HOME » NEWS » Tech » FACEBOOK CLASSIC DESIGN WILL BE ENDING ITS WORK FROM SEPTEMBER AND NEW VERSION UI WILL START

Facebook: ಫೇಸ್​ಬುಕ್ ಹೊಸ ವಿನ್ಯಾಸ​; ಸೆಪ್ಟೆಂಬರ್​ನಿಂದ​ ಕ್ಲಾಸಿಕ್​ ವಿನ್ಯಾಸ ಸ್ಥಗಿತ!

Facebook Classic Design: ಈಗಾಗಲೇ ಫೆಸ್​ಬುಕ್​  ಹೊಸ ವಿನ್ಯಾಸವನ್ನು ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ತನ್ನ ವಿನ್ಯಾಸವನ್ನು ಮತ್ತಷ್ಟು ಬದಲಾವಣೆ ಮಾಡುವ ಮೂಲಕ ಬಳಕೆದಾರರಿಗೆ ಹೊಸ ಅನುಭವ ಒದಗಿಸಲಿದೆ.

news18-kannada
Updated:August 25, 2020, 8:22 AM IST
Facebook: ಫೇಸ್​ಬುಕ್ ಹೊಸ ವಿನ್ಯಾಸ​; ಸೆಪ್ಟೆಂಬರ್​ನಿಂದ​ ಕ್ಲಾಸಿಕ್​ ವಿನ್ಯಾಸ ಸ್ಥಗಿತ!
Facebook
  • Share this:
ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್​​​​  ತನ್ನ ಕ್ಲಾಸಿಕ್ ವಿನ್ಯಾಸ  ಸ್ಥಗಿತ ಮಾಡಲು ಮುಂದಾಗಿದೆ. ಈಗಾಗಲೇ ಫೆಸ್​ಬುಕ್​  ಹೊಸ ವಿನ್ಯಾಸವನ್ನು ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ತನ್ನ ವಿನ್ಯಾಸವನ್ನು ಮತ್ತಷ್ಟು ಬದಲಾವಣೆ ಮಾಡುವ ಮೂಲಕ ಬಳಕೆದಾರರಿಗೆ ಹೊಸ ಅನುಭವ ಒದಗಿಸಲಿದೆ. ಸೆಪ್ಟೆಂಬರ್  ತಿಂಗಳಿನಿಂದ ಬಳಕೆದಾರರಿಗೆ ಫೇಸ್​ಬುಕ್​​ ಕ್ಲಾಸಿಕ್ ವಿನ್ಯಾಸ ದೊರೆಯುವುದಿಲ್ಲ. ನೂತನ ವಿನ್ಯಾಸವನ್ನೇ ಬಳಸ ಬೇಕಾಗಿದೆ. ಕ್ಲಾಸಿಕ್ ವಿನ್ಯಾಸವನ್ನುತೆಗೆದು ಹಾಕಲು ಫೇಸ್​ಬುಕ್​​ ನಿರ್ಧರಿಸಿದೆ.

ಫೇಸ್​ಬುಕ್​​ ಹೊಸ ವಿನ್ಯಾಸ ಮತ್ತು ಹಳೇಯ ಕ್ಲಾಸಿಕ್ ವಿನ್ಯಾಸದ ಬಗ್ಗೆ ಏಫ್ಎಕ್ಯೂ ಪೇಜ್​ನಲ್ಲಿ ಸ್ಪಷ್ಟತೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಕ್ಲಾಸಿಕ್ ಥೀಮ್ ಆಯ್ಕೆ ಇರುವುದಿಲ್ಲ. ಬಳಕೆದಾರರಿಗೆ ಹೊಸ ವಿನ್ಯಾಸ ಬಳಕೆಗೆ ಸಿಗಲಿದೆ ಎಂದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ನೂತನ ವಿನ್ಯಾಸದಲ್ಲಿ ಫೇಸ್​ಬುಕ್​ ಬಳಕೆಗೆ ಸಿಗಲಿದೆ. ಇದರ ಜೊತೆಗೆ ಡಾರ್ಕ್ ಥೀಮ್ ಅನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಈ ಎಲೆಕ್ಟ್ರಿಕ್ ಕಾರು ನೀಡುತ್ತೆ 471 ಕಿ.ಮೀ ಮೈಲೇಜ್; ಹಾಗಿದ್ದರೆ ಬೆಲೆ?

ಡಾರ್ಕ್ ಥೀಮ್ ಬೇಡವಾಗಿದ್ದಲ್ಲಿ ಅಫ್ ಮಾಡುವ ಅವಕಾಶವಿದೆ. ಜೊತೆಗೆ ಗೇಮಿಂಗ್ ಐಕಾನ್, ಮಾರ್ಕೆಟ್ ಪ್ಲೇಸ್​​​, ಫೇಸ್​ಬುಕ್​ ವಾಚ್, ಯುಐ ಮತ್ತು ನೋಟಿಫಿಕೇಶನ್, ಮೆಸೆಂಜರ್ ಐಕಾನ್, ಸೆಟ್ಟಿಂಗ್ಸ್​​ ಕೀ ಕೂಡ ಬದಲಾಗಿದೆ. ಕಳೆದ ವರ್ಷ ಎಪ್ರಿಲ್​​ನಲ್ಲಿ ಮಾಕ್ ಜುಕರ್ ಬರ್ಗ್ ಫೇಸ್​​ಬುಕ್​​ ಡೆಸ್ಕ್ ಟಾಪ್ ವಿನ್ಯಾಸವನ್ನು ಬದಲಾಯಿಸುವುದಾಗಿ ಹೇಳಿದ್ದರು.
Youtube Video

ಅದರಂತೆ ಈ ವರ್ಷ ಫೇಸ್​ಬುಕ್​​ ಡೆಸ್ಕ್​ಟಾಪ್​​ ವಿನ್ಯಾಸ ಬದಲಾಗಿದೆ. ಜೊತೆಗೆ ಕ್ಲಾಸಿಕ್ ವಿನ್ಯಾಸ ಸ್ಥಗಿತವಾಗುತ್ತಿದೆ.
First published: August 25, 2020, 8:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories