ಜಗತ್ತಿನಾದ್ಯಂತ ಫೇಸ್‌ಬುಕ್‌, ಇನ್​ಸ್ಟಾಗ್ರಾಂ ಸರ್ವರ್‌ ಡೌನ್‌!

Facebook and Instagram: ಫೇಸ್‌ಬುಕ್‌ನಲ್ಲಿ 65% ಜನರು ಲಾಗ್-ಇನ್ ಆಗಲು ಹೆಣಗಾಡಿದ್ದಾರೆ. ಇನ್ನು 22% ಜನರು ಫೋಟೋಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಅದೇ ರೀತಿ 11% ರಷ್ಟು ಜನರ ಫೇಸ್​ಬುಕ್ ಸಂಪೂರ್ಣ ಸ್ಥಗಿತವಾಗಿದ್ದಾಗಿ ಹೇಳಿಕೊಂಡಿದ್ದಾರೆ.

news18-kannada
Updated:November 29, 2019, 8:27 AM IST
ಜಗತ್ತಿನಾದ್ಯಂತ ಫೇಸ್‌ಬುಕ್‌, ಇನ್​ಸ್ಟಾಗ್ರಾಂ ಸರ್ವರ್‌ ಡೌನ್‌!
Fb/insta
  • Share this:
ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್‌ ಮತ್ತು ಇನ್​ಸ್ಟಾಗ್ರಾಂ ಸರ್ವರ್‌ ವಿಶ್ವದಾದ್ಯಂತ ಡೌನ್‌ ಆಗಿದ್ದು, ಉಭಯ ತಾಣಗಳ ಸೇವೆ ಮಧ್ಯಾಹ್ನದಿಂದ ನಿಧಾನಗೊಂಡಿದೆ. ಡೌನ್ ಡಿಟೆಕ್ಟರ್ ವರದಿ ಪ್ರಕಾರ, ಈ ಸಮಸ್ಯೆ ಮಧ್ಯಾಹ್ಬ 2:15 ರಿಂದ ಕಾಣಿಸಿಕೊಂಡಿದ್ದು,  ಐರೋಪ್ಯ ರಾಷ್ಟ್ರಗಳ  ಬಳಕೆದಾರರಿಗೆ ಈ ತೊಂದರೆ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ತಿಳಿಸಿದೆ.

ಇನ್ನು ಬಳಕೆದಾರರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಶೇ. 74 ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ನ್ಯೂಸ್ ಫೀಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ 14% ಸ್ಟೋರಿ ಅಪ್​ಲೋಡ್ ವೇಳೆ ತೊಂದರೆಯಾಗಿದೆ ಎಂದಿದ್ದಾರೆ. ಇನ್ನು ಶೇ. 10 ರಷ್ಟು ಜನರು ಇನ್​ಸ್ಟಾಗ್ರಾಂ ವೆಬ್‌ಸೈಟ್‌ ಬಳಕೆ ವೇಳೆ ಸಮಸ್ಯೆಗಳನ್ನು ತಲೆದೂರಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಫೇಸ್‌ಬುಕ್‌ನಲ್ಲಿ 65% ಜನರು ಲಾಗ್-ಇನ್ ಆಗಲು ಹೆಣಗಾಡಿದ್ದಾರೆ. ಇನ್ನು 22% ಜನರು ಫೋಟೋಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಅದೇ ರೀತಿ 11% ರಷ್ಟು ಜನರ ಫೇಸ್​ಬುಕ್ ಸಂಪೂರ್ಣ ಸ್ಥಗಿತವಾಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ಸಮಸ್ಯೆಗೆ ಕಾರಣವೇನು? ಸರ್ವರ್ ಡೌನ್ ಆಗಿತ್ತಾ ಎಂಬುದರ ಬಗ್ಗೆ ಇನ್ನು ಕೂಡ ಫೇಸ್​ಬುಕ್ ಇಂಕ್ ಸಂಸ್ಥೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.

ಕಳೆದ ಜುಲೈ ತಿಂಗಳಲ್ಲೂ ಕೂಡ ಫೇಸ್​ಬುಕ್, ಟ್ವಿಟರ್ ಸೇರಿದಂತೆ ವಿಶ್ವದಾದ್ಯಂತ ಸೋಷಿಯಲ್ ನೆಟ್​ವರ್ಕ್ ಸರ್ವರ್ ಡೌನ್ ಆಗಿತ್ತು. ಇದರಿಂದ ಫೋಟೊ ಅಪ್‌ಲೋಡ್‌, ಡೌನ್ ಲೋಡ್‌ನಂತಹ ಸೇವೆ ನಿಧಾನಗೊಂಡಿತ್ತು. ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಭಾರತದಲ್ಲಿ 21 ಸಾವಿರ ರೂ. ದಂಡ ಕಟ್ಟಿದ ಬಾಂಗ್ಲಾ ಆಟಗಾರ..!

ಇದೀಗ ಮತ್ತೊಮ್ಮೆ ಫೇಸ್​ಬುಕ್, ಇನ್​ಸ್ಟಾಗ್ರಾಂ ಸರ್ವರ್ ಡೌನ್ ಆಗಿರುವುದು ಸೋಷಿಯಲ್ ಮೀಡಿಯಾ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ದಿನಗಳ ಹಿಂದೆಯಷ್ಟೇ ಫೇಸ್​ಬುಕ್ ಇಂಕ್ ಸಂಸ್ಥೆ ವಾಟ್ಸ್​ಆ್ಯಪ್​ ಖಾತೆದಾರರ ಮಾಹಿತಿಗಳನ್ನು ಹ್ಯಾಕರುಗಳು ಕಲೆ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ತಿಳಿಸಿತ್ತು. ಹೀಗಾಗಿ ಸರ್ವರ್​ ಡೌನ್​ಗೆ ಏನು ಕಾರಣ ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿದೆ.
First published:November 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ