Genesis motor Gv60: ಸ್ಮಾರ್ಟ್​​ಫೋನ್​​ನಲ್ಲಿರುವಂತೆಯೇ ಫೇಸ್ ಐಡಿ ಫೀಚರ್ಸ್ ಪರಿಚಯಿಸಿಲಿದೆ ಜೆನೆಸಿಸ್ ಮೋಟಾರ್!

Genesis Motor: ಚಾಲಕರು ಯಾವಾಗಲೂ ತಮ್ಮೊಂದಿಗೆ ಸ್ಮಾರ್ಟ್ ಕೀಗಳನ್ನು ಒಯ್ಯುವ ಅಗತ್ಯವಿಲ್ಲ ಎಂದು ನೂತನ ತಂತ್ರಜ್ಞಾನವು ಭರವಸೆ ನೀಡುತ್ತದೆ. ಯಾರಾದರೂ ಕಾರಿನಲ್ಲಿ ಸ್ಮಾರ್ಟ್ ಕೀಯನ್ನು ಬಿಟ್ಟರೂ, ಫೇಸ್ ಐಡಿ ತಂತ್ರಜ್ಞಾನ ಬಳಸಿ ವಾಹನವನ್ನು ಅನ್​ಲಾಕ್​- ಲಾಕ್​ ಮಾಡಬಹುದಾಗಿದೆ.

Gv60

Gv60

 • Share this:
  ಬಹುತೇಕರ ಬಳಿ ಸ್ಮಾರ್ಟ್​ಫೋನ್​ ಇದೆ. ಅದರಲ್ಲಿರುವ ಫೇಸ್​ ಐಡಿ, ಫಿಂಗರ್​ ಪ್ರಿಂಟ್​ ಅನ್​ಲಾಕ್​ ಫೀಚರ್ಸ್​ ಬಗ್ಗೆ ಅನೇಕರಿಗೆ ಗೊತ್ತಿದೆ. ಆದರೆ ಇದೀಗ ಸ್ಮಾಟ್​ಫೋನ್​ನಲ್ಲಿರುವಂತೆಯೇ ಸ್ಮಾರ್ಟ್​ ಕಾರುಗಳಲ್ಲಿ ಇಂತಹದೇ ಫೀಚರ್ಸ್​​ ಅಳವಡಿಸುವ ಬಗ್ಗೆ  ಜೆನೆಸಿಸ್ ಮೋಟಾರ್​ ಸಂಸ್ಥೆ ಮುಂದಾಗಿದೆ. ​ ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿ  ಫೇಸ್​ ಕನೆಕ್ಟ್​ ತಂತ್ರಜ್ಞಾನ ಮತ್ತು ಕೀ ಸಹಾಯವಿಲ್ಲ ಫಿಂಗರ್​ ಪ್ರಿಂಟ್​ ಮೂಲಕ ಕಾರಿನ ಬಾಗಿಲು ತೆರೆಯುವ ತಂತ್ರಜ್ಞಾನ ಮುಂಬರುವ ಕಾರಿನಲ್ಲಿ ಬರಲಿದೆ ಎಂದಿದೆ. 

  ಹೊಸ ತಂತ್ರಜ್ಞಾನ ತನ್ನ ಗ್ರಾಹಕರಿಗೆ ಉತ್ತಮ ಅನುಭವ ನೀಡುವುದರ ಜೊತೆಗೆ ಹೆಚ್ಚು ತಂತ್ರಜ್ಞಾನದತ್ತ ಮರಳಲು ಸಹಾಯ ಮಾಡುತ್ತದೆ ಎಂದು ಜೆನೆಸಿಸ್​ ಹೇಳಿದೆ. ಫೇಸ್ ಕನೆಕ್ಟ್ ತಂತ್ರಜ್ಞಾನವು ಚಾಲಕನನ್ನು ಗುರುತಿಸಿದ ನಂತರ, ಅವರ ಪ್ರೊಫೈಲ್‌ನೊಂದಿಗೆ ಸಿಂಕ್ ಆಗುತ್ತದೆ. ಜೊತೆಗೆ ಚಾಲಕನ ಆಸನ ಮತ್ತು ಸ್ಟೀರಿಂಗ್ ವೀಲ್ ಅನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಹೆಡ್-ಅಪ್-ಡಿಸ್‌ಪ್ಲೇ (HUD), ಸೈಡ್ ಮಿರರ್‌ಗಳು ಮತ್ತು ಇನ್ಫೋಟೈನ್‌ಮೆಂಟ್ ಅನ್ನು ಅವರ ಕಸ್ಟಮ್ ಆದ್ಯತೆಗಳ ಆಧಾರದ ಮೇಲೆ ಹೊಂದಿಸುತ್ತದೆ ಎಂದು ತಿಳಿಸಿದೆ.

  ಯಾವುದೇ ಸನ್ನಿವೇಶದಲ್ಲೂ ಫೇಸ್​ ಐಡಿ ತಂತ್ರಜ್ಞಾನ ಕಾರ್ಯನಿರ್ವಹಿಸಲಿದೆ. ಕತ್ತಲಿನಲ್ಲಿಯೂ ಮುಖ ಗುರುತಿಸಿ ಡೋರ್​ ಅನ್​ಲಾಕ್​ ಮಾಡಲಿದೆ. ಆದರೆ ಈ ತಂತ್ರಜ್ಞಾನವು ಮೊದಲೇ ನೋಂದಾಯಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ನಿಯರ್ ಇನ್ಫ್ರಾ-ರೆಡ್ (NIR) ಕ್ಯಾಮೆರಾವನ್ನು ಅಳವಡಿಸಿದೆ.

  ಮತ್ತೊಂದು ವಿಚಾರವೆಂದರೆ ಚಾಲಕರು ಯಾವಾಗಲೂ ತಮ್ಮೊಂದಿಗೆ ಸ್ಮಾರ್ಟ್ ಕೀಗಳನ್ನು ಒಯ್ಯುವ ಅಗತ್ಯವಿಲ್ಲ ಎಂದು ನೂತನ ತಂತ್ರಜ್ಞಾನವು ಭರವಸೆ ನೀಡುತ್ತದೆ. ಯಾರಾದರೂ ಕಾರಿನಲ್ಲಿ ಸ್ಮಾರ್ಟ್ ಕೀಯನ್ನು ಬಿಟ್ಟರೂ, ಫೇಸ್ ಐಡಿ ತಂತ್ರಜ್ಞಾನ ಬಳಸಿ ವಾಹನವನ್ನು ಅನ್​ಲಾಕ್​- ಲಾಕ್​ ಮಾಡಬಹುದಾಗಿದೆ.

  ಜೆನೆಸಿಸ್ ಮೋಟಾರ್​ ಸಂಸ್ಥೆ ಹೇಳುವಂತೆ, ಪ್ರತಿ ವಾಹನಕ್ಕೆ ಎರಡು ಫೇಸ್ ಕನೆಕ್ಟ್ ಸಿಸ್ಟಂ ಸಂಗ್ರಹಿಸುವ ಆಯ್ಕೆಯನ್ನು ನೀಡಲಾಗಿದೆ. ಆಪ್ತರ ಮುಖವನ್ನು ಎನ್‌ಕ್ರಿಪ್ಟ್ ಮಾಡಬಹುದಾಗಿದೆ ಎಂದು ಜೆನೆಸಿಸ್ ಹೇಳಿದೆ. ಚಾಲಕರ ಅನುಕೂಲಕ್ಕಾಗಿ ಫೆಸ್​ ಕನೆಕ್ಸ್​ ಫೀಚರ್​ನಲ್ಲಿ ದೃಢವಾದ ಮುಖದ ಛಾಯೆಯನ್ನು ಯಾವುದೇ ಸಮಯದಲ್ಲಿ ಅಳಿಸಬಹುದು ಮತ್ತು ಹೊಸ ಪ್ರೊಫೈಲ್‌ಗಳನ್ನು ಧ್ವನಿ ಸಹಾಯಕ ಬಳಸಿ ನೋಂದಾಯಿಸಬಹುದು ಎಂದು ಸಂಸ್ಥೆ ತಿಳಿಸಿದೆ.

  ಫೇಸ್ ಐಡಿ ಟೆಕ್ ಜೊತೆಗೆ ಮತ್ತೊಂದು ಸ್ಮಾರ್ಟ್‌ಫೋನ್ ತರಹದ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆ. ಇದು ಚಾಲಕರಿಗೆ ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ಕೀ ಇಲ್ಲದೆ ಬಯೋಮೆಟ್ರಿಕ್ ಮಾಹಿತಿಯ ಆಧಾರದ ಮೇಲೆ ವಾಹನದ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಸಹಾಯ ಮಾಡುತ್ತದೆ. ಬೆರಳಚ್ಚಿನ ಮೂಲಕ ಕಾರನ್ನು ಚಲಾಯಿಸಬಹುದಾಗಿದೆ.

  Gv60


  ಇದನ್ನು ಓದಿ⇒ Amazon Great Indian Festival: ಅಬ್ಬಾ…ಈ ಬಾರಿ ಇಷ್ಟೆಲ್ಲಾ ಡಿಸ್ಕೌಂಟ್​ ಇದೆಯಾ!

  ಜೆನೆಸಿಸ್ ಈ ಹೊಸ ತಂತ್ರಜ್ಞಾನಗಳನ್ನು ತನ್ನ ಮುಂಬರುವ ಮಾದರಿ ಜಿವಿ60 ವಾಹನಕ್ಕೆ ಅನ್ವಯಿಸಲು ಯೋಜಿಸಿದೆ. ನಂತರ ಇತರ ಜೆನೆಸಿಸ್ ಮಾದರಿಗಳಲ್ಲಿ ಈ ನೂತನ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ.

  ಒಟ್ಟಿನಲ್ಲಿ ಸ್ಮಾರ್ಟ್​ಫೋನ್​ನಂತೆಯೇ ಸೂಪರ್​ ಫೀಚರ್ಸ್​​ ಸ್ಮಾರ್ಟ್​ಕಾರಿಗೂ ಅನ್ವಯಿಸಲು ಜೆನೆಸಿಸ್​ ಮೋಟಾರ್​ ಸಂಸ್ಥೆ ಮುಂದಾಗಿದೆ. ಮುಂಬರುವ ಬಹುತೇಕ ಕಾರುಗಳು ಇಂತಹ ತಂತ್ರಜ್ನಾದ ಜೊತೆಗೆ ಮಾರುಕಟ್ಟೆಗೆ ಧಾವಿಸಲಿದೆ.
  Published by:Harshith AS
  First published: