• Home
  • »
  • News
  • »
  • tech
  • »
  • Meta: ಮೆಟಾದ ವರ್ಚ್ಯೂಯಲ್ ಜಗತ್ತಿನ ಅನುಭವ ಬಿಚ್ಚಿಟ್ಟ ವ್ಯಕ್ತಿ, ನೀವೂ ಒಂದು ಸುತ್ತು ಹಾಕಿ ಬನ್ನಿ

Meta: ಮೆಟಾದ ವರ್ಚ್ಯೂಯಲ್ ಜಗತ್ತಿನ ಅನುಭವ ಬಿಚ್ಚಿಟ್ಟ ವ್ಯಕ್ತಿ, ನೀವೂ ಒಂದು ಸುತ್ತು ಹಾಕಿ ಬನ್ನಿ

ಮೆಟಾ

ಮೆಟಾ

ಮೆಟಾ ಸಂಸ್ಥೆಯು ಈ ತಂತ್ರಜ್ಞಾನವನ್ನು ಬಳಸಿ ಜಗತ್ತಿನ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಕೊಳ್ಳುವುದಾಗಿ ಈ ಹಿಂದೆಯೇ ಹೇಳಿದೆ. ಅದರಂತೆ ಅದು ಆ ವರ್ಚ್ಯೂಯಲ್ ತಂತ್ರಜ್ಞಾನವನ್ನು ಹೇಗೆ ನಿರ್ಮಿಸಿದೆ. ವ್ಯಕ್ತಿಯೊಬ್ಬರು ಇದರ ಪರೀಕ್ಷೆಯೊಂದನ್ನು ನಡೆಸಿದ್ದು ಆ ಬಗ್ಗೆ ತಮ್ಮ ಅನುಭವ ಅವರು ಈ ರೀತಿ ಬರೆದುಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಈಗ ಜಗತ್ತು ಸಾಕಷ್ಟು ಆಧುನಿಕವಾಗುತ್ತಿದೆ. ತಂತ್ರಜ್ಞಾನ (Technology) ಇನ್ನಿಲ್ಲದಂತೆ ಪ್ರಗತಿ ಸಾಧಿಸುತ್ತಿದೆ. ಹಿಂದೆ ನೂರಾರು ಜನರು ಮಾಡುತ್ತಿದ್ದ ಸಂಕೀರ್ಣ ಕೆಲಸಗಳನ್ನು ಈಗ ತಂತ್ರಾಂಶವೊಂದೇ ಸಾಧ್ಯವಾಗಿಸುತ್ತದೆ. ಒಟ್ಟಿನಲ್ಲಿ ತಂತ್ರಜ್ಞಾನವೇ ಇಂದಿನ ಮಹಾ ಯಶಸ್ಸು (Success) ಎನ್ನಬಹುದು. ಈಗಾಗಲೇ ನಾವೆಲ್ಲರೂ ವರ್ಚ್ಯೂಯಲ್ ಜಗತ್ತಿನ ಬಗ್ಗೆ ಕೇಳಿದ್ದೇವೆ. ಮೆಟಾವರ್ಸ್ ಬಗ್ಗೆಯೂ ಕೇಳಿದ್ದೇವೆ. ಇವು ಈಗಷ್ಟೆ ತಲೆ ಎತ್ತುತ್ತಿರುವ ಅತ್ಯಂತ ಸುಧಾರಿತ ತಂತ್ರಜ್ಞಾನಗಳು. ಮೆಟಾ (Meta) ಸಂಸ್ಥೆಯು ಈ ತಂತ್ರಜ್ಞಾನವನ್ನು ಬಳಸಿ ಜಗತ್ತಿನ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಕೊಳ್ಳುವುದಾಗಿ ಈ ಹಿಂದೆಯೇ ಹೇಳಿದೆ. ಅದರಂತೆ ಅದು ಆ ವರ್ಚ್ಯೂಯಲ್ ತಂತ್ರಜ್ಞಾನವನ್ನು (Virtual Technology) ಹೇಗೆ ನಿರ್ಮಿಸಿದೆ. ವ್ಯಕ್ತಿಯೊಬ್ಬರು ಇದರ ಪರೀಕ್ಷೆಯೊಂದನ್ನು ನಡೆಸಿದ್ದು ಆ ಬಗ್ಗೆ ತಮ್ಮ ಅನುಭವ ಅವರು ಈ ರೀತಿ ಬರೆದುಕೊಂಡಿದ್ದಾರೆ.


ವ್ಯಕ್ತಿಯ ವೈಯಕ್ತಿಕ ಅನುಭವ
ಇದು ನಾನು ಪರೀಕ್ಷಿಸಬಯಸಿದ್ದ ಮೆಟಾದ ವರ್ಚ್ಯೂಯಲ್ ಜಗತ್ತು. ಇದು ಸಾಮಾನ್ಯವಾಗಿ ನಾವು ಲಿಂಕ್ ಒಂದನ್ನು ಕ್ಲಿಕ್ ಮಾಡುವ ಮೂಲಕ ಹಲವರೊಂದಿ ಕನೆಕ್ಟ್ ಆಗುವ ರೀತಿಯದ್ದಲ್ಲ. ಇದನ್ನು ಪ್ರವೇಶಿಸಬೇಕಾದರೆ ಇದರದ್ದೆ ಆದ ನಿರ್ದಿಷ್ಟ ಆಪ್ ಒಂದಿರುತ್ತದೆ, ಆ ಮೂಲಕ ಅದು ವರ್ಚ್ಯೂಯಲ್ ಜಗತ್ತಿಗೆ ಸಂಪರ್ಕ ಸಾಧಿಸಲು ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತದೆ.


ಇದನ್ನೂ ಓದಿ: 5G Scam: ಹುಷಾರ್ ನಿಮಗೂ ಬರುತ್ತೆ ಕಾಲ್, 5ಜಿ ಅಂತ ಮೋಸ ಹೋಗದಿರಿ


ಅದರಂತೆ ನಾನು ಕಂಪನಿಯ ಕನೆಕ್ಟ್ ಡೆವೆಲಪರ್ ಕಾನ್ಫರೆನ್ಸಿಗೆ ಒಕ್ಯೂಲಸ್ ಕ್ವೆಸ್ಟ್ 2 ಹೆಡ್ ಸೆಟ್ ಬಳಸಿ ಪ್ರವೇಶಿಸಿದೆ. ಈ ಕಾನ್ಫರೆನ್ಸ್ ಅನ್ನು ಕಂಪನಿಯ ಹಾರಿಜನ್ ಆಪ್ ನಲ್ಲಿ ನಡೆಸಲಾಗುತ್ತಿತ್ತು. ಕಂಪನಿ ಹೇಳಿರುವಂತೆ ಈ ವೇದಿಕೆಯು ಮುಂಬರುವ ಸಮಯದಲ್ಲಿ ಮೈಕ್ರೋಸಾಫ್ಟ್, ಅಡೋಬಿ, ಜೂಮ್ ಮುಂತಾದವುಗಳಿಂದ ಹಲವು ವೈಶಿಷ್ಠ್ಯಗಳನ್ನು ಪಡೆದುಕೊಳ್ಳಲಿದೆಯಂತೆ.


ಕಾರ್ಟೂನ್ ರೀತಿಯಲ್ಲಿ ಇರುವ ಅನುಭವ 
ನಾವು ಹೀಗೆ ಈ ಜಗತ್ತಿನಲ್ಲಿ (ವರ್ಚ್ಯೂಯಲ್) ಪ್ರವೇಶಿಸಿದಾಗ ನಮ್ಮನ್ನು ನಾವು ಒಂದು ಕಾರ್ಟೂನ್ ರೀತಿಯಲ್ಲಿ ಇರುವುದನ್ನು ಅನುಭವಿಸುತ್ತೇವೆ. ನಾವು ನಮಗೆ ಬೇಕಾದ ಪಿಡಿಎಫ್, ಫೈಲ್, ಸಭೆಗಳು, ಚರ್ಚೆಗಳು ಮುಂತಾದವುಗಳನ್ನು ಸುಲಲಿತವಾಗಿ ಆಕ್ಸೆಸ್ ಮಾಡಬಹುದು ಮತ್ತು ಭಾಗವಹಿಸಬಹುದು. ನಾನು ಮೊದಲ ಬಾರಿಗೆ ಈ ಕಾನ್ಫರೆನ್ಸ್ ಅಟೆಂಡ್ ಆದಾಗ ನನ್ನ ಡಿಜಿಟಲ್ ರೂಪವು ನೀಳ ವರ್ಣದಿಂದ ಕೂಡಿದ್ದು ನಾನು ದೊಡ್ಡದಾದ ಒಂದು ಕೋರ್ಟ್ ಯಾರ್ಡ್ ನಲ್ಲಿ ಇರುವುದನ್ನು ಅನುಭವಿಸಿದೆ. ಸುತ್ತ ದೊಡ್ಡ ದೊಡ್ಡ ಕಟ್ಟಡಗಳಿದ್ದವು. ಮೆಟಾದ ಲೋಗೊ ನಿಧಾನವಾಗಿ ಸುತ್ತು ಹಾಕುತ್ತಿತ್ತು.


ಈ ಅನುಭವ ಹೇಗಿತ್ತೆಂದರೆ ರೊಬ್ಲಾಕ್ಸ್ ಅಥವಾ ಸಿಮ್ಸ್ (ವಿಡಿಯೋ ಗೇಮ್ಸ್) ಆಟಗಳು ನೆನಪಿಗೆ ಬರುವಂತಿತ್ತು. ಈ ವಿನ್ಯಾಸ ಸಂಕೀರ್ಣವಾಗಿರಲಿಲ್ಲ, ಇತರರು ಮಾತನಾಡುತ್ತಿರುವ ಸದ್ದು, ನೀರಿನ ಶಬ್ದ, ಸಾಮಾನ್ಯವಾಗಿ ವಾತಾವರಣದಲ್ಲಿ ಕಂಡುಬರುವಂತಹ ಗದ್ದಲ ಹಾಗೂ ನಾನು ಯಾವಾಗ ನಡೆಯುತ್ತಿದ್ದೇನೆ, ಮೆಟ್ಟಿಲು ಹತ್ತುತ್ತಿದ್ದೇನೆ ಎಂಬ ಅರಿವು ಮೂಡಿಸುವಂತಹ ಅನುಭವ ನಾನು ನೈಜವಾಗಿ ಹೆಚ್ಚು ಕಡಿಮೆ ಆ ಸ್ಥಳದಲ್ಲಿಯೇ ಇದ್ದೇನೆ ಎಂದೆನಿಸುವ ಅನುಭವ ನೀಡುತ್ತಿತ್ತು.


ಇದನ್ನೂ ಓದಿ:  Instagram: ಮಕ್ಕಳ ಮೇಲೆ ನಿಗಾ ಇಡುತ್ತಂತೆ Instagram! 18ಕ್ಕಿಂತ ಕಡಿಮೆ ವಯಸ್ಸಿನವರ ಅಕೌಂಟ್‌ ಮೇಲೆ ಹದ್ದಿನಕಣ್ಣು!


ಕೊನೆಗೆ ನಾನು ಸಭೆಯೊಂದಕ್ಕೆ ಹೋಗುತ್ತಿದ್ದೆ, ಅಲ್ಲಿ ಈಗಾಗಲೇ 1200 ಜನರು ಉಪಸ್ಥಿತರಿದ್ದಾರೆ ಎಂಬುದನ್ನು ಸೂಚಿಸಲಾಗಿತ್ತು. ಇಲ್ಲಿ ಒಂದು ಅಡ್ಡಿಪಡಿಸುವಿಕೆ ಉಂಟಾಗಿದ್ದೆಂದರೆ ಹೆಡ್ ಸೆಟ್ ಅನ್ನು ಹಾಕಿಕೊಂಡು ನಮಗೆ ಬೇಕಾದ ವಿಷಯವನ್ನು ಟೈಪ್ ಮಾಡುವುದು ಬಲುಕಷ್ಟಕರ. ಹಾಗೆ ನೋಡಿದರೆ ಇದಕ್ಕೂ ಪರಿಹಾರ ಕಲ್ಪಿಸಲಾಗಿದೆ, ಅಂದರೆ ಹೆಡ್ ಸೆಟ್ ನಲ್ಲಿ ನಮ್ಮ ಸುತ್ತಮುತ್ತಲಿರುವುದನ್ನು ಕಾಣಲು ಚಿಕ್ಕ ಕ್ಯಾಮೆರಾಗಳನ್ನು ಆನ್ ಮಾಡುವುದು, ಆದರೆ ಪ್ರಸ್ತುತ ನಾನು ಅದನ್ನು ಮಾಡಿರಲಿಲ್ಲ, ಹಾಗಾಗಿ ನಾನು ಹೆಡ್ ಸೆಟ್ ಬಳಸುತ್ತ ಬರೆಯಲು ಕಷ್ಟಪಡಬೇಕಾಯಿತು.


ವಾತಾವರಣವು ನೈಜ ರೀತಿಯಲ್ಲಿ ಇರುವಂತೆ ಪ್ರಯತ್ನಿಸಲಾಗಿದೆ. ನಾನು ಅಷ್ಟರಲ್ಲೇ ಇತರರ ಸದ್ದು ಗದ್ದಲಗಳನ್ನು ಕೇಳುತ್ತಿದ್ದೆ. ಅಷ್ಟರಲ್ಲಿ ಮೆಟಾದ ಕೆಲವು ಸಿಬ್ಬಂದಿ ತಮ್ಮ ಉತ್ಪನ್ನಗಳ ಬಗ್ಗೆ ಹೇಳುತ್ತಿರುವುದನ್ನು ಗಮನಿಸಿದೆ. ಅವು ಪೂರ್ವವಾಗಿಯೇ ರಿಕಾರ್ಡ್ ಮಾಡಿದ್ದ ಆವೃತ್ತಿಗಳಾಗಿದ್ದವು ಎಂದು ಹೇಳಿಕೊಂಡಿದ್ದಾರೆ.

Published by:Ashwini Prabhu
First published: