NCW ಸಹಭಾಗಿತ್ವದಲ್ಲಿ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ಆಯೋಜಿಸಿದ ಫೇಸ್​ಬುಕ್!


Updated:June 19, 2018, 12:51 PM IST
NCW ಸಹಭಾಗಿತ್ವದಲ್ಲಿ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ಆಯೋಜಿಸಿದ ಫೇಸ್​ಬುಕ್!

Updated: June 19, 2018, 12:51 PM IST
ನ್ಯೂಸ್ 18 ಕನ್ನಡ

ನವದೆಹಲಿ(ಜೂ.19): ರಾಷ್ಟ್ರೀಯ ಮಹಿಳಾ ಆಯೋಗದ ಸಹಭಾಗಿತ್ವದಲ್ಲಿ ಮಹಿಳಾ ಲೇಖಕರಿಗೆ ತರಬೇತಿ ನೀಡುವ ಉದ್ದೇಶದಿಂದ ಪಂಜಾಬ್​ ವಿಶ್ವವಿದ್ಯಾನಿಯಲಯದಲ್ಲಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದಾಗಿ ಫೇಸ್​ಬುಕ್ ಘೋಷಿಸಿದೆ. ಮಹಿಳೆಯರು ತಮ್ಮನ್ನು ತಾವು ಸ್ವತಂತ್ರ್ಯವಾಗಿ ವ್ಯಕ್ತಪಡಿಸಿಕೊಳ್ಳಲು ಸಜ್ಜುಗೊಳಿಸುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿ ನಮ್ಮ ಉತ್ಪನ್ನಗಳು, ಪಾಲಿಸಿ ಹಾಗೂ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಅವರೊಡನೆ ಸಂವಹನ ನಡೆಸಲು ಸುರಕ್ಷಿತ ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದು ಫೇಸ್​ಬುಕ್​ನ ದಕ್ಷಿಣ ಹಾಗೂ ಮಧ್ಯ ಏಷ್ಯಾದ ಪಬ್ಲಿಕ್ ಪಾಲಿಸಿ ನಿರ್ದೇಶಕ ಅಂಕಿ ದಾಸ್ ತಿಳಿಸಿದ್ದಾರೆ.

ಸೈಬರ್​ ಪೀಸ್​ ಫೌಂಡೇಷನ್​ನ ಸಹಯೋಗದೊಂದಿಗೆ ಲಾಂಚ್ ಆಗಿರುವ ಈ ಕಾರ್ಯಕ್ರಮವು ಮಹಿಳಾ ಲೇಖಕರಿಗೆ ಆನ್​ಲೈನ್ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸುವುದರೊಂದಿಗೆ, ತಮ್ಮ ರಕ್ಷಣೆ ಹಾಗೂ ಡಿಜಿಟಲ್​ ಸಾಕ್ಷರತೆಯ ಲಾಭವನ್ನು ಸರಿಯಾಗಿ ಪಡೆಯಬೇಕೆಂಬ ನಿಟ್ಟಿನಲ್ಲಿ ಇದನ್ನು ಆಯೋಜಿಸುತ್ತಿರುವುದಾಗಿ ಹೇಳಲಾಗಿದೆ.

ಡಿಜಿಟಲ್​ ಸಾಕ್ಷರತಾ ಕಾರ್ಯಕ್ರಮವು NCR, ಮಣಿಪುರ, ಸಿಕ್ಕಿಂ, ಮೇಘಾಲಯ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿರುವ ಪ್ರಮುಖ ನಗರಗಳ ವಿಶ್ವ ವಿದ್ಯಾನಿಲಯಗಳಲ್ಲಿರುವ ಮಹಿಳೆಯರಿಗೆ ಉಪಯುಕ್ತವಾಗಲಿದೆ.
First published:June 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ