Facebook‌ ಮೆಟಾದಂತೆಯೇ ಹೆಸರು ಬದಲಾಯಿಸಿದ ಐದು ಪ್ರಮುಖ ಕಂಪನಿಗಳು..

Big Companies Changed Brand Names: ಇತ್ತೀಚೆಗೆ ತಾನೇ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ (Facebook) ತನ್ನ ಹೊಸ ಹೆಸರಾದ ಮೆಟಾವನ್ನು (Meta) ಬಹಿರಂಗಪಡಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಈ ಹೆಸರು ಬದಲಾವಣೆ ಹೊಸದೊಂದು ಮೈಲಿಗಲ್ಲನ್ನೇ ಸೃಷ್ಟಿಸಲಿದೆ ಎಂಬುದಂತೂ ಸತ್ಯವಾದ ಮಾತಾಗಿದೆ. ಇದೇ ರೀತಿ ತಮ್ಮ ಕಂಪನಿಗಳ ಹೆಸರು ಬದಲಾಯಿಸಿಕೊಂಡ ಐದು ಸಂಸ್ಥೆಗಳ ಪರಿಚಯವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

Meta

Meta

 • Share this:

  ಯಾವುದೇ ಒಂದು ಸಂಸ್ಥೆಗೆ ಬ್ರ್ಯಾಂಡ್ ಹೆಸರು (Brand Name) ಎನ್ನುವುದು ಬರೇ ಪದಗಳ ಹಾಗೂ ಅಕ್ಷರಗಳ ಸಂಗ್ರಹಗಳಲ್ಲ. ಸ್ಪರ್ಶಿಸಬಹುದಾದ ಹಾಗೂ ಸ್ಪರ್ಶಕ್ಕೆ ಗೋಚರವಾಗದ ಅಂಶಗಳನ್ನು ಬಂಧಿಸುವ ಸ್ವತ್ತಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಂಪನಿಯು ಒದಗಿಸುವ ಉತ್ಪನ್ನ ಹಾಗೂ ಗ್ರಾಹಕರ ಮೂಲದ ನಡುವಿನ ಅರ್ಥವನ್ನು ಸ್ಥಾಪಿಸುತ್ತದೆ.ದೊಡ್ಡ ದೊಡ್ಡ ಸಂಸ್ಥೆಗಳು ಪ್ರಾಮುಖ್ಯತೆ ಪರಿಗಣಿಸದೆಯೇ, ಒಮ್ಮೊಮ್ಮೆ ಹಣಕಾಸಿನ ಕಾರಣ ಹಾಗೂ ಇತರ ತಿದ್ದುಪಡಿಗೆ ಸಂಬಂಧಿಸಿ ಹೆಸರುಗಳನ್ನು ತ್ಯಜಿಸಬೇಕಾಗುತ್ತದೆ. ಇಲ್ಲವೇ ಮಾರ್ಪಡಿಸಬೇಕಾಗುತ್ತದೆ. ಸುಸಜ್ಜಿತವಾಗಿರುವ ಕಂಪನಿಯ ಹೆಸರನ್ನು ಬದಲಾಯಿಸುವುದು ಎಂದರೆ ಅದು ಎಲ್ಲಾ ರೀತಿಯಲ್ಲೂ ಕಂಪನಿಗೆ ಒತ್ತಡವನ್ನುಂಟು ಮಾಡಬಹುದು ಹಾಗೂ ಕೆಲವೊಂದು ಪರಿಣಾಮಗಳಿಗೆ ಕಾರಣವಾಗುತ್ತದೆ. ಇತ್ತೀಚೆಗೆ ತಾನೇ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ (Facebook) ತನ್ನ ಹೊಸ ಹೆಸರಾದ ಮೆಟಾವನ್ನು (Meta) ಬಹಿರಂಗಪಡಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಈ ಹೆಸರು ಬದಲಾವಣೆ ಹೊಸದೊಂದು ಮೈಲಿಗಲ್ಲನ್ನೇ ಸೃಷ್ಟಿಸಲಿದೆ ಎಂಬುದಂತೂ ಸತ್ಯವಾದ ಮಾತಾಗಿದೆ. ಇದೇ ರೀತಿ ತಮ್ಮ ಕಂಪನಿಗಳ ಹೆಸರು ಬದಲಾಯಿಸಿಕೊಂಡ ಐದು ಸಂಸ್ಥೆಗಳ ಪರಿಚಯವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.


  ಗೂಗಲ್ (Google):


  ವ್ಯಾಪಕವಾಗಿ ಎಲ್ಲೆಡೆ ಪ್ರಸಿದ್ಧಗೊಂಡಿರುವ ಗೂಗಲ್ ಹೆಸರನ್ನು ಆಲ್ಫಬೆಟ್ (Alphabet) ಗೆ ಪರಿವರ್ತಿಸಿ 6 ವರ್ಷಗಳೇ ಕಳೆದಿವೆ. ಇತರ ಉದ್ಯಮಗಳಲ್ಲಿ ಕಂಪನಿಯು ತನ್ನ ಬಾಹುಳ್ಯ ವಿಸ್ತರಿಸಬೇಕೆಂಬ ಉದ್ದೇಶದಿಂದ ಹೆಸರನ್ನು ಬದಲಾಯಿಸಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಂಪನಿಯು ತನ್ನ ಕಾರ್ಯಾಚರಣೆಗಳು ಮತ್ತು ಸ್ವಾಧೀನಗಳನ್ನು ಹೆಚ್ಚು ಪಾರದರ್ಶಕ ಹಾಗೂ ಸುವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಹೂಡಿಕೆದಾರರ ಚಿತ್ತವನ್ನು ತಿಳಿಗೊಳಿಸಲು ನಿರ್ಧರಿಸಿತು. ಹೀಗೆ ಆಲ್ಫಬೆಟ್ ತನ್ನ ಪ್ರಸ್ತುತಿ ಮಾಡಿಕೊಂಡಿತು. ಪ್ರಸ್ತುತ ಆಲ್ಫಬೆಟ್ ಹೆಚ್ಚಿನ ಸಂಸ್ಥೆಗಳಾದ ಡೀಪ್‌ಮೈಂಡ್, ಫಿಟ್‌ಬಿಟ್, ಯೂಟ್ಯೂಬ್ ಹಾಗೂ ಸ್ವತಃ ಗೂಗಲ್‌ಗೆ ಆಶ್ರಯವಾಗಿದೆ.


  ಆ್ಯಪಲ್ (Apple):


  ಗೂಗಲ್ ತನ್ನ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ಹೆಸರು ಬದಲಾಯಿಸಿಕೊಂಡ ರೀತಿಯಲ್ಲಿಯೇ ಆ್ಯಪಲ್ ಕೂಡ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತಾರಗೊಳಿಸಲು ನಿರ್ಧರಿಸಿತು. 2007ರ ಮೊದಲು ಆ್ಯಪಲ್ ಅನ್ನು ಆ್ಯಪಲ್ ಕಂಪ್ಯೂಟರ್ ಇಂಕ್ ಎಂದು ಗುರುತಿಸಲಾಗುತ್ತಿತ್ತು. ಆ್ಯಪಲ್ ಸಹ ಸ್ಥಾಪಕರಾದ ಸ್ಟೀವ್ ಜಾಬ್ ಕಂಪನಿಯ ಪ್ರಾಡಕ್ಟ್ ಫ್ಲ್ಯಾಗ್‌ಶಿಪ್‌ನಂತೆ ರೂಪುಗೊಂಡ ಆ್ಯಪಲ್ ಐಫೋನ್ ಪರಿಚಯಿಸಿದರು. ಆ್ಯಪಲ್ ಕಂಪ್ಯೂಟರ್‌ಗೆ ಬೇಡಿಕೆ ಇದ್ದ ಹೊತ್ತಿನಲ್ಲಿಯೇ ಐಫೋನ್ ಗ್ರಾಹಕರನ್ನು ಇನ್ನಿಲ್ಲದಂತೆ ಸೆಳೆಯಿತು. ಐಫೋನ್ ಸ್ಥಾಪನೆಯಾದಾಗಿನಿಂದ ಕಂಪನಿಯು ಹತ್ತಿರ ಹತ್ತಿರ ಸುಮಾರು 2 ಬಿಲಿಯನ್ ಐಫೋನ್ ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಕಂಪನಿ ಇತ್ತೀಚೆಗೆ ಹೊಸ M1-ಚಾಲಿತ ಮ್ಯಾಕ್ ಕಂಪ್ಯೂಟರ್‌ಗಳ ಜೊತೆಗೆ iPhone 13 ಸೀರೀಸ್ ಸಕ್ಸೆಸರ್ ಬಿಡುಗಡೆ ಮಾಡಿತು.


  McAfee:


  ಕಂಪನಿ ಹಾಗೂ ಅದರ ಸ್ಥಾಪಕರು ಇಬ್ಬರೂ ಅಗಾಧ ಏಳುಬೀಳಿನ ಪ್ರಯಾಣ ಕಾಣಬೇಕಾಯಿತು. ಕಂಪನಿ ಬರೋಬ್ಬರಿ ಮೂರು ಬಾರಿ ಹೆಸರು ಬದಲಾಯಿಸಿಕೊಂಡರೂ ಅದೃಷ್ಟ ಕೈಗೂಡಲಿಲ್ಲ ಎಂದೇ ಹೇಳಬೇಕು. ಜೊತೆಗೆ ಅದರ ಸ್ಥಾಪಕರಾದ ಜಾನ್ ಮೆಕಫಿ 2021ರಲ್ಲಿ ನಿಧನರಾದರು. ಮೆಕಫಿಯವರು ಕಂಪನಿಯನ್ನು ನಿರ್ಮಿಸಿದರು ಹಾಗೂ ಸಂಸ್ಥೆಯು ಆ್ಯಂಟಿವೈರಸ್ ಸಾಫ್ಟ್‌ವೇರ್‌ಗೆ ಖ್ಯಾತಿ ಪಡೆದುಕೊಂಡಿತು. ಸಂಸ್ಥೆಯನ್ನು ತೊರೆದು ಯೋಗ ಸಂಸ್ಥೆಗಳು ಸೇರಿದಂತೆ ಇತರ ಸ್ಥಾಪನೆಗಳಲ್ಲಿ ಮೆಕಫಿಯವರು ಅದೃಷ್ಟ ಪರಿಶೀಲಿಸಿದರೂ ನಷ್ಟವೊಂದನ್ನೇ ಕಾಣಬೇಕಾಯಿತು.


  Read Also: Dating apps: ಈ 5 ಡೇಟಿಂಗ್ ಆ್ಯಪ್​ನಲ್ಲಿ ಪ್ರೀತಿ ಸಿಗೋದು ಪಕ್ಕಾ ಅಂತೆ, ಒಂದ್ಸಲ ಟ್ರೈ ಮಾಡಿ ನೋಡಿ!

  2014ರಲ್ಲಿ, McAfee ಅಸೋಸಿಯೇಟ್‌ಗಳು ಆ ಸಮಯದಲ್ಲಿ ಕಂಪನಿಯು ಇಂಟೆಲ್ ಒಡೆತನದಲ್ಲಿದ್ದ ಕಾರಣ ಹೆಸರನ್ನು ಇಂಟೆಲ್ ಸೆಕ್ಯುರಿಟಿ ಗ್ರೂಪ್ ಎಂದು ಬದಲಾಯಿಸಲು ನಿರ್ಧರಿಸಿದರು. ಆದರೆ ಇಂಟೆಲ್ ಕೈಬಿಟ್ಟ ಕಾರಣ McAfee ಎಂಬ ಹೆಸರೇ ಸಂಸ್ಥೆಗೆ ಸ್ಥಿರವಾಯಿತು. ಸ್ಥಾಪಕರಾದ ಮೆಕಫಿಯವರು ತೆರಿಗೆಗಳನ್ನು ಪಾವತಿಸದೇ ಇರುವ ಆರೋಪಕ್ಕೆ ಒಳಗಾಗಿ 3 ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಬೇಕಾಯಿತು. ಸ್ಪೇನ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೆಕಫಿ ತಮ್ಮ ಜೀವನವನ್ನು ಅಂತ್ಯಗೊಳಿಸಿದರು.


  BP (ಬ್ರಿಟಿಷ್ ಪೆಟ್ರೋಲಿಯಂ):


  ಜನಸಮೂಹದೊಂದಿಗೆ ಆತ್ಮೀಯವಾಗಿ ಬೆರೆತುಕೊಳ್ಳುವ ನಿಟ್ಟಿನಲ್ಲಿ ಬ್ರಿಟಿಷ್ ಪೆಟ್ರೋಲಿಯಂ 2020ರಲ್ಲಿ ಬಿಪಿ (BP) ಯಾಗಿ ನಾಮಕರಣಗೊಂಡಿತು. ಪರಿಸರದ ದೃಷ್ಟಿಯಿಂದ ಸ್ಥಾಪನೆಯು ದೊಡ್ಡ ಮಟ್ಟಿಗಿನ ಯಾವುದೇ ಅಭಿವೃದ್ಧಿ ಮಾಡದೇ ಇದ್ದ ಕಾರಣ ಹೆಸರು ಬದಲಾವಣೆಯು ಅಷ್ಟೊಂದು ಪರಿಣಾಮ ಬೀರಲಿಲ್ಲ. ಹೆಸರು ಬದಲಾಯಿಸುವ ಮೂಲಕ ಕಂಪನಿ ತನ್ನ ದೃಷ್ಟಿಕೋನವನ್ನು ಅಂತೆಯೇ ಸಂಪೂರ್ಣ ಚಿತ್ರಣ ಸರಿಪಡಿಸುವ ಇರಾದೆ ಹೊಂದಿತ್ತು. ಆದರೆ ಹಲವಾರು ತೈಲ ಸೋರಿಕೆ ಹಾಗೂ ಸ್ಫೋಟಗಳಂತಹ ಪ್ರಕರಣಗಳಿಂದ ಹೆಸರು ಕೆಟ್ಟುಹೋಯಿತು.


  Read Also:OnePlus Nord 2 Pac-Man: ಅತಿಶೀಘ್ರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಒನ್ ಪ್ಲಸ್ ನಾರ್ಡ್ 2 ಪ್ಯಾಕ್ ಮ್ಯಾನ್ ಆವೃತ್ತಿ

  ಲೈವ್‌ಸ್ಟ್ರಾಂಗ್ ಫೌಂಡೇಶನ್ (LIVESTRONG FOUNDATION):


  1997ರಲ್ಲಿ ಪ್ರಾರಂಭವಾದ, 'ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಫೌಂಡೇಶನ್' ಎಂಬ ಹೆಸರಿನಲ್ಲಿ, ಆರಂಭವಾದ ಎನ್‌ಜಿಒ (NGO) ಕ್ಯಾನ್ಸರ್ ಪೀಡಿತ ಜನರಿಗೆ ಮತ್ತು ಅವರ ಕುಟುಂಬಗಳಿಗೆ ನೆರವು ಮತ್ತು ನೆರವು ನೀಡಿತು. ಸಂಸ್ಥೆಯನ್ನು ಆರಂಭಿಸಿದವರು ಸ್ವತಃ ಕ್ಯಾನ್ಸರ್ ಪೀಡಿತರಾಗಿ ಬದುಕುಳಿದಿದ್ದ ಮಾಜಿ ಸೈಕ್ಲಿಂಗ್ ರೇಸರ್ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಆಗಿದ್ದರು. ಓಪ್ರಾ ವಿನ್‌ಫ್ರೇ 2012ರಲ್ಲಿ ಲ್ಯಾನ್ಸ್ ಅವರನ್ನು ಸಂದರ್ಶಿಸಿದಾಗ ಉದ್ದೀಪನಾ ಔಷಧಗಳನ್ನು ಸೇವಿಸುವುದನ್ನು ಅಂಗೀಕರಿಸಿದರು. ಈ ಸಮಯದಲ್ಲಿ ಲ್ಯಾನ್ಸ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು.


  ಆ ಕ್ಷಣದ ನಂತರ ಸಂಸ್ಥೆಯು ಅವನತಿಗೊಳ್ಳಲು ಆರಂಭಿಸಿತು. ಲ್ಯಾನ್ಸ್ ತಪ್ಪೊಪ್ಪಿಕೊಂಡು ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಸಂಸ್ಥೆಯ ಹೊಣೆ ಹೊತ್ತಿದ್ದ ಅಧಿಕಾರಿಗಳು ಲೈವ್‌ಸ್ಟ್ರಾಂಗ್ ಫೌಂಡೇಶನ್ ಹೆಸರನ್ನು ಬದಲಾಯಿಸುವುದೇ ಸರಿ ಎಂಬ ತೀರ್ಮಾನಕ್ಕೆ ಬಂದರು.


  Published by:Harshith AS
  First published: