HOME » NEWS » Tech » EXPLAINER WHY IS THERE A GLOBAL CHIP SHORTAGE AND WHY SHOULD YOU CARE STG LG

Explainer: ಜಾಗತಿಕ ಸಮಸ್ಯೆಯಾದ ಚಿಪ್ ಕೊರತೆ; ಈ ಬಗ್ಗೆ ಏಕೆ ಎಚ್ಚೆತ್ತುಕೊಳ್ಳಬೇಕು ಗೊತ್ತಾ?

ದೇಶದಲ್ಲಿ ಚಿಪ್ ಉತ್ಪಾದನೆಯನ್ನು ಚುರುಕುಗೊಳಿಸಲು ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ 37 ಬಿಲಿಯನ್ ಡಾಲರ್ ಹಣವನ್ನು ಫಂಡಿಂಗ್‌ ಮಾಡಲು ಮಸೂದೆ ಪಾಸ್‌ ಮಾಡಲು ಶಾಸಕರನ್ನು ಕೋರಿದ್ದಾರೆ.

news18-kannada
Updated:April 1, 2021, 8:48 PM IST
Explainer: ಜಾಗತಿಕ ಸಮಸ್ಯೆಯಾದ ಚಿಪ್ ಕೊರತೆ; ಈ ಬಗ್ಗೆ ಏಕೆ ಎಚ್ಚೆತ್ತುಕೊಳ್ಳಬೇಕು ಗೊತ್ತಾ?
ಪ್ರಾತಿನಿಧಿಕ ಚಿತ್ರ
  • Share this:
ಕಾರು ಡೆಲಿವರಿಯಲ್ಲಿ ವಿಳಂಬ, ಗೃಹೋಪಯೋಗಿ ಉಪಕರಣಗಳಿಗೆ ಪೂರೈಕೆಯ ಕೊರತೆ, ದುಬಾರಿ ಸ್ಮಾರ್ಟ್​​ ಫೋನ್​ ಸೇರಿದಂತೆ ಜಾಗತಿಕವಾಗಿ ಉದ್ಯಮಗಳು ಮತ್ತು ಗ್ರಾಹಕರು ಅರೆವಾಹಕ ಸೆಮಿಕಂಡಕ್ಟರ್​ ಮೈಕ್ರೋಚಿಪ್​ಗಳಲ್ಲಿ ಕೊರತೆಯನ್ನು ಎದುರಿಸುತ್ತಿದ್ದಾರೆ. ಗ್ರಾಹಕರು ಸಾಂಕ್ರಾಮಿಕದ ಸಮಯದಲ್ಲಿ ಲ್ಯಾಪ್​ಟಾಪ್​ಗಳಲ್ಲಿ, ಗೇಮಿಂಗ್​ ಕನ್ಸೋಲ್​​ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಸಂಗ್ರಹಣೆ ಮಾಡಿರುವುದು ಕೊರತೆಯ ಕಾರಣಗಳಲ್ಲಿ ಒಂದು. ಅಲ್ಲದೇ ವಸಂತ ಕಾಲದಲ್ಲಿ ಇಂಡಸ್ಟ್ರಿಯ ನಿರೀಕ್ಷೆಗೂ ಮೀರಿ ಕಾರುಗಳನ್ನು ಕೊಂಡುಕೊಳ್ಳಲಾಯಿತು. ಇದಿಷ್ಟೇ ಅಲ್ಲದೇ ಹೆಚ್ಚಿದ ಸರಬರಾಜಿನ ಒತ್ತಡ, ಚೀನಾದ ಟೆಕ್​ ಕಂಪನಿಗಳ ವಿರುದ್ಧದ ನಿರ್ಬಂಧಗಳು ಈ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದವು. ವಾಹನ ಉದ್ಯಮದಲ್ಲಿ ಕೇಂದ್ರಿಕೃತವಾಗಿರುವ ಕೊರತೆಯೂ ಈಗ ಸ್ಮಾರ್ಟ್​ಫೋನ್​ಗಳು, ರೆಫ್ರಿಜರೇಟರ್​ಗಳು ಮತ್ತು ಮೈಕ್ರೋವೇವ್​ಗಳು ಸೇರಿದಂತೆ ಇತರ ಗ್ರಾಹಕರ ಎಲೆಕ್ಟ್ರಾನಿಕ್ಸ್​​ಗಳವರೆಗೂ ವಿಸ್ತರಿಸಿಕೊಂಡಿತು.

ಕಾರುಗಳು

ಆಟೋ ಮೊಬೈಲ್ಸ್‌ಗಳು ಚಿಪ್ಪಿನ ಮೇಲೆ ಹೆಚ್ಚು ಅವಲಂಬಿತವಾಗಿವೆ. ಎಂಜಿನ್​​ ಕಂಪ್ಯೂಟರ್​ ಮ್ಯಾನೇಜ್ಮೆಂಟ್​, ಇಂಧನದ ಆರ್ಥಿಕತೆ, ಡ್ರೈವರ್​ಗೆ ನೆರವು ನೀಡುವ ಎಮರ್ಜೆನ್ಸಿ ಬೇಕ್ರಿಂಗ್​ ಸೇರಿದಂತೆ ಹಲವಾರು ವಿಶಿಷ್ಟತೆಗಾಗಿ ಚಿಪ್​ಗಳ ಮೇಲೆ ಅವಲಂಬಿತವಾಗಿವೆ. ಈ ಬಿಕ್ಕಟ್ಟು ಕಡಿಮೆ ಆದಾಯದ ವಾಹನಗಳ ಉತ್ಪಾದನೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸಿತು. ಜೆನೆರಲ್‌ ಮೋಟರ್ಸ್ ಕಂಪನಿ ಮತ್ತು ಫೋರ್ಡ್ ಕಂಪನಿಯಂತಹ ದೊಡ್ಡ ಕಾರು ತಯಾಕರು ಸಹ ಉತ್ಪಾದನೆಯನ್ನು ಕಡಿಮೆಗೊಳಿಸುವುದಾಗಿ ಹೇಳಿದರು. ಅಲ್ಲದೇ ವೋಕ್ಸ್​ವ್ಯಾಗನ್ ಎಜಿ, ಸುಬಾರು ಕಾರ್ಪ್, ಟೊಯೋಟಾ ಕಾರ್ಪ್ ಮತ್ತು ನಿಸ್ಸಾನ್ ಮೋಟಾರ್ ಕಂಪನಿ ಸಹ ಈ ಸಾಲಿನಲ್ಲಿದೆ. ಆಟೋ ಸೆಮಿಕಂಡಕ್ಟರ್​​ ಚಿಪ್​ನ ಕೊರತೆಯು ಮೊದಲ ತ್ರೈಮಾಸಿಕದಲ್ಲಿ 1.3 ಮಿಲಿಯನ್​ ಯುನಿಟ್ಸ್ ಜಾಗತಿಕ ಲಘು ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು ಎಂದು ಡೇಟಾ ಸಂಸ್ಥೆ ಐಎಚ್​ಎಸ್​​ ಮಾರ್ಕಿಟ್​ ತಿಳಿಸಿದೆ.

Ramesh Jarkiholi CD Case: ನೈತಿಕ ಹೊಣೆ ಹೊತ್ತು ಡಿಕೆ ಶಿವಕುಮಾರ್ ಸಹ ರಾಜೀನಾಮೆ ನೀಡಬೇಕು; ಲಖನ್ ಜಾರಕಿಹೊಳಿ ಆಗ್ರಹ

ಐಎಚ್​ಎಸ್​​ ಪ್ರಕಾರ ರೆನೆಸಾಸ್​​ ಎಲೆಕ್ಟ್ರಾನಿಕ್​ ಕಾರ್ಪ್ ಒಡೆತನದ ಜಪಾನಿನ ಚಿಪ್​ ತಯಾರಿಸುವ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೆಂಕಿಯೂ ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಗಿದೆ. ಇದು ಕಾರುಗಳಲ್ಲಿ ಬಳಸುವ ಮೈಕ್ರೋ ಕಂಟ್ರೋಲರ್​ ಘಟಕಗಳಳಿಗೆ ಜಾಗತಿಕ ಮಾರುಕಟ್ಟೆಯ 30 ಪ್ರತಿಶತದಷ್ಟು ಪಾಲನ್ನು ಹೊಂದಿದೆ. ಟೆಕ್ಸಾಸ್​​ನಲ್ಲಿ ಚಳಿಗಾಲದ ತೀವ್ರತೆಯ ವಾತಾವರಣದ ಕಾರಣದಿಂದ ಸ್ಯಾಮ್​ಸಂಗ್​ ಕಂಪನಿ ಲಿಮಿಟೆಡ್, ಎನ್​ಎಕ್ಸ್​ಪಿ ಸೆಮಿಕಂಡಕ್ಟರ್ಸ್​​ ಮತ್ತು ಇನ್​ಫೀನಿಯನ್ ಕಂಪನಿಗಳು ತಾತ್ಕಾಲಿಕವಾಗಿ ಕಂಪನಿಗಳನ್ನು ಮುಚ್ಚಿವೆ. ಇನ್​ಫೀನಿಯಾನ್​ ಮತ್ತು ಎನ್​ಎಕ್ಸ್​ಪಿ ಮುಖ್ಯ ಆಟೋಮೆಟೀವ್​​ ಚಿಪ್ ಪೂರೈಕೆದಾರರಾಗಿದ್ದಾರೆ. ಈ ಹಿನ್ನೆಲೆ ಈ ಕೊರತೆ ಎಲ್ಲಾ ವಲಯದಲ್ಲೂ ಸಮಸ್ಯೆ ಉಂಟು ಮಾಡುತ್ತಿವೆ ಎಂದು ವಿಶ್ಲೇಷಕರು ಊಹಿಸಿದ್ದಾರೆ.

ಹೆಚ್ಚು ಚಿಪ್​ ಉತ್ಪಾದಿಸುವ ಏಷ್ಯಾ

ಮೂಲದಿಂದಲೇ ಈ ಸಮಸ್ಯೆಯನ್ನು ಬಗೆಹರಿಸಬೇಕಿದ್ದು, ಏಷ್ಯಾದ ಸಂಸ್ಥೆಗಳ ಒಡೆತನದ 8 ಇಂಚಿನ ಚಿಪ್​ಗಳ ಉತ್ಪಾದನಾ ಘಟಕಗಳಿದ್ದು. ನಿರೀಕ್ಷೆಗೂ ಮೀರಿದ 5 ಜಿ ಫೋನ್​ ಮತ್ತು ಲ್ಯಾಪ್​ಟಾಪ್​ಗಳ ಬೇಡಿಕೆಯಿಂದ ಉತ್ಪಾದನೆಯನ್ನು ಮೇಲೆತ್ತಲು ಸಾಕಷ್ಟು ಕಷ್ಟಪಡಬೇಕಾಗಿದೆ. ಸ್ಯಾಮ್​ಸಂಗ್​ನ ಚಿಪ್​ನಲ್ಲಿರುವ ಕ್ವಾಲ್ಕಮ್​ ಮುಖ್ಯವಾದ ಚಿಪ್​ ತಯಾರಕರಾಗಿದ್ದು, ಬೇಡಿಕೆಯನ್ನು ಉಳಿಸಿಕೊಳ್ಳಲು ಶ್ರಮವಹಿಸುತ್ತಿದೆ. ಆ್ಯಪಲ್​ನ ಮುಖ್ಯ ಪೂರೈಕೆದಾರರಾದ ಫಾಕ್ಸ್​​ಕಾನ್​ ಕೂಡ ಗ್ರಾಹಕರಿಗೆ ಪೂರೈಕೆಯ ಹಿನ್ನೆಲೆಯಲ್ಲಿ ಚಿಪ್ ಕೊರತೆಯನ್ನು ಎದುರಿಸುತ್ತಿರುವುದಾಗಿ ತಿಳಿಸಿದೆ.ಏಷ್ಯಾದಲ್ಲಿ ಅತಿ ಹೆಚ್ಚು ಚಿಪ್​ ತಯಾರಿಕೆ ಮಾಡಲಾಗುತ್ತಿದ್ದು, ಪ್ರಮುಖ ಉತ್ಪಾದಕರಾದ ಥೈವಾನ್ ಸೆಮಿಕಂಡಕ್ಟರ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್​​ ಮತ್ತು ಸ್ಯಾಮ್​ಸಂಗ್​ ನೂರಾರು ಚಿಪ್​ ಕಂಪನಿಗಳಿಗೆ ಚಿಪ್​ ಪೂರೈಕೆಗೆ ಶ್ರಮಿಸುತ್ತಿದೆ. ಅಮೆರಿಕ ಸೆಮಿ ಕಂಡಕ್ಟರ್‌ ಕಂಪನಿಗಳು ಜಾಗತಿಕ ಚಿಪ್​ ಮಾರುಕಟ್ಟೆಯಲ್ಲಿ 47 ಪ್ರತಿಶತದಷ್ಟು ಪಾಲನ್ನು ಹೊಂದಿದೆ. ಆದರೆ 12 ಪ್ರತಿಶತ ಮಾತ್ರ ಅಮೆರಿಕದಲ್ಲೇ ಉತ್ಪಾದನೆಯಾಗುತ್ತದೆ.

ಸಮಸ್ಯೆ ಸರಿಪಡಿಸಲು ಏನೆಲ್ಲಾ ಮಾಡಲಾಗುತ್ತಿದೆ?

ವೇಫರ್​ಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ನಿರ್ಮಿಸಲು ಹತ್ತಾರು ಬಿಲಿಯನ್‌ ಡಾಲರ್​ಗಳಷ್ಟು ವೆಚ್ಚವಾಗುತ್ತದೆ. ಹಾಗೂ ಅವುಗಳ ಸಾಮರ್ಥ್ಯವನ್ನು ವಿಸ್ತರಿಸುವುದರಿಂದ ಸಂಕೀರ್ಣ ಸಾಧನಗಳನ್ನು ಪರೀಕ್ಷಿಸಲು ಮತ್ತು ಅರ್ಹತೆ ಪರೀಕ್ಷಿಸಲು ಒಂದು ವರ್ಷ ತೆಗೆದುಕೊಳ್ಳಬಹುದು.

ದೇಶದಲ್ಲಿ ಚಿಪ್ ಉತ್ಪಾದನೆಯನ್ನು ಚುರುಕುಗೊಳಿಸಲು ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ 37 ಬಿಲಿಯನ್ ಡಾಲರ್ ಹಣವನ್ನು ಫಂಡಿಂಗ್‌ ಮಾಡಲು ಮಸೂದೆ ಪಾಸ್‌ ಮಾಡಲು ಶಾಸಕರನ್ನು ಕೋರಿದ್ದಾರೆ. ಪ್ರಸ್ತುತ ದೇಶದಲ್ಲಿ ಇಂಟೆಲ್ ಕಾರ್ಪ್‌ನಿಂದ 2 ಮತ್ತು ಒಂದು ಅರಿಜೋನಾದಲ್ಲಿರುವ ಟಿಎಸ್​​ಎಮ್​ಸಿ ಮತ್ತು ಇನ್ನೊಂದು ಟೆಕ್ಸಾಸ್‌ನಲ್ಲಿರುವ ಸ್ಯಾಮ್​ಸಂಗ್​​ ಸೇರಿದಂತೆ 4 ಕಾರ್ಖಾನೆಗಳನ್ನು ಆಯ್ಕೆ ಮಾಡಲಾಗಿದೆ.

ಪಾಶ್ಚಿಮಾತ್ಯ ತಂತ್ರಜ್ಞಾನದ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸುವ ಹಿನ್ನೆಲೆಯಲ್ಲಿ ಚೀನಾ ಸಹಾಯಧನವನ್ನು ಸಹ ನೀಡಲು ಮುಂದಾಗಿದೆ.
Published by: Latha CG
First published: April 1, 2021, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories