವಿಚಾರ ಬಯಲಾಗಿದ್ದು ಚೀನಾದ ಕಂಪನಿಗಳು ಸೇರಿದಂತೆ ವಿಶ್ವಾದ್ಯಂತ 60ಕ್ಕೂ ಹೆಚ್ಚು ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾಗಿ ಫೇಸ್​ಬುಕ್​ ತಿಳಿಸಿದೆ.

ಚೀನಾ ಹುವಾವೇ, ಕಂಪ್ಯೂಟರ್​ ತಯಾರಿಕಾ ಕಂಪನಿ ಲೆನೋವೋ ಗ್ರೂಪ್​, ಸ್ಮಾರ್ಟ್​ ಫೋನ್​ ತಯಾರಿಕಾ ಕಂಪನಿಗಳಾ ಒಪ್ಪೋ ಮತ್ತು ಟಿಎಲ್​ಸಿ ಸೇರಿದಂತೆ 60 ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಫೇಸ್​ಬುಕ್​ ಬಳಕೇದಾರರ ಲೈಕ್ಸ್​ಗಳನ್ನು ತಿಳಿದುಕೊಳ್ಳಲು ಈ ರೀತಿ ಮಾಡಿಕೊಂಡಿದೆ ಎಂದು ಹೇಳಿದೆ.

ಈಗಾಗಲೇ ಸುಮಾರು 30 ಕ್ಕೂ ಹೆಚ್ಚು ಕಂಪನಿಗಳೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಲಾಗಿದೆ. ಈವಾರಾಂತ್ಯದಲ್ಲಿ ಹುವಾವೇ ಕಂಪನಿಯೊಂದಿಗಿನ ಒಪ್ಪಂದ ಈ ವಾರದ ಕೊನೆಗೆ ಕೊನೆಗೊಳ್ಳಲಿದೆ ಎಂದು ಫೇಸ್​ಬುಕ್​ ತಿಳಿಸಿದೆ.

ಈ ರೀತಿ ದತ್ತಾಂಶಗಳನ್ನು ಹಂಚಿಕೊಂಡರೆ ಗೂಢಚಾರಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ, ಅಮೆರಿಕದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ತಿಳಿಸಿದ್ದರು. ಆದರೆ ಅಮೆರಿಕದ ಆರೋಪವನ್ನು ಚೀನಾ ನಿರಾಕರಿಸಿತ್ತು.

ಸದ್ಯ ಇಂತಹ ಅವಗಢಗಳಿಗೆ ಫೇಸ್​ಬುಕ್​ ಅನುವು ಮಾಡಿಕೊಡುವುದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದ್ದು, ಹುವಾವೇ ಸೇರಿದಂತೆ ಯಾವುದೇ ಕಂಪನಿಗಳು ದತ್ತಾಂಶಗಳನ್ನು ಹಂಚಿಕೊಳ್ಳುವ ಮುನ್ನ ಕೂಲಂಕುಶವಾಗಿ ಪರೀಕ್ಷಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ