ಎಚ್ಚರ! ಫೇಸ್​ಬುಕ್​ನಲ್ಲಿ ನೀವು ಕಳುಹಿಸುವ ವಾಯ್ಸ್ ಮೆಸೇಜ್ ಮೂರನೇ ವ್ಯಕ್ತಿಗೂ ಕೇಳಬಹುದು!

ಫೇಸ್​ಬುಕ್​ ಮೆಸೆಂಜರ್​ನಲ್ಲಿ ಕಳುಹಿಸುವ ವಾಯ್ಸ್​ ಸಂದೇಶಗಳು ಮೂರನೇ ವ್ಯಕ್ತಿ ಕೇಳಿಸಿಕೊಳ್ಳುತ್ತಾನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

Rajesh Duggumane | news18
Updated:August 14, 2019, 11:52 AM IST
ಎಚ್ಚರ! ಫೇಸ್​ಬುಕ್​ನಲ್ಲಿ ನೀವು ಕಳುಹಿಸುವ ವಾಯ್ಸ್ ಮೆಸೇಜ್ ಮೂರನೇ ವ್ಯಕ್ತಿಗೂ ಕೇಳಬಹುದು!
ಸಾಂದರ್ಭಿಕ ಚಿತ್ರ
  • News18
  • Last Updated: August 14, 2019, 11:52 AM IST
  • Share this:
ಫೇಸ್​ಬುಕ್​, ವಾಟ್ಸ್​​ಆ್ಯಪ್​ ಸೇರಿ ಸಾಕಷ್ಟು ಮೆಸೆಂಜರ್​ಗಳಲ್ಲಿ ನಾವು ಕಳುಹಿಸುವ ಸಂದೇಶ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇರುತ್ತದೆ.  ಈ ಮೊದಲು ಫೇಸ್​ಬುಕ್ ಸಂಸ್ಥೆ ಗ್ರಾಹಕರ ಮಾಹಿತಿಯನ್ನು ಮಾರಾಟ ಮಾಡಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಈಗ ಮೆಸೆಂಜರ್​ನಲ್ಲಿ ಕಳುಹಿಸುವ ಆಡಿಯೋ ಹಾಗೂ ವಾಯ್ಸ್​ ಮೆಸೇಜ್​ಗಳು ಎಷ್ಟು ಖಾಸಗಿಯಾಗಿ ಉಳಿಯುತ್ತವೆ ಎನ್ನುವ ಪ್ರಶ್ನೆ ಮೂಡಿದೆ.

ಆಡಿಯೋ ಕಳುಹಿಸಿದರೆ ಅದನ್ನು ಅಕ್ಷರ ರೂಪದಲ್ಲಿ ಸಿದ್ಧಪಡಿಸಿಕೊಡುವ ಆಯ್ಕೆ ಫೇಸ್​ಬುಕ್​ ಮೆಸೆಂಜರ್​ನಲ್ಲಿ ಲಭ್ಯವಿದೆ. ಆದರೆ ಇದರಲ್ಲಿ ಕೆಲ ಸಮಸ್ಯೆಗಳು ಇರುವುದಾಗಿ ಬಳಕೆದಾರರು ದೂರು ನೀಡಿದ್ದರು. ಹೀಗಾಗಿ ಫೇಸ್​ಬುಕ್​ ಮೆಸೆಂಜರ್​ನಲ್ಲಿ ಕಳುಹಿಸುವ​ ವಾಯ್ಸ್​ ಸಂದೇಶ ಸರಿಯಾಗಿ ಅಕ್ಷರ ರೂಪಕ್ಕೆ ಬಂದಿದೆಯೇ ಎಂಬುದನ್ನು ಪರೀಕ್ಷಿಸಲು ಫೇಸ್​​ಬುಕ್​ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಬಳಕೆದಾರರು ಮೆಸೆಂಜರ್​ನಲ್ಲಿ  ಕಳುಹಿಸುವ ವಾಯ್ಸ್​​ ಮೆಸೇಜ್​ ಹಾಗೂ ಅಕ್ಷರ ರೂಪಕ್ಕೆ ತರಲಾದ ಮೆಸೇಜ್​ ಸಂಗ್ರಹಿಸಿದ್ದ ಫೇಸ್​ಬುಕ್​ ಎರಡನ್ನೂ ಪರಿಶೀಲನೆ ನಡೆಸಿತ್ತು. ಈ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಯತ್ನವನ್ನು ಸಂಸ್ಥೆ ಕೈಬಿಟ್ಟಿದೆ. ಅಲ್ಲದೆ, ನಾವು ವಾಯ್ಸ್​​ ಮೆಸೇಜ್ಅನ್ನು ಸುರಕ್ಷಿತವಾಗಿಟ್ಟಿದ್ದೇವೆ, ಖಾಸಗಿತನಕ್ಕೆ ಧಕ್ಕೆ ಬಂದಿಲ್ಲ ಎಂದು ಹೇಳಿದೆ.

ಫೇಸಬುಕ್​ ಬಳಕೆದಾರರ ಮಾಹಿತಿ ಮಾರಾಟ ಮಾಡಿದೆ ಎಂದು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಈ ಸಂಬಂಧ ಜಾಗತಿಕ ಮಟ್ಟದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ನಿಮ್ಮ ಫೇಸ್​ಬುಕ್​ ಅಕೌಂಟ್​ ಯಾವತ್ತೂ ಸೇಫ್ ಆಗಿಡುವ 5 ಟ್ರಿಕ್ಸ್​ ಇಲ್ಲಿವೆ

First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...