HOME » NEWS » Tech » EXTRACTING THE MOST FROM YOUR ONEPLUS 9 PRO CAMERA FROM DUAL NATIVE ISOS TO DOL HDR 2X2 OCL AND MORE HG

ನಿಮ್ಮ OnePlus 9 Pro ಕ್ಯಾಮೆರಾವನ್ನು ಅತ್ಯಂತ ದಕ್ಷವಾಗಿ ಬಳಸಿಕೊಳ್ಳುವುದು: ಡ್ಯುಯಲ್-ನೇಟಿವ್ ISOಗಳಿಂದ DOL-HDR, 2X2 OCL ಮತ್ತು ಇನ್ನೂ ಹೆಚ್ಚು

ತಂತ್ರಜ್ಞಾನದ ಒಂದಿಷ್ಟು ಅಂಶಗಳು ಮೊದಲ ಪ್ರಯತ್ನದಲ್ಲಿ ಕೊಂಚ ಕಷ್ಟಕರ ಅನ್ನಿಸಬಹುದು, ಆದರೆ ಅದರೊಳಗೆ ಎದುರಾಗುವ ಪದರಗಳ ಆಳಕ್ಕಿಳಿದು ಶೋಧಿಸಿದಾಗ ಆಕರ್ಷಕ ಹೊಸ ತಂತ್ರಜ್ಞಾನವು ನಮ್ಮ ಮುಂದೆ ತೆರೆದುಕೊಳ್ಳುತ್ತದೆ.

news18-kannada
Updated:April 23, 2021, 7:24 PM IST
ನಿಮ್ಮ OnePlus 9 Pro ಕ್ಯಾಮೆರಾವನ್ನು ಅತ್ಯಂತ ದಕ್ಷವಾಗಿ ಬಳಸಿಕೊಳ್ಳುವುದು: ಡ್ಯುಯಲ್-ನೇಟಿವ್ ISOಗಳಿಂದ DOL-HDR, 2X2 OCL ಮತ್ತು ಇನ್ನೂ ಹೆಚ್ಚು
oneplus 9 pro
  • Share this:
ಹೊಚ್ಚ ಹೊಸದಾದ OnePlus 9 Pro ಸ್ಮಾರ್ಟ್ ಫೋನ್ ಕ್ಯಾಮೆರಾ ಕೇವಲ Hasselblad ಜೊತೆಗಿನ ಒಡಂಬಡಿಕೆಯ ಕಾರಣದಿಂದ ಮಾತ್ರ ಅದ್ಭುತ ಆಗುವುದಿಲ್ಲ, ವಿನೂತನ ಛಾಯಾಗ್ರಹಣದ ಅನುಭವ ಒದಗಿಸುವ ಹೊಸ Sony IMX 789 ಸೆನ್ಸರ್ ಮತ್ತು Qualcomm Snapdragon 888 ಚಿಪ್ ಕಾರಣದಿಂದಾಗಿ ಬಳಸಬಹುದಾದ ಬಹಳಷ್ಟು ಸಾಮರ್ಥ್ಯಗಳು ಇದರಲ್ಲಿವೆ.

ತಂತ್ರಜ್ಞಾನದ ಒಂದಿಷ್ಟು ಅಂಶಗಳು ಮೊದಲ ಪ್ರಯತ್ನದಲ್ಲಿ ಕೊಂಚ ಕಷ್ಟಕರ ಅನ್ನಿಸಬಹುದು, ಆದರೆ ಅದರೊಳಗೆ ಎದುರಾಗುವ ಪದರಗಳ ಆಳಕ್ಕಿಳಿದು ಶೋಧಿಸಿದಾಗ ಆಕರ್ಷಕ ಹೊಸ ತಂತ್ರಜ್ಞಾನವು ನಮ್ಮ ಮುಂದೆ ತೆರೆದುಕೊಳ್ಳುತ್ತದೆ.

IMX789 ಎಂದರೇನು?

Sony ಅವರ IMX789 ಒಂದು ಹೊಸ ಸ್ಮಾರ್ಟ್ ಫೋನ್ ಸೆನ್ಸರ್ ಆಗಿದ್ದು ಇದನ್ನು OnePlus 9 Proಗೆ ಶಕ್ತಿ ತುಂಬುವ Snapdragon 888 ಅಂತಹ ಹೊಸ ಚಿಪ್ ಸೆಟ್-ಗಳ ಚಿತ್ರ ಸಂಸ್ಕರಿಸುವ ಸಾಮರ್ಥ್ಯತೆಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ವಿನ್ಯಾಸಿತವಾಗಿದೆ. ಈ ಸೆನ್ಸರ್ ಒಂದಿಗೆ ಜೊತೆಗೂಡಿರುವ SoCಯ ಹೆಚ್ಚುವರಿ ಅಶ್ವಶಕ್ತಿಯು 4K 120fps ಮತ್ತು 8K 30 fps ವೀಡಿಯೋ ರೆಕಾರ್ಡ್ ಮಾಡಲು OnePlus 9 Proಗೆ ಅವಕಾಶ ನೀಡುತ್ತದೆ. ನಾವು ಪ್ರತಿ ಸೆಕೆಂಡಿಗೆ ಗಿಗಾಪಿಕ್ಸೆಲ್ ಚಿತ್ರ ಸಂಸ್ಕರಣಾ ಲೋಡ್ ನಿರ್ವಹಿಸಬಲ್ಲ ಇಮೇಜ್ ಪ್ರಾಸೆಸರುಗಳ (ISPs) ಬಗ್ಗೆ ಮಾತನಾಡುತ್ತಿದ್ದೇವೆ. ಬಹುತೇಕ 4K ಕ್ಯಾಮೆರಾಗಳು ಕೇವಲ ಆ ಲೋಡ್-ನ ಕಾಲು ಭಾಗ ಮಾತ್ರ ನಿರ್ವಹಿಸಬಲ್ಲವು.



ಹೊಸ ಆಟೋಫೋಕಸ್ ಸಿಸ್ಟಮ್

ಲಭ್ಯವಿರುವ ಉತ್ತಮ ಸ್ಮಾರ್ಟ್ ಫೋನುಗಳು ಮತ್ತು ಕ್ಯಾಮೆರಾಗಳು  ದೃಶ್ಯವನ್ನು ಫೋಕಸ್ ಮಾಡಲು ಫೇಸ್-ಡಿಟೆಕ್ಟ್ ಆಟೋಫೋಕಸ್ (PDAF) ಎಂದು ಕರೆಯಲ್ಪಡುವ ವ್ಯವಸ್ಥೆಯೊಂದನ್ನು ಬಳಸುತ್ತವೆ. PDAF ಕೆಲಸ ಮಾಡಬೇಕಾದರೆ, ಸೆನ್ಸರ್ ಮೇಲೆ ವಿಶೇಷವಾಗಿ-ವಿನ್ಯಾಸಿತವಾಗಿರುವ ಹಲವಾರು ನೂರು ಅಥವಾ ಸಾವಿರ ಪಾಯಿಂಟುಗಳು ಎರಡು ವಿಭಿನ್ನ ದೃಷ್ಟಿಕೋನಗಳಿಂದ ದೃಶ್ಯದತ್ತ ನೋಡುತ್ತವೆ – ಬಹುತೇಕ ನಮ್ಮ ಕಣ್ಣುಗಳು ನೋಡುವಂತೆಯೇ – ಮತ್ತು ಹೇಗೆ ಫೋಕಸ್ ಮಾಡಬೇಕೆಂದು ನಿರ್ಧರಿಸಲು ಸಂಕೀರ್ಣ ಲೆಕ್ಕಾಚಾರವನ್ನು ಬಳಸುತ್ತವೆ.

ಸಾಂಪ್ರದಾಯಿಕವಾಗಿ, ಈ ಫೇಸ್-ಡಿಟೆಕ್ಟ್ ಪಿಕ್ಸೆಲ್-ಗಳು ಕ್ಯಾಮೆರಾ ಸೆನ್ಸರ್-ನ ನಿಯಮಿತ ಲೈಟ್-ಸೆನ್ಸಿಟಿವ್ ಪಿಕ್ಸೆಲ್-ಗಳಿಗೆ ಹೋಲಿಸಿದಲ್ಲಿ ಅತ್ಯಂತ ಸಣ್ಣಗಾತ್ರದಲ್ಲಿರುತ್ತವೆ. ಇದು ಈ ಸೆನ್ಸರುಗಳನ್ನು ಬೆಳಕಿಗೆ ಕಡಿಮೆ ಸೆನ್ಸಿಟಿವ್ ಆಗಿಸುತ್ತವೆ ಮತ್ತು ಹೀಗಾಗಿ ಕಡಿಮೆ ಬೆಳಕಿನಲ್ಲಿ ಸೂಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.



2x2 OCL (ಆನ್-ಚಿಪ್ ಲೆನ್ಸ್) ಎಂದು ಕರೆಯಲ್ಪಡುವ Sony ಅವರ ವಿಧಾನ, PDAF ಕೆಲಸ ಮಾಡುವಂತೆ ನೋಡಿಕೊಳ್ಳುವ ಅದೇ ತತ್ವವನ್ನು ಬಳಸುತ್ತದೆ – ಚಿತ್ರವೊಂದನ್ನು ವಿಭಿನ್ನ ದೃಷ್ಟಿಕೋನದಿಂದ ಗಮನಿಸುವುದು – ಆದರೆ ಇಡೀ ಸೆನ್ಸರ್ ಅನ್ನು ಬಳಸಿಕೊಳ್ಳುವ ವಿಧಾನದಲ್ಲಿ ಮತ್ತು ಬೆಳಕಿನ ಸೆನ್ಸಿಟಿವಿಟಿಯನ್ನು ಕಳೆದುಕೊಳ್ಳುವಂತಲ್ಲ.

ಆಧುನಿಕ ಸ್ಮಾರ್ಟ್ ಫೋನ್ ಕ್ಯಾಮೆರಾ ಸೆನ್ಸರುಗಳಲ್ಲಿ, ಪ್ರತಿಯೊಂದು ಪಿಕ್ಸೆಲ್ OCL ಎಂದು ಕರೆಯಲ್ಪಡುವ ಮೈಕ್ರೋಸ್ಕೋಪಿಕ್ ಲೆನ್ಸ್-ನಿಂದ ಕವರ್ ಆಗಿರುತ್ತದೆ. ಈ ಲೆನ್ಸ್ ಪ್ರತಿಯೊಂದೂ ಪಿಕ್ಸೆಲ್-ಗೆ ಹೆಚ್ಚಿನ ಬೆಳಕನ್ನು ನಿರ್ದೇಶಿಸುತ್ತದೆ, ಅದರ ಸೆನ್ಸಿಟಿವಿಟಿಯನ್ನು ಹೆಚ್ಚಿಸುತ್ತದೆ. Sony ಅವರ 2x2 OCL ನಿಲುವು ಒಂದು ಲೆನ್ಸ್-ನಿಂದ ನಾಲ್ಕು ಪಿಕ್ಸೆಲ್-ಗಳ ಜೊತೆಯನ್ನು ಒಳಗೊಂಡಿರುತ್ತದೆ (2x2 ಗ್ರಿಡ್-ನಲ್ಲಿ), ಪರಿಣಾಮಕಾರಿಯಾಗಿ ಪ್ರತಿಯೊಂದು ಪಿಕ್ಸೆಲ್ ಚಿತ್ರವನ್ನು ವಿಭಿನ್ನ ದೃಷ್ಟಿಕೋನದಿಂದ ಗಮನಿಸುವಂತೆ ಅವಕಾಶ ನೀಡುತ್ತದೆ. ಈ ವಿಧಾನ ವಿಶೇಷವಾಗಿ ಪಿಕ್ಸೆಲ್-ಬಿನ್ನೆಡ್ ಚಿತ್ರಗಳಲ್ಲಿ, ಬಣ್ಣದ ಗುಣಮಟ್ಟ ಮತ್ತು ಬೆಳಕಿನ ಸೆನ್ಸಿಟಿವಿಟಿಯನ್ನು ಸಹ ಸುಧಾರಿಸುತ್ತದೆ.

ಡ್ಯುಯಲ್ ನೇಟಿವ್ ISO ಶಬ್ದವನ್ನು ಕಡಿಮೆ ಮಾಡಲು

ಪ್ರತಿಯೊಂದು ಕ್ಯಾಮೆರಾ ಸೆನ್ಸರ್, ಸೆನ್ಸರ್ ಮತ್ತು ಆಂಪ್ಲಿಫಿಕೇಶನ್ ಸರ್ಕ್ಯೂಟ್ ವಿನ್ಯಾಸವು ನಿರ್ಧರಿಸಿರುವಂತೆ ಕನಿಷ್ಠ ಒಂದು ನೇಟಿವ್ ISO ಹೊಂದಿರುತ್ತದೆ. ನೀವು ಸೆನ್ಸರ್ ಅನ್ನು ಮೈಕ್ ಆಗಿ ಮತ್ತು ISO ಅನ್ನು ಗೇಯ್ನ್ ಆಗಿ ಚಿಂತಿಸಿದರೆ, ನೀವು ಗೇಯ್ನ್ ಹೆಚ್ಚಿಸುವ ಮೂಲಕ ಮೈಕ್-ನ ವೋಲ್ಯುಮ್ ಸೆನ್ಸಿಟಿವಿಟಿಯನ್ನು ಬೂಸ್ಟ್ ಮಾಡುವಂತೆಯೇ ಸೆನ್ಸರ್-ನ ಬೆಳಕಿನ ಸೆನ್ಸಿಟಿವಿಟಿಯನ್ನೂ ಸಹ ಬೂಸ್ಟ್ ಮಾಡಬಹುದು.

ನೀವು ಗೇಯ್ನ್ ಅಥವಾ ISO ಹೆಚ್ಚಿಸಿದಾಗ, ಹಿಂಬದಿ ಶಬ್ದವೂ ಸಹ ಆಂಪ್ಲಿಫೈ ಆಗುತ್ತದೆ, ಇದರಿಂದ ಕಡಿಮೆ ಬೆಳಕಿನಲ್ಲಿ ತೆಗೆದ ಚಿತ್ರಗಳಲ್ಲಿ ಶಬ್ದವನ್ನು ನೋಡುವಿರಿ, ಮತ್ತು ಅತಿ ಹೆಚ್ಚಾಗಿ ಬೂಸ್ಟ್ ಮಾಡಿರುವ ಮೈಕ್-ಗಳಿಂದ ಶಬ್ದ (ಹಿಸ್) ಕೇಳುವಿರಿ.





ಮೈಕ್-ಗಳಲ್ಲಿ ಗೇಯ್ನ್-ಗೆ ಸಂಬಂಧಿಸಿದಂತೆ, ಪ್ರತಿ ಸೆನ್ಸರ್ ISO ಸ್ವೀಟ್-ಸ್ಪಾಟ್ ಹೊಂದಿರುತ್ತದೆ ಇಲ್ಲಿ ಶಬ್ದವು ಕನಿಷ್ಠ ಮತ್ತು ಬೆಳಕಿನ ಸೆನ್ಸಿಟಿವಿಟಿಯು ಗರಿಷ್ಠವಾಗಿರುತ್ತದೆ. ಈ ಸ್ವೀಟ್-ಸ್ಪಾಟ್, ಆದಾಗ್ಯೂ, ಸಾಮಾನ್ಯವಾಗಿ ಹಗಲಿನ ಬೆಳಕಿನಲ್ಲಿ ಶೂಟಿಂಗ್ ಮಾಡುವುದರ ಪರವಾಗಿರುತ್ತದೆ. ಒಂದು ಡ್ಯುಯಲ್-ನೇಟಿವ್ ISO, 9 Proದ ಸೆನ್ಸರ್-ನ ವಿಷಯದಲ್ಲಿ ಇರುವಂತೆ ಒಂದು ಹೆಚ್ಚುವರಿ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಅನ್ನು ಸೇರ್ಪಡೆ ಮಾಡುತ್ತದೆ ಇದು ಹೆಚ್ಚಿನ ISOನಲ್ಲಿ ಶುದ್ಧ ಚಿತ್ರವನ್ನು ಒದಗಿಸುತ್ತದೆ.

ಫಲಿತಾಂಶ? ಕಡಿಮೆ ಬೆಳಕಿನಲ್ಲಿ ಉತ್ತಮ ಶಬ್ದ ನಿಯಂತ್ರಣ ಮತ್ತು ಹೆಚ್ಚು ಶುದ್ಧ ಚಿತ್ರಗಳು. ಡ್ಯುಯಲ್-ನೇಟಿವ್ ISO ಅಳವಡಿಸಲು ಹೆಚ್ಚು ಕ್ಲಿಷ್ಟ, ಮತ್ತು ಹೆಚ್ಚು ದುಬಾರಿ, ಈ ಕಾರಣಕ್ಕಾಗಿಯೇ ಬಹಳ ಕಡಿಮೆ ಕ್ಯಾಮೆರಾಗಳು ಈ ಫೀಚರ್ ಅನ್ನು ಅಳವಡಿಸುತ್ತವೆ.

ಘೋಸ್ಟ್-ಫ್ರೀ – HDR ಅಥವಾ  DOL-HDR

ಸಾಂಪ್ರದಾಯಿಕ HDR ತಂತ್ರಗಳಲ್ಲಿ ಕ್ಯಾಮೆರಾವು ಕ್ವಿಕ್ ಬರ್ಸ್ಟ್-ನಲ್ಲಿ ಬಹು ಚಿತ್ರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ನಿಮ್ಮ ಶಾಟ್-ನ ಡೈನಾಮಿಕ್ ರೇಂಜ್ ಅನ್ನು (ಚಿತ್ರದ ಅತ್ಯಂತ ಕತ್ತಲೆಯ ಮತ್ತು ಉಜ್ಜ್ವಲತೆಯ ಭಾಗಗಳ ನಡುವಣ ತೀವ್ರತೆಯ ವ್ಯತ್ಯಾಸ) ಸುಧಾರಿಸಲು ಅವುಗಳನ್ನು ಒಟ್ಟಿಗೆ ಸ್ಟಾಕ್ ಮಾಡಬೇಕಾಗುತ್ತದೆ.

ಈ ವಿಧಾನದಲ್ಲಿರುವ ಸಮಸ್ಯೆಯೆಂದರೆ ಪ್ರತಿಯೊಂದು ಫ್ರೇಮ್ ನಡುವೆ ಟೈಮ್ ಡಿಲೇ ಇದ್ದು, ನಿಮ್ಮ ಸಬ್ಜೆಕ್ಟ್ ಚಲಿಸುತ್ತಿರುವಾಗ (ಕಾರು ಅಥವಾ ವ್ಯಕ್ತಿಯೊಬ್ಬರು ಕೈ ಬೀಸುತ್ತಿರುವುದು, ಇತ್ಯಾದಿ) ಇದೊಂದು ದೊಡ್ಡ ಸಮಸ್ಯೆಯಾಗುತ್ತದೆ. ಈ ಚಿತ್ರಗಳನ್ನು ಜೋಡಿಸಿದಾಗ, ಅವುಗಳು ನಿಖರವಾಗಿ ಹೊಂದಿಕೆ ಆಗುವುದಿಲ್ಲ, ಮತ್ತು ಕ್ಯಾಮೆರಾ ಒಂದಿಷ್ಟು ಅತ್ಯಂತ ಫ್ಯಾನ್ಸಿ ಮತ್ತು ಇಂಟೆಲಿಜೆಂಟ್ ಸ್ಟಾಕಿಂಗ್ ಮಾಡಿದ ಹೊರತು, ನಿಮ್ಮ ಸಬ್ಜೆಕ್ಟ್-ಗಳನ್ನು “ಘೋಸ್ಟ್” ಟ್ರೇಲ್ಸ್-ಗಳು ಅನುಸರಿಸುತ್ತವೆ.



DOL-HDR (ಡಿಜಿಟಲ್ ಓವರ್ ಲ್ಯಾಪ್ ಹೈ ಡೈನಾಮಿಕ್ ರೇಂಜ್) ಕೆಲಸಗಳನ್ನು ವಿಭಿನ್ನವಾಗಿ ಮಾಡುತ್ತದೆ. ಬಹು ಚಿತ್ರಗಳನ್ನು ತೆಗೆದುಕೊಳ್ಳುವ ಬದಲಿಗೆ, ಸೆನ್ಸರ್ ಮಲ್ಟಿಪಲ್ ಎಕ್ಸ್ಪೋಶರುಗಳನ್ನು ಸೆನ್ಸರ್ ಡೇಟಾ ಓದುವಾಗ ಪಡೆದುಕೊಳ್ಳುತ್ತದೆ. ಇದು ಸುಮಾರು ತಕ್ಷಣವೇ ಸಂಭವಿಸುತ್ತದೆ, ಇದರಿಂದ ಚಲನೆಯಿಲ್ಲದ ಅಸ್ಪಷ್ಟ ಅಥವಾ ಘೋಸ್ಟಿಂಗ್ ಉಂಟಾಗುತ್ತದೆ. ಇದೊಂದು ಹೊಸ ತಂತ್ರವೇನಲ್ಲ, ಆದರೆ ಹೊಸ ಸೆನ್ಸರ್-ನಲ್ಲಿ ಅದನ್ನು ಅಳವಡಿಸುವುದನ್ನು ನೋಡುವುದು ಚೆನ್ನಾಗಿರುತ್ತದೆ.



12-ಬಿಟ್ RAW

ಲೆಕ್ಕವು ಅತ್ಯಂತ ಕ್ಲಿಷ್ಟ, ಆದರೆ ಅವಶ್ಯಕವಾಗಿ, ಒಂದು 12-ಬಿಟ್ RAW ಪ್ರತಿ ಪಿಕ್ಸೆಲ್-ಗೆ 68 ಬಿಲಿಯನ್ ಶೇಡ್-ಗಳಿಗೂ ಅಧಿಕದಲ್ಲಿ ಒಂದನ್ನು ರೆಕಾರ್ಡ್ ಮಾಡಬಹುದು. ಬಹುತೇಕ LCD  ಡಿಸ್ಪ್ಲೇಗಳು ಪ್ರತಿ ಪಿಕ್ಸೆಲ್-ಗೆ 8-ಬಿಟ್ಸ್ ಕಲರ್  ರೆಂಡರ್ ಮಾಡಬಹುದು (16.7 ಮಿಲಿಯನ್ ಶೇಡ್-ಗಳು), ಮತ್ತು OnePlus 9 Pro ಅಂತಹ ಪ್ರೀಮಿಯಮ್ ಫೋನುಗಳು ಪ್ರತಿ ಪಿಕ್ಸೆಲ್-ಗೆ 10-ಬಿಟ್ಸ್ ಕಲರ್ (1.07 ಬಿಲಿಯನ್ ಶೇಡ್-ಗಳು) ರೆಂಡರ್ ಮಾಡಬಹುದು.

12-ಬಿಟ್ ಸ್ಪಷ್ಟವಾಗಿ ಓವರ್ ಕಿಲ್ ಆಗಿರುತ್ತದೆ. ಯಾರಾದರೂ ನಿಮ್ಮ ಡಿಸ್ಪ್ಲೇ ರೆಂಡರ್ ಮಾಡಬಹುದಾದ ಸಾಮರ್ಥ್ಯಕ್ಕಿಂತ 68 ಪಟ್ಟು ಹೆಚ್ಚು ಕಲರ್ ಯಾಕೆ ರೆಕಾರ್ಡ್ ಮಾಡಬೇಕು?

ಒಂದು ವೇಳೆ ನೀವು RAW ಶೂಟ್ ಮಾಡುತ್ತಿದ್ದರೆ, ನೀವು ನಿಮ್ಮ ಚಿತ್ರಗಳನ್ನು ಎಡಿಟ್ ಮಾಡಬಯಸುವಿರಿ. ಇಮೇಜ್-ಗಳನ್ನು ಎಡಿಟ್ ಮಾಡುವಾಗ, ನೀವು ಪಡೆಯಬಹುದಾದ ಎಲ್ಲಾ ಹೆಚ್ಚುವರಿ ಡೇಟಾ ಪಡೆಯಬೇಕಾಗುತ್ತದೆ. 12-ಬಿಟ್ RAW ನಿಮಗೆ 68 ಬಿಲಿಯನ್ ಬಣ್ಣಗಳೊಡನೆ ಕಾರ್ಯನಿರ್ವಹಿಸಲು ಅವಕಾಶ ನೀಡುವುದಷ್ಟೇ ಅಲ್ಲ, ಅದು ಹೆಚ್ಚುವರಿ ಡೈನಾಮಿಕ್ ರೇಂಜ್ ಅನ್ನೂ ಸಹ ನೀಡುತ್ತದೆ, ಇದನ್ನು ನೀವು ಯಾವುದೇ ಗಮನಾರ್ಹ ಕಲರ್ ಆರ್ಟಿಫ್ಯಾಕ್ಟ್-ಗಳು ಅಥವಾ ವಿವರಗಳ ನಷ್ಟವಿಲ್ಲದೆ ನಿಮಗೆ ಸರಿ ಕಂಡಂತೆ ನಿಮ್ಮ ಇಮೇಜಿನಲ್ಲಿ ಬಣ್ಣಗಳನ್ನು ಹಾಕಬಹುದು ಅಥವಾ ತೆಗೆಯಬಹುದು.



ಅಲ್ಟ್ರಾ-ವೈಡ್: ಡಿಸ್ಟಾರ್ಶನ್-ಮುಕ್ತ 50 MP ಚಿತ್ರಗಳು

OnePlus 9 Proದ 50 MP ಕ್ಯಾಮೆರಾ ವಿಶೇಷವಾಗಿದೆ. 50MP IMX 766 ಸೆನ್ಸರ್ ನಾವು ಅಲ್ಟ್ರಾ-ವೈಡ್-ನಲ್ಲಿ ಈವರೆಗೆ ಕಂಡಿರುವ ಅತ್ಯಂತ ದೊಡ್ಡದಾದ ಸೆನ್ಸರುಗಳಲ್ಲಿ ಒಂದಾಗಿದೆ, ಮತ್ತು ಅದು ಅತ್ಯಂತ ಕಡಿಮೆ ಡಿಸ್ಟಾರ್ಟ್ ಆಗಿರುವ ಸೆನ್ಸರ್ ಆಗಿದೆ.



ದೊಡ್ಡ ಗಾತ್ರವು ನಿಮಗೆ ತುಲನಾತ್ಮಕವಾಗಿ ಉತ್ತಮ ಬೋಕೇ ಮತ್ತು ಹಿನ್ನೆಲೆ ಪ್ರತ್ಯೇಕತೆಯೊಂದಿಗೆ ಶುದ್ಧ ಮತ್ತು ಶಬ್ದ-ರಹಿತ ಚಿತ್ರಗಳನ್ನು ನೀಡುತ್ತದೆ. ಕಡಿಮೆ ಡಿಸ್ಟಾರ್ಶನ್, ಲೆಕ್ಕಾಚಾರದಿಂದ ಸರಿಪಡಿಸಿದ, ಡಿಜಿಟಲ್ಲಿ ಸರ್ಫೇಸ್ಡ್ ಲೆನ್ಸ್ ಬಳಸಿದ ಪರಿಣಾಮವಾಗಿದ್ದು, ನೇರ ಗೆರೆಗಳನ್ನು ನೇರವಾಗಿ ಇರಿಸುತ್ತದೆ, ಹೆಚ್ಚು ಸಹಜವಾಗಿ ಕಾಣುವ ಅಲ್ಟ್ರಾ-ವೈಡ್ ಶಾಟ್ಸ್-ಗಳನ್ನು ತೆಗೆಯುವ ಅವಕಾಶ ಒದಗಿಸುತ್ತದೆ.



Hasselblad ಬಣ್ಣಗಳು

ಅಂತಿಮವಾಗಿ, ನೀವು ಪಡೆಯುವ ಚಿತ್ರವು ನಿಮ್ಮ ಕಣ್ಣಿಗೆ ಆಹ್ಲಾದಕರ ಆಗಿರಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಬಣ್ಣಗಳನ್ನು ವಿಭಿನ್ನವಾಗಿ ಕಾಣುತ್ತಾರಾದರೂ, ಭೌಗೋಳಿಕವಾಗಿ ಕೆಲವು ನಿಯಮಗಳಿವೆ. ಮ್ಯೂಟೆಡ್ ಕಾಂಟ್ರಾಸ್ಟ್ ಜನರ ಚಿತ್ರಗಳನ್ನು ಶೂಟ್ ಮಾಡಲು ಅದ್ಭುತವಾಗಿರುತ್ತವೆ, ಉದಾಹರಣೆಗೆ, ಕಪ್ಪು ಮತ್ತು ಬಿಳುಪಿಗೆ ಹೆಚ್ಚಿನ ಕಾಂಟ್ರಾಸ್ಟ್ ಒಳ್ಳೆಯದು, ಮತ್ತು ನಿಸರ್ಗ ಛಾಯಾಗ್ರಹಣಕ್ಕೆ ಮೆರುಗು ಬಣ್ಣಗಳು ಅದ್ಭುತವಾಗಿರುತ್ತವೆ, ಹೀಗೆ.

ಚಿತ್ರವೊಂದನ್ನು ಸಂಸ್ಕರಿಸುವಾಗ, ಕ್ಯಾಮೆರಾ ವ್ಯವಸ್ಥೆಯು ಯಾವ ವಿಧಾನವು ಅತ್ಯುತ್ತಮ ಎಂಬುದನ್ನು ನಿರ್ಧರಿಸಬೇಕು ಮತ್ತು ತೆಗೆದ ದೃಶ್ಯವನ್ನು ಹೆಚ್ಚು ದಕ್ಷಗೊಳಿಸಿದ ಫಲಿತಾಂಶವನ್ನು ನೀಡಬೇಕು. ಇದು, ಒಟ್ಟಾರೆ ಅತಿಸರಳೀಕರಿಸಲಾಗಿದ್ದು, ಬಣ್ಣದ ವಿಜ್ಞಾನವೇ ಈ ರೀತಿಯದು.

DJI-ಮಾಲೀಕತ್ವದ Hasselblad ಬ್ರ್ಯಾಂಡ್ ವೃತ್ತಿಪರರಲ್ಲಿ ಹೆಸರುವಾಸಿಯಾಗಿದೆ, ಮತ್ತು ಈ ಖ್ಯಾತಿ ಅದರ ಕ್ಯಾಮೆರಾಗಳು ಮತ್ತು ಬಣ್ಣದ ವಿಜ್ಞಾನ ಸೃಷ್ಟಿಸುವ ಬಹಳ ಸಹಜ ಬಣ್ಣದ ಟೋನ್-ಗಳಿಗೆ ಬಂದಿರುತ್ತದೆ. OnePlus-Hasselblad ಒಡಂಬಡಿಕೆಯು 9 Pro ಕ್ಯಾಮೆರಾದಲ್ಲಿ ಆ ಬಣ್ಣದ ಟೋನ್ ಅನ್ನು ಮೂಡಿಸುವ ಗುರಿ ಹೊಂದಿದೆ.

ಒಟ್ಟಾರೆ, ಈ ಗುಣಲಕ್ಷಣಗಳು ಮತ್ತು ಹೊಸ ಹಾರ್ಡ್ವೇರ್ ಒತ್ತಾಯಪೂರ್ವಕ ಹೊಸ ಕ್ಯಾಮೆರಾ ವ್ಯವಸ್ಥೆಯನ್ನು ರೂಪಿಸಿವೆ. ಹೀಗೆ ಹೇಳಿದಾಗ್ಯೂ, ನೀವು, ಪ್ರೀತಿಯ ಓದುಗರೆ, ಈ ಹೊಸ ಕ್ಯಾಮೆರಾಗಳ ಹಣೆಬರಹವನ್ನು ನಿರ್ಣಯಿಸುವವರು ಮತ್ತು ಭವಿಷ್ಯದ ವ್ಯವಸ್ಥೆಗಳ ವಿಕಾಸಕ್ಕೆ ಮಾರ್ಗದರ್ಶನ ಒದಗಿಸುವವರು.

ಪ್ರಪಂಚದ ಎಲ್ಲಾ ತಂತ್ರಜ್ಞಾನವೂ ನೀವು ಇಷ್ಟಪಡದ ಚಿತ್ರವೊಂದನ್ನು ಉಳಿಸುವುದಿಲ್ಲ. ಪ್ರೀತಿಸಿರಿ ಅಥವಾ ದ್ವೇಷಿಸಿರಿ, ನಾವು OnePlus 9 Pro ಹೊಸ ಕ್ಯಾಮೆರಾಗಳ ಕುರಿತು ನಿಮ್ಮ ವಿಚಾರಗಳ ಬಗ್ಗೆ ಕೇಳಲು ಸಂತೋಷಪಡುತ್ತೇವೆ.
First published: April 23, 2021, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories