Facebook Account Hacked: ಫೇಸ್​ಬುಕ್ ಖಾತೆ ಹ್ಯಾಕ್ ಆದರೆ ರಿಪೋರ್ಟ್ ಮತ್ತು ಮರಳಿ ಪಡೆಯುವುದು ಹೇಗೆ?

Facebook Account Recover: ಬಹುತೇಕರಿಗೆ ಫೇಸ್​​ಬುಕ್ ಖಾತೆ ಹ್ಯಾಕ್ ಆದರೆ ಏನು ಮಾಡಬೇಕೆಂಬುದು ತಿಳಿಯದು. ಹಾಗಾಗಿ ಖಾತೆ ಮೇಲೆ ಹ್ಯಾಕರ್​ ಕೈಯಾಡಿಸಿದ್ದರೆ ಮೊದಲೇನು ಮಾಡಬೇಕು? ಯಾವ ನಿರ್ಣಯ ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

Facebook

Facebook

  • Share this:
    Facebook Account Hacked:ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಫೇಸ್​ಬುಕ್ ಕೂಡ ಒಂದು. ವಿಶ್ವದಾದ್ಯಂತ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಬಳಕೆದಾರು ತಮ್ಮ ಆಗು-ಹೋಗುಗಳ ಬಗ್ಗೆ, ದೈನಂದಿನ ದಿನಚರಿ ಇನ್ನಿತರ ಮಾಹಿತಿಯನ್ನು ಮತ್ತು ವ್ಯಕ್ತಪಡಿಸಬೇಕೆನ್ನುವ ವಿಚಾರವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು, ಸಾಮಾನ್ಯರು ಹಂಚಿಕೊಂಡ ಮಾಹಿತಿ ತಮ್ಮ ಸ್ನೇಹಿತರ ಫೇಸ್​ಬುಕ್​ನಲ್ಲಿ ಗೋಚರಿಸುತ್ತದೆ. ಒಟ್ಟಿನಲ್ಲಿ ಪ್ರಪಂಚದಾದ್ಯಂತ ಸ್ನೇಹಿತರನ್ನ ಮಾಡಿಕೊಳ್ಳುವುದು ಫೇಸ್​ಬುಕ್ ಗುರಿಯಾಗಿದೆ.

    ಇನ್ನು ಪೇಸ್​ಬುಕ್​ನಲ್ಲಿ ಹ್ಯಾಕರ್​ಗಳ ಉಟಪಳ ಆಗಾಗ ಕೇಳಿ ಬರುತ್ತಿರುತ್ತದೆ. ಅದರಲ್ಲೂ ಸೆಲೆಬ್ರಿಟಿ ಮುಂತಾದವರ ಖಾತೆ ಮೇಲೆ ಕಣ್ಣಾಡಿಸಿ ಎಗರಿಸಿಬಿಡುತ್ತಾರೆ. ಆದರೆ ಸೆಲೆಬ್ರಿಟಿಗಳು ತಕ್ಷಣವೇ ರಿಪೋರ್ಟ್​ ಮಾಡುವ ಮೂಲಕ ಫೇಸ್​ಬುಕ್​ಗೆ ತಿಳಿಸುತ್ತಾರೆ. ಬಹುತೇಕರಿಗೆ ಫೇಸ್​​ಬುಕ್ ಖಾತೆ ಹ್ಯಾಕ್ ಆದರೆ ಏನು ಮಾಡಬೇಕೆಂಬುದು ತಿಳಿಯದು. ಹಾಗಾಗಿ ಖಾತೆ ಮೇಲೆ ಹ್ಯಾಕರ್​ ಕೈಯಾಡಿಸಿದ್ದರೆ ಮೊದಲೇನು ಮಾಡಬೇಕು? ಯಾವ ನಿರ್ಣಯ ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

    ಫೇಸ್‌ಬುಕ್ ಖಾತೆಯನ್ನು ಪ್ರವೇಶಿಸಲು ಹ್ಯಾಕರ್‌ಗಳು ಹಲವಾರು ವಿಭಿನ್ನ ವಿಧಾನಗಳನ್ನು ಬಳಸುತ್ತಾರೆ. ಮಾತ್ರವಲ್ಲದೆ ಬಳಕೆದಾರನ ಸೂಕ್ಷ್ಮ ಮಾಹಿತಿಯನ್ನ ಕದಿಯುತ್ತಾರೆ.

    ನಿಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದು ಹೇಗೆ?

    ನಿಮ್ಮ FB ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂದು ಹೇಳಲು ವಿಭಿನ್ನ ಮಾರ್ಗಗಳಿವೆ. ಮೊದಲಿಗೆ, ನಿಮ್ಮ ಫೇಸ್‌ಬುಕ್ ಖಾತೆಗೆ ಅನಧಿಕೃತ ಪ್ರವೇಶವಿದೆಯೇ ಎಂದು ನೀವು ಪರಿಶೀಲಿಸಬೇಕು. ಇದನ್ನು ಮಾಡಲು ನೀವು ಈ ವಿಧಾನ ಅನುಸರಿಸಿ



    1.ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ಹೋಗಿ ಮತ್ತು ಮೇಲಿನ ಬಲಭಾಗದಲ್ಲಿರುವ ಹ್ಯಾಂಬರ್ಗರ್ ಮೆನುವನ್ನು ಒತ್ತಿರಿ.

    2.ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಭದ್ರತೆ (Security) ಮತ್ತು ಲಾಗಿನ್ (Login) ಕಡೆಗೆ ಹೋಗಿ. ನಿಮ್ಮ ಫೇಸ್‌ಬುಕ್ ಖಾತೆಯೊಂದಿಗೆ ಲಾಗಿನ್ ಆಗಿರುವ ಡಿವೈಸ್​ ಆಯ್ಕೆಯನ್ನು ನೀವು ಕಾಣುತ್ತೀರಿ.

    3.ಒಂದು ವೇಳೆ ನಿಮ್ಮ ಖಾತೆಯಲ್ಲಿ ಬೇರೆ ಸಾಧನದ ಹೆಸರು ಕಾಣಿಸಿಕೊಂಡರೆ, Not You ಆಯ್ಕೆ ಮಾಡಿ ನಂತರ ಲಾಗ್ ಔಟ್ ಮಾಡಿ.

    ಒಂದು ವೇಳೆ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಆಗಿದ್ದರೆ ಈ ವಿಚಾರಗಳು ನಿಮ್ಮ ಗಮನಕ್ಕೆ ಬರುತ್ತದೆ:

    • ನಿಮ್ಮ ಇಮೇಲ್ ವಿಳಾಸ ಅಥವಾ ಪಾಸ್‌ವರ್ಡ್ ಬದಲಾಗಿರಬಹುದು

    • ನಿಮ್ಮ ಹೆಸರು ಅಥವಾ ಜನ್ಮದಿನವನ್ನು ಬದಲಾಯಿಸಿರಬಹುದು.

    • ನಿಮಗೆ ಪರಿಚಯವಿಲ್ಲದ ಜನರ ಫ್ರೆಂಡ್​ ರಿಕ್ಚೆಸ್ಟ್​  ಬರುತ್ತಿರಬಹುದು

    • ಪ್ರೊಫೈಲ್‌ನಲ್ಲಿ  ಬೇರೆ ಪೋಸ್ಟ್‌ಗಳು ಹರಿದಾಡುತ್ತಿರಬಹುದು


    Read Also⇒ ಪ್ರತಿದಿನ 3GB ಡೇಟಾ, 1 ವರ್ಷದ ವ್ಯಾಲಿಡಿಟಿ; BSNL​ ಕಡಿಮೆ ಬೆಲೆಯ ಬೆಸ್ಟ್​ ಪ್ರಿಪೇಯ್ಡ್​ ಪ್ಲಾನ್​ಗಳು ಇಲ್ಲಿವೆ

    ಹ್ಯಾಕ್​​ ಆಗಿದ್ದರೆ ಫೇಸ್​ಬುಕ್​ಗೆ ರಿಪೋರ್ಟ್​ ಮಾಡುವುದು ಹೇಗೆ?

    ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿದಲ್ಲಿ ಅಥವಾ ದುರುಪಯೋಗಪಡಿಸಿಕೊಂಡಿದ್ದರೆ ಅದರ ಬಗ್ಗೆ ವರದಿ ಮಾಡಲು ಮತ್ತು ಮರುಪಡೆಯಲು ಫೇಸ್​ಬುಕ್ ನಿಮಗೆ ಅನುಮತಿಸುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವಿಷ್ಟೇ..



    1.Facebook.com/hacked ಗೆ ಹೋಗಿ.

    2.ಪಟ್ಟಿಯಲ್ಲಿರುವ ಸರಿಯಾದ ಕಾರಣವನ್ನು ಆಯ್ಕೆ ಮಾಡುವುದು.

    3.ಖಾತೆಯನ್ನು ಸುರಕ್ಷಿತಗೊಳಿಸಲು ಫೇಸ್​ಬುಕ್​ ವಿವಿಧ ಪುಟಗಳಿಗೆ ಕರೆದೊಯ್ಯುತ್ತದೆ. ನಂತರ ಪಾಸ್‌ವರ್ಡ್, ಇಮೇಲ್ ವಿಳಾಸ ಸೇರಿದಂತೆ ಎಲ್ಲವನ್ನು ವಿಶ್ಲೇಷಿಸುತ್ತದೆ.

    4.ಇದು ಪೂರ್ಣಗೊಂಡ ನಂತರ  ಪಾಸ್​ವರ್ಡ್ ಬದಲಾಯಿಸಲು ಮತ್ತು ನಿಮ್ಮ ಇಮೇಲ್ ವಿಳಾಸವನ್ನು ಪರಿಶೀಲಿಸಲು ಒಂದು ಆಯ್ಕೆಯನ್ನು ಒದಗಿಸುತ್ತದೆ.

    ನಂತರ ಫೇಸ್‌ಬುಕ್ ಖಾತೆಯನ್ನು ಮರುಪಡೆಯಲು ಅವಕಾಶ ಮಾಡಿಕೊಡುತ್ತದೆ.
    Published by:Harshith AS
    First published: