Jio TV: ಪಂಡರಾಪುರದ ವಿಠಲ ರುಕ್ಮಿಣಿ ದೇವಸ್ಥಾನದ ನೇರ ದರ್ಶನ ಈಗ ಜಿಯೋ ಟಿವಿಯಲ್ಲಿ

ಆಷಾಢ ಮತ್ತು ಕಾರ್ತಿಕ ಏಕಾದಶಿ ಶುಭ ದಿನದಂದು, ಪಂಢರಾಪುರದಲ್ಲಿ ಲಕ್ಷಾಂತ್ರ ಭಕ್ತರು ಸೇರುತ್ತಾರೆ. ವಿಠಲ ದೇವರ ದರ್ಶನಕ್ಕಾಗಿ ಕಿಲೋಮೀಟರುಗಟ್ಟಲೆ ಉದ್ದದ ಸರದಿಯಲ್ಲಿ ಗಂಟೆಗಟ್ಟಲೆ ನಿಲ್ಲುತ್ತಾರೆ. ಆದರೆ, ಕೊರೊನಾ ಸಾಂಕ್ರಾಮಿಕ ಮತ್ತು ಇತರ ಕಾರಣದಿಂದಾಗಿ ಎಲ್ಲರೂ ಪಂಢರಾಪುರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.

jio tv / ಜಿಯೋ ಟಿವಿ

jio tv / ಜಿಯೋ ಟಿವಿ

  • Share this:
    ಮಹಾರಾಷ್ಟ್ರ (Maharashtra) ಮತ್ತು ದೇಶಾದ್ಯಂತದ ಭಕ್ತರು ಈಗ ಪಂಡರಾಪುರದ ವಿಠಲ ರುಕ್ಮಿಣಿ ದೇವಸ್ಥಾನದ (Vitala Rukmini Temple in Pandarapura) ನೇರ ದರ್ಶನವನ್ನು ಇಡೀ ದಿನ ತಮ್ಮ ಅಂಗೈಯಲ್ಲೇ ಪಡೆಯಬಹುದು. ಆಷಾಢ ಏಕಾದಶಿಯ (Ekadashi) ಈ ಸಂದರ್ಭದಲ್ಲಿ ಜಿಯೋ ಗ್ರಾಹಕರಿಗೆ ಇದೊಂದು ವಿಶಿಷ್ಟ ಕೊಡುಗೆಯಾಗಿರಲಿದೆ.

    ಆಷಾಢ ಮತ್ತು ಕಾರ್ತಿಕ ಏಕಾದಶಿ ಶುಭ ದಿನದಂದು, ಪಂಢರಾಪುರದಲ್ಲಿ ಲಕ್ಷಾಂತ್ರ ಭಕ್ತರು ಸೇರುತ್ತಾರೆ. ವಿಠಲ ದೇವರ ದರ್ಶನಕ್ಕಾಗಿ ಕಿಲೋಮೀಟರುಗಟ್ಟಲೆ ಉದ್ದದ ಸರದಿಯಲ್ಲಿ ಗಂಟೆಗಟ್ಟಲೆ ನಿಲ್ಲುತ್ತಾರೆ. ಆದರೆ, ಕೊರೊನಾ ಸಾಂಕ್ರಾಮಿಕ ಮತ್ತು ಇತರ ಕಾರಣದಿಂದಾಗಿ ಎಲ್ಲರೂ ಪಂಢರಾಪುರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ವಯಸ್ಕರು ಮತ್ತು ಆರೋಗ್ಯ ಸರಿ ಇಲ್ಲದವರು ಹೋಗಬೇಕೆಂದು ಮನಸಿದ್ದರೂ ಅವರಿಗೆ ಹೋಗಲು ಸಾಧ್ಯವಾಗುವುದಿಲ್ಲ. ಆದರೆ, ಈ ಸಮಸ್ಯೆಯನ್ನು ಜಿಯೋ ಟಿವಿ ಪರಿಹರಿಸಿದೆ. ಈಗ ಜಿಯೋ ಟಿವಿಯಲ್ಲಿ ಅವರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಒಂದು ಕ್ಲಿಕ್‌ನಲ್ಲಿ ದರ್ಶನ ಮಾಡಬಹುದು. ಯಾವುದೇ ಸಮಯದಲ್ಲಾದರೂ ಪಂಢರಾಪುರದ ದರ್ಶನ ಮಾಡಬಹುದು. ಮಹಾ ಮಂಗಳಾರತಿ, ಅಭಿಷೇಕ ಹಾಗೂ ಇತರ ಸಂಪ್ರದಾಯಗಳನ್ನು ಮನೆಯಲ್ಲೇ ನೋಡಬಹುದು. ನೇರ ದರ್ಶನವನ್ನು ಜಿಯೋ ಟಿವಿ ಆಪ್‌ ಡೌನ್‌ಲೋಡ್‌ ಮಾಡುವ ಮೂಲಕ ಹಾಗೂ ಮೊಬೈಲ್‌ನಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ವೀಕ್ಷಿಸಬಹುದು.

    ಇದನ್ನೂ ಓದಿ: Jio: ಉಚಿತವಾಗಿ ಪಡೆಯಿರಿ 20GB ಹೈ ಸ್ಪೀಡ್ ಡೇಟಾ! ರಿಲಯನ್ಸ್ ಜಿಯೋ ನೀಡುತ್ತಿರುವ ಈ ಆಫರ್​ ಮಿಸ್​ ಮಾಡ್ಬೇಡಿ

    ಜಿಯೋ ಟಿವಿಯಲ್ಲಿ ನೇರ ದರ್ಶನ ವೀಕ್ಷಿಸಲು ಭಕ್ತರು ಜಿಯೋ ಟಿವಿಯಲ್ಲಿ ವಿಠಲ ರುಕ್ಮಿಣಿ ಚಾನೆಲ್‌ಗೆ ಹೋಗಿ, ದರ್ಶನ ಐಕಾನ್‌ ಮೇಲೆ ಕ್ಲಿಕ್‌ ಮಾಡಬಹುದು. ಈಗಾಗಲೇ ಅಮರನಾಥ, ಚಾರ್‌ಧಾಮ, ಕೊಲ್ಹಾಪುರ ಮಹಾಲಕ್ಷ್ಮಿ, ಅಷ್ಟವಿನಾಯಕ ಗಣೇಶ ಹಾಗೂ ಇತರ ಜನಪ್ರಿಯ ಧಾರ್ಮಿಕ ಸ್ಥಳಗಳ ನೇರ ದರ್ಶನ ಜಿಯೋ ಟಿವಿಯಲ್ಲಿ ಲಭ್ಯವಿದೆ. ಜಿಯೋ ಟಿವಿಯಲ್ಲಿ ಲಕ್ಷಾಂತರ ಭಕ್ತರು ಈ ನೇರ ದರ್ಶನವನ್ನು ವೀಕ್ಷಿಸುತ್ತಿದ್ದಾರೆ.

    ಇದನ್ನೂ ಓದಿ: Jio Best Plan: ಜಿಯೋ 395 ರೂ ಪ್ಲಾನ್​ನಲ್ಲಿ ಸಿಗುತ್ತೆ 84 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ ಮತ್ತು ಡೇಟಾ!

    ಅತ್ಯಂತ ಕಡಿಮೆ ಬೆಲೆಗೆ Netflix ಪಡೆಯಿರಿ


    Published by:Harshith AS
    First published: